ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅತ್ಯಧಿಕ ರನ್ ಗಳಿಸಿ ವಿಶ್ವದಾಖಲೆ ಸೃಷ್ಟಿಸಿದ ಸ್ಮೃತಿ ಮಂಧಾನ

ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅತ್ಯಧಿಕ ರನ್ ಗಳಿಸಿ ವಿಶ್ವದಾಖಲೆ ಸೃಷ್ಟಿಸಿದ ಸ್ಮೃತಿ ಮಂಧಾನ

  • Smriti Mandhana Record: ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಸ್ಮೃತಿ ಮಂಧಾನ ಪಾತ್ರರಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ 3 ಏಕದಿನ ಪಂದ್ಯಗಳಲ್ಲಿ ಸ್ಮೃತಿ ಒಟ್ಟು 343 ರನ್ ಗಳಿಸಿದ್ದಾರೆ.

ಸೌತ್ ಆಫ್ರಿಕಾ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲೂ ಭರ್ಜರಿ ಜಯಭೇರಿ ಬಾರಿಸಿದ ಟೀಮ್ ಇಂಡಿಯಾ, ಮೂರು ಪಂದ್ಯಗಳ ಸರಣಿಯನ್ನು ಕೈವಶ ಮಾಡಿಕೊಂಡಿದೆ.  ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ಜೂನ್ 23ರ ಭಾನುವಾರ ನಡೆದ 3ನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಹರ್ಮನ್ ಪಡೆ, ದಕ್ಷಿಣ ಆಫ್ರಿಕಾವನ್ನು 56 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್​​ಗಳಿಂದ ಸೋಲಿಸಿತು.
icon

(1 / 5)

ಸ್ಮೃತಿ ಮಂಧಾನ ಮತ್ತೊಮ್ಮೆ ಬ್ಯಾಟಿಂಗ್​​​ನಲ್ಲಿ ಮಿಂಚಿದರು. ಆದರೆ 90 ರನ್ ಗಳಿಸಿ ಔಟಾಗುವ ಮೂಲಕ ಹ್ಯಾಟ್ರಿಕ್ ಶತಕ ತಪ್ಪಿಸಿಕೊಂಡರು. 83 ಎಸೆತಗಳಲ್ಲಿ 11 ಬೌಂಡರಿ ಸಹಿತ 90 ರನ್ ಗಳಿಸಿ ಔಟಾದರೂ ಸ್ಮೃತಿ ಮಂಧಾನ, ವಿಶ್ವದಾಖಲೆ ನಿರ್ಮಿಸಿದ್ದಾರೆ.
icon

(2 / 5)

ಮೊದಲ ಎರಡು ಪಂದ್ಯಗಳಲ್ಲಿ ಶತಕ ಸಿಡಿಸಿದ್ದ ಸ್ಮೃತಿ, ಮೂರನೇ ಪಂದ್ಯದಲ್ಲಿ ಶತಕ ಸಿಡಿಸಲು ವಿಫಲರಾದರು. ಆದರೆ, ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಸ್ಮೃತಿ ಮಂಧಾನ ಪಾತ್ರರಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಏಕದಿನ ಪಂದ್ಯಗಳಲ್ಲಿ ಸ್ಮೃತಿ ಒಟ್ಟು 343 ರನ್ ಗಳಿಸಿದ್ದಾರೆ.
icon

(3 / 5)

ಅಲ್ಲದೆ, ಟೀಮ್ ಇಂಡಿಯಾದ ಜಯಾ ಶರ್ಮಾ ಅವರ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. 20 ವರ್ಷಗಳ ಹಿಂದೆ, 2003-04ರಲ್ಲಿ ಜಯಾ ಅವರು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಒಟ್ಟು 309 ರನ್ ಗಳಿಸಿದ್ದರು. ಆದರೆ ಅವರು ಗಳಿಸಿದ್ದು 5 ಏಕದಿನ ಪಂದ್ಯಗಳ ಸರಣಿಯಲ್ಲಿ ಇಷ್ಟು ರನ್ ಗಳಿಸಿದ್ದರು. ಇಲ್ಲಿ ಸ್ಮೃತಿ ಮೂರು ಏಕದಿನ ಪಂದ್ಯಗಳಲ್ಲಿ 300ಕ್ಕೂ ಹೆಚ್ಚು ರನ್ ಗಳಿಸುವ ಮೂಲಕ ಅವರನ್ನು ಮೀರಿಸಿದ್ದಾರೆ. ಮಿಥಾಲಿ ರಾಜ್ 2004 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 7 ಏಕದಿನ ಪಂದ್ಯಗಳಲ್ಲಿ ಒಟ್ಟು 289 ರನ್ ಗಳಿಸಿದ್ದರು.
icon

(4 / 5)

3 ಪಂದ್ಯಗಳ ಏಕದಿನ ಸರಣಿಯಲ್ಲಿ ಅತ್ಯಧಿಕ ರನ್ ಗಳಿಸಿದ ಮೊದಲ ಆಟಗಾರ್ತಿ ಎಂಬ ವಿಶ್ವದಾಖಲೆಗೆ ಸ್ಮೃತಿ ಮಂಧಾನ ಪಾತ್ರರಾಗಿದ್ದಾರೆ. ಸ್ಮೃತಿ ದಕ್ಷಿಣ ಆಫ್ರಿಕಾ ವಿರುದ್ಧ 343 ರನ್ (2024), ಲಾರಾ ವೊಲ್ವಾರ್ಡ್ಟ್ ಅವರು ಶ್ರೀಲಂಕಾ ವಿರುದ್ಧ 335 ರನ್ ಸಿಡಿಸಿದ್ದರು (2024).ಹೇಲಿ ಮ್ಯಾಥ್ಯೂಸ್ ಅವರು ಪಾಕಿಸ್ತಾನ ವಿರುದ್ಧ 325 ರನ್ ಸಿಡಿಸಿದ್ದರು (2024). ಸಿದ್ರಾ ಅಮೀನ್ ಐರ್ಲೆಂಡ್ ವಿರುದ್ಧ 277 ರನ್ (2022 ). ನಟಾಲಿ ಸಿವರ್ ಆಸ್ಟ್ರೇಲಿಯಾ ವಿರುದ್ಧ 271 ರನ್ (2023) ಸಿಡಿಸಿದ್ದರು.
icon

(5 / 5)

ಇತರ ಗ್ಯಾಲರಿಗಳು