ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Viral Puzzle: ಹತ್ತು ಸೆಕೆಂಡ್‌ನಲ್ಲಿ ಈ ಪಜಲ್‌ ಬಿಡಿಸಲು ನಿಮ್ಮಿಂದ ಸಾಧ್ಯವೇ? ಇಲ್ಲಿದೆ ನಿಮ್ಮ ಮೆದುಳಿಗೆ ಸವಾಲು ಹಾಕುವ ಪೋಸ್ಟ್‌

Viral Puzzle: ಹತ್ತು ಸೆಕೆಂಡ್‌ನಲ್ಲಿ ಈ ಪಜಲ್‌ ಬಿಡಿಸಲು ನಿಮ್ಮಿಂದ ಸಾಧ್ಯವೇ? ಇಲ್ಲಿದೆ ನಿಮ್ಮ ಮೆದುಳಿಗೆ ಸವಾಲು ಹಾಕುವ ಪೋಸ್ಟ್‌

ಪಜಲ್‌ ಬಿಡಿಸುವುದು ಸವಾಲು ಎನ್ನಿಸಿದರೂ ಹಲವರಿಗೆ ಇದು ಖುಷಿ ಕೊಡುವ ಕೆಲಸ. ಮೆದುಳಿಗೆ ಸವಾಲು ಹಾಕುವ ಇದನ್ನು ಬಿಡಿಸದೇ ಮನಸ್ಸಿಗೆ ಸಮಾಧಾನ ಸಿಗುವುದಿಲ್ಲ. ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಪಜಲ್‌ನ ಪೋಸ್ಟ್‌ವೊಂದು ಸಾಕಷ್ಟು ವೈರಲ್‌ ಆಗುತ್ತಿದೆ. ಈ ಪೋಸ್ಟ್‌ ಅನ್ನು ನೀವು ಸರಿಯಾಗಿ ಗಮನಿಸಿ, ಹತ್ತು ಸೆಕೆಂಡ್‌ನಲ್ಲಿ ಪಜಲ್‌ ಬಿಡಿಸಲು ನಿಮ್ಮಿಂದ ಸಾಧ್ಯವೇ? ನೋಡಿ.

ಒಂದೇ ಬಾರಿಗೆ ಈ ಪಜಲ್‌ ಬಿಡಿಸಲು ನಿಮ್ಮಿಂದ ಸಾಧ್ಯವೇ ((Facebook/@Dudolf)
ಒಂದೇ ಬಾರಿಗೆ ಈ ಪಜಲ್‌ ಬಿಡಿಸಲು ನಿಮ್ಮಿಂದ ಸಾಧ್ಯವೇ ((Facebook/@Dudolf)

ಒಗಟು, ಪಜಲ್‌, ಪದಬಂಧಗಳು ಮೆದುಳಿಗೆ ಸಾಕಷ್ಟು ಕೆಲಸ ಕೊಡುತ್ತವೆ. ಅವುಗಳನ್ನು ಬಿಡಿಸುವುದು ಒಂದು ರೀತಿಯ ಸವಾಲು ಎನ್ನಿಸಿದರೂ ಸಂಪೂರ್ಣವಾಗಿ ಬಿಡಿಸಿದ ಮೇಲೆ ಸಿಗುವ ಖುಷಿಯೇ ಬೇರೆ. ಬಿಡಿಸದೇ ಅರ್ಧಕ್ಕೆ ಬಿಟ್ಟರೆ ದಿನವಿಡೀ ಅದು ಮನಸ್ಸಿನಲ್ಲಿ ಕೊರೆಯುತ್ತಿರುತ್ತದೆ. ಆ ಕಾರಣಕ್ಕೆ ಇವುಗಳನ್ನು ಬಿಡಿಸುವ ಸಲುವಾಗಿ ಬಹಳಷ್ಟು ತಲೆ ಕೆಡಿಸಿಕೊಳ್ಳುತ್ತೇವೆ.

ಟ್ರೆಂಡಿಂಗ್​ ಸುದ್ದಿ

ಪಜಲ್‌ ಬಿಡಿಸುವ ಆಸಕ್ತಿ ಇರುವವರನ್ನು ಸೆಳೆಯುವ ಸಲುವಾಗಿ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಬ್ರೈನ್‌ ಟೀಸರ್‌ ಪೋಸ್ಟರ್‌ಗಳು ಆಗಾಗ ಗಮನ ಸೆಳೆಯುತ್ತವೆ. ಅಲ್ಲದೆ ಅವು ಜನರನ್ನು ಸವಾಲಿಗೆ ನೂಕುತ್ತವೆ. ಅಂತಹ ಪೋಸ್ಟ್‌ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗಿದೆ.

ಹೂವುಗಳು ಹಾಗೂ ಎಲೆಗಳ ರೇಖಾಚಿತ್ರಗಳ ಮೂಲಕ ಚಿತ್ರಿಸಲಾದ ಈ ಬ್ರೈನ್‌ ಟೀಸರ್‌ನ ಪೋಸ್ಟ್‌ ಬಗ್ಗೆ ಜನರು ಸಾಕಷ್ಟು ತಲೆ ಕೆಡಿಸಿಕೊಳ್ಳುತ್ತಿದ್ದಾರೆ.

ʼಈ ಸವಾಲು ಬಿಡಿಸಲು ನಿಮ್ಮಿಂದ ಸಾಧ್ಯವೇʼ ಎಂದು ಪ್ರಶ್ನಿಸುವ ಮೂಲಕ ಈ ಸರಳ ಸಮೀಕರಣದ ಪೋಸ್ಟ್‌ ಅನ್ನು ಹಂಚಿಕೊಳ್ಳಲಾಗಿದೆ. ಈ ಪೋಸ್ಟ್‌ ಅನ್ನು ಸರಿಯಾಗಿ ನೋಡಿ, ಈ ಸಮೀಕರಣವನ್ನು ಬೇಧಿಸಲು ಎಷ್ಟು ಹೊತ್ತು ಬೇಕಾಗಬಹುದು, ಹತ್ತು ಸೆಕೆಂಡುಗಳಲ್ಲಿ ಇದನ್ನು ಬಿಡಿಸಬಹುದೇʼ ಎಂದು ಪ್ರಶ್ನಿಸಲಾಗಿದೆ.

ಈ ರೇಖಾಚಿತ್ರದ ಸಮೀಕರಣವನ್ನು ಕಳೆದ ವರ್ಷ ಪೋಸ್ಟ್‌ ಮಾಡಲಾಗಿತ್ತು. ಪೋಸ್ಟ್‌ ಮಾಡಿದ ದಿನದಿಂದ ಈ ಪಜಲ್‌ಗೆ ಸಾಕಷ್ಟು ಲೈಕ್ಸ್‌ ಹಾಗೂ ಕಮೆಂಟ್‌ಗಳು ಬಂದಿವೆ. ಹಲವರು ಇದನ್ನು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹೀಗಿದೆ ಫೇಸ್‌ಬುಕ್‌ನಲ್ಲಿ ಜನರ ಪ್ರತಿಕ್ರಿಯೆ

ʼಇದನ್ನು ಬಿಡಿಸುವುದಕ್ಕಾಗಿ ನಾನು ಬಹಳ ತಲೆ ಕೆಡಿಸಿಕೊಂಡೆ. ಆದರೆ ಹಲವು ಪ್ರಯತ್ನದ ಬಳಿಕ ಕೊನೆಗೂ ನನಗೆ ಉತ್ತರ ಸಿಕ್ಕಿತು. ಬೆಳಗಿನ ಕಾಫಿ ಹೀರುವ ಮೊದಲು ನಾನು ಈ ಬ್ರೈನ್‌ ಟೀಸರ್‌ ಅನ್ನು ಬಿಡಿಸಿದೆ. ಮುಂಜಾವಿನಲ್ಲೇ ನನ್ನ ಮೆದುಳಿಗೆ ಹುಳ ಬಿಟ್ಟಿದ್ದಕ್ಕೆ ಧನ್ಯವಾದʼ ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.

ಅದಕ್ಕೆ ಪ್ರತಿಕ್ರಿಯಿಸಿದ ಇನ್ನೊಬ್ಬರು ʼಆ ಕಾರಣಕ್ಕಾಗಿಯೇ ನಾನು ಎಂದಿಗೂ ಅತಿಯಾಗಿ ಕಾಫಿ ಕುಡಿಯುವುದಿಲ್ಲ ಎಂದಿದ್ದಾರೆ.

ʼಇದು ಸುಲಭ ತಂತ್ರವಾಗಿದೆ. ಆದರೆ ವಿವರಣೆಯ ಮೇಲೆ ಗಮನ ಹರಿಸಿʼ ಎಂದು ಇನ್ನೊಬ್ಬರು ಫೇಸ್‌ಬುಕ್‌ ಬಳಕೆದಾರ ಬರೆದುಕೊಂಡಿದ್ದಾರೆ.

ʼಇದು ಸರಳ ಗಣಿತ, ಆದರೆ ಸ್ವಲ್ಪ ತಲೆ ಓಡಿಸಬೇಕುʼ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಹಲವರು ಕಾಮೆಂಟ್‌ ವಿಭಾಗದಲ್ಲಿ ಉತ್ತರ ʼ32ʼ ಎಂದು ಬರೆದಿದ್ದಾರೆ.

ನೀವು ಸರಿಯಾಗಿ ಈ ಫಜಲ್‌ ಅನ್ನು ಗಮನಿಸಿ. ನಿಮಗೆ ಉತ್ತರ ಸಿಕ್ಕಿತ್ತಾ ಅಥವಾ ಉತ್ತರ ಸಿಗದೇ ತಲೆ ಕಡೆಸಿಕೊಂಡಿದ್ದೀರಾ? ಈ ಫಜಲ್‌ಗೆ ಉತ್ತರ ತಿಳಿಸಲು ಸಹಾಯ ಮಾಡುವ ಚಿತ್ರ ಇಲ್ಲಿದೆ ನೋಡಿ.

ಇಲ್ಲಿದೆ ನೋಡಿ ಉತ್ತರ
ಇಲ್ಲಿದೆ ನೋಡಿ ಉತ್ತರ

ಇತ್ತೀಚೆಗೆ ಫೇಸ್‌ಬುಕ್‌, ಇನ್‌ಸ್ಟಾಗ್ರಾಂನಂತಹ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಪಜಲ್‌ಗಳಿರುವ ಪೋಸ್ಟ್‌ಗಳು ಗಮನ ಸೆಳೆಯುತ್ತವೆ, ಮಾತ್ರವಲ್ಲ ತಲೆಗೆ ಹುಳ ಬಿಡುತ್ತವೆ. ಹಲವರು ಇದನ್ನು ಬಿಡಿಸಲು ತಲೆ ಕೆಡಿಸಿಕೊಂಡು ಉತ್ತರ ಸಿಕ್ಕಾಗ ಕಾಮೆಂಟ್‌ನಲ್ಲಿ ಸಂಭ್ರಮಿಸುವುದನ್ನು ಕಾಣಬಹುದಾಗಿದೆ.

ಅದೇನೇ ಇರಲಿ, ಇಂತಹ ಪಜಲ್‌ಗಳು ಮೆದುಳನ್ನು ಚುರುಕುಗೊಳಿಸುವುದು ಮಾತ್ರ ಸುಳ್ಳಲ್ಲ.

ಇದನ್ನೂ ಓದಿ

HT Kannada Special: ಕಳೆಗುಂದುತ್ತಿರುವ ವರ್ಣರಂಜಿತ ಕಡಕೊಳ ಚಾಪೆಗಳು, ಕಡಕೊಳದಲ್ಲಿ ತಮಿಳುನಾಡು ಚಾಪೆಗಳ ರಾಜ್ಯಭಾರ

ಮೈಸೂರು: ಚಾಪೆಯ ಮೇಲೆ ಮೂಡುತ್ತಿದ್ದ ಚಿತ್ತಾರ ಕಳೆಗುಂದಿದೆ, ಚಾಖೆಯ ಮೇಲೆ ಮೂಡುತ್ತಿದ್ದ ಬಣ್ಣಗಳು ವಿವರ್ಣವಾಗಿವೆ. ಬದುಕು ಕಟ್ಟಿಕೊಡುತ್ತಿದ್ದ ಚಾಪೆ ಹೆಣೆಯುವ ಉಪಕರಣಗಳು ಅಟ್ಟ ಸೇರಿ ದೂಳು ಹಿಡಿದು ಕೂತಿವೆ. ಆತ್ಮನಿರ್ಬರ ಭಾರತ ನಿರ್ಮಾಣವಾಗಬೇಕು, ಫೋಕಲ್ ಫಾರ್ ಲೋಕಲ್, ಸ್ವದೇಶಿ ಉತ್ಪನ್ನಗಳು, ಗುಡಿ ಕೈಗಾರಿಕೆಗಳಿಗೆ ಒತ್ತು ಕೊಡಬೇಕು ಎಂಬಿತ್ಯಾದಿ ಘೋಷಣೆಗಳ ಮಧ್ಯೆ ಒಂದು ಕಾಲದಲ್ಲಿ ಬೃಹತ್‌ ಸಂಖ್ಯೆಯಲ್ಲಿ ಉತ್ಪಾದನೆಯಾಗಿ ರಫ್ತಾಗುತ್ತಿದ್ದ ಕಡಕೊಳ ಚಾಪೆಗಳು ನೆನಪಿಗೂ ಸಿಗದಂತೆ ಮಾಸಿ ಹೋಗುತ್ತಿವೆ.

ಟಿ20 ವರ್ಲ್ಡ್‌ಕಪ್ 2024

ವಿಭಾಗ