Football Facts: ಫುಟ್ಬಾಲ್​ನಲ್ಲಿ ಬಳಸುವ ಚೆಂಡಿನ ಬಣ್ಣವು ಕಪ್ಪು-ಬಿಳಿಯಲ್ಲೇ ಏಕಿರುತ್ತದೆ; ಇಲ್ಲಿದೆ ನೋಡಿ ನಿಮಗೆ ಗೊತ್ತಿರದ ಮಾಹಿತಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Football Facts: ಫುಟ್ಬಾಲ್​ನಲ್ಲಿ ಬಳಸುವ ಚೆಂಡಿನ ಬಣ್ಣವು ಕಪ್ಪು-ಬಿಳಿಯಲ್ಲೇ ಏಕಿರುತ್ತದೆ; ಇಲ್ಲಿದೆ ನೋಡಿ ನಿಮಗೆ ಗೊತ್ತಿರದ ಮಾಹಿತಿ

Football Facts: ಫುಟ್ಬಾಲ್​ನಲ್ಲಿ ಬಳಸುವ ಚೆಂಡಿನ ಬಣ್ಣವು ಕಪ್ಪು-ಬಿಳಿಯಲ್ಲೇ ಏಕಿರುತ್ತದೆ; ಇಲ್ಲಿದೆ ನೋಡಿ ನಿಮಗೆ ಗೊತ್ತಿರದ ಮಾಹಿತಿ

  • ಫುಟ್ಬಾಲ್​​​ ಆಟದಲ್ಲಿ ಬಳಸುವ ಚೆಂಡಿನ ಬಣ್ಣ ಕಪ್ಪು ಮತ್ತು ಬಿಳಿಯಲ್ಲೇ ಇರುವುದೇಕೆ? ಈ ಗೊಂದಲ ಎಲ್ಲರಿಗೂ ಕಾಡುವುದು ಸಹಜ. ಆದರೆ ಈ ಹಿಂದೆ ಚೆಂಡಿನ ಬಣ್ಣ ಇದಾಗಿರಲಿಲ್ಲ. ಜೊತೆಗೆ ಅದರ ವಿನ್ಯಾಸ ಕೂಡ ಬದಲಾವಣೆ ಕಂಡಿದೆ. ಈ ಎಲ್ಲರ ಕುರಿತು ಈ ವರದಿಯಲ್ಲಿ ನೋಡೋಣ.

ನಿಜ, ಈ ಗೊಂದಲ ಒಬ್ಬರು ಇಬ್ಬರದ್ದು ಅಲ್ಲ. ನೂರಾರು, ಸಾವಿರಾರು, ಲಕ್ಷಾಂತರ ಮಂದಿಯದ್ದು. ಫುಟ್ಬಾಲ್​​ ಆಟದಲ್ಲಿ ಬಳಸುವ ಚೆಂಡಿನ ಬಣ್ಣವು ಏಕೆ ಕಪ್ಪು, ಬಿಳಿ ಬಣ್ಣದಲ್ಲೇ ಇರುತ್ತದೆ. ಕ್ರೀಡಾ ಪ್ರೇಮಿಗಳಿಗೆ ಈ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಸಾಕಷ್ಟು ದಿನಗಳಿಂದಲೂ ಇದೆ.
icon

(1 / 9)

ಫುಟ್ಬಾಲ್ ವಿಶ್ವದ ಶ್ರೀಮಂತ ಕ್ರೀಡೆ. ಜಗತ್ತಿನ ಮೂಲೆ ಮೂಲೆಯಲ್ಲೂ ಈ ಕ್ರೀಡೆಗೆ ವಿಶೇಷ ಅಭಿಮಾನಿ ಬಳಗ ಇದೆ. ಅದರಲ್ಲೂ ಕ್ರಿಸ್ಟಿಯಾನೋ ರೊನಾಲ್ಡೊ, ಲಿಯೊನೆಲ್ ಮೆಸ್ಸಿ ಅಂತಹ ದಿಗ್ಗಜ ಆಟಗಾರರ ಫ್ಯಾನ್ಸ್​ ಸಂಖ್ಯೆ ಬಿಲಿಯನ್​ಗಟ್ಟಲ್ಲೆ ಇದೆ.
icon

(2 / 9)

ಸದ್ಯ ನಾವು ಹೇಳಹೊರಟಿರುವುದು ಆಟಗಾರರ ಬಗ್ಗೆ ಅಲ್ಲ. ಅವರು ಬಳಸುವ ಚೆಂಡಿನ ಬಗ್ಗೆ. ಒಂದು ಅಚ್ಚರಿ ಸಂಗರಿ ಅಂದರೆ, ಫುಟ್ಬಾಲ್​ನಲ್ಲಿ ಬಳಸುವ ಚೆಂಡಿನ ರೂಪ ಮತ್ತು ಪುರಾತನ ಕಾಲದಿಂದಲೂ ಬದಲಾಗುತ್ತಿದೆ ಎಂಬ ಮಾಹಿತಿ ಇದೆ.
icon

(3 / 9)

ಪ್ರಸ್ತುತ ಪೀಳಿಗೆಯಲ್ಲಿ ಬಹುತೇಕರು ಫುಟ್ಬಾಲ್ ಬಣ್ಣ ಯಾವುದೆಂದರೆ, ಕಪ್ಪು ಮತ್ತು ಬಿಳಿ ಎಂದೇ ಹೇಳುತ್ತಾರೆ. ಇನ್ನೂ ಕೆಲವರು ಕಂದು ಬಣ್ಣ ಕೂಡ ಹೊಂದಿತ್ತು ಎನ್ನುವವರಿದ್ದಾರೆ. ಆದರೆ ಚೆಂಡು ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಏಕೆ ತಯಾರಿಸಲಾಗಿದೆ? ಈ ಬಗ್ಗೆ ಯಾವಾತ್ತಾದರೂ ಯೋಚಿಸಿದ್ದೀರಾ?
icon

(4 / 9)

ಸದ್ಯದ ಫುಟ್ಬಾಲ್​ ಒಂದು ಆಟಕ್ಕೆ ಸೀಮಿತವಾಗಿಲ್ಲ. ಮನರಂಜನಾ ಕ್ರೀಡೆಯಾಗಿಯೂ, ಕೋಟಿ ಕೋಟಿ ದುಡಿಯುವ ಕ್ರೀಡೆಯಾಗಿಯೂ ಬದಲಾಗಿದೆ. ಕ್ಲಬ್​ ಸೇರಿದಂತೆ ವಿವಿಧ ಲೀಗ್​​​ಗಳೂ ಜಾಸ್ತಿಯಾಗಿವೆ. ಜಾಗತಿಕ ಮಟ್ಟದಲ್ಲಿ ದೊಡ್ಡ ಕ್ರೀಡೆಯಾದ ಫುಟ್ಬಾಲ್​ಗೆ ಜಾಹೀರಾತು ಕಂಪನಿಗಳಿಂದಲೂ ಡಿಮ್ಯಾಂಡ್ ಜಾಸ್ತಿಯಾಗಿದೆ.
icon

(5 / 9)

ಫುಟ್ಬಾಲ್​ ಆರಂಭದಲ್ಲಿ ಚೆಂಡನ್ನು ಚರ್ಮದಿಂದ ತಯಾರಿಸಲಾಗ್ತಿತ್ತು. ಅದರ ಬಣ್ಣವೂ ಚರ್ಮದ ಬಣ್ಣವನ್ನೇ ಹೋಲುತ್ತಿತ್ತು. ಇದನ್ನು ಕಂದು ಬಣ್ಣದಲ್ಲಿಯೇ ತಯಾರಿಕೆ ಮಾಡಲಾಗುತ್ತಿತ್ತು. 1966 ಫಿಫಾ ಫುಟ್ಬಾಲ್ ವಿಶ್ವಕಪ್​​ವರೆಗೆ ಈ ಚಿತ್ರದಲ್ಲಿ ಕಾಣುವಂತೆಯೇ ಇತ್ತು ಚೆಂಡು.
icon

(6 / 9)

ಕ್ರಮೇಣ ಫುಟ್ಬಾಲ್​​ ಪಂದ್ಯಗಳು ಟಿವಿಗಳಲ್ಲಿ ಪ್ರಸಾರವಾದವು. ವೀಕ್ಷಕರ ಸಂಖ್ಯೆಯೂ ಹೆಚ್ಚಾಯಿತು. ಪ್ರಸಾರದ ಅವಧಿಯಲ್ಲಿ ಕಂದು ಬಣ್ಣದ ಚೆಂಡು ಸರಿಯಾಗಿ ಕಾಣುತ್ತಿರಲಿಲ್ಲ. ಮತ್ತು ಆಕರ್ಷಣೀಯವಾಗಿ ಇರಲಿಲ್ಲ. ಚೆಂಡು ಆಕರ್ಷಕವಾಗಿ ಕಾಣದ ಕಾರಣ, ಕಪ್ಪು ಮತ್ತು ಬಿಳಿ ಬಣ್ಣದ ಚೆಂಡನ್ನು ತಯಾರಿಸಲು ನಿರ್ಧರಿಸಲಾಯಿತು.
icon

(7 / 9)

ಹಾಗಾಗಿ ಕಂದು ಬಣ್ಣದಿಂದ ಕಪ್ಪು ಮತ್ತು ಬಿಳಿ ಬಣ್ಣಕ್ಕೆ ಬದಲಾವಣೆ ಮಾಡಲಾಯಿತು. 1970ರಲ್ಲಿ ಅಡೀಡಾಸ್ ಕಂಪನಿಯು ಈ ಸಮಸ್ಯೆ ಪರಿಹರಿಸಿತು. ಈ ಸಂಸ್ಥೆಯು ಕಪ್ಪು ಮತ್ತು ಬಿಳಿ ಟೆಲಿವಿಷನ್ ಸ್ಟಾರ್ ಎಂಬ ಹೆಸರಿನ ಚೆಂಡನ್ನು ಕಂಡುಹಿಡಿಯಿತು.
icon

(8 / 9)

ಕಪ್ಪು ಮತ್ತು ಬಿಳಿ ಟೆಲಿವಿಷನ್ ಸ್ಟಾರ್ ಅನ್ನು ಮೊದಲು 1970ರ ವಿಶ್ವಕಪ್‌ನಲ್ಲಿ ಬಳಕೆ ಮಾಡಲಾಯಿತು. ಬಿಳಿ ಮತ್ತು ಕಪ್ಪು ಬಣ್ಣದಿಂದ ಚೆಂಡಿನ ಸ್ಪಿನ್ ಪ್ರೇಕ್ಷಕರಿಗೆ ಸುಲಭವಾಗಿ ಟಿವಿಯಲ್ಲಿ ಕಾಣುತ್ತದೆ. ಅಂದು ಹೊಸದಾಗಿ ಬಂದ ಚೆಂಡಿನ ವಿನ್ಯಾಸವೂ ವಿಶೇಷವಾಗಿತ್ತು.
icon

(9 / 9)

ಇತರ ಗ್ಯಾಲರಿಗಳು