Tata Cars Price Hike: ನ. 7ರಿಂದ ಟಾಟಾ ಮೋಟಾರ್ಸ್ ಪ್ರಯಾಣಿಕ ಕಾರುಗಳು ದುಬಾರಿ, ಇಂದು ಅಥವಾ ನಾಳೆ ಖರೀದಿಸಿರಿ!
"ನವೆಂಬರ್ 7, 2022ಕ್ಕೆ ಅನ್ವಯವಾಗುವಂತೆ ಆಯಾ ಮಾಡೆಲ್‌ಗಳಿಗೆ ತಕ್ಕಂತೆ ಶೇಕಡ 0.9ರಿಂದ ಕಡ 0.55ರಷ್ಟು ದರ ಹೆಚ್ಚಳ ಮಾಡಲಿದ್ದೇವೆʼʼ ಎಂದು ಟಾಟಾ ಮೋಟಾರ್ಸ್ ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಟಾಟಾ ಮೋಟಾರ್ಸ್ ಕಂಪನಿಯ ಯಾವುದಾದರೂ ಕಾರು ಖರೀದಿಸಲು ಬಯಸಿದ್ದರೆ, ನಾಳೆಯೊಳಗೆ ಖರೀದಿಸಿದರೆ ನಿಮಗೆ ತುಸು ಲಾಭವಾಗಲಿದೆ. ಏಕೆಂದರೆ, ಟಾಟಾ ಮೋಟಾರ್ಸ್ ಕಂಪನಿಯು ತನ್ನ ಎಲ್ಲಾ ಪ್ರಯಾಣಿಕ ಕಾರುಗಳ ದರವನ್ನು ತುಸು ಏರಿಕೆ ಮಾಡಲು ನಿರ್ಧರಿಸಿದೆ. ಅಂದರೆ, ನವೆಂಬರ್ 7ರಿಂದ ಹೊಸ ದರ ಜಾರಿಗೆ ಬರಲಿದೆ.
ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಎಲ್ಲಾ ಪ್ರಯಾಣಿಕ ಕಾರುಗಳ ದರವನ್ನು ಶೇಕಡ 0.55ರಷ್ಟು ಹೆಚ್ಚಿಸಲು ಉದ್ದೇಶಿಸಿದೆ. ಜನವರು ಮತ್ತು ಏಪ್ರಿಲ್ 2022ರಲ್ಲಿಯೂ ಕಂಪನಿ ದರವನ್ನು ತುಸು ಹೆಚ್ಚಳ ಮಾಡಿತ್ತು.
"ನವೆಂಬರ್ 7, 2022ಕ್ಕೆ ಅನ್ವಯವಾಗುವಂತೆ ಆಯಾ ಮಾಡೆಲ್‌ಗಳಿಗೆ ತಕ್ಕಂತೆ ಶೇಕಡ 0.9ರಿಂದ ಕಡ 0.55ರಷ್ಟು ದರ ಹೆಚ್ಚಳ ಮಾಡಲಿದ್ದೇವೆʼʼ ಎಂದು ಟಾಟಾ ಮೋಟಾರ್ಸ್ ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.
"ಕಚ್ಚಾ ಸಾಮಗ್ರಿಗಳ ದರ ಹೆಚ್ಚಳ, ಇನ್‌ಪುಟ್ ವೆಚ್ಚ ಹೆಚ್ಚಳ ಸೇರಿದಂತೆ ಹಲವು ಕಾರಣಗಳಿಂದ ಪ್ರಯಾಣಿಕ ಕಾರುಗಳ ದರವನ್ನು ತುಸು ಏರಿಕೆ ಮಾಡಲಾಗುತ್ತಿದೆʼʼ ಎಂದು ಕಂಪನಿ ತಿಳಿಸಿದೆ.
ಟಾಟಾ ಮೋಟಾರ್ಸ್ ಕಂಪನಿಯು ಟಿಯಾಗೊ, ಪಂಚ್, ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಸೇರಿದಂತೆ ಹಲವು ಜನಪ್ರಿಯ ಕಾರುಗಳನ್ನು ಮಾರಾಟ ಮಾಡುತ್ತಿದೆ. ಟಾಟಾ ಮೋಟಾರ್ಸ್‌ನ ಎಲ್ಲಾ ಪ್ರಯಾಣಿಕ ಕಾರುಗಳಿಗೂ ನೂತನ ದರ ಹೆಚ್ಚಳವು ಅನ್ವಯವಾಗಲಿದೆ.
ಅಕ್ಟೋಬರ್ ತಿಂಗಳಲ್ಲಿ ಕಂಪನಿಯು ದೇಶದಲ್ಲಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಟ್ಟಾರೆ 78,335 ಕಾರುಗಳನ್ನು ಮಾರಾಟ ಮಾಡಿರುವುದಾಗಿ ಟಾಟಾ ಮೋಟಾರ್ಸ್ ಇತ್ತೀಚೆಗೆ ತಿಳಿಸಿತ್ತು. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಕಂಪನಿಯು 67,829 ಕಾರುಗಳನ್ನು ಮಾರಾಟ ಮಾಡಿತ್ತು. ಕಳೆದ ವರ್ಷದಲ್ಲಿ ಹೋಲಿಸಿದರೆ ಈ ಅಕ್ಟೋಬರ್‌ನಲ್ಲಿ ಕಂಪನಿಯ ಕಾರುಗಳ ಮಾರಾಟ ಶೇಕಡ 15.49ರಷ್ಟು ಹೆಚ್ಚಳವಾಗಿದೆ.
ಕಂಪನಿಯು ದೀಪಾವಳಿ ಹಬ್ಬದ ಅವಧಿಯಲ್ಲಿ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದೆ. ಹಬ್ಬದ ಸಮಯದಲ್ಲಿ ಯಾವುದೇ ದರ ಹೆಚ್ಚಳ ಮಾಡದೆ, ಹಬ್ಬ ಕಳೆದ ಬಳಿಕ ಕಂಪನಿಯು ಕಾರುಗಳ ದರವನ್ನು ಏರಿಕೆ ಮಾಡುತ್ತಿದೆ.
ಕಳೆದ ತಿಂಗಳು ಕಂಪನಿಯು ದೇಶದೊಳಗೆ 76,537 ಕಾರುಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿಯ ದೇಶಿ ಮಾರಾಟ 45,271 ಯೂನಿಟ್ ಆಗಿತ್ತು. ದೇಶದಲ್ಲಿ ವಾಣಿಜ್ಯ ವಾಹನ ಮಾರಾಟವೂ ಹೆಚ್ಚಳವಾಗಿದೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ ಕಂಪನಿಯು ಈ ಅಕ್ಟೋಬರ್‌ನಲ್ಲಿ ವಾಣಿಜ್ಯ ವಾಹನಗಳ ಮಾರಾಟ ಶೇಕಡ 33ರಷ್ಟು ಹೆಚ್ಚಾಗಿದೆ.