Year in Review 2022: ದೇಶದಲ್ಲಿ ಈ ವರ್ಷದ ಪ್ರಮುಖ ಚುನಾವಣೆಗಳು; ಬಿಜೆಪಿ, ಕಾಂಗ್ರೆಸ್, ಪ್ರಾದೇಶಿಕ ಪಕ್ಷಗಳ ಸಾಧನೆ ಹೀಗಿದೆ..
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Year In Review 2022: ದೇಶದಲ್ಲಿ ಈ ವರ್ಷದ ಪ್ರಮುಖ ಚುನಾವಣೆಗಳು; ಬಿಜೆಪಿ, ಕಾಂಗ್ರೆಸ್, ಪ್ರಾದೇಶಿಕ ಪಕ್ಷಗಳ ಸಾಧನೆ ಹೀಗಿದೆ..

Year in Review 2022: ದೇಶದಲ್ಲಿ ಈ ವರ್ಷದ ಪ್ರಮುಖ ಚುನಾವಣೆಗಳು; ಬಿಜೆಪಿ, ಕಾಂಗ್ರೆಸ್, ಪ್ರಾದೇಶಿಕ ಪಕ್ಷಗಳ ಸಾಧನೆ ಹೀಗಿದೆ..

2022ರಲ್ಲಿ ದೇಶದಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ, 7 ರಾಜ್ಯಗಳ ವಿಧಾನಸಭೆ, ಪ್ರಮುಖ 5 ಲೋಕಸಭೆಗಳ ಉಪ ಚುನಾವಣೆಗಳು ನಡೆದಿವೆ. ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಗಳಿಸಿದೆಷ್ಟು, ಕಳೆದುಕೊಂಡಿದ್ದು ಎಷ್ಟು ಎಂಬುದರ ಮಾಹಿತಿ ಇಲ್ಲಿದೆ.

2022ರಲ್ಲಿ ರಾಜಕೀಯ ಪಕ್ಷಗಳು ಗಳಿಸಿದ್ದು ಎಷ್ಟು ಕಳೆದುಕೊಂಡಿದ್ದೆಷ್ಟು ಎಂಬುದರ ಮಾಹಿತಿ ಇಲ್ಲಿದೆ.
2022ರಲ್ಲಿ ರಾಜಕೀಯ ಪಕ್ಷಗಳು ಗಳಿಸಿದ್ದು ಎಷ್ಟು ಕಳೆದುಕೊಂಡಿದ್ದೆಷ್ಟು ಎಂಬುದರ ಮಾಹಿತಿ ಇಲ್ಲಿದೆ.

ಹೊಸ ವರ್ಷಕ್ಕೆ ದಿನಗಣನೆ ಶುರುವಾಗಿದೆ. 2023ರ ನೂತನ ವರ್ಷವನ್ನು ಸ್ವಾಗತಿಸುವ ಮುನ್ನ 2022ರಲ್ಲಿ ದೇಶದಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ, 7 ರಾಜ್ಯಗಳ ವಿಧಾನಸಭೆ, ಪ್ರಮುಖ 5 ಲೋಕಸಭೆಗಳ ಉಪ ಚುನಾವಣೆಗಳು ನಡೆದಿವೆ. ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಗಳಿಸಿದೆಷ್ಟು, ಕಳೆದುಕೊಂಡಿದ್ದು ಎಷ್ಟು. ಪ್ರಾದೇಶಿಕ ಪಕ್ಷಗಳ ಸಾಧನೆ ಏನು ಎಂಬುದರ ಕುರಿತು ಮೆಲುಕು ಹಾಕೋಣ.

ರಾಷ್ಟ್ರಪತಿ, ಉಪ ರಾಷ್ಟ್ರಪತಿ ಚುನಾವಣೆ

2022ರ ಜುಲೈ 18 ರಂದು ದೇಶದಲ್ಲಿ ಪ್ರಮುಖವಾಗಿ ರಾಷ್ಟ್ರಪತಿ ಹುದ್ದೆಗೆ ಚುನಾವಣೆ ನಡೆದಿತ್ತು. ರಾಮನಾಥ್ ಕೋವಿಂದ್ ಅವರ ಅವಧಿ ಮುಗಿದ ಹಿನ್ನೆಲೆಯಲ್ಲಿ ನಡೆದ ಚುನಾವಣೆಯಲ್ಲಿ ಎನ್ ಡಿಎ ಬೆಂಬಲದ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಯುಪಿಎ ಕೂಟದಿಂದ ಯಶವಂತ್‌ ಸಿನ್ಹಾ ಅವರು ಕಣಕ್ಕಿಳಿದಿದ್ದರು.

ಮುರ್ಮು ಅವರು 6,76,803 ಮತ ಪಡೆದರೆ, ಸಿನ್ಹಾ ಅವರು 3,80,177 ಮತಗಳಷ್ಟೇ ಗಳಿಸಿದರು. 2022ರ ಜುಲೈ 25 ರಿಂದ ಮುರ್ಮು ಅವರ ಅಧಿಕಾರದ ಅವಧಿ ಆರಂಭವಾಗಿದೆ. ಎಂ.ವೆಂಕಯ್ಯ ನಾಯ್ಡು ಅವರ ಅಧಿಕಾರಿದ ಅವಧಿ ಮುಗಿದ ನಿಮಿತ್ತ ರಾಷ್ಟ್ರಪತಿ ಚುನಾವಣೆ ನಡೆದ ಮುಂದಿನ ತಿಂಗಳಿನಲ್ಲೇ ಉಪ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯಿತು.

ಆಗಸ್ಟ್ 6 ರಂದು ನಡೆದ ಈ ಮತ ಸಮರದಲ್ಲೂ ಎನ್ ಡಿಎ ಬೆಂಬಲಿತ ಜಗದೀಪ್ ಧನಕರ್ ಅವರು 528 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದರು. ಇವರ ಪ್ರತಿಸ್ಪರ್ಧಿ ಕರ್ನಾಟಕ ಮೂಲದ ಮಾರ್ಗರೆಟ್‌ ಆಳ್ವಾ 182 ಮತಗಳನ್ನು ಗಳಿಸಿದರು.

3 ಅವಧಿಗಳಲ್ಲಿ 5 ಲೋಕಸಭಾ ಕ್ಷೇತ್ರಗಳ ಬೈ ಎಲೆಕ್ಷನ್

ಈ ವರ್ಷ ನಡೆದ 5 ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಗಳನ್ನು ಮೂರು ಅವಧಿಗಳಲ್ಲಿ ನಡೆಸಲಾಗಿತ್ತು. 2022ರ ಏಪ್ರಿಲ್ 12 ರಂದು ಪಶ್ಚಿಮ ಬಂಗಾಳದ ಅಸಾನ್ಸೊಲ್ ಕ್ಷೇತ್ರಕ್ಕೆ ಚುನಾವಣೆ ನಡೆದಿತ್ತು. ಬಿಜೆಪಿಯಿಂದ ಆಯ್ಕೆಯಾಗಿದ್ದ ಬಾಬುಲ್ ಸುಪ್ರಿಯೊ ಅವರ ರಾಜೀನಾಮೆಯಿಂದ ತೆರೆವಾಗಿತ್ತು. ಇಲ್ಲಿ ಟಿಎಂಸಿ ಅಭ್ಯರ್ಥಿಯಾಗಿದ್ದ ಶತುಘ್ನ ಸಿನ್ಹಾ ಗೆಲುವು ಸಾಧಿಸಿದರು. ಇದರಿಂದ ಇಲ್ಲಿ ಬಿಜೆಪಿ ಒಂದು ಕ್ಷೇತ್ರವನ್ನು ಕಳೆದುಕೊಳ್ಳಬೇಕಾಯಿತು.

ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದ ಹಿನ್ನೆಲೆಯಲ್ಲಿ ಭಗವಂತ ಸಿಂಗ್ ಮಾನ್ ಅವರು ಸಂಗ್ರೂರ್ ಲೋಕಸಭಾ ಕ್ಷೇತ್ರದ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 2022ರ ಏಪ್ರಿಲ್ 12 ರಂದು ಈ ಕ್ಷೇತ್ರದ ನಡೆದ ಉಪ ಚುನಾವಣೆಯಲ್ಲಿ ಶಿರೋಮಣಿ ಅಕಾಲಿದಳದ ಸಿಮ್ರನ್‌ಜಿತ್ ಸಿಂಗ್ ಮಾನ್ ಅವರು ಗೆಲುವು ಸಾಧಿಸಿದ್ದರು. ಇಲ್ಲಿ ಎಎಪಿ ಒಂದು ಎಂಪಿ ಸ್ಥಾನವನ್ನು ಕೈಬಿಡಬೇಕಾಯಿತು.

ಇನ್ನು, 2022ರ ಜೂನ್ 23 ರಂದು ಉತ್ತರ ಪ್ರದೇಶದ ಎರಡು ಲೋಕಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿತ್ತು. ಅಜಂ ಖಾನ್ ಅವರಿಂದ ತೆರವಾಗಿದ್ದ ರಾಮ್ ಪುರ್ ನಲ್ಲಿ ಬಿಜೆಪಿಯ ಘನಶ್ಯಾಮ್ ಸಿಂಗ್ ಲೋಧಿ ಅವರು ಗೆಲುವು ಸಾಧಿಸಿದರೆ, ಅಜಂಗಢದಲ್ಲಿ ಅಖಿಲೇಶ್ ಯಾದವ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನದಲ್ಲಿ ದಿನೇಶ್ ಲಾಲ್ ಯಾದವ್ ಅವರು ಜಯಭೇರಿ ಬಾರಿಸಿದ್ದರು. ಈ ಎರಡೂ ಲೋಕಸಭಾ ಕ್ಷೇತ್ರಗಳನ್ನು ಪಡೆಯುವಲ್ಲಿ ಕೇಸರಿ ಪಕ್ಷ ಯಶಸ್ವಿಯಾಗಿತ್ತು.

ಮತ್ತೊಂದು ಪ್ರಮುಖ ಲೋಕಸಭಾ ಉಪ ಚುನಾವಣೆ ಎಂದರೆ ಅದು ಮೈನ್ ಪುರಿ ಕ್ಷೇತ್ರ. ಯುಪಿ ಮಾಜಿ ಸಿಎಂ ಹಾಗೂ ಸಮಾಜವಾದಿ ಪಕ್ಷದ ಅಧಿ ನಾಯಕ ಮುಲಾಯಂ ಸಿಂಗ್ ಯಾದವ್ ಅವರಿಂದ ತೆರವಾಗಿದ್ದ ಈ ಕ್ಷೇತ್ರಕ್ಕೆ ಇದೇ ತಿಂಗಳ ಅಂದರೆ ಡಿಸೆಂಬರ್ 5 ರಂದು ನಡೆದ ಚನಾವಣೆಯಲ್ಲಿ ಸಿಂಗ್ ಅವರ ಸೊಸೆ, ಅಖಿಲೇಶ್ ಯಾದವ್ ಪತ್ನಿ ಡಿಂಪಲ್ ಯಾದವ್ ಗೆಲುವು ಸಾಧಿಸಿದ್ದರು.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.