Rohit-Kohli: ಮೊದಲ ಟೆಸ್ಟ್ನ 2ನೇ ದಿನದಲ್ಲಿ ದಾಖಲಾದವು ಹಲವು ದಾಖಲೆಗಳು; ವಿಶೇಷ ಮೈಲಿಗಲ್ಲು ನೆಟ್ಟಿದ ರೋಹಿತ್, ವಿರಾಟ್ ಕೊಹ್ಲಿ
India vs West Indies Test Day 2 highlights: ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಅವರ ಭರ್ಜರಿ ಶತಕಗಳ ನೆರವಿನಿಂದ ಭಾರತ ವಿಂಡೀಸ್ ಎದುರಿನ ಮೊದಲ ಟೆಸ್ಟ್ ಪಂದ್ಯದ 2ನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 312 ರನ್ ಗಳಿಸಿದೆ. ಜೊತೆಗೆ 162 ರನ್ಗಳ ಮುನ್ನಡೆಯೂ ಪಡೆದಿದೆ. ಈ ಪಂದ್ಯದಲ್ಲಿ ದಾಖಲಾದ ದಾಖಲೆಗಳ ಪಟ್ಟಿಯನ್ನು ಒಮ್ಮೆ ನೋಡೋಣ.
(1 / 11)
ಟೀಮ್ ಇಂಡಿಯಾ ಭರ್ಜರಿ ಆಟವಾಡುತ್ತಿದೆ. ನಿರೀಕ್ಷೆಯಂತೆ ಅದ್ಭುತ ಪ್ರದರ್ಶನ ತೋರುತ್ತಿದೆ. ಡೊಮಿನಿಕಾದ ವಿಂಡ್ಸನ್ ಪಾರ್ಕ್ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ನ ಎರಡನೇ ದಿನದಾಟದಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ನಾಯಕ ರೋಹಿತ್ ಶರ್ಮಾ ಅವರ ಭರ್ಜರಿ ಶತಕದಿಂದ ಭಾರವು ಕೆರಿಬಿಯನ್ನರ ವಿರುದ್ಧ ಮೇಲುಗೈ ಸಾಧಿಸಿದೆ.(BCCI Twitter)
(2 / 11)
ಆರಂಭಿಕರು ಉತ್ತಮ ಜೊತೆಯಾಟದೊಂದಿಗೆ ಭಾರತ ಬೃಹತ್ ಮೊತ್ತ ಕಲೆ ಹಾಕುವ ನಿರೀಕ್ಷೆ ಇದೆ. ಸದ್ಯ ರೋಹಿತ್ ಶರ್ಮಾ ಅವರು 221 ಎಸೆತಗಳನ್ನು ಎದುರಿ 103 ರನ್ ಸಿಡಿಸಿದ್ದಾರೆ. ಶತಕ ಸಿಡಿಸಿ ಔಟಾಗಿರುವ ರೋಹಿತ್ ಶರ್ಮಾ ಕೆರಿಬಿಯನ್ನರ ನಾಡಿನಲ್ಲಿ ನೂತನ ಬರೆದಿದ್ದಾರೆ. (AFP)
(3 / 11)
ವೆಸ್ಟ್ ಇಂಡೀಸ್ ವಿರುದ್ಧ ಶತಕ ಸಿಡಿಸಿದ ರೋಹಿತ್ಗೆ, ಕೆರಿಬಿಯನ್ ನಾಡಲ್ಲಿ ಇದು ಅವರ ಮೊದಲ ಶತಕ ಎಂಬುದು ವಿಶೇಷ. ಈ ವರ್ಷದಲ್ಲಿ ಇದು ಎರಡನೇ ಶತಕ. ಫೆಬ್ರವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಾಗ್ಪುರದಲ್ಲಿ ಮೂರಂಕಿ ದಾಟಿದ್ದರು.(AP)
(4 / 11)
ಹಲವು ದಾಖಲೆ ಬರೆದ ರೋಹಿತ್ಗೆ ಈ ಶತಕವು ತುಂಬಾ ವಿಶೇಷ. ಇದು ಅವರ ಪಾಲಿಗೆ ವಿದೇಶಿ ನೆಲದಲ್ಲಿ 2ನೇ ಟೆಸ್ಟ್ ಶತಕವಾಗಿದೆ. ಈ ಮೂಲಕ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಭಾರತದ ಪರ ಹೆಚ್ಚು (7) ಶತಕ ದಾಖಲಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಹಿಟ್ಮ್ಯಾನ್.
(5 / 11)
ಹಾಗೆಯೇ ಓಪನರ್ ಆಗಿಯೇ ಈ ಏಳೂ ಶತಕಗಳನ್ನು ಬಾರಿಸಿರುವುದು ವಿಶೇಷ. ಜೊತೆಗೆ ಓಪನರ್ ಆಗಿ ವಿದೇಶಿ ನೆಲದಲ್ಲಿ ಎಲ್ಲಾ ಮಾದರಿಗಳಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ದಾಖಲೆಯೂ ರೋಹಿತ್ ಹೆಸರಿಗೆ ದಾಖಲಾಗಿದೆ.
(6 / 11)
ರೋಹಿತ್ ಶರ್ಮಾ 2013ರಲ್ಲಿ ಅಂದರೆ 10 ವರ್ಷಗಳ ಹಿಂದೆ ವೆಸ್ಟ್ ಇಂಡೀಸ್ ವಿರುದ್ಧವೇ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಅದೇ ಸರಣಿಯ 2ನೇ ಪಂದ್ಯದಲ್ಲೂ ಹಿಟ್ಮ್ಯಾನ್ 100 ದಾಟಿದ್ದರು. ಈಗ 10 ವರ್ಷಗಳ ನಂತರ ಮತ್ತೊಮ್ಮೆ ವಿಂಡೀಸ್ ವಿರುದ್ಧವೇ ಮೂರಂಕಿ ದಾಟಿದ್ದಾರೆ. ಇದು 10 ವರ್ಷಗಳಲ್ಲಿ 10ನೇ ಟೆಸ್ಟ್ ಶತಕವಾಗಿದೆ.
(7 / 11)
ರೋಹಿತ್ ಶರ್ಮಾ ಆರಂಭಿಕನಾಗಿ ಅತಿಹೆಚ್ಚು ಬಾರಿ 50ಕ್ಕೂ ಅಧಿಕ ರನ್ ಗಳಿಸಿದ ಭಾರತದ 2ನೇ ಆಟಗಾರ ಎನಿಸಿದ್ದಾರೆ. ಆ ಮೂಲಕ ಸುನಿಲ್ ಗವಾಸ್ಕರ್ ದಾಖಲೆಯ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ್ದಾರೆ. ಓಪನರ್ ಆಗಿ 308 ಇನ್ನಿಂಗ್ಸ್ಗಳಲ್ಲಿ 102 ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಮೊದಲ ಸ್ಥಾನದಲ್ಲಿರುವ ಸಚಿನ್, 342 ಇನ್ನಿಂಗ್ಸ್ಗಳಲ್ಲಿ 120 ಬಾರಿ, ಗವಾಸ್ಕರ್ 286 ಇನ್ನಿಂಗ್ಸ್ಗಳಲ್ಲಿ 101 ಸಲ, ನಾಲ್ಕನೇ ಸ್ಥಾನದಲ್ಲಿರುವ ಸೆಹ್ವಾಗ್ 388 ಇನ್ನಿಂಗ್ಸ್ಗಳಲ್ಲಿ 101 ಸಲ 50ಕ್ಕೂ ರನ್ ಗಳಿಸಿದ್ದಾರೆ.(AP)
(8 / 11)
ಆರಂಭಿಕರಿಬ್ಬರ ಅದ್ಭುತ ಆಟದ ಬಳಿಕ ಉತ್ತಮ ಆರಂಭ ಪಡೆದಿರುವ ವಿರಾಟ್ ಕೊಹ್ಲಿ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಸದ್ಯ ಅಜೇಯ 36 ರನ್ ಗಳಿಸಿ ಮಹತ್ವದ ದಾಖಲೆಗಳನ್ನೂ ನಿರ್ಮಿಸಿದ್ದಾರೆ. ಅಲ್ಲದೆ, ಸೆಹ್ವಾಗ್ ದಾಖಲೆಯನ್ನೂ ಮುರಿದಿದ್ದಾರೆ.(AFP)
(9 / 11)
ಜೈಸ್ವಾಲ್ ಜೊತೆ ಸೇರಿ ಅರ್ಧಶತಕದ ಜೊತೆಯಾಟವಾಡಿರುವ ಕೊಹ್ಲಿ, ರಿಸ್ಕ್ ತೆಗೆದುಕೊಳ್ಳದೆ ತಾಳ್ಮೆಯಿಂದ ಬ್ಯಾಟಿಂಗ್ ನಡೆಸಿದರು. ಶಾಂತವಾಗಿ ಬ್ಯಾಟ್ ಬೀಸುತ್ತಲ್ಲೇ ವಿರಾಟ್, ವಿಶೇಷ ದಾಖಲೆಯೊಂದನ್ನು ಉಡೀಸ್ ಮಾಡಿದ್ದಾರೆ. ಈ ಇನ್ನಿಂಗ್ಸ್ನಲ್ಲಿ ಕೊಹ್ಲಿ, ತಮ್ಮ 81ನೇ ಎಸೆತದಲ್ಲಿ ಬೌಂಡರಿ ಬಾರಿಸಿದ್ದು ವಿಶೇಷ.
(10 / 11)
21ರನ್ ಗಳಿಸಿದ ಸಂದರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 8500 ರನ್ ಪೂರೈಸಿದರು. ನಂತರ ಕೊಹ್ಲಿ ಬ್ಯಾಟ್ನಿಂದ 25ನೇ ರನ್ ಹೊರಬಿದ್ದ ಬೆನ್ನಲ್ಲೇ ಸ್ಫೋಟಕ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ದಾಖಲೆಯನ್ನು ಹಿಂದಿಕ್ಕಿದರು.
ಇತರ ಗ್ಯಾಲರಿಗಳು