Viral Brain Teaser: ಮದುವೆ ಆಮಂತ್ರಣ ಪತ್ರಿಕೆ ಕಳೆದು ಹೋಗಿದೆ, ಹುಡುಕಿ ಕೊಡ್ತೀರಾ? ಇಲ್ಲಿದೆ ಮೆದುಳಿಗೆ ಕೆಲಸ ಕೊಡುವ ಸವಾಲಿನ ಚಿತ್ರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Viral Brain Teaser: ಮದುವೆ ಆಮಂತ್ರಣ ಪತ್ರಿಕೆ ಕಳೆದು ಹೋಗಿದೆ, ಹುಡುಕಿ ಕೊಡ್ತೀರಾ? ಇಲ್ಲಿದೆ ಮೆದುಳಿಗೆ ಕೆಲಸ ಕೊಡುವ ಸವಾಲಿನ ಚಿತ್ರ

Viral Brain Teaser: ಮದುವೆ ಆಮಂತ್ರಣ ಪತ್ರಿಕೆ ಕಳೆದು ಹೋಗಿದೆ, ಹುಡುಕಿ ಕೊಡ್ತೀರಾ? ಇಲ್ಲಿದೆ ಮೆದುಳಿಗೆ ಕೆಲಸ ಕೊಡುವ ಸವಾಲಿನ ಚಿತ್ರ

Viral Brain Teaser: ಇಲ್ಲೊಂದು ಮೆದುಳಿಗೆ ಕೆಲಸ ಕೊಡುವ ಚಿತ್ರವಿದೆ. ಮದುವೆ ಪರಿಕಲ್ಪನೆ ಇರುವ ಈ ಸುಂದರ ಚಿತ್ರದಲ್ಲಿ ಕಳೆದು ಹೋಗಿರುವ ಮದುವೆ ಆಮಂತ್ರಣ ಪತ್ರಿಕೆ ಅನ್ನು ಹುಡುಕಬೇಕು. ಸರಿಯಾಗಿ ನೋಡಿ, ಮದ್ವೆ ಕಾರ್ಡ್‌ ಹುಡುಕಿ... ಸಿಗುತ್ತಾ ನೋಡಿ.

ಬ್ರೈನ್‌ ಟೀಸರ್‌: ಕಳೆದು ಹೋದ ಮದುವೆ ಕಾಗದ ಹುಡುಕಿ
ಬ್ರೈನ್‌ ಟೀಸರ್‌: ಕಳೆದು ಹೋದ ಮದುವೆ ಕಾಗದ ಹುಡುಕಿ

ಬ್ರೈನ್‌ ಟೀಸರ್‌ಗಳು ಮೆದುಳನ್ನು ಚುರುಕುಗೊಳಿಸುವ ಜೊತೆಗೆ ಮನರಂಜನೆಯನ್ನೂ ನೀಡುತ್ತವೆ. ಫಜಲ್‌, ಒಗಟುಗಳಂತೆ ಇವು ನಮ್ಮ ದೃಷ್ಟಿ ಹಾಗೂ ಮೆದುಳನ್ನು ಹಿಡಿದಿಟ್ಟುಕೊಳ್ಳುತ್ತವೆ. ಇವು ನಮ್ಮನ್ನು ಊಹೆಯನ್ನು ಮೀರಿ ಯೋಚಿಸುವಂತೆ, ಸಮಸ್ಯೆಗಳ ಪರಿಹಾರಕ್ಕೆ ಹೊಸ ದೃಷ್ಟಿಕೋನ ಅಳವಡಿಸಿಕೊಳ್ಳುವಂತೆ, ನಮ್ಮ ಯೋಚನೆಯನ್ನೂ ಮೀರುವಂತೆ ಮಾಡುತ್ತವೆ.

ನಿಮ್ಮ ಮೆದುಳಿಗೆ ಜಡ ಹಿಡಿದಂತಿದ್ದರೆ, ಮೆದುಳಿಗೆ ಕೆಲಸ ಕೊಡಲು ನೀವು ಬಯಸಿದರೆ ಈ ಬ್ರೈನ್‌ ಟೀಸರ್‌ ನೋಡಿ ಕಳೆದ ಹೋದ ಮದುವೆ ಆಮಂತ್ರಣ ಪತ್ರಿಕೆ ಹುಡುಕಿ.

ಮನಸ್ಸಿಗೆ ಮುದ ನೀಡುವ ಈ ಬ್ರೈನ್‌ ಟೀಸರ್‌ ಮಹಿಳಾ ಫ್ಯಾಷನ್‌ ಚಿಲ್ಲರೆ ವ್ಯಾಪಾರಿ ಸಂಸ್ಥೆ ಕ್ವಿಜ್‌ ಹಂಚಿಕೊಂಡಿದೆ. ವಧುವಿನ ಪರಿಕರಗಳು, ಮೇಕಪ್‌ ಐಟಂಗಳು, ಸೊಗಸಾದ ಮದುವೆಯ ಡ್ರೆಸ್‌ಗಳಿಂದ ತುಂಬಿದ ಆಕರ್ಷಕ ಚಿತ್ರದಲ್ಲಿ ಮದುವೆಯ ಆಮಂತ್ರಣ ಪತ್ರಿಕೆಯನ್ನು ಮರೆ ಮಾಡಲಾಗಿದೆ.

ಸವಾಲು?

ಈ ಮದುವೆ ಚಿತ್ರಣ ಇಮೇಜ್‌ನ ಸವಾಲು ಏನೆಂದರೆ ಒಂದು ನಿಮಿಷದಲ್ಲಿ ನೇರವಾಗಿ ಚಿತ್ರದ ಮೇಲೆ ದೃಷ್ಟಿ ನೆಡುವ ಮೂಲಕ ಮರೆ ಮಾಡಲಾಗಿರುವ ಕಾರ್ಡ್‌ ಅನ್ನು ಗುರುತಿಸಬೇಕು. ಈ ಸವಾಲಿಗೆ ನೀವು ಸಿದ್ಧರಿದ್ದೀರಾ?

ಈ ಪೋಸ್ಟ್‌ ಅನ್ನು ಸರಿಯಾಗಿ ಗಮನಿಸಿ

ವೈರಲ್‌ ಬ್ರೈನ್‌ ಟೀಸರ್‌: 60 ಸೆಕೆಂಡುಗಳಲ್ಲಿ ಮದುವೆ ಕಾಗದ ಕಂಡು ಹಿಡಿಯಲು ಸಾಧ್ಯವಾಯಿತೇ?
ವೈರಲ್‌ ಬ್ರೈನ್‌ ಟೀಸರ್‌: 60 ಸೆಕೆಂಡುಗಳಲ್ಲಿ ಮದುವೆ ಕಾಗದ ಕಂಡು ಹಿಡಿಯಲು ಸಾಧ್ಯವಾಯಿತೇ?

ನೋಡಿದ್ರಾ, ಮದುವೆ ಆಮಂತ್ರಣ ಪತ್ರಿಕೆ ಸಿಕ್ತಾ? ನಿಮಗೆ ಆಮಂತ್ರಣ ಪತ್ರಿಕೆ ಸಿಕ್ಕಿದ್ರೆ ಅಭಿನಂದನೆ. ಸಿಕ್ಕಿಲ್ಲ ಅಂತ ತಲೆ ಕೆಡಿಸಿಕೊಂಡು ಹುಡುಕ್ತಾ ಇದ್ದೀರಾ...ನೋಡಿ ನೋಡಿ ಸರಿಯಾಗಿ ನೋಡಿ. ಖಂಡಿತ ಸ್ವಲ್ಪ ಹೊತ್ತಿನಲ್ಲೇ ನಿಮಗೆ ಮದುವೆ ಆಮಂತ್ರಣ ಪತ್ರಿಕೆ ಸಿಗಬಹುದು. ಆದರೆ ಇಲ್ಲ ನಾನು ಸೋತೆ, ನನ್ನಿಂದ ಕಂಡು ಹಿಡಿಯಲು ಸಾಧ್ಯವಿಲ್ಲ ಎನ್ನುವವರಿಗೆ ಇಲ್ಲಿದೆ ಉತ್ತರ. ಈ ಕೆಳಗಿನ ಚಿತ್ರ ನೋಡಿ.

ಅಲ್ಲಿದೆ ನೋಡಿ ಮದುವೆ ಆಮಂತ್ರಣ ಪತ್ರಿಕೆ
ಅಲ್ಲಿದೆ ನೋಡಿ ಮದುವೆ ಆಮಂತ್ರಣ ಪತ್ರಿಕೆ

ಅಂತೂ ಬುದ್ದಿಯೆಲ್ಲಾ ಖರ್ಚು ಮಾಡಿದ್ರಿ. ಮದುವೆ ಆಮಂತ್ರಣ ಪತ್ರಿಕೆ ಸಿಕ್ಕಿತ್ತು. ಇಂತಹ ಬುದ್ಧಿಮತ್ತೆಗೆ ಕೆಲಸ ಕೊಡುವ ಸಾಕಷ್ಟು ಬ್ರೈನ್‌ ಟೀಸರ್‌ಗಳು ಸಾಮಾಜಿಕ ಜಾಣದಲ್ಲಿ ಸಾಕಷ್ಟು ಕಾಣಿಸುತ್ತವೆ. ಇವು ಮೆದುಳು ಚುರುಕುಗೊಳಿಸಿ, ಮನಸ್ಸಿಗೂ ಖುಷಿ ನೀಡುತ್ತವೆ.

ಇದನ್ನೂ ನೋಡಿ

Viral Puzzle: ಹತ್ತು ಸೆಕೆಂಡ್‌ನಲ್ಲಿ ಈ ಪಜಲ್‌ ಬಿಡಿಸಲು ನಿಮ್ಮಿಂದ ಸಾಧ್ಯವೇ? ಇಲ್ಲಿದೆ ನಿಮ್ಮ ಮೆದುಳಿಗೆ ಸವಾಲು ಹಾಕುವ ಪೋಸ್ಟ್‌

ಪಜಲ್‌ ಬಿಡಿಸುವುದು ಸವಾಲು ಎನ್ನಿಸಿದರೂ ಹಲವರಿಗೆ ಇದು ಖುಷಿ ಕೊಡುವ ಕೆಲಸ. ಮೆದುಳಿಗೆ ಸವಾಲು ಹಾಕುವ ಇದನ್ನು ಬಿಡಿಸದೇ ಮನಸ್ಸಿಗೆ ಸಮಾಧಾನ ಸಿಗುವುದಿಲ್ಲ. ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಪಜಲ್‌ನ ಪೋಸ್ಟ್‌ವೊಂದು ಸಾಕಷ್ಟು ವೈರಲ್‌ ಆಗುತ್ತಿದೆ. ಈ ಪೋಸ್ಟ್‌ ಅನ್ನು ನೀವು ಸರಿಯಾಗಿ ಗಮನಿಸಿ, ಹತ್ತು ಸೆಕೆಂಡ್‌ನಲ್ಲಿ ಪಜಲ್‌ ಬಿಡಿಸಲು ನಿಮ್ಮಿಂದ ಸಾಧ್ಯವೇ? ನೋಡಿ.

ಪಜಲ್‌ ಬಿಡಿಸುವ ಆಸಕ್ತಿ ಇರುವವರನ್ನು ಸೆಳೆಯುವ ಸಲುವಾಗಿ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಬ್ರೈನ್‌ ಟೀಸರ್‌ ಪೋಸ್ಟರ್‌ಗಳು ಆಗಾಗ ಗಮನ ಸೆಳೆಯುತ್ತವೆ. ಅಲ್ಲದೆ ಅವು ಜನರನ್ನು ಸವಾಲಿಗೆ ನೂಕುತ್ತವೆ. ಅಂತಹ ಪೋಸ್ಟ್‌ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗಿದೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.