ಓವರ್ನಲ್ಲಿ 36 ರನ್ ಚಚ್ಚಿ ವಿಶ್ವದಾಖಲೆ ಬರೆದ ನಿಕೋಲಸ್ ಪೂರನ್; ಯುವರಾಜ್-ರೋಹಿತ್ ದಾಖಲೆ ಸರಿಗಟ್ಟಿದ ವಿಂಡೀಸ್ ಕ್ರಿಕೆಟಿಗ
- Nicholas Pooran: ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದ ನಾಲ್ಕನೇ ಓವರ್ನಲ್ಲಿ 36 ರನ್ ಚಚ್ಚುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.
- Nicholas Pooran: ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದ ನಾಲ್ಕನೇ ಓವರ್ನಲ್ಲಿ 36 ರನ್ ಚಚ್ಚುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.
(1 / 6)
ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ನಿರೋಲಸ್ ಪೂರನ್ ಓವರ್ವೊಂದರಲ್ಲಿ 36 ರನ್ ಬಾರಿಸಿ ವಿಶ್ವದಾಖಲೆ ನಿರ್ಮಿಸಿದರು.
(2 / 6)
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನಿಕೋಲಸ್ ಪೂರನ್, ನಾಲ್ಕನೇ ಓವರ್ನಲ್ಲಿ ಈ ಸಾಧನೆ ಮಾಡಿದರು. ಅಜ್ಮತುಲ್ಲಾ ಒಮರ್ಜಾಯ್ ಎಸೆದ ಬೌಲಿಂಗ್ನಲ್ಲಿ 6, 5NB, 5WD, 4LB, 4, 6, 6 ರನ್ ಗಳಿಸಿದ್ದಾರೆ. ಆದರೆ 6ಕ್ಕೆ 6 ಸಿಕ್ಸರ್ ಸಿಡಿಸಲು ಸಾಧ್ಯವಾಗಿಲ್ಲ.(AFP)
(3 / 6)
ಟಿ20ಐ ಕ್ರಿಕೆಟ್ ಇತಿಹಾಸದಲ್ಲಿ ಓವರ್ವೊಂದರಲ್ಲಿ 6 ಸಿಕ್ಸರ್ ಸಿಡಿಸಿದ ದಾಖಲೆ ಹೊಂದಿರುವ ಮೊದಲ ಆಟಗಾರ ಯುವರಾಜ್ ಸಿಂಗ್, ಓವರ್ವೊಂದರಲ್ಲಿ 36 ರನ್ ಸಿಡಿಸಿದ ಮೊದಲ ಆಟಗಾರನೂ ಹೌದು. 2007ರ ವಿಶ್ವಕಪ್ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್ ಓವರ್ನಲ್ಲಿ ಯುವಿ ಈ ಸಾಧನೆ ಮಾಡಿದ್ದರು.
(4 / 6)
ವೆಸ್ಟ್ ಇಂಡೀಸ್ ಕೀರಾನ್ ಪೊಲಾರ್ಡ್ ಕೂಡ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದಾರೆ. 2021ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅಕಿಲಾ ಧನಂಜಯ ಬೌಲಿಂಗ್ನಲ್ಲಿ ಪೊಲಾರ್ಡ್, 36 ರನ್ ಗಳಿಸಿದ್ದರು.
(5 / 6)
ಇದೇ ವರ್ಷದ ಆರಂಭದಲ್ಲಿ ಅಫ್ಘಾನಿಸ್ತಾನ ವಿರುದ್ಧ ರೋಹಿತ್ ಶರ್ಮಾ ಮತ್ತು ರಿಂಕು ಸಿಂಗ್ ಸೇರಿ 36 ರನ್ ಚಚ್ಚಿದ್ದರು. ಕರೀಂ ಜನತ್ ಬೌಲಿಂಗ್ನಲ್ಲಿ ಈ ಸಾಧನೆ ಮಾಡಿದ್ದರು.
ಇತರ ಗ್ಯಾಲರಿಗಳು