Drinking Water From Clay Pot: ಮಣ್ಣಿನ ಮಡಕೆಯಲ್ಲಿ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಇರುವ ಪ್ರಯೋಜನಗಳು ಗೊತ್ತೆ?
- Health Benefits of Drinking Water From Clay Pot: ಬಗೆಬಗೆಯ ಪ್ಲಾಸ್ಟಿಕ್, ಗಾಜಿನ ಲೋಟಗಳು, ಟಪ್ಪರ್‌ವೇರ್ ಬಾಟಲ್‌ಗಳಲ್ಲಿ ಈಗ ಎಲ್ಲರೂ ನೀರು ಕುಡಿಯುತ್ತಾರೆ. ಆದರೆ, ಮಣ್ಣಿನ ಪಾತ್ರೆಗಳಿಂದ ನೀರು ಕುಡಿದರೆ ಹಲವು ಪ್ರಯೋಜನಗಳು ಇವೆ. ಇದೇ ಕಾರಣಕ್ಕೆ ನಮ್ಮ ಪೂರ್ವಜರು ಮಣ್ಣಿನ ಪಾತ್ರೆಗಳಲ್ಲಿ ಆಹಾರ ಸಿದ್ಧಪಡಿಸುತ್ತಿದ್ದರು. ಮಣ್ಣಿನ ಪಾತ್ರೆಯಲ್ಲಿಯೇ ನೀರು ಕುಡಿಯುತ್ತಿದ್ದರು.
- Health Benefits of Drinking Water From Clay Pot: ಬಗೆಬಗೆಯ ಪ್ಲಾಸ್ಟಿಕ್, ಗಾಜಿನ ಲೋಟಗಳು, ಟಪ್ಪರ್‌ವೇರ್ ಬಾಟಲ್‌ಗಳಲ್ಲಿ ಈಗ ಎಲ್ಲರೂ ನೀರು ಕುಡಿಯುತ್ತಾರೆ. ಆದರೆ, ಮಣ್ಣಿನ ಪಾತ್ರೆಗಳಿಂದ ನೀರು ಕುಡಿದರೆ ಹಲವು ಪ್ರಯೋಜನಗಳು ಇವೆ. ಇದೇ ಕಾರಣಕ್ಕೆ ನಮ್ಮ ಪೂರ್ವಜರು ಮಣ್ಣಿನ ಪಾತ್ರೆಗಳಲ್ಲಿ ಆಹಾರ ಸಿದ್ಧಪಡಿಸುತ್ತಿದ್ದರು. ಮಣ್ಣಿನ ಪಾತ್ರೆಯಲ್ಲಿಯೇ ನೀರು ಕುಡಿಯುತ್ತಿದ್ದರು.
(1 / 7)
ಕುಡಿಯುವ ನೀರನ್ನು ಮಣ್ಣಿನ ಹೂಜಿ, ಮಡಕೆಯಲ್ಲಿ ಇಟ್ಟರೆ ಕೂಲ್ ಆದ, ರುಚಿಕರವಾದ, ಆರೋಗ್ಯಕಾರಿಯಾದ ನೀರು ದೊರಕುತ್ತದೆ. ಗಾಜಿನ ಪಾತ್ರೆಗಳು ಸುರಕ್ಷಿತವಾಗಿದ್ದರೂ, ಪ್ಲಾಸ್ಟಿಕ್ ಪಾತ್ರೆಗಳು ಅನಾರೋಗ್ಯಕರ. ಮಣ್ಣಿನ ಪಾತ್ರೆಗಳಲ್ಲಿ ನೀರು ಕುಡಿಯುವುದರಿಂದ ಇರುವ ಪ್ರಯೋಜನಗಳನ್ನು ಮುಂದೆ ನೀಡಲಾಗಿದೆ.
(2 / 7)
ಮಣ್ಣಿನ ಪಾತ್ರೆಯು ಸ್ವಯಂಚಾಲಿತವಾಗಿ ನೀರನ್ನು ಶುದ್ಧೀಕರಿಸುತ್ತದೆ. ನೀರಲ್ಲಿ ಹಾನಿಕಾರಕ ಲೋಹಗಳು, ರಾಸಾಯನಿಕಗಳು ಇದ್ದರೆ ಅವುಗಳಲ್ಲಿ ಕೆಲವು ವಿಷಕಾರಿ ಅಂಶವಾದರೂ ಮಣ್ಣಿನ ಪಾತ್ರೆಯಲ್ಲಿ ಹೀರಲ್ಪಡುತ್ತದೆ. ಇದರಿಂದ ಶುದ್ಧ ನೀರು ದೊರಕುತ್ತದೆ. ಇಂತಹ ಶುದ್ಧ ನೀರು ಬೇರೆ ಯಾವುದೇ ಪಾತ್ರೆಗಳಲ್ಲಿ ದೊರಕುವುದಿಲ್ಲ.
(3 / 7)
ಈಗ ನಾವು ಕುಡಿಯುವ ನೀರಿನಲ್ಲಿ ಸಾಕಷ್ಟು ರಾಸಾಯನಿಕ ಅಂಶಗಳು ಇರುತ್ತವೆ. ಕೆಲವೊಂದು ಬಾಟಲಿಗಳು ಹಾನಿಕಾರಕ ರಾಸಾಯನಿಕಗಳನ್ನು ಹೊಂದಿರುತ್ತವೆ. ಮಣ್ಣಿನ ಮಡಕೆಗಳಿಂದ ಅಂತಹ ಯಾವುದೇ ಕೆಟ್ಟ ಅಂಶಗಳು ನೀರಿಗೆ ಸೇರುವುದಿಲ್ಲ.
(4 / 7)
ಮಣ್ಣಿನ ಪಾತ್ರೆಗಳು ಉಸಿರಾಟದ ತೊಂದರೆ ನಿವಾರಿಸುತ್ತದೆ. ಹೇಗೆಂದರೆ ಮಣ್ಣಿನ ಪಾತ್ರೆಗಳಲ್ಲಿ ಬಿಸಿ/ತಣ್ಣೀರು ಇಡಬೇಕೆಂದಿಲ್ಲ. ಯಾವುದೇ ಬಗೆಯ ನೀರನ್ನು ಹೊರಗಿನ ತಾಪಮಾನಕ್ಕೆ ಅನುಗುಣವಾಗಿ ಪರಿವರ್ತಿಸುವ ಗುಣ ಮಣ್ಣಿನ ಪಾತ್ರೆಗಳಿವೆ. ಇದು ಉಸಿರಾಟದ ತೊಂದರೆಗಳನ್ನು ಕಡಿಮೆ ಮಾಡಲು ಸಹಕಾರಿ ಎನ್ನಲಾಗಿದೆ.
(5 / 7)
ದೇಹ ನಿರ್ಜಲೀಕರಣಗೊಳ್ಳುವುದನ್ನು ತಪ್ಪಿಸುತ್ತದೆ. ಮಣ್ಣಿನ ಮಡಕೆಗಳಲ್ಲಿ ಹಲವು ಜೀವಸತ್ವಗಳು ಮತ್ತು ಪ್ರಯೋಜನಕಾರಿ ಖನಿಜಾಂಶಗಳು ಇರುತ್ತವೆ. ಅವು ನೀರಿನಲ್ಲಿ ಸೇರಿಕೊಳ್ಳುತ್ತವೆ. ಈ ನೀರು ಕುಡಿಯುವುದರಿಂದ ದೇಹದಲ್ಲಿ ಎಲೆಕ್ಟ್ರೋಲೈಟ್‌ಗಳ ಮಟ್ಟ ಹೆಚ್ಚುತ್ತದೆ. ಇದರಿಂದ ನಿರ್ಜಲೀಕರಣದ ಅಪಾಯ ಕಡಿಮೆಯಾಗುತ್ತದೆ.
(6 / 7)
ದೇಹ ಕೂಲ್ ಕೂಲ್: ಮಡಕೆ ನೀರು ಕುಡಿಯುವುದರಿಂದ ಕೂಲ್ ಕೂಲ್ ನೀರು ದೊರಕುತ್ತದೆ. ಇಂತಹ ಕೂಲ್ ಅನುಭವವನ್ನು ಯಾವುದೇ ಫ್ರಿಡ್ಜ್ ಕೂಡ ನೀಡದು. ಚಳಿಗಾಲದಲ್ಲಿ ಬಹುತೇಕರು ಕಡಿಮೆ ನೀರು ಕುಡಿಯುತ್ತಾರೆ. ಇದರಿಂದ ದೇಹ ಅನಾರೋಗ್ಯಕ್ಕೆ ತುತ್ತಾಗುವ ಅಪಾಯವಿದೆ. ಮಣ್ಣಿನ ಮಡಕೆಯ ಪಾತ್ರೆಯು ಅನೇಕ ಅಂಶಗಳನ್ನು ಹೊಂದಿದೆ. ಇದು ದೇಹವನ್ನು ತಂಪಾಗಿಸುತ್ತದೆ. ಕಾಯಿಲೆಗಳನ್ನು ತಡೆಯುತ್ತದೆ.
(7 / 7)
ಜೀರ್ಣಕ್ರಿಯೆ ಉತ್ತಮ ಪಡಿಸುತ್ತದೆ. ಮಣ್ಣಿನ ಪಾತ್ರೆಗಳಲ್ಲಿ ಇಟ್ಟಿರುವ ನೀರನ್ನು ಕುಡಿಯುವುದರಿಂದ ದೇಹದ ತೂಕವನ್ನೂ ಕಡಿಮೆ ಮಾಡಿಕೊಳ್ಳಬಹುದು. ಮಣ್ಣಿನಲ್ಲಿರುವ ಕೆಲವು ಅಂಶಗಳು ಜೀರ್ಣಕ್ರಿಯೆ ಅಥವಾ ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಚಯಾಪಚಯ ದರ ಹೆಚ್ಚಾದರೆ ಕೊಬ್ಬಿನ ಶೇಖರಣೆಯ ಪ್ರಮಾಣವೂ ಕಡಿಮೆಯಾಗುತ್ತದೆ. ಹೀಗಾಗಿ, ಮಣ್ಣಿನ ಪಾತ್ರೆಗಳಲ್ಲಿ ನೀರು ಕುಡಿಯಲು ಆದ್ಯತೆ ನೀಡಿ.
ಇತರ ಗ್ಯಾಲರಿಗಳು