iPhone; ಸಾಮಾನ್ಯ ಅಮೆರಿಕನ್‌ 21 ದಿನ ಹಣ ಉಳಿಸಿ ಐಫೋನ್ 14 ಪ್ರೋ ಮ್ಯಾಕ್ಸ್ ಖರೀದಿಸಬಲ್ಲ, ಭಾರತೀಯನಿಗೆ ಎಷ್ಟು ದಿನಬೇಕು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Iphone; ಸಾಮಾನ್ಯ ಅಮೆರಿಕನ್‌ 21 ದಿನ ಹಣ ಉಳಿಸಿ ಐಫೋನ್ 14 ಪ್ರೋ ಮ್ಯಾಕ್ಸ್ ಖರೀದಿಸಬಲ್ಲ, ಭಾರತೀಯನಿಗೆ ಎಷ್ಟು ದಿನಬೇಕು

iPhone; ಸಾಮಾನ್ಯ ಅಮೆರಿಕನ್‌ 21 ದಿನ ಹಣ ಉಳಿಸಿ ಐಫೋನ್ 14 ಪ್ರೋ ಮ್ಯಾಕ್ಸ್ ಖರೀದಿಸಬಲ್ಲ, ಭಾರತೀಯನಿಗೆ ಎಷ್ಟು ದಿನಬೇಕು

Viral News; ವರ್ಷಕ್ಕೆ 60000 ಡಾಲರ್ ಆದಾಯದ ಅಮೆರಿಕನ್ 21 ದಿನದಲ್ಲಿ ಐಫೋನ್ 14 ಪ್ರೋ ಮ್ಯಾಕ್ಸ್ ಖರೀದಿಸಬಲ್ಲ, ಭಾರತೀಯನಿಗೆ ಎಷ್ಟು ದಿನಬೇಕು ಎಂಬ ಲೆಕ್ಕಾಚಾರ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಲೆಕ್ಕಾಚಾರದ ವಿವರ ಇಲ್ಲಿದೆ.

ಐಫೋನ್ 14 ಪ್ರೋ ಮ್ಯಾಕ್ಸ್ ಖರೀದಿಸುವುದಕ್ಕೆ ಸಾಮಾನ್ಯ ಅಮೆರಿಕನ್‌ ವ್ಯಕ್ತಿ 21 ದಿನ ಹಣ ಉಳಿಸಿದರೆ ಸಾಕು. ಆದರೆ ಭಾರತೀಯನಿಗೆ ಹಾಗಲ್ಲ ಎಂಬ ಲೆಕ್ಕಾಚಾರದ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)
ಐಫೋನ್ 14 ಪ್ರೋ ಮ್ಯಾಕ್ಸ್ ಖರೀದಿಸುವುದಕ್ಕೆ ಸಾಮಾನ್ಯ ಅಮೆರಿಕನ್‌ ವ್ಯಕ್ತಿ 21 ದಿನ ಹಣ ಉಳಿಸಿದರೆ ಸಾಕು. ಆದರೆ ಭಾರತೀಯನಿಗೆ ಹಾಗಲ್ಲ ಎಂಬ ಲೆಕ್ಕಾಚಾರದ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)

ಸದ್ಯ ಭಾರತದಲ್ಲಿ ಐಫೋನ್ 16 ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಹೌದು ಈ ವಾರದ ಆರಂಭದಲ್ಲಿ ಐಫೋನ್‌ 16 ಪ್ರೊ (iPhone 16 Pro) ಮಾದರಿಗಳನ್ನು ಬಿಡುಗಡೆ ಮಾಡಿದಾಗಿನಿಂದ, ವಿವಿಧ ದೇಶಗಳಲ್ಲಿ ಆಪಲ್ ಫೋನ್‌ಗಳ ಬೆಲೆ ವ್ಯತ್ಯಾಸದ ಬಗ್ಗೆ ಚರ್ಚೆಗಳು ನಡೆದಿವೆ. ಐಫೋನ್‌ಗಳ ದರ ಹೊಂದಾಣಿಕೆಯ ಸಾಮಾನ್ಯವಾಗಿ ಹೊಸ ಐಫೋನ್ ಬಿಡುಗಡೆಯಾದ ಬೆನ್ನಿಗೆ ನಡೆಯುತ್ತದೆ. ಆಪಲ್‌ ತನ್ನ ಐಫೋನ್‌ 15 ಮತ್ತು 14 ಮಾದರಿಗಳ ಬೆಲೆ ಇಳಿಕೆ ಕುರಿತಾದ ಘೋ‍ಷಣೆಯನ್ನೂ ಮಾಡಿದೆ. ಹೀಗಾಗಿ, ಮೈಕ್ರೋ ಬ್ಲಾಗಿಂಗ್ ಸೈಟ್ ಎಕ್ಸ್‌ನಲ್ಲಿ ಇದ್ದಕ್ಕಿದ್ದಂತೆ ಐಫೋನ್‌ 14 ಪ್ರೊ ಮ್ಯಾಕ್ಸ್‌ ವಿಚಾರ ಭಾರಿ ಚರ್ಚೆಗೆ ಒಳಗಾಗಿದೆ.

ಐಫೋನ್‌ 14 ಪ್ರೊ ಮ್ಯಾಕ್ಸ್ ಅನ್ನು ಸಾಮಾನ್ಯ ವೇತನ ಪಡೆಯುವ ಅಮೆರಿಕನ್ ಒಬ್ಬ ಕೇವಲ 21 ದಿನಗಳಲ್ಲಿ ಖರೀದಿಸಬಲ್ಲ. ಆದರೆ, ಸಾಮಾನ್ಯ ವೇತನ ಪಡೆಯುವ ಭಾರತೀಯನಿಗೆ ಅದೇ ಐಫೋನ್ ಖರೀದಿಸಲು 218 ದಿನ ಬೇಕಾಗುತ್ತೆ ಎಂಬುದರ ಕಡೆಗೆ ಒಬ್ಬ ಬಳಕೆದಾರ ಎಕ್ಸ್‌ನಲ್ಲಿ ಗಮನಸೆಳೆದಿದ್ದಾರೆ.

ಐಫೋನ್ 14 ಪ್ರೋ ಮ್ಯಾಕ್ಸ್; ಏನಿದು ಖರೀದಿ ಲೆಕ್ಕಾಚಾರ

ಆಪಲ್ ಐಫೋನ್ ಖರೀದಿಸುವ ಕನಸು ಕಾಣುತ್ತಿರುವ ಅನೇಕರು ಭಾರತದಲ್ಲಿದ್ದಾರೆ. ಐಫೋನ್ 16 ಪ್ರೊ ಸರಣಿ ಬಿಡುಗಡೆಯಾದ ಬಳಿಕ ಹಳೆಯ ಮಾದರಿಗಳ ದರ ಇಳಿಕೆ ಘೋಷಣೆಯಾಗಿದ್ದು, ಇದರಂತೆ ಯಾವ ದೇಶದಲ್ಲಿ ಎಷ್ಟು ದರ ಇದೆ ಎಂಬಿತ್ಯಾದಿ ವಿಚಾರ ತೀವ್ರ ಚರ್ಚೆಗೆ ಒಳಗಾಗಿದೆ. ಐ ಫೋನ್‌ ಪ್ರೊ ಮತ್ತು ಐಫೋನ್ ಪ್ರೊಮ್ಯಾಕ್ಸ್ ನಡುವಿನ ಬೆಲೆ ವ್ಯತ್ಯಾಸ 30 ಪ್ರತಿಶತ ತಲುಪಿರುವುದು ಇದಕ್ಕೆ ಕಾರಣ. ಈ ನಡುವೆ, ಎಕ್ಸ್ ಖಾತೆ ಬಳಕೆದಾರರೊಬ್ಬರು ವರ್ಷಕ್ಕೆ 60,000 ಡಾಲರ್ ದುಡಿಯುವ ಅಮೆರಿಕನ್‌ 21 ದಿನ ಹಣ ಉಳಿಸಿ ಐಫೋನ್ 14 ಪ್ರೊ ಮ್ಯಾಕ್ಸ್ ಖರೀದಿಸಬಲ್ಲ. ಅದುವೆ ಭಾರತದಲ್ಲಿ ವರ್ಷಕ್ಕೆ 6 ಲಕ್ಷ ವೇತನ ಪಡೆಯುವ ವ್ಯಕ್ತಿ ಐಫೋನ್ 14 ಪ್ರೊ ಮ್ಯಾಕ್ಸ್ ಖರೀದಿಸಬೇಕಾದರೆ 218 ದಿನ ಬೇಕು ಎಂಬುದರ ಕಡೆಗೆ ಗಮನಸೆಳೆದಿದ್ದಾರೆ.

ಎಕ್ಸ್ ಬಳಕೆದಾರ ಸೇವ್ ಇನ್‌ವೆಸ್ಟ್ ರಿಪೀಟ್ ಖಾತೆಯಲ್ಲಿ ಈ ಟ್ವೀಟ್ ದಾಖಲಾಗಿದ್ದು, “ನೀವು ಭಾರತದಲ್ಲಿ ಆಪಲ್‌ ಉತ್ಪನ್ನಗಳನ್ನು ಖರೀದಿಸಬೇಕೇ? ಅದು ಗಣಿತವನ್ನು ಅವಲಂಬಿಸಿದೆ. ಯಾರೋ ನನಗೆ ಇದನ್ನು ಕಳುಹಿಸಿದ್ದಾರೆ” ಎಂದು ಲೆಕ್ಕಾಚಾರದ ಚಿತ್ರವನ್ನು ಶೇರ್ ಮಾಡಿದೆ.

ಸೋಷಿಯಲ್ ಮೀಡಿಯಾ ಪ್ರತಿಕ್ರಿಯೆ ಹೀಗಿದೆ

“ನಾನು ವರ್ಷಗಳ ಕಾಲ ಅದೇ ವಿಷಯವನ್ನು ಯೋಚಿಸಿದ್ದೆ. ನಮ್ಮ 15 ದಿನದ ಸಂಬಳಕ್ಕಿಂತ ಹೆಚ್ಚು ಬೆಲೆಬಾಳು ಯಾವುದೇ ಫೋನ್ ಖರೀದಿಸುವುದು ನಮಗೆ ದುಸ್ತರ ಎಂಬುದನ್ನು ಮನಗಂಡಿದ್ದೇನೆ” ಎಂದು ಎಕ್ಸ್ ಬಳಕೆದಾರರೊಬ್ಬರು ಈ ಟ್ವೀಟ್‌ಗೆ ಉತ್ತರಿಸಿದ್ದಾರೆ.

ಈ ಟ್ವೀಟ್‌ ಅನ್ನು ಇಂದು (ಸೆಪ್ಟೆಂಬರ್ 14) ಬೆಳಗ್ಗೆ 9.30ಕ್ಕೆ ಮಾಡಲಾಗಿದ್ದು, 50ಸಾವಿರದ ಸಮೀಪ ವೀಕ್ಷಣೆ, 50ರ ಆಸುಪಾಸಿನಲ್ಲಿ ಕಾಮೆಂಟ್ ಮತ್ತು 650ಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ.

ಐಫೋನ್ ಭಾರತದಲ್ಲೇ ಉತ್ಪಾದನೆ ಶುರುಮಾಡಿದರೂ, ಇತರೆ ರಾಷ್ಟ್ರಗಳಿಗಿಂತ ಹೆಚ್ಚಿನ ಬೆಲೆ ಕೊಡಬೇಕಾಗಿ ಬರುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

“ಹೆಚ್ಚೇನೂ ಯೋಚಿಸಬೇಡಿ, ನಿಮ್ಮ ಹಣವನ್ನು ಉಳಿಸುವ ಮತ್ತು ಕೆಲಸವನ್ನು ಪೂರ್ಣಗೊಳಿಸುವಲ್ಲಿ ಅದು ನೆರವಾಗುತ್ತದೆ. ಆಪಲ್ ಐಫೋನ್‌ ಒಂದನ್ನು ಖರೀದಿಸಿ. ಭಾರತ ಎಂದಿಗೂ ಹೊಸ ವಿಷಯಗಳತ್ತ ಗಮನ ಹರಿಸಲಿಲ್ಲ. ನಾವು ಮೊಬೈಲ್ ತಯಾರಿಕೆಯನ್ನು ಕಳೆದುಕೊಂಡಿದ್ದೇವೆ. ಅಂದು ಅದರ ಬಗ್ಗ ಗಮನಹರಿಸಿರಲಿಲ್ಲ. ಡೇಟಾ ಕೇಂದ್ರಗಳನ್ನು ನಿರ್ಮಿಸುವುದನ್ನು ತಪ್ಪಿಸಿಕೊಂಡಿದ್ದೇವೆ. ನಾವು 2020 ರವರೆಗೆ ಡ್ರೋನ್‌ಗಳ ಮೇಲೆ ನಿಷೇಧ ಇತ್ತು. ಈಗ ಅದರಿಂದ ಪ್ರಯೋಜನವಿದೆ ಎಂದು ಅರಿತುಕೊಂಡಿದ್ದೇವೆ. ಚೀನಾ ಮತ್ತು ಅಮೆರಿಕ ಈ ವಿಚಾರದಲ್ಲಿ ಹಲವು ವರ್ಷಗಳಷ್ಟು ಮುಂದಿದೆ. 2030ರ ವೇಳೆಗೆ ಜ್ಞಾನೋದಯವಾದೀತು” ಎಂದು ಮತ್ತೊಬ್ಬರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಕಾಮೆಂಟ್ ಮಾಡಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.