Viral Video: ರೈಲು ನಿಲ್ದಾಣಕ್ಕೆ ಬಂದ ಅಪರೂಪದ ಅತಿಥಿ; 6 ಅಡಿ ಉದ್ದದ ಉರಗ ಕಂಡು ಪ್ಲಾಟ್‌ಫಾರ್ಮ್‌ನಿಂದ ಓಡಿದ ಪ್ರಯಾಣಿಕರು-viral video passengers got panic as massive snake invades at railway station in rishikesh snake scare jra ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Viral Video: ರೈಲು ನಿಲ್ದಾಣಕ್ಕೆ ಬಂದ ಅಪರೂಪದ ಅತಿಥಿ; 6 ಅಡಿ ಉದ್ದದ ಉರಗ ಕಂಡು ಪ್ಲಾಟ್‌ಫಾರ್ಮ್‌ನಿಂದ ಓಡಿದ ಪ್ರಯಾಣಿಕರು

Viral Video: ರೈಲು ನಿಲ್ದಾಣಕ್ಕೆ ಬಂದ ಅಪರೂಪದ ಅತಿಥಿ; 6 ಅಡಿ ಉದ್ದದ ಉರಗ ಕಂಡು ಪ್ಲಾಟ್‌ಫಾರ್ಮ್‌ನಿಂದ ಓಡಿದ ಪ್ರಯಾಣಿಕರು

ಹೃಷಿಕೇಶದ ಯೋಗನಗರಿ ರೈಲ್ವೆ ನಿಲ್ದಾಣದಲ್ಲಿ ಬೃಹತ್ ಹಾವೊಂದು ಪ್ಲಾಟ್‌ಫಾರ್ಮ್ ಮೇಲೆ ಕಾಣಿಸಿಕೊಂಡು, ಪ್ರಯಾಣಿಕರು ಭಯಭೀತರಾಗಿದ್ದಾರೆ. ಕೆಲವೊಬ್ಬರು ತಮ್ಮ ವಸ್ತುಗಳನ್ನು ಅಲ್ಲೇ ಬಿಟ್ಟು ಓಡಿಹೋಗಿದ್ದಾರೆ.

Viral Video: 6 ಅಡಿ ಉದ್ದದ ಉರಗ ಕಂಡು ಪ್ಲಾಟ್‌ಫಾರ್ಮ್‌ನಿಂದ ಓಡಿದ ಪ್ರಯಾಣಿಕರು
Viral Video: 6 ಅಡಿ ಉದ್ದದ ಉರಗ ಕಂಡು ಪ್ಲಾಟ್‌ಫಾರ್ಮ್‌ನಿಂದ ಓಡಿದ ಪ್ರಯಾಣಿಕರು (X/@stirpathi111)

ಹಾವು ಕಂಡ್ರೆ ಹಲವರಿಗೆ ಭಯ. ಕಾಡಲ್ಲೋ, ಹಳ್ಳಿಗಳಲ್ಲೋ ಹಾವುಗಳು ಓಡಾಡುವುದು ಸಾಮಾನ್ಯ. ಅಲ್ಲಿರುವ ಜನರಿಗೂ ಹಾವುಗಳ ಕಾಣಸಿಗುವ ಬಗ್ಗೆ ಮೊದಲೇ ಅರಿವಿರುತ್ತದೆ. ಆದರೂ ದಿಢೀರನೆ ಕಣ್ಣ ಮುಂದೆ ದೊಡ್ಡ ಹಾವುಗಳು ಕಾಣಸಿಕ್ಕಾಗಿ ಯಾರಿಗೂ ಕೆಲಕ್ಷಣ ಭಯವಾಗುತ್ತದೆ. ನಗರಗಳಲ್ಲಿ ಇಂತಹ ಘಟನೆ ಅಪರೂಪ. ಯಾಕೆಂದರೆ ಪೇಟೆಗಳಲ್ಲಿ ಹಾವುಗಳು ಅಪರೂಪದ ಅತಿಥಿಯಂತೆ ಕಾಣಸಿಗುತ್ತವೆ. ಹೃಷಿಕೇಶದಲ್ಲಿ ಆಗಿರುವುದು ಕೂಡಾ ಇದೇ. ರೈಲಿಗಾಗಿ ಪ್ರಯಾಣಿಕರೆಲ್ಲಾ ಕಾಯುತ್ತಾ ಕುಳಿತಿದ್ದಾಗ ತನಗೂ ರೈಲು ನೋಡಬೇಕು ಅನ್ನೋಹಾಗೆ ಪ್ಲಾಟ್‌ಫಾರ್ಮ್‌‌ ಬಳಿ ಹಾವೊಂದು ಪ್ರತ್ಯಕ್ಷವಾಗಿದೆ.

ಹಾವುಗಳು ದಿಢೀರನೆ ಮುಂದೆ ಬಂದಾಗ ಭಯ ಆಗದೆ ಇರಲ್ಲ. ಹೃಷಿಕೇಶದಲ್ಲೂ ಹೀಗೆಯೇ ಆಗಿದೆ. ರೈಲ್ವೆ ನಿಲ್ದಾಣದಲ್ಲಿ ರೆಕಾರ್ಡ್ ಆಗಿರುವ ವಿಡಿಯೋದಲ್ಲಿ ದೊಡ್ಡ ಹಾವೊಂದು ಪ್ಲಾಟ್‌ಫಾರ್ಮ್‌ಗೆ ಬಂದುಬಿಟ್ಟಿದೆ. ಇದನ್ನು ನೋಡಿ ಪ್ರಯಾಣಿಕರು ಗಾಬರಿಯಾಗಿದ್ದಾರೆ.

ಉತ್ತರಖಂಡದ ಹೃಷಿಕೇಶದ ಯೋಗನಗರಿ ರೈಲ್ವೆ ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್‌ನಲ್ಲಿ ಸುಮಾರು ಆರು ಅಡಿ ಉದ್ದದ ಹಾವು ಕಾಣಿಸಿಕೊಂಡಿದೆ. ಇದನ್ನು ಅಲ್ಲೇ ರೈಲಿಗಾಗಿ ಕಾಯುತ್ತಿದ್ದ ಪ್ರಯಾಣಿಕರು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಜಾರುವ ನೆಲದಲ್ಲಿ ಹರಿದಾಡಲು ಹಾವು ಪರದಾಡಿದ್ದು, ಸುತ್ತಮುತ್ತ ಜನರ ಓಡಾಟ ನೋಡಿ ಅದಕ್ಕೂ ಭಯವಾಗಿದೆ. ಹಾವನ್ನು ನೋಡಿದ ಜನರ ಭಯ ಒಂದೆಡೆಯಾದರೆ, ಸುತ್ತಮುತ್ತ ಜನರಿರುವುದುನ್ನು ನೋಡಿದ ಹಾವು ಕೂಡಾ ಅಡಗಲು ಸ್ಥಳ ಹುಡುಕಿದೆ.

ಭಯದಿಂದ ಓಡಿದ ಜನರು

ಪ್ಲಾಟ್‌ಫಾರ್ಮ್‌ನಲ್ಲಿದ್ದ ಅನೇಕ ಜನರು ಹಾವಿನಿಂದ ತಪ್ಪಿಸಿಕೊಳ್ಳುವ ಆತುರದಲ್ಲಿ ತಮ್ಮ ಸಾಮಾನುಗಳನ್ನು ಅಲ್ಲೇ ಬಿಟ್ಟು ದೂರ ಓಡಿದ್ದಾರೆ. ಇದೇ ವೇಳೆ ಭಯ ಇಲ್ಲದ ಜನರು ಹಾವಿನ ಬಗ್ಗೆ ಇತರರಿಗೆ ಎಚ್ಚರಿಕೆ ನೀಡಲು ಪ್ರಯತ್ನಿಸಿದ್ದಾರೆ.

ಮೊದಲು ಹಾವು ಹಳಿಗಳ ಮೂಲಕ ಹೊರಬಂದು ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿತು. ಹಾವು ಕಂಡ ತಕ್ಷಣ ಪ್ಲಾಟ್‌ಫಾರ್ಮ್‌ನಲ್ಲಿ ಗದ್ದಲ ಉಂಟಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಹಾವು ಇದ್ದಕ್ಕಿದ್ದಂತೆ ಕಾಣಿಸಿಕೊಂಡಿದ್ದರಿಂದ ಪ್ರಯಾಣಿಕರು ಗೊಂದಲಕ್ಕೊಳಗಾದರು.

ತರಗತಿಯಲ್ಲಿ ಕಾಣಿಸಿಕೊಂಡಿದ್ದ ಹಾವು

ದಿಢೀರನೆ ಹಾವುಗಳು ಪ್ರತ್ಯಕ್ಷವಾಗುವುದು ಹೊಸದೇನಲ್ಲ. ನೋಯ್ಡಾದ ಸೆಕ್ಟರ್ 126ರಲ್ಲಿರುವ ಅಮಿಟಿ ವಿಶ್ವವಿದ್ಯಾಲಯದಲ್ಲಿ ತರಗತಿಯಲ್ಲಿ ಉಪನ್ಯಾಸ ನಡೆಯುತ್ತಿದ್ದ ವೇಳೆ ಹಾವು ಕಾಣಿಸಿಕೊಂಡ ವಿಡಿಯೊ ವೈರಲ್ ಆಗಿದೆ. ಎಸಿ ಡಕ್ಟ್‌ನಿಂದ ತಲೆ ಹೊರಹಾಕಿದ ಹಾವು ತಾನೂ ಪಾಠ ಕೇಳುವುದಾಗಿ ಆಸಕ್ತಿ ತೋರಿದೆ. ಹಾವಿನಿಂದಾಗಿ ಕೆಲಕಾಲ ಉಪನ್ಯಾಸಕ್ಕೆ ಅಡ್ಡಿಯಾಗಿದೆ. ಈ ವೇಳೆ ವಿದ್ಯಾರ್ಥಿಗಳು ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

mysore-dasara_Entry_Point
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.