ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬಾಲಿವುಡ್‌ ನಟ ಮಿಥುನ್‌ ಚಕ್ರವರ್ತಿಗೆ ಎದೆನೋವಲ್ಲ, ಆಗಿದ್ದೇ ಬೇರೆ;‌ ಆಸ್ಪತ್ರೆಯಿಂದ ಅಧಿಕೃತ ವರದಿ ಬಹಿರಂಗ

ಬಾಲಿವುಡ್‌ ನಟ ಮಿಥುನ್‌ ಚಕ್ರವರ್ತಿಗೆ ಎದೆನೋವಲ್ಲ, ಆಗಿದ್ದೇ ಬೇರೆ;‌ ಆಸ್ಪತ್ರೆಯಿಂದ ಅಧಿಕೃತ ವರದಿ ಬಹಿರಂಗ

  • Mithun Chakraborty: ಬಾಲಿವುಡ್‌ನ ಹಿರಿಯ ನಟ ಮಿಥುನ್‌ ಚಕ್ರವರ್ತಿ ಶನಿವಾರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯೆಲ್ಲಿ ಕೊಲ್ಕತ್ತಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಭಿಮಾನಿ ವಲಯದಲ್ಲಿಯೂ ತೀವ್ರ ಆತಂಕಕ್ಕೆ ಕಾರಣವಾಗಿತ್ತು. ಇದೀಗ ಆಸ್ಪತ್ರೆಯಿಂದ ಹೆಲ್ತ್‌ ಬುಲಿಟಿನ್‌ ಬಿಡುಗಡೆ ಆಗಿದೆ. ಬ್ರೇನ್‌ ಸ್ಟ್ರೋಕ್‌ ಆಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಬಾಲಿವುಡ್ ಹಿರಿಯ ನಟ ಮತ್ತು ರಾಜಕಾರಣಿ ಮಿಥುನ್ ಚಕ್ರವರ್ತಿ ಫೆಬ್ರವರಿ 10ರ ಶನಿವಾರ ತೀವ್ರ ಎದೆನೋವಿನ ಹಿನ್ನೆಲೆಯಲ್ಲಿ ಕೋಲ್ಕತ್ತಾದ ಆಸ್ಪತ್ರೆಗೆ ದಾಖಲಾಗಿದ್ದರು.
icon

(1 / 5)

ಅದಾದ ಕೆಲ ಸಮಯಕ್ಕೆ ಅಪೋಲೋ ಆಸ್ಪತ್ರೆಗೆ ದಾಖಲಿಸಿ, ಎಂಆರ್‌ಐ ಸ್ಕ್ಯಾನ್‌ ಸೇರಿ, ಹಲವು ಪರೀಕ್ಷೆಗೆ ಒಳಪಡಿಸಲಾಗಿತ್ತು. ಸದ್ಯ ನ್ಯೂರೋ ಮೆಡಿಸಿನ್ ತಜ್ಞರ ಮೇಲ್ವಿಚಾರಣೆಯಲ್ಲಿದ್ದಾರೆ.
icon

(2 / 5)

73 ವರ್ಷದ ಮಿಥುನ್‌ ಚಕ್ರವರ್ತಿ ಆಸ್ಪತ್ರೆಗೆ ದಾಖಲಾದ ಬಳಿಕ ಕುಟುಂಬದವರು ಅವರ ಆರೋಗ್ಯದ ಬಗ್ಗೆ ಯಾವುದೇ ಅಪ್‌ಡೇಟ್‌ ನೀಡಿರಲಿಲ್ಲ. ವೈದ್ಯರೇ  ಖಚಿತವಾಗಿ ಹೇಳಲಿದ್ದಾರೆ ಎಂದಿದ್ದರು. 
icon

(3 / 5)

ಇದೀಗ ಆಸ್ಪತ್ರೆಯಿಂದ ಅಧಿಕೃತ ಹೆಲ್ತ್‌ ಬುಲಿಟಿನ್‌ ಬಿಡುಗಡೆಯಾಗಿದೆ. ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ, ಅವರಿಗೆ ಬ್ರೇನ್‌ ಸ್ಟ್ರೋಕ್‌ ಆಗಿರುವುದು ಗೊತ್ತಾಗಿತ್ತು. ತುರ್ತು ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಿದ್ದೇವೆ.
icon

(4 / 5)

ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ. ಸಂಬಂಧಿಸಿದ ವೈದ್ಯರ ತಂಡ ಅವರ ಆರೋಗ್ಯದ ಮೇಲೆ ನಿಗಾ ಇರಿಸಿದೆ ಎಂದು ಆಸ್ಪತ್ರೆಯ ಹೆಲ್ತ್‌ ಬುಲಿಟಿನ್‌ ತಿಳಿಸಿದೆ. 
icon

(5 / 5)

IPL_Entry_Point

ಇತರ ಗ್ಯಾಲರಿಗಳು