Kasaragod: ಯುಎಸ್‌ ಯುನಿರ್ವಸಿಟಿಯಿಂದ ಎರಡು ಕೋಟಿಗೂ ಹೆಚ್ಚು ಮೊತ್ತದ ಫೆಲೋಶಿಪ್‌ ಪಡೆದ ಬದಿಯಡ್ಕದ ಎಲಿಜಬೆತ್‌ ವರ್ಗೀಸ್‌
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Kasaragod: ಯುಎಸ್‌ ಯುನಿರ್ವಸಿಟಿಯಿಂದ ಎರಡು ಕೋಟಿಗೂ ಹೆಚ್ಚು ಮೊತ್ತದ ಫೆಲೋಶಿಪ್‌ ಪಡೆದ ಬದಿಯಡ್ಕದ ಎಲಿಜಬೆತ್‌ ವರ್ಗೀಸ್‌

Kasaragod: ಯುಎಸ್‌ ಯುನಿರ್ವಸಿಟಿಯಿಂದ ಎರಡು ಕೋಟಿಗೂ ಹೆಚ್ಚು ಮೊತ್ತದ ಫೆಲೋಶಿಪ್‌ ಪಡೆದ ಬದಿಯಡ್ಕದ ಎಲಿಜಬೆತ್‌ ವರ್ಗೀಸ್‌

ಯುನೈಟೆಡ್ ಸ್ಟೇಟ್ಸ್ ಅಮೇರಿಕಾದ ಸ್ಟಿಲ್ವಾಟರ್ ಒಕ್ಲಹೋಮ್ ಸ್ಟೇಟ್ ಯೂನಿವರ್ಸಿಟಿಯಿಂದ 5 ವರ್ಷಗಳ ಸಂಶೋಧನೆಗಾಗಿ ಬದಿಯಡ್ಕದ ಚುಳ್ಳಿಕಾನ ನಿವಾಸಿ ಎಲಿಜಬೆತ್ ಅವರಿಗೆ ಪಶುವೈದ್ಯಕೀಯ ರೋಗಶಾಸ್ತ್ರದಲ್ಲಿ ಸಂಶೋಧನೆ ನಡೆಸುವುದಕ್ಕಾಗಿ ಈ 2.25 ಕೋಟಿ ರೂಪಾಯಿಯ ಫೆಲೋಶಿಪ್ ಲಭ್ಯವಾಗಿದೆ.

ಯುಎಸ್‌ ಯುನಿರ್ವಸಿಟಿಯಿಂದ ಎರಡು ಕೋಟಿಗೂ ಹೆಚ್ಚು ಮೊತ್ತದ ಫೆಲೋಶಿಪ್‌ ಪಡೆದ ಬದಿಯಡ್ಕದ ಎಲಿಜಬೆತ್‌ ವರ್ಗೀಸ್‌
ಯುಎಸ್‌ ಯುನಿರ್ವಸಿಟಿಯಿಂದ ಎರಡು ಕೋಟಿಗೂ ಹೆಚ್ಚು ಮೊತ್ತದ ಫೆಲೋಶಿಪ್‌ ಪಡೆದ ಬದಿಯಡ್ಕದ ಎಲಿಜಬೆತ್‌ ವರ್ಗೀಸ್‌

ಕಾಸರಗೋಡು: ಕರ್ನಾಟಕ ಕೇರಳದ ಗಡಿ ಪ್ರದೇಶವಾದ ಬದಿಯಡ್ಕದ ಎಲಿಜಬೆತ್‌ ವರ್ಗೀಸ್ ಅವರಿಗೆ ಯುಎಸ್ಎ ದೇಶದಿಂದ 2.25 ಕೋಟಿ ರೂಪಾಯಿಯ ಫೆಲೋಶಿಪ್ ಲಭ್ಯವಾಗಿದೆ.

ಯುನೈಟೆಡ್ ಸ್ಟೇಟ್ಸ್ ಅಮೇರಿಕಾದ ಸ್ಟಿಲ್ವಾಟರ್ ಒಕ್ಲಹೋಮ್ ಸ್ಟೇಟ್ ಯೂನಿವರ್ಸಿಟಿಯಿಂದ 5 ವರ್ಷಗಳ ಸಂಶೋಧನೆಗಾಗಿ ಬದಿಯಡ್ಕದ ಚುಳ್ಳಿಕಾನ ನಿವಾಸಿ ಎಲಿಜಬೆತ್ ಅವರಿಗೆ ಪಶುವೈದ್ಯಕೀಯ ರೋಗಶಾಸ್ತ್ರದಲ್ಲಿ ಸಂಶೋಧನೆ ನಡೆಸುವುದಕ್ಕಾಗಿ ಈ 2.25 ಕೋಟಿ ರೂಪಾಯಿಯ ಫೆಲೋಶಿಪ್ ಲಭ್ಯವಾಗಿದೆ.

ಎಲಿಜಬೆತ್ ಅವರು ಚೆನ್ನೈನಲ್ಲಿ ಪಶುವೈದ್ಯಕೀಯ ರೋಗಶಾಸ್ತ್ರಜ್ಞರಾಗಿದ್ದಾರೆ. ಎಲಿಜಬೆತ್ ಅವರು ತನ್ನ ಪ್ರಾಥಮಿಕ ಶಿಕ್ಷಣವನ್ನು ತಮಿಳುನಾಡಿನಲ್ಲಿ ಪಡೆದು ನಂತರದ ಶಿಕ್ಷಣವನ್ನು ಗೋರಕ್‌ಪುರದಲ್ಲಿ ಪಡೆದಿದ್ದಾರೆ. ಇವರು ಭಾಷಣಕಲೆಯಲ್ಲಿ ಮತ್ತು ಬರವಣಿಗೆಯಲ್ಲಿ ನೈಪುಣ್ಯತೆಯನ್ನು ಪಡೆದಿದ್ದು,ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಎಲಿಜಬೇತ್ ಅವರು ಮದ್ರಾಸ್ ಪಶುವೈದ್ಯಕೀಯ ಕಾಲೇಜಿನಲ್ಲಿ ಪದವಿ ಮತ್ತು ಪೂಕೋಡ್‌ನ ವೆಟರ್ನರಿ ಕಾಲೇಜಿನಲ್ಲಿ ಪಶುವೈದ್ಯಕೀಯ ರೋಗಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.

ಶಿಕ್ಷಕರಾದ ವರ್ಗೀಸ್ ವೀರಾಲಾಶೇರಿಯಿಲ್ ಮತ್ತು ತೆರೇಸಾ ತುನಿಯಾಂಬ್ರೈಲ್ ಅವರ ಪುತ್ರಿಯಾದ ಎಲಿಜಬೆತ್ ಅವರ ತಂದೆಯವರೂ ಮೂರು ವಿಷಯಗಳಲ್ಲಿ ಪೋಸ್ಟ್ ಗ್ರಾಜುಯೇಟ್ ಪದವಿ ಪಡೆದಿದ್ದಾರೆ. ಎಲಿಜಬೆತ್ ಅಕ್ಕ ರೆಜಿನಾ ಮೇರಿ ವರ್ಗೀಸ್ ಅವರು ಇಂಡಿಯನ್ ಸಿವಿಲ್ ಸರ್ವಿಸ್‌ನಲ್ಲಿ 49ನೇ ರಾಂಕ್ ಪಡೆದು ಐಎಫ್‌ಎಸ್ ವಿದ್ಯಾರ್ಥಿನಿಯಾಗಿದ್ದಾರೆ. ಇವರ ಅಣ್ಣ ರೋಹಿತ್ ಆ್ಯಂಟನಿ ಅವರು ಬೆಂಗಳೂರಿನ ಕಂಪನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಜಿಆರ್‌ಇ ಪರೀಕ್ಷೆಯನ್ನು ಬರೆದು ಎಲಿಜಬೆತ್‌ ಅವರು ಅಮೆರಿಕದ ಒಕ್ಲಹೋಮ ಸ್ಟೇಟ್ ಯೂನಿವರ್ಸಿಟಿಗೆ ಆಯ್ಕೆಯಾಗಿದ್ದು,ಅಗಸ್ಟ್ 11ರಂದು ಅಮೇರಿಕಾಕ್ಕೆ ತೆರಳಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.