ಹರಿಯಾಣದ ಈ ಕೋಣದ ಬೆಲೆ 10 ಬೆಂಜ್, 2 ರೋಲ್ಸ್ ರಾಯ್ಸ್ ಕಾರುಗಳಿಗೆ ಸಮ; ಇದರ ವೀರ್ಯದಿಂದಲೇ ಲಕ್ಷ ಲಕ್ಷ ಲಾಭ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಹರಿಯಾಣದ ಈ ಕೋಣದ ಬೆಲೆ 10 ಬೆಂಜ್, 2 ರೋಲ್ಸ್ ರಾಯ್ಸ್ ಕಾರುಗಳಿಗೆ ಸಮ; ಇದರ ವೀರ್ಯದಿಂದಲೇ ಲಕ್ಷ ಲಕ್ಷ ಲಾಭ

ಹರಿಯಾಣದ ಈ ಕೋಣದ ಬೆಲೆ 10 ಬೆಂಜ್, 2 ರೋಲ್ಸ್ ರಾಯ್ಸ್ ಕಾರುಗಳಿಗೆ ಸಮ; ಇದರ ವೀರ್ಯದಿಂದಲೇ ಲಕ್ಷ ಲಕ್ಷ ಲಾಭ

Anmol Buffalo: ಅನ್ಮೋಲ್ ಎಂಬ ಕೋಣದ ಬೆಲೆ ನೀವು ಯಾರೂ ಊಹಿಸಿರಲು ಸಾಧ್ಯವಿಲ್ಲ! ಹೌದು, ಅದರ ಬೆಲೆ ಹರಿಯಾಣದ ಈ ಕೋಣದ ಬೆಲೆ 10 ಬೆಂಜ್ ಕಾರು, 2 ರೋಲ್ಸ್ ರಾಯ್ಸ್ ಕಾರುಗಳಿಗೆ ಸಮ.

ಹರಿಯಾಣದ ಈ ಕೋಣದ ಬೆಲೆ 10 ಬೆಂಜ್, 2 ರೋಲ್ಸ್ ರಾಯ್ಸ್ ಕಾರುಗಳಿಗೆ ಸಮ; ಇದರ ವೀರ್ಯದಿಂದಲೇ ಲಕ್ಷ ಲಕ್ಷ ಲಾಭ
ಹರಿಯಾಣದ ಈ ಕೋಣದ ಬೆಲೆ 10 ಬೆಂಜ್, 2 ರೋಲ್ಸ್ ರಾಯ್ಸ್ ಕಾರುಗಳಿಗೆ ಸಮ; ಇದರ ವೀರ್ಯದಿಂದಲೇ ಲಕ್ಷ ಲಕ್ಷ ಲಾಭ

ಹರಿಯಾಣ: ಇತ್ತೀಚೆಗೆ ಕೋಣವೊಂದು ದೇಶಾದ್ಯಂತ ಸಖತ್ ಸದ್ದು ಮಾಡುತ್ತಿದೆ. ಏಕೆಂದರೆ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂಪಾಯಿ. ಅಂದರೆ ಇದರ ಬೆಲೆ 2 ರೋಲ್ಸ್ ರಾಯ್ಸ್ ಮತ್ತು 10 ಬೆಂಜ್ ಕಾರುಗಳಿಗೆ ಸಮ. ಈ ಕೋಣದ ಹೆಸರು ಅನ್ಮೋಲ್. ಸುಮಾರು 1500 ಕೆಜಿ ಇರುವ ಇದು, ಭಾರತದಾದ್ಯಂತ ಕೃಷಿ ಮೇಳಗಳಲ್ಲಿ ಹೊಸ ಅಲೆ ಸೃಷ್ಟಿಸಿದೆ. ಪುಷ್ಕರ್ ಮೇಳ ಮತ್ತು ಮೀರತ್​ನಲ್ಲಿ ನಡೆದಿದ್ದ ಅಖಿಲ ಭಾರತ ರೈತರ ಮೇಳದಂತಹ ಕಾರ್ಯಕ್ರಮಗಳಲ್ಲಿ ಆಕರ್ಷಿಸಿತ್ತು. ಅನ್ಮೋಲ್ ತನ್ನ ಗಾತ್ರ, ವಂಶಾವಳಿ ಮತ್ತು ಸಂತಾನೋತ್ಪತ್ತಿ ಸಾಮರ್ಥ್ಯಕ್ಕೆ ಭಾರತದ ಗಮನ ಸೆಳೆದಿದೆ.

ಅನ್ಮೋಲ್ ಐಷಾರಾಮಿ ಜೀವನಶೈಲಿ ನಡೆಸುತ್ತಿದ್ದು, ಅದಕ್ಕಾಗಿ ದೊಡ್ಡ ಮೊತ್ತದ ಖರ್ಚು ಆಗುತ್ತಿದೆ. ಈ ಕೋಣದ ಮಾಲೀಕ ಗಿಲ್ ಅವರು ಅದರ ಆಹಾರಕ್ಕೆ ಪ್ರತಿದಿನ ಸುಮಾರು 1,500 ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಡ್ರೈ ಫ್ರೂಟ್ಸ್, ಹೆಚ್ಚಿನ ಕ್ಯಾಲೊರಿ ಇರುವ ಮಿಶ್ರಣ ಆಹಾರವನ್ನು ಕೋಣಕ್ಕೆ ನೀಡಲಾಗುತ್ತದೆ. ಆ ಮೂಲಕ ಕೋಣದ ಆರೋಗ್ಯ ಮತ್ತು ಶಕ್ತಿಯನ್ನು ಹೆಚ್ಚಿಸಲಾಗುತ್ತದೆ. ಕೋಣದ ಆಹಾರದ ದಿನದ ಖರ್ಚು ಎಷ್ಟೋ ಮಂದಿಗೆ ಅಷ್ಟು ಕೂಲಿಯೂ ಸಿಗುವುದಿಲ್ಲ.

ಅನ್ಮೋಲ್ ಮೆನು ಹೇಗಿದೆ?

ಮೆನುವಿನಲ್ಲಿ 250 ಗ್ರಾಂ ಬಾದಾಮಿ, 30 ಬಾಳೆಹಣ್ಣು, 4 ಕೆಜಿ ದಾಳಿಂಬೆ, 5 ಕೆಜಿ ಹಾಲು ಮತ್ತು 20 ಮೊಟ್ಟೆಗಳು ಸೇರಿವೆ. ಅನ್ಮೋಲ್ ಎಣ್ಣೆ ಕೇಕ್, ಹಸಿರು ಮೇವು, ತುಪ್ಪ, ಸೋಯಾಬೀನ್ ಮತ್ತು ಜೋಳ ಸೇವಿಸುತ್ತದೆ. ಈ ಆಹಾರ ಕ್ರಮದಿಂದ ಅನ್ಮೋಲ್ ಸಂತಾನೋತ್ಪತ್ತಿಗೆ ಯಾವಾಗಲೂ ಸೈ ಎಂಬುದನ್ನು ಖಚಿತಪಡಿಸುತ್ತದೆ. ಆಹಾರ ಮಾತ್ರವಲ್ಲ, ಅನ್ಮೋಲ್ ಅವರ ಆರೋಗ್ಯಕ್ಕೂ ಹೆಚ್ಚು ಒತ್ತು ನೀಡಲಾಗುತ್ತದೆ. ದಿನಕ್ಕೆ ಎರಡು ಬಾರಿ ಸ್ನಾನ ಮಾಡಿಸಲಾಗುತ್ತದೆ. ನಂತರ ಬಾದಾಮಿ ಮತ್ತು ಸಾಸಿವೆ ಎಣ್ಣೆಯ ವಿಶೇಷ ಮಿಶ್ರಣದಿಂದ ಮಸಾಜ್ ಮಾಡಲಾಗುತ್ತದೆ. ಇದು ಕೋಣದ ಹೊಳಪು ಮತ್ತು ಆರೋಈಗ್ಯವನ್ನು ಹೆಚ್ಚಿಸುತ್ತದೆ.

ಅನ್ಮೋಲ್ ಆರೋಗ್ಯಕ್ಕೆ ಈ ಕೋಣದ ತಾಯಿ ಮಾರಾಟ

ಅನ್ಮೋಲ್ ಆಹಾರ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳುವ ವೆಚ್ಚವನ್ನು ಭರಿಸಲು ಮಾಲೀಕ ಗಿಲ್ ಅವರು ಈ ಹಿಂದೆ ಕೋಣದ ತಾಯಿ ಮತ್ತು ಕೋಣದ ಸಹೋದರಿ ಮಾರಾಟ ಮಾಡಿದ್ದರು. ಕೋಣದ ತಾಯಿ ದಿನಕ್ಕೆ 25 ಲೀಟರ್ ಹಾಲು ನೀಡುತ್ತಿತ್ತು. ಅನ್ಮೋಲ್ ಜಾನುವಾರು ಸಂತಾನೋತ್ಪತ್ತಿಯಲ್ಲಿ ಪ್ರಮುಖ ಪಾತ್ರವಹಿಸುವ ಕಾರಣ ಮೌಲ್ಯವನ್ನು ಹೆಚ್ಚಿಸಿದೆ. ವಾರಕ್ಕೆ 2 ಬಾರಿ ಸಂಗ್ರಹಿಸುವ ಅದರ ವೀರ್ಯಕ್ಕೆ ತಳಿಗಾರರಲ್ಲಿ ಹೆಚ್ಚಿನ ಬೇಡಿಕೆಯಿದೆ.

ಕೋಣದ ವೀರ್ಯಕ್ಕೆ ಡಿಮ್ಯಾಂಡ್

ಕೋಣದ ವೀರ್ಯಕ್ಕೆ ಎಲ್ಲಿಲ್ಲದ ಬೇಡಿಕೆ ಇದೆ. ವಾರಕ್ಕೆ ಎರಡು ಬಾರಿ ವೀರ್ಯ ತೆಗೆಯಲಾಗುತ್ತದೆ. ಪ್ರತಿ ಸಲ ತೆಗೆಯುವ ವೀರ್ಯವನ್ನು 300 ರಿಂದ 900 ಜಾನುವಾರುಗಳ ಗರ್ಭದಾರಣೆಗೆ ಬಳಸಬಹುದು. ಪ್ರತಿ ಜಾನುವಾರುಗೆ ನೀಡುವ ವೀರ್ಯಕ್ಕೆ ತಲಾ 250 ರೂ ಇದೆ. ಇದರಿಂದಲೇ ಮಾಸಿಕ ಐದು ಲಕ್ಷ ಬರುತ್ತದೆ. ಇದು ಕೋಣವನ್ನು ನಿರ್ವಹಿಸುವ ವೆಚ್ಚವನ್ನು ಗಿಲ್​ಗೆ ಸಹಾಯ ಮಾಡುತ್ತದೆ. ಈ ಕೋಣದ ಬೆಲೆ 23 ಕೋಟಿ ರೂ.ಗಳ ಮೌಲ್ಯವಿದ್ದರೂ ಅದನ್ನು ಮಾರಲು ಗಿಲ್ ಮುಂದಾಗುತ್ತಿಲ್ಲ. ತನ್ನ ಕುಟುಂಬದ ಸದಸ್ಯನಂತೆ ಈ ಕೋಣವನ್ನು ನೋಡಿಕೊಳ್ಳಲಾಗುತ್ತಿದೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.