ಕನ್ನಡ ಸುದ್ದಿ  /  Nation And-world  /  Rahul Gandhi With A New Look Rahul Gandhi S New Look At Cambridge University Bharat Jodo Beard Now Trimmed

Rahul Gandhi With a New Look: ನಾನವನಲ್ಲ!; ಭಾರತ್‌ ಜೋಡೋ ಯಾತ್ರೆಯ ಲುಕ್‌ನಿಂದ ಹೊರಬಂದ ರಾಹುಲ್‌ ಗಾಂಧಿ!

Rahul Gandhi With a New Look: ಕಳೆದ ವರ್ಷ ಸೆಪ್ಟೆಂಬರ್‌ನಿಂದ 2023ರ ಜನವರಿವರೆಗೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್‌ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ ಗಡ್ಡ ಬೋಳಿಸಿಕೊಂಡಿರಲಿಲ್ಲ. ಅವರ ಉದ್ದನೆಯ ಗಡ್ಡದ ನೋಟವು ಹಲವು ರೀತಿಯ ಟೀಕೆ, ಟ್ರೋಲ್‌ಗಳಿಗೆ ಕಾರಣವಾಗಿತ್ತು. ಈಗ ಅವರು ಆ ಲುಕ್‌ನಿಂದ ಹೊರಬಂದಿದ್ದಾರೆ.

ಭಾರತ್‌ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಹುಲ್‌ ಗಾಂಧಿ (ಎಡ ಚಿತ್ರ) ಯುಕೆಯಲ್ಲಿ ಈಗ ಪ್ರವಾಸದಲ್ಲಿರುವ ರಾಹುಲ್‌ ಗಾಂಧಿ (ಬಲಚಿತ್ರ)
ಭಾರತ್‌ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಹುಲ್‌ ಗಾಂಧಿ (ಎಡ ಚಿತ್ರ) ಯುಕೆಯಲ್ಲಿ ಈಗ ಪ್ರವಾಸದಲ್ಲಿರುವ ರಾಹುಲ್‌ ಗಾಂಧಿ (ಬಲಚಿತ್ರ)

ಭಾರತ್‌ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕಾಣಿಸಿಕೊಂಡಿದ್ದ ರೀತಿ ಜನಮಾನಸದಿಂದ ಇನ್ನೂ ಮರೆಯಾಗಿಲ್ಲ. ಉದ್ದನೆಯ ಗಡ್ಡದೊಂದಿಗೆ ಪಾದಯಾತ್ರೆ ಮಾಡಿದ ಈ ನಾಯಕ ಈಗ ಒಂದು ವಾರದ ಮಟ್ಟಿಗೆ ಬ್ರಿಟನ್‌ ಪ್ರವಾಸದಲ್ಲಿದ್ದಾರೆ. ಅಲ್ಲಿ ಅವರ ಲುಕ್‌ ಸಂಪೂರ್ಣವಾಗಿ ಬದಲಾಗಿದೆ!

ಸೋಷಿಯಲ್‌ ಮೀಡಿಯಾದಲ್ಲಿ ವಿಶೇಷವಾಗಿ ಟ್ವಿಟರ್‌ನಲ್ಲಿ ರಾಹುಲ್‌ ಗಾಂಧಿ ಅವರ ಲುಕ್‌ ಬಗ್ಗೆ ಟ್ವೀಟ್‌ಗಳು ಶುರುವಾಗಿವೆ.

ಒಂದು ವಾರದ ಪ್ರವಾಸಕ್ಕಾಗಿ ಯುಕೆಗೆ ಆಗಮಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ತಮ್ಮ ಕೂದಲನ್ನು ಮತ್ತು ಭಾರತ್ ಜೋಡೋ ಯಾತ್ರಾ ಗಡ್ಡವನ್ನು ಟ್ರಿಮ್ ಮಾಡಿದ್ದಾರೆ ಮತ್ತು ಅವರ ಬಿಳಿ ಟೀ ಶರ್ಟ್ ಬದಲು ಸೂಟ್-ಟೈನಲ್ಲಿ ಕಾಣಿಸಿಕೊಂಡರು.

ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ “21 ನೇ ಶತಮಾನದಲ್ಲಿ ಕೇಳಲು ಕಲಿಯುವುದು” ಎಂಬ ವಿಷಯದ ಕುರಿತು ಭಾಷಣ ಮಾಡಲು ಆಹ್ವಾನಿತರಾಗಿದ್ದರು. ಹಲವಾರು ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಅವರ ಹೊಸ ಲುಕ್‌ನ ಆ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಭಾರತ್ ಜೋಡೋ ಯಾತ್ರೆಯ ಐದು ತಿಂಗಳ ಅವಧಿಯಲ್ಲಿ ರಾಹುಲ್ ಗಾಂಧಿಯವರ ನೋಟವು ತೀವ್ರ ಬದಲಾವಣೆಗೆ ಒಳಗಾಗಿತ್ತು. ಅವರು ಯಾವಾಗಲೂ ಬಿಳಿ ಟೀ ಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. ಯಾತ್ರೆಯಲ್ಲಿ ಕ್ಷೌರ ಮಾಡದಿರಲು ನಿರ್ಧರಿಸಿದ ಕಾರಣ ಐದು ತಿಂಗಳಲ್ಲಿ ಅವರ ಗಡ್ಡವೂ ಬೆಳೆದಿತ್ತು. ಲುಕ್‌ ಬದಲಾಗಿತ್ತು. ಈ ರೀತಿ ಪ್ರಜ್ಞಾ ಪೂರ್ವಕವಾಗಿ ಇಮೇಜ್‌ ಬದಲಾಯಿಸಿಕೊಂಡಿದ್ದ ರಾಹುಲ್ ಗಾಂಧಿ, ಈಗ ಮತ್ತೆ ತಮ್ಮ ಲುಕ್‌ ಅನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡು ಗಮನಸೆಳೆದಿದ್ದಾರೆ.

ಯಾವಾಗ ಗಡ್ಡ ಬೋಳಿಸುತ್ತೀರಿ ಎಂದು ರಾಹುಲ್‌ ಗಾಂಧಿ ಅವರನ್ನು ಕೇಳಿರುವುದಾಗಿ ಕಾಂಗ್ರೆಸ್‌ ನಾಯಕ ಪವನ್‌ ಖೇರಾ ಇತ್ತೀಚೆಗೆ ಹೇಳಿದ್ದರು. ವಾಸ್ತವವಾಗಿ, ರಾಹುಲ್ ಗಾಂಧಿ ಈ ಹಿಂದೆ ಹಲವು ಬಾರಿ ಈ ಪ್ರಶ್ನೆಯನ್ನು ಎದುರಿಸಿದ್ದರು. ಯಾತ್ರೆಯ ಸಂದರ್ಭದಲ್ಲೇ ಅನೇಕರು ಅಂದಿನ ಲುಕ್‌ ಬಗ್ಗೆ ಹೇಳಿ, ಈ ಪ್ರಶ್ನೆ ಮಾಡಿದ್ದರು. ಆಗ ಅವರು, ಇದು ಯಾತ್ರೆಯ ಕಾರಣ ಮತ್ತು ಈ ಭಾರತ್‌ ಜೋಡೋ ಯಾತ್ರೆ ಮುಗಿದ ನಂತರ ಅದರ ಬಗ್ಗೆ ಯೋಚಿಸುತ್ತೇನೆ ಎಂದು ಹೇಳಿದ್ದರು.

ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ “21 ನೇ ಶತಮಾನದಲ್ಲಿ ಕೇಳಲು ಕಲಿಯುವುದು” ಎಂಬ ವಿಷಯದ ಉಪನ್ಯಾಸವು ಕೇವಲ ವಿದ್ಯಾರ್ಥಿಗಳಿಗೆ ಸೀಮಿತವಾದದು. ಅಲ್ಲಿ, ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯ ಅನುಭವವನ್ನು ಹಂಚಿಕೊಂಡಿದ್ದಾರೆ. ವಿಶ್ವವಿದ್ಯಾನಿಲಯದ ಕಾರ್ಪಸ್ ಕ್ರಿಸ್ಟಿ ಕಾಲೇಜಿನಲ್ಲಿ ಭಾರತೀಯ ಮೂಲದ ಫೆಲೋ, ಬೋಧಕ ಮತ್ತು ಅಧ್ಯಯನದ ನಿರ್ದೇಶಕಿ ಮತ್ತು ಗ್ಲೋಬಲ್ ಹ್ಯುಮಾನಿಟೀಸ್ ಇನಿಶಿಯೇಟಿವ್ನ ಸಹ-ನಿರ್ದೇಶಕಿ ಪ್ರೊಫೆಸರ್ ಶ್ರುತಿ ಕಪಿಲಾ ಅವರೊಂದಿಗೆ ಬಿಗ್ ಡೇಟಾ ಮತ್ತು ಡೆಮಾಕ್ರಸಿ ಮತ್ತು 'ಭಾರತ-ಚೀನಾ ಸಂಬಂಧಗಳು' ಕುರಿತು ರಾಹುಲ್ ಗಾಂಧಿ ಮತ್ತೊಂದು ಮುಚ್ಚಿದ ಬಾಗಿಲಿನ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ. .

ವಾರಾಂತ್ಯದಲ್ಲಿ, ರಾಹುಲ್‌ ಗಾಂಧಿ ಅವರು ಇಂಡಿಯನ್‌ ಓವರ್‌ಸೀಸ್‌ ಕಾಂಗ್ರೆಸ್‌ನ ಯುಕೆ ಘಟಕದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಇದಲ್ಲದೆ, ಲಂಡನ್‌ನಲ್ಲಿ ಭಾರತೀಯರನ್ನು ಉದ್ದೇಶಿಸಿ ಮಾತನಾಡುವ ಕಾರ್ಯಕ್ರಮ ಕೂಡ ಆಯೋಜನೆ ಆಗಿದೆ ಎಂದು ವರದಿಗಳು ತಿಳಿಸಿವೆ.

IPL_Entry_Point