ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಜಿಯೋ, ಏರ್‌ಟೆಲ್‌, ವಿಐ Vs ಬಿಎಸ್‌ಎನ್‌ಎಲ್‌ ಪ್ಲಾನ್ ಸಮರ; ಯಾವ ಕಂಪನಿಯದ್ದು ಬೆಸ್ಟ್ ಪ್ಲಾನ್‌, ಬಿಎಸ್‌ಎನ್‌ಎಲ್‌ಗೆ ಪೋರ್ಟ್ ಆಗುವುದು ಹೀಗೆ

ಜಿಯೋ, ಏರ್‌ಟೆಲ್‌, ವಿಐ vs ಬಿಎಸ್‌ಎನ್‌ಎಲ್‌ ಪ್ಲಾನ್ ಸಮರ; ಯಾವ ಕಂಪನಿಯದ್ದು ಬೆಸ್ಟ್ ಪ್ಲಾನ್‌, ಬಿಎಸ್‌ಎನ್‌ಎಲ್‌ಗೆ ಪೋರ್ಟ್ ಆಗುವುದು ಹೀಗೆ

ಜಿಯೋ, ಏರ್‌ಟೆಲ್‌, ವಿಐ vs ಬಿಎಸ್‌ಎನ್‌ಎಲ್‌ ಪ್ಲಾನ್ ಸಮರ ಶುರುವಾಗಿದೆ. ಖಾಸಗಿ ಕಂಪನಿಗಳು 5ಜಿ ಸೇವೆ ಒದಗಿಸುತ್ತಿದ್ದು ಬಿಎಸ್‌ಎನ್‌ಎಲ್‌ ಇನ್ನೂ 4ಜಿಯಲ್ಲೇ ಇದೆ. ಆದಾಗ್ಯೂ, ಯಾವ ಕಂಪನಿಯದ್ದು ಬೆಸ್ಟ್ ಪ್ಲಾನ್‌ ಯಾವುದು ಎಂಬುದನ್ನು ತಿಳಿಯಲಿದು ಇಲ್ಲಿದೆ ತುಲನಾತ್ಮಕ ವರದಿ. ಅಂದ ಹಾಗೆ, ಬಿಎಸ್‌ಎನ್‌ಎಲ್‌ಗೆ ಪೋರ್ಟ್ ಆಗುವುದು ಹೀಗೆ. ಇಲ್ಲಿದೆ ಆ ವಿವರ.

ಜಿಯೋ, ಏರ್‌ಟೆಲ್‌, ವಿಐ vs ಬಿಎಸ್‌ಎನ್‌ಎಲ್‌ ಪ್ಲಾನ್ ಸಮರ ಶುರುವಾಗಿದೆ. ಯಾವ ಕಂಪನಿಯದ್ದು ಬೆಸ್ಟ್ ಪ್ಲಾನ್‌, ಬಿಎಸ್‌ಎನ್‌ಎಲ್‌ಗೆ ಪೋರ್ಟ್ ಆಗುವುದಕ್ಕೆ ಸಂಬಂಧಿಸಿದ ವಿವರ.
ಜಿಯೋ, ಏರ್‌ಟೆಲ್‌, ವಿಐ vs ಬಿಎಸ್‌ಎನ್‌ಎಲ್‌ ಪ್ಲಾನ್ ಸಮರ ಶುರುವಾಗಿದೆ. ಯಾವ ಕಂಪನಿಯದ್ದು ಬೆಸ್ಟ್ ಪ್ಲಾನ್‌, ಬಿಎಸ್‌ಎನ್‌ಎಲ್‌ಗೆ ಪೋರ್ಟ್ ಆಗುವುದಕ್ಕೆ ಸಂಬಂಧಿಸಿದ ವಿವರ.

ನವದೆಹಲಿ: ಪ್ರಮುಖ ಟೆಲಿಕಾಂ ಆಪರೇಟರ್‌ಗಳಿಂದ ಇತ್ತೀಚಿನ ಸುಂಕದ ಹೆಚ್ಚಳದ ನಂತರ, ಭಾರತದಲ್ಲಿ ಅನೇಕ ಜನರು ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL)ಗೆ ಹಿಂತಿರುಗಲು ಚಿಂತನೆ ನಡೆಸಿರುವುದು ಕಂಡುಬಂದಿದೆ. ಎಲ್ಲಾ ಉನ್ನತ ಖಾಸಗಿ ಟೆಲಿಕಾಂ ಸೇವಾ ಕಂಪನಿಗಳು ಮಾಸಿಕ, ತ್ರೈಮಾಸಿಕ ಮತ್ತು ವಾರ್ಷಿಕ ರೀಚಾರ್ಜ್ ಯೋಜನೆಗಳನ್ನು ಶೇಕಡಾ 10 ರಿಂದ 25 ರಷ್ಟು ದರ ಹೆಚ್ಚಿಸಿದ್ದಾರೆ. ಬಿಎಸ್‌ಎನ್‌ಎಲ್‌ ಹೊಸ ಯೋಜನೆಗಳನ್ನು ಪರಿಚಯಿಸುವ ಮೂಲಕ ಮತ್ತು ಅದರ ಅಸ್ತಿತ್ವದಲ್ಲಿರುವ ಯೋಜನೆಗಳಿಗೆ ಹೆಚ್ಚುವರಿ ಪ್ರಯೋಜನಗಳನ್ನು ನೀಡುವ ಮೂಲಕ ಪರಿಸ್ಥಿತಿಯ ಲಾಭವನ್ನು ಪಡೆಯುತ್ತಿದೆ.

ಬಿಎಸ್‌ಎನ್‌ಎಲ್‌ ತನ್ನ ಬಳಕೆದಾರರಿಗೆ ಮತ್ತು ಈಗ ಬಿಎಸ್‌ಎನ್‌ಎಲ್‌ಗೆ ತಮ್ಮ ಅಸ್ತಿತ್ವದಲ್ಲಿರುವ ನೆಟ್‌ವರ್ಕ್‌ ಅನ್ನು ಪೋರ್ಟ್ ಮಾಡಲು ಯೋಜಿಸುತ್ತಿರುವ ಹೊಸ ಬಳಕೆದಾರರಿಗೆ ಲಾಭದಾಯಕ ಯೋಜನೆಗಳನ್ನು ನೀಡುತ್ತಿದೆ. ಆದಾಗ್ಯೂ, ಈಶಾನ್ಯ, ಜಮ್ಮು ಮತ್ತು ಕಾಶ್ಮೀರ ಮತ್ತು ಅಸ್ಸಾಂ ಹೊರತುಪಡಿಸಿ ದೇಶದಾದ್ಯಂತ ಬಿಎಸ್‌ಎನ್‌ಎಲ್‌ನ ಈ ಪ್ಲಾನ್‌ಗಳು ಅನ್ವಯವಾಗುತ್ತವೆ. ಸದ್ಯ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್ 4G ನೆಟ್‌ವರ್ಕ್‌ಗಳಿಗೆ ಸೀಮಿತವಾಗಿದೆ. ಆದರೆ, ಅದರ ಪ್ರತಿಸ್ಪರ್ಧಿ ಖಾಸಗಿ ಟೆಲಿಕಾಂ ಕಂಪನಿಗಳು ಈಗಾಗಲೇ 5G ನೆಟ್‌ವರ್ಕ್‌ಗಳಲ್ಲಿ ಸೇವೆ ಒದಗಿಸಲಾರಂಭಿಸಿವೆ.

ಜಿಯೋ, ಏರ್‌ಟೆಲ್‌, ವಿಐ vs ಬಿಎಸ್‌ಎನ್‌ಎಲ್; ಪ್ಲಾನ್ ದರಗಳ ಹೋಲಿಕೆ

1) ಜನಪ್ರಿಯವಾಗಿರುವ ತಿಂಗಳ ಪ್ಲಾನ್‌ಗಳ ವಿವರ

ಜಿಯೋ 299 ರೂಪಾಯಿ ಪ್ಲಾನ್: ಅವಧಿ 28 ದಿನ, ಒಟ್ಟು ಡೇಟಾ 42 GB, ಹೈಸ್ಪೀಡ್‌ನಲ್ಲಿ ಡೇಟಾ ಲಭ್ಯತೆ ದಿನಕ್ಕೆ 1.5 GB, ಫೋನ್ ಕರೆ ಅನಿಯಮಿತ, ದಿನಕ್ಕೆ 100 ಎಸ್‌ಎಂಎಸ್‌

ಟ್ರೆಂಡಿಂಗ್​ ಸುದ್ದಿ

ಏರ್‌ಟೆಲ್ 299 ರೂಪಾಯಿ ಪ್ಲಾನ್‌: ಅವಧಿ 28 ದಿನ, ಒಟ್ಟು ಡೇಟಾ 28 GB, ಹೈಸ್ಪೀಡ್‌ನಲ್ಲಿ ಡೇಟಾ ಲಭ್ಯತೆ ದಿನಕ್ಕೆ 1 GB, ಫೋನ್ ಕರೆ ಅನಿಯಮಿತ, ದಿನಕ್ಕೆ 100 ಎಸ್‌ಎಂಎಸ್‌.

ವೊಡಾಫೋನ್ ಐಡಿಯಾ (ವಿಐ) 299 ರೂಪಾಯಿ ಪ್ಲಾನ್‌: ಅವಧಿ 28 ದಿನ, ಒಟ್ಟು ಡೇಟಾ 28 GB, ಹೈಸ್ಪೀಡ್‌ನಲ್ಲಿ ಡೇಟಾ ಲಭ್ಯತೆ ದಿನಕ್ಕೆ 1 GB, ಫೋನ್ ಕರೆ ಅನಿಯಮಿತ, ದಿನಕ್ಕೆ 100 ಎಸ್‌ಎಂಎಸ್‌.

ಬಿಎಸ್‌ಎನ್‌ಎಲ್‌ 199 ರೂಪಾಯಿ ಪ್ಲಾನ್‌: ಅವಧಿ 30 ದಿನ, ಒಟ್ಟು ಡೇಟಾ 60 GB, ಹೈಸ್ಪೀಡ್‌ನಲ್ಲಿ ದಿನಕ್ಕೆ 2GB ಡೇಟಾ, ಫೋನ್ ಕರೆ ಅನಿಯಮಿತ, ದಿನಕ್ಕೆ 100 ಎಸ್‌ಎಂಎಸ್‌.

2) ಜನಪ್ರಿಯವಾಗಿರುವ ಮೂರು ತಿಂಗಳ ಪ್ಲಾನ್‌ಗಳು

ಜಿಯೋ 889 ರೂಪಾಯಿ ಪ್ಲಾನ್‌: ಅವಧಿ 84 ದಿನಗಳು, ಒಟ್ಟು ಡೇಟಾ 126 GB, ಹೈಸ್ಪೀಡ್ ಡೇಟಾ ದಿನಕ್ಕೆ 1.5 GB, ಅನಿಯಮಿತ ಫೋನ್ ಕರೆ, ದಿನಕ್ಕೆ 10 ಎಸ್‌ಎಂಎಸ್‌.

ಏರ್‌ಟೆಲ್ 859 ರೂಪಾಯಿ ಪ್ಲಾನ್‌: ಅವಧಿ 84 ದಿನಗಳು, ಒಟ್ಟು ಡೇಟಾ 126 GB, ಹೈಸ್ಪೀಡ್ ಡೇಟಾ ದಿನಕ್ಕೆ 1.5 GB, ಅನಿಯಮಿತ ಫೋನ್ ಕರೆ, ದಿನಕ್ಕೆ 10 ಎಸ್‌ಎಂಎಸ್‌.

ವೊಡಾಫೋನ್ ಐಡಿಯಾ (ವಿಐ) 859 ರೂಪಾಯಿ ಪ್ಲಾನ್‌: ಅವಧಿ 84 ದಿನ, ಒಟ್ಟು ಡೇಟಾ 126 GB, ಹೈಸ್ಪೀಡ್‌ನಲ್ಲಿ ಡೇಟಾ ಲಭ್ಯತೆ ದಿನಕ್ಕೆ 1.5 GB, ಫೋನ್ ಕರೆ ಅನಿಯಮಿತ, ದಿನಕ್ಕೆ 100 ಎಸ್‌ಎಂಎಸ್‌.

ಬಿಎಸ್‌ಎನ್‌ಎಲ್‌ 595 ರೂಪಾಯಿ ಪ್ಲಾನ್‌: ಅವಧಿ 84 ದಿನ, ಒಟ್ಟು ಡೇಟಾ 252 GB, ಹೈಸ್ಪೀಡ್‌ನಲ್ಲಿ ದಿನಕ್ಕೆ 3 GB ಡೇಟಾ, ಫೋನ್ ಕರೆ ಅನಿಯಮಿತ, ದಿನಕ್ಕೆ 100 ಎಸ್‌ಎಂಎಸ್‌.

3) ಜನಪ್ರಿಯವಾಗಿರುವ ವಾರ್ಷಿಕ ಪ್ಲಾನ್‌ಗಳು

ಜಿಯೋ 3599 ರೂಪಾಯಿ ಪ್ಲಾನ್‌: ಅವಧಿ 365 ದಿನಗಳು, ಒಟ್ಟು ಡೇಟಾ 912.5 GB, ಹೈಸ್ಪೀಡ್ ಡೇಟಾ ದಿನಕ್ಕೆ 2.5 GB, ಅನಿಯಮಿತ ಫೋನ್ ಕರೆ, ದಿನಕ್ಕೆ 10 ಎಸ್‌ಎಂಎಸ್‌.

ಏರ್‌ಟೆಲ್ 3599 ರೂಪಾಯಿ ಪ್ಲಾನ್‌: ಅವಧಿ 365 ದಿನಗಳು, ಒಟ್ಟು ಡೇಟಾ 730 GB, ಹೈಸ್ಪೀಡ್ ಡೇಟಾ ದಿನಕ್ಕೆ 2 GB, ಅನಿಯಮಿತ ಫೋನ್ ಕರೆ, ದಿನಕ್ಕೆ 10 ಎಸ್‌ಎಂಎಸ್‌.

ವೊಡಾಫೋನ್ ಐಡಿಯಾ (ವಿಐ) 3599 ರೂಪಾಯಿ ಪ್ಲಾನ್‌: ಅವಧಿ 365 ದಿನ, ಒಟ್ಟು ಡೇಟಾ 850 GB, ಫೋನ್ ಕರೆ ಅನಿಯಮಿತ, ದಿನಕ್ಕೆ 100 ಎಸ್‌ಎಂಎಸ್‌.

ಬಿಎಸ್‌ಎನ್‌ಎಲ್‌ 3599 ರೂಪಾಯಿ ಪ್ಲಾನ್‌: ಅವಧಿ 365 ದಿನ, ಒಟ್ಟು ಡೇಟಾ 600 GB, ಫೋನ್ ಕರೆ ಅನಿಯಮಿತ, ದಿನಕ್ಕೆ 100 ಎಸ್‌ಎಂಎಸ್‌.

ನಿಮ್ಮ ಸಿಮ್ ಅನ್ನು ಬಿಎಸ್‌ಎನ್‌ಎಲ್‌ಗೆ ಪೋರ್ಟ್ ಮಾಡುವುದು ಹೇಗೆ?

ಮೊದಲು, ನೀವು 1900 ಗೆ SMS ಕಳುಹಿಸುವ ಮೂಲಕ ವಿಶಿಷ್ಟ ಪೋರ್ಟಿಂಗ್ ಕೋಡ್ (ಯುಪಿಸಿ) ಪಡೆದುಕೊಳ್ಳಬೇಕು. 'ಪೋರ್ಟ್ [ಸ್ಪೇಸ್] 10 ಅಂಕಿಯ ಮೊಬೈಲ್ ಸಂಖ್ಯೆ' ಎಂದು ಬರೆಯಿರಿ. ಜಮ್ಮು ಮತ್ತು ಕಾಶ್ಮೀರದ ಪ್ರೀಪೇಯ್ಡ್ ಗ್ರಾಹಕರು ಎಸ್‌ಎಂಎಸ್ ಕಳುಹಿಸುವ ಬದಲು 1900ಕ್ಕೆ ಕರೆ ಮಾಡಬೇಕು.

ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳ ಪರವಾನಗಿಯನ್ನು ಹೊರತುಪಡಿಸಿ ಎಲ್ಲಾ ಸೇವಾ ಪ್ರದೇಶಗಳಲ್ಲಿ ಸಿಮ್ ಪೋರ್ಟಿಂಗ್‌ ವಿನಂತಿಯ ದಿನಾಂಕದಿಂದ ಅಥವಾ ಸಂಖ್ಯೆಯನ್ನು ಪೋರ್ಟ್ ಮಾಡಿದ ಸಮಯದಿಂದ 15 ದಿನಗಳವರೆಗೆ ಮಾನ್ಯವಾಗಿರುತ್ತದೆ. ಅಲ್ಲಿ 30 ದಿನಗಳವರೆಗೆ ಯುಪಿಸಿ ಮಾನ್ಯವಾಗಿರುತ್ತದೆ. ಮೊದಲ ವಿನಂತಿಯ ದಿನಾಂಕವನ್ನು ಪೋರ್ಟ್‌ ಮಾಡುವುದಕ್ಕೆ ಪರಿಗಣಿಸಲಾಗುತ್ತದೆ. ಇಷ್ಟಾದ ಬಳಿಕ ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ಪೋರ್ಟ್ ಮಾಡಲು ಬಿಎಸ್‌ಎನ್‌ಎಲ್‌ನ ಗ್ರಾಹಕ ಸೇವಾ ಕೇಂದ್ರ / ಅಧಿಕೃತ ಫ್ರಾಂಚೈಸಿ/ಚಿಲ್ಲರೆ ವ್ಯಾಪಾರಿಗಳನ್ನು ಭೇಟಿ ಮಾಡಬೇಕು. ಗ್ರಾಹಕರ ಅರ್ಜಿ ನಮೂನೆ ಭರ್ತಿ ಮಾಡಿ ಮತ್ತು ಪ್ರಕ್ರಿಯೆಯ ಪೋರ್ಟಿಂಗ್ ಶುಲ್ಕವನ್ನು ಪಾವತಿಸಬೇಕು. ಬಿಎಸ್‌ಎನ್‌ಎಲ್‌ಗೆ ಪೋರ್ಟ್ ಮಾಡಲು ಬಿಎಸ್‌ಎನ್‌ಎಲ್‌ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ. ನಿಮಗೆ ಹೊಸ ಬಿಎಸ್‌ಎನ್‌ಎಲ್‌ ಸಿಮ್ ಕಾರ್ಡ್ ನೀಡಲಾಗುತ್ತದೆ. ಅದರ ಶುಲ್ಕವನ್ನಷ್ಟೇ ಅದು ಸಂಗ್ರಹಿಸುತ್ತದೆ.