ಭಾರತ್ ಜೋಡೋ ನ್ಯಾಯ್ ಯಾತ್ರೆ; ನಾಯಿ ತಿನ್ನಲು ನಿರಾಕರಿಸಿದ ಬಿಸ್ಕತ್ ಅನ್ನು ಕಾರ್ಯಕರ್ತನಿಗೆ ಕೊಟ್ಟ ರಾಹುಲ್ ಗಾಂಧಿ; ವಿಡಿಯೋ ವೈರಲ್‌
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಭಾರತ್ ಜೋಡೋ ನ್ಯಾಯ್ ಯಾತ್ರೆ; ನಾಯಿ ತಿನ್ನಲು ನಿರಾಕರಿಸಿದ ಬಿಸ್ಕತ್ ಅನ್ನು ಕಾರ್ಯಕರ್ತನಿಗೆ ಕೊಟ್ಟ ರಾಹುಲ್ ಗಾಂಧಿ; ವಿಡಿಯೋ ವೈರಲ್‌

ಭಾರತ್ ಜೋಡೋ ನ್ಯಾಯ್ ಯಾತ್ರೆ; ನಾಯಿ ತಿನ್ನಲು ನಿರಾಕರಿಸಿದ ಬಿಸ್ಕತ್ ಅನ್ನು ಕಾರ್ಯಕರ್ತನಿಗೆ ಕೊಟ್ಟ ರಾಹುಲ್ ಗಾಂಧಿ; ವಿಡಿಯೋ ವೈರಲ್‌

ಭಾರತ್ ಜೋಡೋ ನ್ಯಾಯ್ ಯಾತ್ರೆ ಮಹಾರಾಷ್ಟ್ರ ಕಡೆಗೆ ಸಂಚರಿಸುತ್ತಿದ್ದು, ಜಾರ್ಖಂಡ್‌ನಲ್ಲಿದ್ದಾಗ, ನಾಯಿ ತಿನ್ನಲು ನಿರಾಕರಿಸಿದ ಬಿಸ್ಕೆಟ್ ಕಾರ್ಯಕರ್ತನಿಗೆ ಕೊಟ್ಟ ರಾಹುಲ್ ಗಾಂಧಿ ಅವರ ವಿಡಿಯೋ ವೈರಲ್‌ ಆಗಿದೆ. ಈ ಕುರಿತು ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ.

ಭಾರತ್ ಜೋಡೋ ನ್ಯಾಯ್ ಯಾತ್ರೆಯ ವೇಳೆ ನಾಯಿ ತಿನ್ನಲು ನಿರಾಕರಿಸಿದ ಬಿಸ್ಕೆಟ್ ಕಾರ್ಯಕರ್ತನಿಗೆ ಕೊಟ್ಟ ರಾಹುಲ್ ಗಾಂಧಿ ಅವರ ವಿಡಿಯೋ ವೈರಲ್‌ ಆಗಿದೆ. ಈ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ ಎಂಬುದು ವಿಡಿಯೋದಲ್ಲಿರುವ ಲೊಕೋಶನ್ ತೋರಿಸುತ್ತಿದೆ.
ಭಾರತ್ ಜೋಡೋ ನ್ಯಾಯ್ ಯಾತ್ರೆಯ ವೇಳೆ ನಾಯಿ ತಿನ್ನಲು ನಿರಾಕರಿಸಿದ ಬಿಸ್ಕೆಟ್ ಕಾರ್ಯಕರ್ತನಿಗೆ ಕೊಟ್ಟ ರಾಹುಲ್ ಗಾಂಧಿ ಅವರ ವಿಡಿಯೋ ವೈರಲ್‌ ಆಗಿದೆ. ಈ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ ಎಂಬುದು ವಿಡಿಯೋದಲ್ಲಿರುವ ಲೊಕೋಶನ್ ತೋರಿಸುತ್ತಿದೆ.

ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜಾರ್ಖಂಡ್‌ನಲ್ಲಿದ್ದ ವೇಳೆ ನಾಯಿ ತಿನ್ನಲು ನಿರಕಾರಿಸಿದ ಬಿಸ್ಕೆಟ್ ಅನ್ನು ಕಾರ್ಯಕರ್ತನಿಗೆ ನೀಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ.

ಈ ಆಘಾತಕಾರಿ ವೈರಲ್‌ ವಿಡಿಯೋ ವ್ಯಾಪಕ ಟೀಕೆಗೆ ಒಳಗಾಗಿದೆ. ವಿಡಿಯೋದಲ್ಲಿರುವ ದೃಶ್ಯದಲ್ಲಿ, ರಾಹುಲ್ ಗಾಂಧಿ ತಾವಿದ್ದ ವಾಹನದ ಮೇಲೆ ನಾಯಿಗೆ ಬಿಸ್ಕೆಟ್‌ ತಿನ್ನಿಸಲು ಪ್ರಯತ್ನಿಸುತ್ತಿರುವುದು ಕಂಡುಬರುತ್ತದೆ. ನಾಯಿ ಅದನ್ನು ತಿನ್ನಲು ನಿರಾಕರಿಸಿದ ಸಂದರ್ಭದಲ್ಲಿ ಕೂಡಲೇ ಅದರ ಜತೆಗೆ ಇನ್ನೊಂದನ್ನು ಸೇರಿಸಿ, ಎದುರು ಇದ್ದ ಕಾರ್ಯಕರ್ತನ ಕೈಗೆ ನೀಡುತ್ತಿರುವುದು ಕಂಡುಬಂದಿದೆ.

ಬಿಜೆಪಿ ನಾಯಕ ಅಮಿತ್ ಮಾಳವೀಯ ಅವರು ಈ ವಿಡಿಯೋವನ್ನು ಎಕ್ಸ್‌ನಲ್ಲಿ ಶೇರ್ ಮಾಡಿದ್ದು, ಇಲ್ಲಿ ರಾಹುಲ್ ಗಾಂಧಿ ಭೇಟಿ ವೇಳೆ ನಾಯಿಗೆ ಬಿಸ್ಕತ್ ತಿನ್ನಿಸುತ್ತಿದ್ದು, ನಾಯಿ ತಿನ್ನದೇ ಇದ್ದಾಗ ಅದೇ ಬಿಸ್ಕೆಟ್ ಅನ್ನು ತನ್ನ ಕಾರ್ಯಕರ್ತನಿಗೆ ನೀಡಿದ್ದಾರೆ. ಪಕ್ಷದ ಪ್ರಮುಖರೆನಿಸಿಕೊಂಡವರು ಮತ್ತು ಯುವರಾಜರಂತೆ ಇರುವವರು ತಮ್ಮ ಪಕ್ಷದ ಕಾರ್ಯಕರ್ತರನ್ನು ನಾಯಿಗಳಂತೆ ನಡೆಸಿಕೊಂಡರೆ, ಅಂತಹ ಪಕ್ಷವು ಕಣ್ಮರೆಯಾಗುವುದು ಸಹಜ ಎಂದು ಟೀಕೆ ಮಾಡಿದ್ದಾರೆ.

ರಾಹುಲ್ ಗಾಂಧಿ ಅವರ ವರ್ತನೆ ವ್ಯಾಪಕ ಟೀಕೆಗೆ ಕಾರಣವಾಗಿದ್ದು, ಪಕ್ಷದ ಕಾರ್ಯಕರ್ತರನ್ನು ನಡೆಸಿಕೊಂಡ ವಿಚಾರವನ್ನು ಮುನ್ನೆಲೆಗೆ ತಂದಿದೆ. ಇದು ತನ್ನದೇ ಸದಸ್ಯರ ಬಗ್ಗೆ ನಾಯಕತ್ವದ ವರ್ತನೆ ಮತ್ತು ಅವರ ಕಡೆಗೆ ತೋರಿಸಿರುವ ಗೌರವದ ಕೊರತೆಯ ಬಗ್ಗೆ ಕಳವಳವನ್ನು ಉಂಟುಮಾಡುತ್ತದೆ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.

ನ್ಯಾಯ್ ಯಾತ್ರೆಯ ಹ್ಯಾಂಡಲ್‌ನಲ್ಲೂ ನಾಯಿಗೆ ಬಿಸ್ಕತ್ ತಿನ್ನಿಸುವ ದೃಶ್ಯದ ವಿಡಿಯೋ

ಭಾರತ್ ಜೋಡೋ ನ್ಯಾಯ್ ಯಾತ್ರೆಯ ಎಕ್ಸ್ ಹ್ಯಾಂಡಲ್‌ನಲ್ಲಿ ಕೂಡ ನಾಯಿಗೆ ಬಿಸ್ಕತ್ ತಿನ್ನಿಸುವ, ಸೆಲ್ಫಿ ತೆಗೆಯುವ ವಿಡಿಯೋ ಇದೆ.

ರಾಹುಲ್‌ ಗಾಂಧಿಯವರನ್ನು "ನಾಚಿಕೆಯಿಲ್ಲದವರು" ಎಂದು ಕರೆದ ಬಿಜೆಪಿಯ ಮತ್ತೊಬ್ಬ ನಾಯಕಿ ಪಲ್ಲವಿ ಸಿಟಿ, ಮಾಜಿ ಕಾಂಗ್ರೆಸ್ ನಾಯಕ ಮತ್ತು ಈಗ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ಟ್ಯಾಗ್‌ ಮಾಡಿ ರಾಹುಲ್ ಗಾಂಧಿಯವರ ಮುದ್ದಿನ ನಾಯಿ ಪಿಡಿಗೆ ನೀಡಿದ ಬಿಸ್ಕತ್‌ ಪ್ಲೇಟ್‌ನ ಬಿಸ್ಕತ್ ಅನ್ನು ಕಾರ್ಯಕರ್ತರಿಗೆ ಕೊಟ್ಟದನ್ನು ಟೀಕಿಸಿದರು. ಈಗ ಶೆಹಜಾದಾ (ರಾಜಕುಮಾರ) ಪಕ್ಷದ ಕಾರ್ಯಕರ್ತನಿಗೆ ನಾಯಿ ತಿರಸ್ಕರಿಸಿದ ಬಿಸ್ಕತ್ತನ್ನು ನೀಡುತ್ತಾರೆ. ಇದು ಅವರ ಪಕ್ಷದ ಕಾರ್ಯಕರ್ತರು, ಬೆಂಬಲಿಗರಿಗೆ ಇರುವ ಗೌರವ ಎಂದು ಪಲ್ಲವಿ ಟೀಕಿಸಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು, ಪಲ್ಲವಿ ಜೀ, ರಾಹುಲ್ ಗಾಂಧಿ ಮಾತ್ರವಲ್ಲದೆ ಇಡೀ ಕುಟುಂಬಕ್ಕೆ ಆ ಬಿಸ್ಕೆಟ್ ಅನ್ನು ನನಗೆ ತಿನ್ನಿಸುವುದು ಸಾಧ್ಯವಾಗಲಿಲ್ಲ. ನಾನು ಹೆಮ್ಮೆಯ ಅಸ್ಸಾಮಿ ಮತ್ತು ಭಾರತೀಯ. ಅಂತಹ ಬಿಸ್ಕತ್ ತಿನ್ನಲು ನಿರಾಕರಿಸಿ ಕಾಂಗ್ರೆಸ್‌ಗೆ ರಾಜೀನಾಮೆ ಕೊಟ್ಟು ಹೊರಗೆ ಬಂದೆ ಎಂದು ಹೆಳಿಕೊಂಡಿದ್ದಾರೆ.

ನಾಯಿಗೆ ನೀಡಲು ಇರಿಸಿದ್ದ ಪ್ಲೇಟ್‌ನಿಂದ ಕಾಂಗ್ರೆಸ್ ನಾಯಕರು ಬಿಸ್ಕತ್ ಎತ್ತಿಕೊಳ್ಳುತ್ತಿದ್ದ ವಿಚಾರವನ್ನು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ್ದ ಸಂದರ್ಶನದಲ್ಲಿ ಹಿಮಂತ ಬಿಸ್ವಾ ಶರ್ಮಾ ಅವರು 2021ರಲ್ಲಿ ಹೇಳಿದ್ದರು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.