2024ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಗೆದ್ದ ಪ್ರಮುಖರು; ಮೊದಲ ಬಾರಿ ಆಯ್ಕೆಯಾಗಿ ಗಮನ ಸೆಳೆದವರ ಪಟ್ಟಿಯಲ್ಲಿ ಯಾರಿದ್ದಾರೆ
- ಏಳು ತಿಂಗಳ ಹಿಂದೆ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಮೊದಲ ಬಾರಿ ಆಯ್ಕೆಯಾದ ಈ ಹತ್ತು ಸಂಸದರು ಗಮನ ಸೆಳೆದಿದ್ದಾರೆ. ಗೆದ್ದ ಪ್ರಮುಖರ ಪಟ್ಟಿ ಇಲ್ಲಿದೆ.
- ಏಳು ತಿಂಗಳ ಹಿಂದೆ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಮೊದಲ ಬಾರಿ ಆಯ್ಕೆಯಾದ ಈ ಹತ್ತು ಸಂಸದರು ಗಮನ ಸೆಳೆದಿದ್ದಾರೆ. ಗೆದ್ದ ಪ್ರಮುಖರ ಪಟ್ಟಿ ಇಲ್ಲಿದೆ.
(1 / 10)
ಸಚಿವ ಸತೀಶ್ ಜಾರಕಿಹೊಳಿ ಪುತ್ರಿ, ಯುವನಾಯಕಿ ಪ್ರಿಯಾಂಕ ಜಾರಕಿಹೊಳಿ ಚಿಕ್ಕೋಡಿ ಕ್ಷೇತ್ರದಿಂದ ಲೋಕಸಭೆ ಚುನಾವಣೆ ಟಿಕೆಟ್ ಪಡೆದು ಪ್ರಥಮ ಪ್ರಯತ್ನದಲ್ಲೇ ಯಶಸ್ವಿಯೂ ಆದರು.
(2 / 10)
ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ದಾಖಲಿಸಿದವರು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕರಾಗಿದ್ದ ಡಾ.ಸಿ.ಎನ್. ಮಂಜುನಾಥ್.(The hindu)
(3 / 10)
ಮೈಸೂರು ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮೈಸೂರು ಕೊಡಗು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಲೋಕಸಭೆ ಪ್ರವೇಶಿಸಿದರು. ಇವರ ತಂದೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಾಲ್ಕು ಬಾರಿ ಸಂಸದರಾಗಿದ್ದರು,
(4 / 10)
ದಾವಣಗೆರೆ ಶಾಮನೂರು ಶಿವಶಂಕರಪ್ಪ ಕುಟುಂಬದವರಾದ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಪತ್ನಿ ಪ್ರಭಾ ಮಲ್ಲಿಕಾರ್ಜುನ ಅವರು ಮೊದಲ ಬಾರಿಗೆ ಕಾಂಗ್ರೆಸ್‌ನಿಂದ ಗೆದ್ದು ಸಂಸತ್ ಪ್ರವೇಶಿಸಿ ಗಮನ ಸೆಳೆದಿದ್ದಾರೆ.
(5 / 10)
ಮೈಸೂರು ಹಾಗೂ ರಾಯಚೂರು ಡಿಸಿಯಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಜಿ.ಕುಮಾರನಾಯಕ್ ಅವರು ರಾಯಚೂರಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದು ಸಂಸತ್ ಪ್ರವೇಶಿಸಿದ್ದಾರೆ.
(6 / 10)
ಜಗದೀಶ್ ಶೆಟ್ಟರ್ ಕೂಡ ಮೂರು ದಶಕದಿಂದ ರಾಜ್ಯ ರಾಜಕಾರಣದಲ್ಲಿ ಸಚಿವ, ಸಿಎಂ, ಪ್ರತಿಪಕ್ಷನಾಯಕ,. ಸ್ಪೀಕರ್ ಆದವರು. ಈ ಬಾರಿ ಬೆಳಗಾವಿಯಿಂದ ಬಿಜೆಪಿ ಸಂಸದರಾಗಿ ಮೊದಲ ಬಾರಿ ಸಂಸತ್ ಪ್ರವೇಶಿಸಿದರು.
(7 / 10)
ಕರ್ನಾಟಕ ರಾಜ್ಯದಲ್ಲಿ ಮೂರೂವರೆ ದಶಕದಿಂದಲೂ ಇರುವ ಹಿರಿಯರಾದ ವಿ.ಸೋಮಣ್ಣ ಮೊದಲ ಬಾರಿ ತುಮಕೂರು ಕ್ಷೇತ್ರದಿಂದ ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದೂ ಅಲ್ಲದೇ ಕೇಂದ್ರ ರೈಲ್ವೆ,ಜಲಶಕ್ತಿ ಸಚಿವರೂ ಆದರು.
(8 / 10)
ಹಾಸನದಲ್ಲಿ ಸಿಡಿ ಸದ್ದು ಮಾಡಿದ ನಡುವೆಯೇ ಪ್ರಜ್ವಲ್ ರೇವಣ್ಣ ಅವರನ್ನು ಮಣಿಸಿ ಸಂಸತ್ ಪ್ರವೇಶಿಸಿದ ಕಾಂಗ್ರೆಸ್‌ನ ಶ್ರೇಯಸ್ ಪಟೇಲ್. ಇವರ ತಾತ ಪುಟ್ಟಸ್ವಾಮಿಗೌಡ ಹಿಂದೆ ಸಂಸದ, ಸಚಿವರೂ ಆಗಿದ್ದವರು.
(9 / 10)
ಬೀದರ್‌ನಿಂದ ಅತಿ ಸಣ್ಣ ವಯಸ್ಸಿಗ ಸಂಸದರಾಗಿ ಗಮನ ಸೆಳೆದಿರುವ ಕಾಂಗ್ರೆಸ್‌ನ ಸಾಗರ್ ಖಂಡ್ರೆ. ಇವರ ತಾತ ಭೀಮಣ್ಣ ಖಂಡ್ರೆ ಸಚಿವರಾಗಿದ್ದರು. ತಂದೆ ಈಶ್ವರ ಖಂಡ್ರೆ ಸಚಿವರು.
ಇತರ ಗ್ಯಾಲರಿಗಳು