India Weather: ಉತ್ತರ ಭಾರತದಲ್ಲಿ ಇಂದು ಕೂಡ ಭಾರಿ ಮಳೆಯ ಮುನ್ಸೂಚನೆ; ಹಿಮಾಚಲಪ್ರದೇಶ, ಪಂಜಾಬ್, ದೆಹಲಿಯಲ್ಲಿ ಅಲರ್ಟ್
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  India Weather: ಉತ್ತರ ಭಾರತದಲ್ಲಿ ಇಂದು ಕೂಡ ಭಾರಿ ಮಳೆಯ ಮುನ್ಸೂಚನೆ; ಹಿಮಾಚಲಪ್ರದೇಶ, ಪಂಜಾಬ್, ದೆಹಲಿಯಲ್ಲಿ ಅಲರ್ಟ್

India Weather: ಉತ್ತರ ಭಾರತದಲ್ಲಿ ಇಂದು ಕೂಡ ಭಾರಿ ಮಳೆಯ ಮುನ್ಸೂಚನೆ; ಹಿಮಾಚಲಪ್ರದೇಶ, ಪಂಜಾಬ್, ದೆಹಲಿಯಲ್ಲಿ ಅಲರ್ಟ್

ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ನೋಯ್ಡಾದಲ್ಲಿ ಭಾರಿ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಯಮುನಾ ನದಿ ಅಪಾಯದ ಮಟ್ಟ ಮೀರುವ ಸಾಧ್ಯತೆ ಇದೆ.

ಗುರುಗ್ರಾಮದಲ್ಲಿ ಭಾರಿ ಮಳೆಯಿಂದ ಜಲಾವೃತಗೊಂಡಿರುವ ರಸ್ತೆಯಲ್ಲಿ ಸಾಗಲು ಬೈಕ ಸವಾರನೊಬ್ಬ ಪರದಾಡುತ್ತಿದ್ದಾನೆ. (ANI)
ಗುರುಗ್ರಾಮದಲ್ಲಿ ಭಾರಿ ಮಳೆಯಿಂದ ಜಲಾವೃತಗೊಂಡಿರುವ ರಸ್ತೆಯಲ್ಲಿ ಸಾಗಲು ಬೈಕ ಸವಾರನೊಬ್ಬ ಪರದಾಡುತ್ತಿದ್ದಾನೆ. (ANI)

ದೆಹಲಿ: ಭಾರಿ ಮಳೆಯಿಂದಾಗಿ ಉತ್ತರ ಭಾರತ (North India) ತತ್ತರಗೊಂಡಿದೆ. ಕೆಲವು ಪ್ರದೇಶಗಳಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಮಳೆರಾಯ ಆರ್ಭಟಿಸುತ್ತಿದ್ದು (Heavy Rain), ಅವಾಂತರಗಳನ್ನೇ ಸೃಷ್ಟಿ ಮಾಡಿದ್ದಾನೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ದೆಹಲಿಯ (Delhi) ಕೆಲವೊಂದು ಕಡೆಗಳಲ್ಲಿ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರದಾಡುವಂತಾಗಿದ್ದರೆ, ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನುಗ್ಗಿ ಇಲ್ಲಿನ ಜನರು ಇನ್ನಿಲ್ಲದ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ರಾಷ್ಟ್ರ ರಾಜಧಾನಿ ಪರಿಸ್ಥಿತಿ ಹೀಗಿದ್ದರೆ ಅತ್ತ ಪಂಜಾಬ್ (Punjab) ಮತ್ತು ಹಿಮಾಚಲ ಪ್ರದೇಶಗಲ್ಲೂ (Himachal Pradesh) ವರುಣನ ರೌದ್ರನರ್ತನವಾಗುತ್ತಿದೆ. ಕುಲುನಲ್ಲಿ ಬಿಯಾಸ್ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಕಾರುಗಳು ಕೊಚ್ಚಿ ಹೋಗಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ದೆಹಲಿಯಲ್ಲಿ ಸತತ ಎರಡು ದಿನಗಳಿಂದ ಭಾರಿ ಮಳೆಯಿಂದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇಂದು ಸೋಮವಾರ (ಜುಲೈ 10) ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. ಮಂಗಳವಾರದ ವೇಳೆಗೆ ಯಮುನಾ ದಿನ ನೀರಿನ ಮಟ್ಟ 205.33 ಮೀಟರ್‌ನಷ್ಟು ಅಪಾಯದ ಮಟ್ಟ ಮೀರುವ ನಿರೀಕ್ಷೆಯಿದೆ.

ಭಾರಿ ಮಳೆಯಿಂದಾಗಿ ನೋಯ್ಡಾದಲ್ಲಿ ಜಿಲ್ಲಾಡಳಿತ ಸೋಮವಾರ ಶಾಲೆಗಳನ್ನು ತೆರೆಯಂತೆ ಘೋಷಣೆ ಮಾಡಿದೆ. ಇತ್ತ ಗಾಜಿಯಾಬಾದ್ ಹಾಗೂ ಫರಿದಾಬಾದ್‌ನ ಶಾಲೆಗಳನ್ನು ದಿನದ ಮಟ್ಟಿಗೆ ಮುಚ್ಚಲಾಗಿದೆ.

ಇಂದು ಕೂಡ ಭಾರಿ ಮಳೆಯ ಮುನ್ಸೂಚನೆ

ಹಿಮಾಚಲ ಪ್ರದೇಶ, ಪಂಜಾಬ್ ಹಾಗೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಮವಾರ (ಜುಲೈ 10) ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಪಶ್ಚಿಮ ಹಿಮಾಲಯ ಪ್ರದೇಶ, ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ ಹಾಗೂ ರಾಜಸ್ಥಾನದಲ್ಲಿ ಭಾರಿ ಮಳೆಯಾಗಲಿದೆ. ಉತ್ತರ ಪ್ರದೇಶದಲ್ಲಿ ಜುಲೈ 10 ರಿಂದ 12ರವರೆಗೆ ಅತಿ ಹೆಚ್ಚು ಮಳೆ ಬೀಳುವ ಸಾಧ್ಯತೆ ಇದೆ.

ಪಶ್ಟಿಮ ಭಾರತದ ವಿಷಯಕ್ಕೆ ಬಂದರೆ ಕೊಂಕಣ, ಗೋವಾ, ಸೆಂಟ್ರಲ್ ಮಹಾರಾಷ್ಟ್ರ ಹಾಗೂ ಗುಜರಾತ್‌ನ ಘಾಟ್ ಪ್ರದೇಶಗಳಲ್ಲಿ ಮುಂದಿನ 3 ದಿನಗಳವರೆಗೆ ಹೆಚ್ಚಿನ ಮಳೆಯನ್ನು ನಿರೀಕ್ಷಿಸಬಹುದಾಗಿದೆ.

ಪೂರ್ವ ಮತ್ತು ಈಶಾನ್ಯ ಭಾರತದ ಪ್ರದೇಶಗಳಲಾದ ಪಶ್ಚಿಮ ಬಂಗಾಳ, ಸಿಕ್ಕಿಂ, ಅಸ್ಸಾಂ, ಮೇಘಾಲಯ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಹಾಗೂ ಮಣಿಪುರದ ಪ್ರತ್ಯೇಕ ಕಡೆಗಳಲ್ಲಿ ಭಾರಿ ಅಂದರೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಒಡಿಶಾದ ಪ್ರತ್ಯೇಕ ಕಡೆಗಳಲ್ಲಿ ವರುಣ ಆರ್ಭಟಿಸುವ ಸಾಧ್ಯತೆ ಇದ್ದರೆ, ಜಾರ್ಖಂಡ್‌ನಲ್ಲಿ ಜುಲೈ 10 ರಿಂದ 12ರವರೆಗೆ ಮಳೆಯಾದರೆೆ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಸೋಮವಾರ (ಜುಲೈ 10) ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ. ಮತ್ತೊಂದೆಡೆ ಬಿಹಾರದಲ್ಲಿ ನಾಳೆಯಿಂದ (ಜುಲೈ 11-13) ಗುರುವಾರದವರೆಗೆ ವರುಣ ಅಬ್ಬರಿಸುವ ಹೆಚ್ಚಿನ ಸಾಧ್ಯತೆಗಳು ಇವೆ.

ಮಧ್ಯ ಭಾರತದ ವಿಚಾರಕ್ಕೆ ಬಂದರೆ ಕೆಲವು ಪ್ರದೇಶಗಳಲ್ಲಿ ಮುಂದಿನ 5 ದಿನಗಳ ಮಟ್ಟಿಗೆ ಸಾಧಾರಣ ಮಳೆಯನ್ನು ನಿರೀಕ್ಷಿಸಲಾಗಿದೆ. ಪಶ್ಟಿಮ ಮಧ್ಯಪ್ರದೇಶದಲ್ಲಿ ಇವತ್ತು (ಜುಲೈ 10) ಅತಿ ಭಾರಿ ಮಳೆಯ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇನ್ನ ದಕ್ಷಿಣ ಭಾರತದ ವಿಚಾರಕ್ಕೆ ಬಂದರೆ ಈ ಭಾಗದಲ್ಲೂ ಕೂಡ ಮುಂದಿನ 5 ದಿನಗಳಲ್ಲಿ ಕರಾವಳಿ ಕರ್ನಾಟಕ ಹಾಗೂ ಕೇರಳದ ಪ್ರತ್ಯೇಕ ಸ್ಥಳಗಳಲ್ಲಿ ವ್ಯಾಪಕ ಮಳೆಯಾಗಲಿದೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಕಚೇರಿಗಳಿಗೆ ತೆರಳಿ ಕೆಲಸ ಮಾಡುತ್ತಿದ್ದವರರು ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.