8ನೇ ವೇತನ ಆಯೋಗ; ಸರ್ಕಾರಿ ನೌಕರರಿಗೆ ಕಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  8ನೇ ವೇತನ ಆಯೋಗ; ಸರ್ಕಾರಿ ನೌಕರರಿಗೆ ಕಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ

8ನೇ ವೇತನ ಆಯೋಗ; ಸರ್ಕಾರಿ ನೌಕರರಿಗೆ ಕಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ

Constitution of 8th Central Pay Commission; ಕೇಂದ್ರ ಸರ್ಕಾರಿ ನೌಕರರಿಗೆ ಸಂಬಂಧಿಸಿದ ಏಳನೇ ವೇತನ ಆಯೋಗದ ಅವಧಿ ಮುಗಿಯುತ್ತ ಬಂದಿದೆ. ಆದರೆ, 8ನೇ ವೇತನ ಆಯೋಗ ರಚನೆ ಯಾವಾಗ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಈ ಕುರಿತು ಸರ್ಕಾರಿ ನೌಕರರಿಗೆ ಕಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ, ವಿವರಿಸಿದ್ದು ಇಷ್ಟು.

8ನೇ ವೇತನ ಆಯೋಗ; ಸರ್ಕಾರಿ ನೌಕರರಿಗೆ ಕಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ
8ನೇ ವೇತನ ಆಯೋಗ; ಸರ್ಕಾರಿ ನೌಕರರಿಗೆ ಕಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ

ನವದೆಹಲಿ: ಕೇಂದ್ರ ಸರ್ಕಾರದ ನೌಕರರು ಸದಾ ಕಾಯುತ್ತಿರುವ 8 ನೇ ವೇತನ ಆಯೋಗದ ಇತ್ತೀಚಿನ ಸುದ್ದಿ (8th Pay Commission Latest News) ಸ್ವಲ್ಪ ಕಹಿ ಎನಿಸಬಹುದು. ಆದಾಗ್ಯೂ, 8ನೇ ವೇತನ ಆಯೋಗದ ರಚನೆ ಯಾವಾಗ ಎಂಬ ಪ್ರಶ್ನೆಗೆ ಉತ್ತರವನ್ನು ನಿರೀಕ್ಷಿಸುತ್ತಿದ್ದರೆ, ಈ ಸುದ್ದಿ ಅದನ್ನು ಒದಗಿಸಲಿದೆ. ಹೌದು, 8 ನೇ ಕೇಂದ್ರ ವೇತನ ಆಯೋಗದ ರಚನೆಗೆ ಸಂಬಂಧಿಸಿದಂತೆ ಸರ್ಕಾರವು ರಾಜ್ಯಸಭೆಯಲ್ಲಿ ಮಾಹಿತಿ ನೀಡಿದೆ.

ರಾಜ್ಯಸಭಾ ಸಂಸದರಾದ ರಾಮ್ಜಿ ಲಾಲ್ ಸುಮನ್ ಮತ್ತು ಜಾವೇದ್ ಅಲಿ ಖಾನ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಉತ್ತರಿಸಿದ್ದು, ವೇತನ ಆಯೋಗವನ್ನು ಸ್ಥಾಪಿಸಲು ಸರ್ಕಾರಕ್ಕೆ ಮನವಿಗಳು ಬಂದಿವೆ. ಇದೇ ವರ್ಷ ಜೂನ್‌ ತಿಂಗಳಲ್ಲಿ ಎರಡು ಮನವಿಗಳನ್ನು ಸ್ವೀಕರಿಸಲಾಗಿದೆ. ಆದಾಗ್ಯೂ, ಪ್ರಸ್ತುತ, ಅಂತಹ ಯಾವುದೇ ಪ್ರಸ್ತಾಪವು ಸರ್ಕಾರದ ಪರಿಗಣನೆಯಲ್ಲಿಲ್ಲ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ 7ನೇ ವೇತನ ಆಯೋಗ ಮತ್ತು ಅದರ ಶಿಫಾರಸುಗಳು

ಕೇಂದ್ರ ಸರ್ಕಾರದ 7 ನೇ ವೇತನ ಆಯೋಗವನ್ನು 2014ರ ಫೆಬ್ರವರಿಯಲ್ಲಿ ರಚಿಸಲಾಯಿತು. ಇದರ ಶಿಫಾರಸುಗಳನ್ನು 2016ರ ಜನವರಿ 1 ರಿಂದ ಜಾರಿಗೆ ತರಲಾಯಿತು. 2016ರ ಜೂನ್ 29 ರಂದು ವೇತನ ಮತ್ತು ಪಿಂಚಣಿ ಕುರಿತು ವೇತನ ಆಯೋಗದ ಶಿಫಾರಸುಗಳನ್ನು ಕೇಂದ್ರ ಸಚಿವ ಸಂಪುಟ ಅಂಗೀಕರಿಸಿತು. ಕೆಳ ಹಂತದ ಸಿಬ್ಬಂದಿಗೆ ಕನಿಷ್ಠ ವೇತನವನ್ನು ತಿಂಗಳಿಗೆ 18,000 ರೂ.ಗೆ ನಿಗದಿಪಡಿಸಲಾಗಿದೆ (ಮೊದಲು 7,000 ರೂಪಾಯಿ ಇತ್ತು); ಆದರೆ ವೇತನ/ಪಿಂಚಣಿಯಲ್ಲಿನ ನಿಜವಾಗಿ ಶೇಕಡ 14.3 ಹೆಚ್ಚಳವಾಗಿದೆ.

ಇನ್ನು, 7 ನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ, ಕೇಂದ್ರ ಸರ್ಕಾರಿ ನೌಕರರು ವರ್ಷದ ದ್ವಿತೀಯಾರ್ಧದಲ್ಲಿ ತುಟ್ಟಿಭತ್ಯೆ ಅಂದರೆ ಡಿಎಗಾಗಿ ಕಾಯುತ್ತಿದ್ದಾರೆ. ದ್ವಿತೀಯಾರ್ಧದಲ್ಲಿ ಅಂದರೆ ಜುಲೈನಿಂದ ಡಿಸೆಂಬರ್ ಅವಧಿಯಲ್ಲಿ ಭತ್ಯೆ ಶೇಕಡಾ 4 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇದು ಸಂಭವಿಸಿದಲ್ಲಿ ಕೇಂದ್ರ ನೌಕರರ ಭತ್ಯೆ ಶೇಕಡಾ 54 ರಷ್ಟಿರುತ್ತದೆ. ಕೇಂದ್ರ ನೌಕರರ ಭತ್ಯೆ ಶೇಕಡಾ 50 ರಷ್ಟಿದೆ. ಈ ಹೆಚ್ಚಳವನ್ನು ಸೆಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ ಘೋಷಿಸುವ ಸಾಧ್ಯತೆಯಿದೆ. ಇಲ್ಲಿಯವರೆಗಿನ ಮಾದರಿಯ ಪ್ರಕಾರ, ದ್ವಿತೀಯಾರ್ಧದ ಭತ್ಯೆಯನ್ನು ನವರಾತ್ರಿಯಿಂದ ನಿರ್ಧರಿಸಲಾಗುತ್ತದೆ.

ಕೇಂದ್ರ ಸರ್ಕಾರದ ವೇತನ ಆಯೋಗ

ಸರ್ಕಾರಿ ನೌಕರರ ವೇತನ ಅಥವಾ ಭತ್ಯೆಗಳನ್ನು ಪರಿಷ್ಕರಿಸಲು ಕೇಂದ್ರ ಸರ್ಕಾರವು ಪ್ರತಿ 10 ವರ್ಷಗಳಿಗೊಮ್ಮೆ ವೇತನ ಆಯೋಗವನ್ನು ರಚಿಸುತ್ತದೆ. ವೇತನ ಆಯೋಗವು ಭಾರತದಲ್ಲಿ ಸರ್ಕಾರ ನೇಮಿಸಿದ ಸಂಸ್ಥೆಯಾಗಿದ್ದು, ಕೇಂದ್ರ ಸರ್ಕಾರಿ ನೌಕರರ ವೇತನ ರಚನೆ, ಭತ್ಯೆಗಳು ಮತ್ತು ಇತರ ಪ್ರಯೋಜನಗಳಲ್ಲಿ ಬದಲಾವಣೆಗಳನ್ನು ಪರಿಶೀಲಿಸುವ ಮತ್ತು ಶಿಫಾರಸು ಮಾಡುವ ಜವಾಬ್ದಾರಿಯನ್ನು ಹೊಂದಿದೆ.

(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆಎಚ್‌ಟಿ ಕನ್ನಡ ಬೆಸ್ಟ್‌.ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲುkannada.hindustantimes.com/nation-and-world ಕ್ಕೆ ಭೇಟಿ ನೀಡಿ.)

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.