ಭಾರತ vs ಆಸ್ಟ್ರೇಲಿಯಾ ಪಂದ್ಯದ ಫಲಿತಾಂಶ ನಿರ್ಧರಿಸುವ 5 ಅಂಶಗಳಿವು; ಯಾರಿಗೆ ಸಿಗಲಿದೆ ಸೆಮೀಸ್ ಟಿಕೆಟ್?
- ಟಿ20 ವಿಶ್ವಕಪ್ 2024ರ ಸೂಪರ್ 8 ಪಂದ್ಯದಲ್ಲಿ ಭಾರತ ಮತ್ಆತುಸ್ಟ್ರೇಲಿಯಾ ತಂಡಗಳು ಎದುರಾಗುತ್ತಿವೆ. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್‌ನಲ್ಲಿ ಎದುರಾದ ಸೋಲಿಗೆ ಸೇಡು ತೀರಿಸಿಕೊಳ್ಳಲು ಭಾರತ ತಂಡ ಸಜ್ಜಾಗಿದೆ. ಭಾರತ ತಂಡ ಗೆದ್ದರೆ ಸೆಮಿಫೈನಲ್ ಪ್ರವೇಶ ಖಚಿತ. ಇದೇ ವೇಳೆ ಸಣ್ಣ ಅಂತರದಿಂದ ಸೋತರೂ ಭಾರತಕ್ಕೆ ಚಿಂತೆ ಇಲ್ಲ.
- ಟಿ20 ವಿಶ್ವಕಪ್ 2024ರ ಸೂಪರ್ 8 ಪಂದ್ಯದಲ್ಲಿ ಭಾರತ ಮತ್ಆತುಸ್ಟ್ರೇಲಿಯಾ ತಂಡಗಳು ಎದುರಾಗುತ್ತಿವೆ. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್‌ನಲ್ಲಿ ಎದುರಾದ ಸೋಲಿಗೆ ಸೇಡು ತೀರಿಸಿಕೊಳ್ಳಲು ಭಾರತ ತಂಡ ಸಜ್ಜಾಗಿದೆ. ಭಾರತ ತಂಡ ಗೆದ್ದರೆ ಸೆಮಿಫೈನಲ್ ಪ್ರವೇಶ ಖಚಿತ. ಇದೇ ವೇಳೆ ಸಣ್ಣ ಅಂತರದಿಂದ ಸೋತರೂ ಭಾರತಕ್ಕೆ ಚಿಂತೆ ಇಲ್ಲ.
(1 / 7)
ಈಗಾಗಲೇ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ತಂಡಗಳು ಟಿ20 ವಿಶ್ವಕಪ್ ಸೂಪರ್ 8 ಗ್ರೂಪ್ 2ರಿಂದ ಸೆಮಿಫೈನಲ್ ಪ್ರವೇಶಿಸಿವೆ. ಗುಂಪು 1ರಿಂದ ಸೆಮಿಕದನಕ್ಕೆ ಪ್ರವೇಶಿಸಲು ಎರಡು ತಂಡಗಳು ಯಾವುವು ಎಂಬುದು ಬಹುತೇಕ ಇಂದು ಖಚಿತವಾಗುತ್ತದೆ. ಸೇಂಟ್ ಲೂಸಿಯಾದ ಡೇರೆನ್ ಸಮ್ಮಿ ಕ್ರೀಡಾಂಗಣದಲ್ಲಿ ಸೋಮವಾರ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಿರ್ಣಾಯಕ ಪಂದ್ಯ ನಡೆಯಲಿದೆ. ಈ ಪಂದ್ಯದ ಫಲಿತಾಂಶದ ಆಧಾರದ ಮೇಲೆ, ಕನಿಷ್ಠ ಒಂದು ತಂಡ ಸೆಮಿಫೈನಲ್‌ಗೆ ಹೋಗುವುದು ಖಚಿತವಾಗುತ್ತದೆ. ಗೆದ್ದರೆ ಭಾರತ ಸೆಮಿಫೈನಲ್ ಪ್ರವೇಶಿಸಲಿದೆ. ಆಸ್ಟ್ರೇಲಿಯಾ ದೊಡ್ಡ ಅಂತರದಿಂದ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದರೆ, ಆಗ ಟೂರ್ನಿ ರೋಚಕವಾಗಿ ಸಾಗುತ್ತದೆ. ಚಿತ್ರ ಕೃಪೆ: ಸ್ಟಾರ್ ಸ್ಪೋರ್ಟ್ಸ್ ಟ್ವಿಟರ್
(2 / 7)
ಆಸೀಸ್ ವಿರುದ್ಧ ಭಾರತ ಅಲ್ಪ ಅಂತರದಿಂದ ಸೋತರೂ ಸೆಮಿಫೈನಲ್ ಪ್ರವೇಶಿಸುವುದು ಖಚಿತ. ಏಕೆಂದರೆ ಈ ಪಂದ್ಯದಲ್ಲಿ ಸೋತ ನಂತರ ಭಾರತ ಮತ್ತು ಆಸ್ಟ್ರೇಲಿಯಾದ ಅಂಕ ಸಮನಾಗಿದ್ದರೂ, ನೆಟ್ ರನ್ ರೇಟ್ ವಿಷಯದಲ್ಲಿ ಟೀಮ್ ಇಂಡಿಯಾ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿಯೇ ಮುಂದುವರೆಯುತ್ತದೆ. ಪಂದ್ಯದ ಕೊನೆಯಲ್ಲಿ, ಪಾಯಿಂಟ್ಸ್ ಟೇಬಲ್‌ನಲ್ಲಿ ನಂಬರ್ ವನ್ ಸ್ಥಾನದಲ್ಲಿರುವವರು ಸೆಮಿಫೈನಲ್‌ಗೆ ಹೋಗುವುದು ಖಚಿತ. ಆದರೆ, ಎರಡನೇ ಸೆಮಿಫೈನಲಿಸ್ಟ್ ಯಾರು ಎಂಬುದನ್ನು ತಿಳಿಯಲು ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಪಂದ್ಯದವರೆಗೆ ಕಾಯಬೇಕಾಗುತ್ತದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದ ಕುರಿತ 5 ಅಂಶಗಳು ಇಲ್ಲಿವೆ.(BCCI)
(3 / 7)
ಈ ಪಂದ್ಯದಲ್ಲಿ ಭಾರತದ ಆರಂಭಿಕ ಜೋಡಿ ಪ್ರದರ್ಶನದ ಮೇಲೆ, ಟೀಮ್ ಇಂಡಿಯಾ ಎಷ್ಟು ದೊಡ್ಡ ಇನ್ನಿಂಗ್ಸ್ ನಿರ್ಮಿಸುತ್ತದೆ ಎಂಬುದು ಅವಲಂಬಿತವಾಗಿರುತ್ತದೆ. ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಪ್ರಸಕ್ತ ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಆದಾಗ್ಯೂ, ಆಸೀಸ್ ಬೌಲರ್‌ಗಳಿಗೆ ಆರಂಭದಲ್ಲಿ ವಿಕೆಟ್ ನೀಡಿದರೆ, ಬಳಿಕ ಕಾಂಗರೂಗಳು ಮೇಲುಗೈ ಸಾಧಿಸುತ್ತಾರೆ. ಹೀಗಾಗಿ ಪವರ್‌ಪ್ಲೇ ಪಂದ್ಯದಲ್ಲಿ ಪ್ರಮುಖ ಘಟ್ಟವಾಗಿದೆ.
(4 / 7)
ಭಾರತದ ಭವಿಷ್ಯವು ಜಸ್ಪ್ರೀತ್ ಬುಮ್ರಾ ಅವರ ಸ್ಥಿರತೆಯ ಮೇಲೆ ಬಹಳಷ್ಟು ಅವಲಂಬಿತವಾಗಿದೆ. ಬುಮ್ರಾ ಪಂದ್ಯಾವಳಿಯುದ್ದಕ್ಕೂ ಎದುರಾಳಿ ತಂಡದ ಆತಂಕಕ್ಕೆ ಕಾರಣರಾಗಿದ್ದಾರೆ. ಬುಮ್ರಾ ಅವರನ್ನು ಎದುರಿಸಲು ಆಸ್ಟ್ರೇಲಿಯಾ ಬ್ಯಾಟರ್‌ಗಳು ಎಚ್ಚರಿಕೆ ವಹಿಸುತ್ತಾರೆ.(ANI)
(5 / 7)
ಮೂರನೆಯದಾಗಿ, ಸೇಂಟ್ ಲೂಸಿಯಾದಲ್ಲಿ ಭಾರತೀಯ ಸ್ಪಿನ್ನರ್‌ಗಳ ಪಾತ್ರ ನಿರ್ಣಾಯಕವಾಗಲಿದೆ. ಮಧ್ಯಮ ಓವರ್‌ಗಳಲ್ಲಿ ಸ್ಟೋಯ್ನಿಸ್-ಮ್ಯಾಕ್ಸ್ವೆಲ್ ಅವರನ್ನು ಕಟ್ಟಿಹಾಕುವುದು ಜಡೇಜಾ, ಅಕ್ಷರ್ ಹಾಗೂ ಕುಲ್ದೀಪ್‌ಗೆ ನಿಜವಾದ ಸವಾಲಾಗಿದೆ. ಭಾರತಕ್ಕೆ ದೊಡ್ಡ ಆತಂಕವಾಗಿರುವುದು ಟ್ರಾವಿಸ್ ಹೆಡ್ ಹಾಗೂ ಮ್ಯಾಕ್ಸ್‌ವೆಲ್. ಇವರನ್ನು ಕಟ್ಟಿಹಾಕಲು ತಂತ್ರ ರೂಪಿಸಬೇಕಿದೆ.(ANI)
(6 / 7)
ಆಸೀಸ್ ಸ್ಪಿನ್ನರ್ ಆಡಮ್ ಜಂಪಾ ಪ್ರಸ್ತುತ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆಸ್ಟ್ರೇಲಿಯಾದ ಅತ್ಯುತ್ತಮ ಸ್ಪಿನ್ನರ್ ಅನ್ನು ಭಾರತೀಯ ಬ್ಯಾಟರ್‌ಗಳು ಹೇಗೆ ನಿಭಾಯಿಸುತ್ತಾರೆ ಎಂಬುದರ ಮೇಲೆ ಪಂದ್ಯ ಮುಂದುವರೆಯುತ್ತದೆ. ಜಂಪಾ ನಿರಂತರವಾಗಿ ವಿಕೆಟ್ ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ. ಇವರನ್ನು ಜಾಗರೂಕರಾಗಿ ಎದುರಿಸಬೇಕಾಗಿದೆ.(AFP)
(7 / 7)
ಭಾರತ ಮತ್ತು ಆಸ್ಟ್ರೇಲಿಯಾದ ಬಹುತೇಕ ಎಲ್ಲಾ ಕ್ರಿಕೆಟಿಗರು ಪರಸ್ಪರರ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ತಿಳಿದಿದ್ದಾರೆ. ಈ ಆಟಗಾರರು ಐಪಿಎಲ್‌ನಲ್ಲಿ ಜೊತೆಯಾಗಿ ಆಡಿದ್ದಾರೆ. ಹೀಗಾಗಿ, ರೋಹಿತ್ ಶರ್ಮಾ ಪರಿಚಿತ ಎದುರಾಳಿಗಳ ವಿರುದ್ಧ ತಂತ್ರಗಾರಿಕೆ ರೂಪಿಸಬೇಕು. ಕಳೆದ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೋಲನ್ನು ಭಾರತೀಯ ಕ್ರಿಕೆಟಿಗರು ಖಂಡಿತವಾಗಿಯೂ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ವೆಸ್ಟ್ ಇಂಡೀಸ್ ಮೈದಾನವಾಗಿರುವುದರಿಂದ ಉಭಯ ತಂಡಗಳಿಗೂ ಇದು ಸವಾಲಾಗಿದೆ. ಹೀಗಾಗಿ ಮೈದಾನದಲ್ಲಿ ಜೋಶ್ ಉಳಿಸಿಕೊಂಡು ಆಡಿದರೆ, ಗೆಲುವು ಖಚಿತ.(ANI)
ಇತರ ಗ್ಯಾಲರಿಗಳು