Instagram New Feature: ಇನ್‌ಸ್ಟಾಗ್ರಾಂ ನೋಟ್ಸ್‌ಗೆ ಮ್ಯೂಸಿಕ್ ಹಾಕುವುದು ಹೇಗೆ? ಹೊಸ ಫೀಚರ್ ಬಳಸುವವರಿಗೆ ಇಲ್ಲಿದೆ ಮಾರ್ಗದರ್ಶಿ
Instagram New Feature: ಇತ್ತೀಚೆಗೆ ಮೆಟಾ ಸಿಇಒ ಮಾರ್ಕ್ ಝುಕರ್‌ಬರ್ಗ್ ಅವರು ಇನ್‌ಸ್ಟಾಗ್ರಾಂ ಬಳಕೆದಾರರಿಗೆ ಹೊಸ ಫೀಚರ್ ಘೋಷಿಸಿದ್ದರು. ಇನ್‌ಸ್ಟಾಗ್ರಾಂ ನೋಟ್ಸ್‌ಗೆ 30 ಸೆಕೆಂಡ್‌ನ ಮ್ಯೂಸಿಕ್ ಕ್ಲಿಪ್ ಅಳವಡಿಸುವ ಅವಕಾಶ ನೀಡಿದ್ದರು.
ಇತ್ತೀಚೆಗೆ ಮೆಟಾ ಸಿಇಒ ಮಾರ್ಕ್ ಝುಕರ್‌ಬರ್ಗ್ ಅವರು ಇನ್‌ಸ್ಟಾಗ್ರಾಂ ಬಳಕೆದಾರರಿಗೆ ಹೊಸ ಫೀಚರ್ ಘೋಷಿಸಿದ್ದರು. ಇನ್‌ಸ್ಟಾಗ್ರಾಂ ನೋಟ್ಸ್‌ಗೆ 30 ಸೆಕೆಂಡ್‌ನ ಮ್ಯೂಸಿಕ್ ಕ್ಲಿಪ್ ಅಳವಡಿಸುವ ಅವಕಾಶ ನೀಡಿದ್ದರು. "ಇನ್‌ಸ್ಟಾಗ್ರಾಂ ನೋಟ್ಸ್‌ಗೆ 30 ಸೆಕೆಂಡ್‌ನ ನಿಮ್ಮ ಅಚ್ಚುಮೆಚ್ಚಿನ ಹಾಡುಗಳನ್ನು ಹಾಕಬಹುದು" ಎಂದು ಅವರು ಘೋಷಿಸಿದ್ದರು. ಇಲ್ಲಿಯವರೆಗೆ ನೋಟ್ಸ್‌ನಲ್ಲಿ ಅಕ್ಷರಗಳು ಮತ್ತು ಇಮೋಜಿ ಮಾತ್ರ ಬಳಸಲು ಅವಕಾಶವಿತ್ತು.
ಇನ್‌ಸ್ಟಾಗ್ರಾಂ ನೋಟ್ಸ್‌ಗೆ ಮ್ಯೂಸಿಕ್ ಹಾಕೋದು ಹೇಗೆ?
- ನಿಮ್ಮ ಮೊಬೈಲ್‌ನಲ್ಲಿ ಇನ್‌ಸ್ಟಾಗ್ರಾಂ ತೆರೆಯಿರಿ.
- ಚಾಟ್ಸ್ ಆಯ್ಕೆ ಕ್ಲಿಕ್ ಮಾಡಿ.
- ಪ್ಲಸ್ ಬಟನ್ ಕ್ಲಿಕ್ ಮಾಡಿ, ಅಲ್ಲಿ ಯುವರ್ ನೋಟ್ಸ್ ಎಂಬ ಆಯ್ಕೆ ಇರುತ್ತದೆ.
- ಆಡ್ ಮ್ಯೂಸಿಕ್ ಆಯ್ಕೆ ಕ್ಲಿಕ್ ಮಾಡಿ.
- ಅಲ್ಲಿ ಲಭ್ಯವಿರುವ ಟ್ರ್ಯಾಕ್ಸ್‌ಗಳನ್ನು ಗಮನಿಸಿ, ನಿಮಗೆ ಇಷ್ಟವಾದ ಮ್ಯೂಸಿಕ್ ಹಾಕಿ.
- ನೋಟ್ಸ್ ಜತೆಗೆ ಬರಹ ಮತ್ತು ಇಮೋಜಿ ಹಾಕಿ ನಿಮ್ಮ ಆಪ್ತರಿಗೆ ನೋಟ್ಸ್ ಕಳುಹಿಸಿ.
ಇನ್‌ಸ್ಟಾಗ್ರಾಂ ಬ್ರಾಡ್‌ಕಾಸ್ಟ್ ಚಾನೆಲ್
ಇನ್‌ಸ್ಟಾಗ್ರಾಂ ಕಂಪನಿಯು ಇತ್ತೀಚೆಗೆ ಬ್ರಾಡ್‌ಕಾಸ್ಟ್ ಚಾನೆಲ್ ಪರಿಯಚಿಸಿದೆ. ಲಕ್ಷಾಂತರ ಕ್ರಿಯೆಟರ್‌ಗಳು ತಮ್ಮ ಫಾಲೋವರ್ಸ್‌ಗಳ ಮೂಲಕ ನೇರವಾಗಿ ಎಂಗೇಜ್ ಆಗಲು ಈ ಫೀಚರ್ ನೆರವಾಗುತ್ತಿದೆ.
ಇನ್‌ಸ್ಟಾಗ್ರಾಂ ಫಾಲೋವರ್ಸ್ ಹೆಚ್ಚಿಸುವುದು ಹೇಗೆ?
ಇನ್‌ಸ್ಟಾಗ್ರಾಂನಲ್ಲಿ ಫಾಲೋವರ್‌ಗಳನ್ನು ಹೆಚ್ಚಿಸಲು ಹಲವು ಆಪ್‌ಗಳು ನೆರವಾಗುತ್ತವೆ. ಇಂತಹ ಆಪ್‌ಗಳ ಮೂಲಕ ನಿಮ್ಮ ಫಾಲೋವರ್‌ಗಳ ಸಂಖ್ಯೆಯನ್ನು ಹೆಚ್ಚಿಸಬಹುದು. ಆದರೆ, ಈ ರೀತಿ ಥರ್ಡ್ ಪಾರ್ಟಿ ಆಪ್‌ಗಳ ಮೂಲಕ ಫಾಲೋವರ್‌ಗಳನ್ನು ಹೆಚ್ಚಿಸಿಕೊಳ್ಳುವುದಕ್ಕಿಂತ ಅತ್ಯುತ್ತಮ ಕಂಟೆಂಟ್‌ಗಳನ್ನು ನೀಡುವ ಮೂಲಕ ನೀವು ಜನಪ್ರಿಯರಾಗುವುದು ಒಳ್ಳೆಯದು ಎಂದು ಸೋಷಿಯಲ್ ಮೀಡಿಯಾ ಎಕ್ಸ್‌ಪರ್ಟ್‌ಗಳು ಸಲಹೆ ನೀಡುತ್ತಾರೆ. ಒಳ್ಳೆಯ ಕಂಟೆಂಟ್ ನೀಡುವುದರ ಜತೆಗೆ ಆಕರ್ಷಕ ಹೆಡ್‌ಲೈನ್, ಟ್ಯಾಗ್‌ಗಳು ಕೂಡ ನಿಮ್ಮ ಜನಪ್ರಿಯತೆ ಹೆಚ್ಚಿಸಲು ನೆರವಾಗುತ್ತವೆ.
ಇನ್‌ಸ್ಟಾಗ್ರಾಂ ಸ್ಟಾರ್ ಆಗೋದು ಹೇಗೆ?
ಪುಟ್ಟ ಮಕ್ಕಳು ಮಾತ್ರವಲ್ಲದೆ ಹಿರಿಯರೂ ಈ ರೀಲ್ಸ್ ಜಗತ್ತಿನಲ್ಲಿ ಮಿಂಚಿದ್ದಾರೆ. ಇಲ್ಲಿ ಯಾರಲ್ಲಿ ವಿಶೇಷ, ವಿನೂತನ, ವಿಚಿತ್ರ ಪ್ರತಿಭೆ ಇರುತ್ತಾರೋ ಅವರು ಫೇಮಸ್ ಆಗುತ್ತಾರೆ. ಈ ರೀತಿ ಸೋಷಿಯಲ್ ಮೀಡಿಯಾ ಸ್ಟಾರ್ ಆಗೋದು ಸುಲಭವಲ್ಲ. ಅದರ ಹಿಂದೆ ಸಾಕಷ್ಟು ಪ್ರಯತ್ನ, ಹತಾಶೆ ಇರುತ್ತದೆ. ಎಲ್ಲರಿಗೂ ಯಶಸ್ಸು ಒಂದೇ ರಾತ್ರಿ ಬಂದಿರುವುದಿಲ್ಲ. ಕೆಲವರು ಮಾತ್ರ ರಾತ್ರಿ ಬೆಳಗಾಗುವುದರೊಳಗೆ ಫೇಮಸ್ ಆಗಿರಬಹುದು. ಆದರೆ, ಬಹುತೇಕರು ಸೋಷಿಯಲ್ ಮೀಡಿಯಾ ಇನ್‌ಫ್ಯೂಯೆನ್ಸರ್ ಆಗಲು ಸತತ ಪ್ರಯತ್ನ ಮಾಡಿರುತ್ತಾರೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಂಡು ಇಂದಿನ ಹಿಂದೂಸ್ತಾನ್ ಟೈಮ್ಸ್ ಕನ್ನಡದ ಹೌಟು ಗೈಡ್‌ನಲ್ಲಿ ಇನ್‌ಸ್ಟಾಗ್ರಾಂ ಇನ್‌ಫ್ಲೂಯೆನ್ಸರ್ ಆಗುವುದು ಹೇಗೆ ಎಂದು ತಿಳಿದುಕೊಳ್ಳೋಣ. ಇಲ್ಲಿ ಕ್ಲಿಕ್ ಮಾಡಿ.
ಮೌಸ್ ಇಲ್ಲದೆ ಕಂಪ್ಯೂಟರ್, ಲ್ಯಾಪ್‌ಟಾಪ್ ಬಳಸುವುದು ಹೇಗೆ?
ದೈನಂದಿನ ಕೆಲಸ ಕಾರ್ಯಗಳಲ್ಲಿ ಕೀಬೋರ್ಡ್‌ನಿಂದ ಕೈ ತೆಗೆಯದೆ, ಮೌಸ್ ಬಳಸದೆ ಕಂಪ್ಯೂಟರ್, ಲ್ಯಾಪ್‌ಟಾಪ್ ಬಳಸಿದರೆ ಕೆಲಸ ವೇಗಗೊಳ್ಳುತ್ತದೆ. ಇದರಿಂದ ನಮ್ಮ ಕೈ ಬೆರಳಿಗೂ ತುಸು ಆರಾಮವೆನಿಸುತ್ತದೆ. ಮೌಸ್ ಇಲ್ಲದೆ ಕಂಪ್ಯೂಟರ್, ಲ್ಯಾಪ್‌ಟಾಪ್ ಬಳಸಬೇಕಾದರೆ ನೀವು ಕೆಲವು ಶಾರ್ಟ್‌ಕಟ್‌ಗಳನ್ನು ತಿಳಿದಿರಬೇಕು. ಒಮ್ಮೆ ನೀವು ಈ ಶಾರ್ಟ್‌ಕಟ್‌ಗಳನ್ನು ಬಳಸಲು ಆರಂಭಿಸಿದರೆ ಮತ್ತೆ ನಿಮ್ಮ ಕೆಲಸ ಸರಾಗವಾಗುತ್ತದೆ. ಮೌಸ್ ಇಲ್ಲದೆ ಕಂಪ್ಯೂಟರ್, ಲ್ಯಾಪ್‌ಬಳಸಲು ಇಲ್ಲಿದೆ ಸಲಹೆ, ಇಲ್ಲಿ ಕ್ಲಿಕ್ ಮಾಡಿ.