'ಸುಪ್ರೀಂ' ಕೋರ್ಟ್ ಯೂಟ್ಯೂಬ್ ಚಾನೆಲ್ಲೇ ಹ್ಯಾಕ್; ಖಾತೆಯನ್ನೇ ತೆಗೆದು ಹಾಕಿದ ನ್ಯಾಯಾಲಯ, ಶೀಘ್ರವೇ ಹೊಸ ಸೇವೆ ಆರಂಭ-india news supreme court takes down its youtube channel after hackers promote crypto content on platform prs ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  'ಸುಪ್ರೀಂ' ಕೋರ್ಟ್ ಯೂಟ್ಯೂಬ್ ಚಾನೆಲ್ಲೇ ಹ್ಯಾಕ್; ಖಾತೆಯನ್ನೇ ತೆಗೆದು ಹಾಕಿದ ನ್ಯಾಯಾಲಯ, ಶೀಘ್ರವೇ ಹೊಸ ಸೇವೆ ಆರಂಭ

'ಸುಪ್ರೀಂ' ಕೋರ್ಟ್ ಯೂಟ್ಯೂಬ್ ಚಾನೆಲ್ಲೇ ಹ್ಯಾಕ್; ಖಾತೆಯನ್ನೇ ತೆಗೆದು ಹಾಕಿದ ನ್ಯಾಯಾಲಯ, ಶೀಘ್ರವೇ ಹೊಸ ಸೇವೆ ಆರಂಭ

Supreme Court: ಹ್ಯಾಕ್ ಆಗಿದ್ದ ಸಾರ್ವಜನಿಕರಿಗಾಗಿ ಪ್ರಕರಣಗಳನ್ನು ಲೈವ್ ಸ್ಟ್ರೀಮ್ ಮಾಡುವ ಸುಪ್ರೀಂ ಕೋರ್ಟ್​​​ ಯೂಟ್ಯೂಬ್ ಚಾನೆಲ್ ತೆಗೆದು ಹಾಕಲಾಗಿದೆ.

'ಸುಪ್ರೀಂ' ಕೋರ್ಟ್ ಯೂಟ್ಯೂಬ್ ಚಾನೆಲ್ಲೇ ಹ್ಯಾಕ್
'ಸುಪ್ರೀಂ' ಕೋರ್ಟ್ ಯೂಟ್ಯೂಬ್ ಚಾನೆಲ್ಲೇ ಹ್ಯಾಕ್

ನವದೆಹಲಿ: ಭಾರತದ ಸುಪ್ರೀಂ ಕೋರ್ಟ್​ನ​ ಅಧಿಕೃತ ಯೂಟ್ಯೂಬ್ ಚಾನೆಲ್ ಅನ್ನೇ ಹ್ಯಾಕ್ ಮಾಡಲಾಗಿದ್ದು, ಹ್ಯಾಕ್ ಮಾಡುವುದರ ಜೊತೆಗೆ ಯುಎಸ್ ಮೂಲದ ರಿಪ್ಪಲ್ ಲ್ಯಾಬ್ಸ್ ಎಂಬ ಕಂಪನಿಯು ಕ್ರಿಪ್ಟೋ ಕರೆನ್ಸಿ ಪ್ರೋಮೋಷನ್ ಮಾಡುತ್ತಿರುವ ವಿಡಿಯೋಗಳನ್ನು ಪೋಸ್ಟ್ ಮಾಡಿದೆ. ಇದೀಗ ಆ ಯೂಟ್ಯೂಬ್ ಚಾನೆಲ್​ ಅನ್ನು ನಿಷ್ಕ್ರಿಯಗೊಳಿಸಿರುವುದಾಗಿ ಸುಪ್ರೀಂ ಕೋರ್ಟ್ ಸ್ಪಷ್ಟನೆ ನೀಡಿದೆ. ಆದರೆ, ನ್ಯಾಯ ದೊರಕಿಸಿಕೊಡುವ ಸುಪ್ರೀಂ ಕೋರ್ಟ್​​ನ ಖಾತೆಯನ್ನೇ ಹ್ಯಾಕ್ ಮಾಡಿದ್ದಾರೆ ಎಂದರೆ ಸಾಮಾನ್ಯ ಜನರ ಪರಿಸ್ಥಿತಿ ಏನು ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.

ಯೂಟ್ಯೂಬ್ ವಾಹಿನಿಯಲ್ಲಿ ಕಲಾಪದ ಲೈವ್ ವಿಡಿಯೋಗಳ ಬದಲಿಗೆ ಎಕ್ಸ್​ಆರ್​​ಪಿ ವಿಡಿಯೋಗಳನ್ನು ಪ್ರಸಾರ ಮಾಡಲಾಗಿದೆ. ಯೂಟ್ಯೂಬ್​ನ ಬ್ರಾಡ್​ ಗಾರ್ಲಿಂಗ್​ ಹೌಸ್ ಹೆಸರಿನಲ್ಲಿ ಖಾಲಿ ವಿಡಿಯೋವನ್ನು ಪ್ರದರ್ಶಿಸಿ Ripple Responds To The SEC's $2 Billion Fine! XRP PRICE PREDICTION ಎಂದು ಬರೆದಿದೆ. ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗಳನ್ನು ನೇರ ಪ್ರಸಾರ ಮಾಡಲು 2018 ರಿಂದ ಸುಪ್ರೀಂ ಕೋರ್ಟ್ ಈ ಚಾನೆಲ್ ಬಳಸುತ್ತಿದೆ. ಹ್ಯಾಕ್ ಆಗಿರುವ ಚಾನೆಲ್ ಅನ್ನು ಡಿಲೀಟ್ ಮಾಡಿರುವ ಸುಪ್ರೀಂ ಕೋರ್ಟ್, ನೂತನ ಚಾನೆಲ್​ ಆರಂಭಿಸುವ ಬಗ್ಗೆ ತಿಳಿಸಿದೆ.

ಸುಪ್ರೀಂ ಕೋರ್ಟ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಭಾರತದ ಸುಪ್ರೀಂ ಕೋರ್ಟ್‌ನ ಯೂಟ್ಯೂಬ್ ಚಾನೆಲ್ ಅನ್ನು ತೆಗೆದುಹಾಕಲಾಗಿದೆ ಎಂದು ಸಂಬಂಧಪಟ್ಟ ಎಲ್ಲರಿಗೂ ಈ ಮೂಲಕ ತಿಳಿಸಲಾಗುತ್ತಿದೆ. ಭಾರತದ ಸುಪ್ರೀಂ ಕೋರ್ಟ್‌ ಯೂಟ್ಯೂಬ್ ಚಾನೆಲ್‌ನಲ್ಲಿನ ಸೇವೆಗಳನ್ನು ಶೀಘ್ರದಲ್ಲೇ ಪುನರಾರಂಭಿಸಲಾಗುವುದು ಎಂದು ಹೇಳಿಕೆ ಮೂಲಕ ಸ್ಪಷ್ಟಪಡಿಸಿದೆ. ಹ್ಯಾಕ್ ಮಾಡಿದವರ ಪತ್ತೆ ಕಾರ್ಯ ಮುಂದುವರೆದಿದೆ.

mysore-dasara_Entry_Point
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.