ಅಮೆರಿಕ ಚುನಾವಣೆ; ಮತದಾನದ ದಿನದ ಹಿಂಸಾಚಾರ ತಡೆಯೋದಕ್ಕೆ ಬಿಗಿ ಭದ್ರತೆ, ಡ್ರೋನ್, ಸ್ನೈಪರ್ಸ್, ಜಿಪಿಎಸ್ ಟ್ರಾಕಿಂಗ್ ಬಳಕೆ
ಭಾರತದಲ್ಲಿ ಬಿಗಿ ಭದ್ರತೆಯಲ್ಲಿ ಚುನಾವಣೆ ನಡೆಯೋದು ಸಹಜ. ಆದರೆ ಅಮೆರಿಕದಲ್ಲಿ ಹಾಗಲ್ಲ. ಅಲ್ಲಿ 2020ರ ತನಕವೂ ಬಿಗಿ ಭದ್ರತೆ ಇಲ್ಲದೆ ಚುನಾವಣೆ ನಡೆಯುತ್ತಿತ್ತು. ಕಳೆದ ಚುನಾವಣೆಯ ಹಿಂಸಾಚಾರ ಚುನಾವಣಾ ಕಣದ ಚಿತ್ರವನ್ನೇ ಬದಲಾಯಿಸಿದೆ. ಈ ಬಾರಿ ಮತದಾನದ ದಿನದ ಹಿಂಸಾಚಾರ ತಡೆಯೋದಕ್ಕೆ ಬಿಗಿ ಭದ್ರತೆ, ಡ್ರೋನ್, ಸ್ನೈಪರ್ಸ್, ಜಿಪಿಎಸ್ ಟ್ರಾಕಿಂಗ್ ಬಳಕೆ ಮಾಡಲಾಗಿದೆ.
ನವದೆಹಲಿ/ ಬೆಂಗಳೂರು: ಅಮೆರಿಕದ ಚುನಾವಣಾ ಪ್ರಕ್ರಿಯೆ, ವ್ಯವಸ್ಥೆ ಭಾರತದಂತಲ್ಲ. ಭಾರತದಲ್ಲಿ ಚುನಾವಣೆ, ಮತದಾನ ಪ್ರಕ್ರಿಯೆ ಎಂದರೆ ಬಿಗಿ ಬಂದೋಬಸ್ತ್ ಎಲ್ಲ ಹೆಚ್ಚು. ಆದರೆ ಅಮೆರಿಕದಲ್ಲಿ ಮೇಲ್ಛಾವಣಿಗಳ ಮೇಲೆ ಸ್ನೈಪರ್‌ಗಳಿರುವ ಬೇಲಿ, ಬುಲೆಟ್ ಪ್ರೂಫ್ ಗಾಜಿನಿಂದ ರಕ್ಷಿಸಲ್ಪಟ್ಟ ಕಚೇರಿ, ಡ್ರೋನ್‌ಗಳ ಹಾರಾಟ ಮುಂತಾದವು ಹೆಚ್ಚಾದರೆ ಪರಿಸ್ಥಿತಿ ಸರಿ ಇಲ್ಲ, ಯುದ್ಧ ಸನ್ನಿವೇಶ ಎಂಬ ಸಂದೇಶ ರವಾನೆಯಾಗುತ್ತದೆ. 2020 ರ ಚುನಾವಣಾ ಹಿಂಸಾಚಾರದ ಬಳಿಕ ಅಲ್ಲಿನ ಸರ್ಕಾರ ಎಚ್ಚೆತ್ತುಕೊಂಡಿದೆ. ಈ ಬಾರಿ ಮತದಾನಕ್ಕೆ ಬಿಗಿ ಬಂದೋಬಸ್ತ್ ಒದಗಿಸಿದೆ. ಕಳೆದ ಬಾರಿ ಸ್ಪರ್ಧಿಸಿದ್ದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬಾರಿಯೂ ಸ್ಪರ್ಧಿಸಿದ್ದು, ಅವರಿಗೆ ನಿಷ್ಠರಾಗಿರುವ ಗುಂಪುಗಳಿಂದ ಬೆದರಿಕೆ ಇರುವ ಕಾರಣ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
2020ರ ಅಧ್ಯಕ್ಷೀಯ ಚುನಾವಣೆ ಸಂದರ್ಭ ನಡೆದಿತ್ತು ಹಿಂಸಾಚಾರ
2020 ರ ಅಧ್ಯಕ್ಷೀಯ ಚುನಾವಣೆಯ ನಂತರ ಟ್ರಂಪ್ ಬೆಂಬಲಿಗರು ನಡೆಸಿದ ಚುನಾವಣಾ ಹಿಂಸಾಚಾರದ ಪರಿಣಾಮ ಮತ್ತು ಮತದಾನದ ಸುತ್ತ ನಡೆದ ಘಟನಾವಳಿಗಳ ಕಾರಣ ಈ ಬಾರಿ ಅಂತಹ ಸಮಸ್ಯೆ ಆಗಬಾರದು ಎಂಬ ಮುನ್ನೆಚ್ಚರಿಕೆಯನ್ನು ಸರ್ಕಾರ ತೆಗೆದುಕೊಂಡಿದೆ. 2016 ರಿಂದ 2020ರ ತನಕ ಆಡಳಿತ ನಡೆಸಿದ್ದ ಟ್ರಂಪ್, ಚುನಾವಣೆ ಸೋಲು ಅನುಭವಿಸುವುದು ಖಚಿತವಾದಾಗ ಹಿಂಸಾಚಾರ ನಡೆದಿತ್ತು. ಅಮರಿಕದ ಇತಿಹಾಸದಲ್ಲೇ ಮೊದಲ ಬಾರಿಗೆ ಯುಎಸ್ ಕ್ಯಾಪಿಟಲ್ ಮೇಲೆ ದಾಳಿಯಾಗಿತ್ತು. ಅಧ್ಯಕ್ಷರ ಭವನ ಪ್ರವೇಶಿಸಿದ ದುಷ್ಕರ್ಮಿಗಳು ದಾಂಧಲೆ ನಡೆಸಿದ್ದರು. ಟ್ರಂಪ್ ಸೋಲು ಒಪ್ಪಿಕೊಳ್ಳಲು ಸಿದ್ಧರಾಗದೇ ಇದ್ದ ಕಾರಣ ಅನೇಕ ಸಮಸ್ಯೆಗಳಾದವು.
2024ರ ಅಮೆರಿಕ ಚುನಾವಣೆಗೆ ಏನೇನು ಮುಂಜಾಗ್ರತಾ ಕ್ರಮ
1) ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದು, ಮತ-ಎಣಿಕೆಯ ಪ್ರಧಾನ ಕೇಂದ್ರಗಳಲ್ಲಿ, ಸ್ನೈಪರ್‌ಗಳನ್ನು ನಿಯೋಜಿಸಲಾಗಿದೆ. ಪಹರೆಗೆ ಡ್ರೋನ್‌ಗಳನ್ನು ಬಳಸಲಾಗಿದೆ. ತುರ್ತು ಸಂದರ್ಭ ಎದುರಾದರೆ ಭದ್ರತಾಪಡೆಗಳನ್ನು ಎಚ್ಚರಿಸುವುದಕ್ಕಾಗಿ ಅಧಿಕಾರಿಗಳಿಗೆ ಪ್ಯಾನಿಕ್ ಬಟನ್‌ಗಳನ್ನು ಒದಗಿಸಲಾಗಿದೆ.
2) ವಾಷಿಂಗ್ಟನ್ ಮತ್ತು ಸೂಕ್ಷ್ಮವೆನಿಸಿರುವ ನೆವಾಡಾದ ರಾಜ್ಯವು ಚುನಾವಣಾ ದಿನದ ಅಹಿತಕರ ಘಟನೆ ಎದುರಿಸುವುದಕ್ಕೆ ಹೆಚ್ಚಿನ ಭದ್ರತೆಯೊಂದಿಗೆ ಸಜ್ಜಾಗಿದೆ. ಅಲ್ಲಿ ನ್ಯಾಷನಲ್ ಗಾರ್ಡ್ ಪಹರೆ ಕಾಯುತ್ತಿದ್ದಾರೆ. ಅನ್ನು ಅರಿಜೋನಾ ಚುನಾವಣೆಗಳನ್ನು ನಡೆಸುವ ಉಸ್ತುವಾರಿ ವಹಿಸಿರುವ ರಾಜ್ಯ ಕಾರ್ಯದರ್ಶಿ ಆಡ್ರಿಯನ್ ಫಾಂಟೆಸ್ ಅವರು ಕೆಲಸದ ಸಮಯದಲ್ಲಿ ಬುಲೆಟ್ ಪ್ರೂಫ್ ವೆಸ್ಟ್ ಧರಿಸಿರುವುದಾಗಿ ತಿಳಿಸಿದ್ದಾಗಿ ಮಾಧ್ಯಮ ವರದಿಗಳು ತಿಳಿಸಿವೆ.
3) ವಾಷಿಂಗ್ಟನ್ ಪೋಸ್ಟ್ ವರದಿ ಪ್ರಕಾರ, ಹಲವಾರು ಸ್ಥಳಗಳಲ್ಲಿ ಬುಲೆಟ್ ಪ್ರೂಫ್ ಗಾಜು, ಉಕ್ಕಿನ ಬಾಗಿಲುಗಳು ಮತ್ತು ಕಣ್ಗಾವಲು ಉಪಕರಣಗಳನ್ನು ಚುನಾವಣಾ ಕಚೇರಿಗಳಲ್ಲಿ ಅಳವಡಿಸಲಾಗಿದೆ. ರಾಸಾಯನಿಕ ದಾಳಿಯ ಆತಂಕವೂ ಇರುವ ಕಾರಣ ಚುನಾವಣಾ ಕಚೇರಿಗಳು ಮಾಲಿನ್ಯ ವಿರೋಧಿ ಸೂಟ್‌ಗಳು ಮತ್ತು ಒಪಿಯಾಡ್ ಪ್ರತಿವಿಷಗಳನ್ನು ಸಹ ಸಂಗ್ರಹಿಸಿವೆ.
4) ಅರಿಜೋನಾದ ಸ್ವಿಂಗ್ ರಾಜ್ಯದಲ್ಲಿರುವ ಮಾರಿಕೋಪಾ ಕೌಂಟಿಯು ಅತಿಸೂಕ್ಷ್ಮ ಮತಗಳ ರಾಜ್ಯವಾಗಿದ್ದು, ಈ ಬಾರಿ ಹೆಚ್ಚಿನ ಭದ್ರತೆ ಪಡೆದುಕೊಂಡಿದೆ. 2020ರ ಚುನಾವಣೆಗೆ ಮೊದಲು ಇಲ್ಲಿ 50ಕ್ಕಿಂತ ಹೆಚ್ಚು ಪೊಲೀಸ್ ಸಿಬ್ಬಂದಿ ಇರುತ್ತಿರಲಿಲ್ಲ. ಈ ಬಾರಿ ಇದು ನಾಲ್ಕು ಪಟ್ಟಿಗಿಂತ ಹೆಚ್ಚಾಗಿದೆ ಎಂದು ವರದಿ ಹೇಳಿದೆ.
5) ವೈರ್ಡ್ ಪ್ರಕಾರ ಮಾರಿಕೋಪಾ ಚುನಾವಣಾ ಕಚೇರಿ ಮತ್ತು ಮತದಾನ ಕೇಂದ್ರವು ಭದ್ರತಾ ಬೇಲಿ, ಲೋಹ ಶೋಧಕಗಳು, ಭದ್ರತಾ ತಪಾಸಣೆ, ಫ್ಲಡ್‌ಲೈಟ್‌ಗಳು ಮತ್ತು ಮೇಲ್ಛಾವಣಿಯಲ್ಲಿ ಸ್ನೈಪರ್‌ಗಳ ರಿಂಗ್ ಅನ್ನು ಹೊಂದಿದೆ. ಎಣಿಕೆ ಕೇಂದ್ರದ ಪ್ರತಿ ಬಾಗಿಲಿಗೆ ಔಟ್‌ಲೆಟ್ ಪ್ರಕಾರ ಲೋಹದ ಶೋಧಕಗಳನ್ನು ಅಳವಡಿಸಲಾಗಿದೆ. ಜಿಪಿಎಸ್ ಟ್ರ್ಯಾಕರ್ ಅಳವಡಿಸಿದ ಬ್ಯಾಲೆಟ್ ಬ್ಯಾಗ್‌ಗಳನ್ನು ಬಳಸುತ್ತಿದ್ದಾರೆ.