ಶೀಘ್ರದಲ್ಲೇ ಕುಂಭ ರಾಶಿಯಲ್ಲಿ ಶನಿ ಶುಕ್ರ ಸಂಯೋಗ: ಮಿಥುನ ಸೇರಿದಂತೆ ಈ 3 ರಾಶಿಯವರಿಗೆ 2025ರಿಂದ ಶುಭ ಯೋಗ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಶೀಘ್ರದಲ್ಲೇ ಕುಂಭ ರಾಶಿಯಲ್ಲಿ ಶನಿ ಶುಕ್ರ ಸಂಯೋಗ: ಮಿಥುನ ಸೇರಿದಂತೆ ಈ 3 ರಾಶಿಯವರಿಗೆ 2025ರಿಂದ ಶುಭ ಯೋಗ

ಶೀಘ್ರದಲ್ಲೇ ಕುಂಭ ರಾಶಿಯಲ್ಲಿ ಶನಿ ಶುಕ್ರ ಸಂಯೋಗ: ಮಿಥುನ ಸೇರಿದಂತೆ ಈ 3 ರಾಶಿಯವರಿಗೆ 2025ರಿಂದ ಶುಭ ಯೋಗ

2025ರಲ್ಲಿ ಗ್ರಹಗಳ ಸಂಕ್ರಮಣದಿಂದ ದ್ವಾದಶ ರಾಶಿಗಳಿಗೆ ಮಿಶ್ರ ಫಲಿತಾಂಶ ದೊರೆಯಲಿದೆ. ಗ್ರಹಗಳ ಸಂಯೋಗದಿಂದ ಕೂಡಾ ಕೆಲವೊಂದು ರಾಶಿಯವರಿಗೆ ಅದೃಷ್ಟದ ದಿನಗಳು ಬರಲಿವೆ. ಡಿಸೆಂಬರ್ 28ರಂದು ಶುಕ್ರನು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈಗಾಗಲೇ ಶನಿಯು ಅಲ್ಲಿದ್ದು, ಶುಕ್ರ ಹಾಗೂ ಶನಿಯ ಸಂಯೋಗವಾಗಲಿದೆ.

ಒಂಬತ್ತು ಗ್ರಹಗಳಲ್ಲಿ, ಶನಿಯು ಜನರ ಕರ್ಮಗಳಿಗೆ ಅನುಸಾರವಾಗಿ ಪ್ರತಿಫಲಗಳನ್ನು ನೀಡುತ್ತಾನೆ,  ಶನಿಯು ಇತರ ಗ್ರಹಗಳಿಗಿಂತ ಬಹಳ ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸಲು ಸುಮಾರು ಎರಡೂವರೆ ವರ್ಷಗಳನ್ನು ತೆಗೆದುಕೊಳ್ಳುತ್ತಾನೆ. 
icon

(1 / 8)

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಶುಕ್ರನು ಭೌತಿಕ ಸುಖ, ಶ್ರೀಮಂತಿಕೆ, ಸೌಂದರ್ಯವನ್ನು ಪ್ರತಿನಿಧಿಸುವ ಗ್ರಹವಾಗಿದೆ. ಜಾತಕದಲ್ಲಿ ಶುಕ್ರನು ಅನುಕೂಲವಾಗಿದ್ದಲ್ಲಿ ಆಯಾ ರಾಶಿಯವರಿಗೆ ವೈವಾಹಿಕ ಜೀವನದಲ್ಲಿ ಖುಷಿ ನೀಡುತ್ತಾನೆ. ಸಮಾಜದಲ್ಲಿ ಗೌರವ, ಪ್ರತಿಷ್ಠೆ ಹೆಚ್ಚಾಗಲಿದೆ. 
icon

(2 / 8)

ಇದೀಗ ಶುಕ್ರ ಹಾಗೂ ಶನಿಯ ಸಂಯೋಗವಾಗುತ್ತಿದ್ದು ಹೊಸ ವರ್ಷದಲ್ಲಿ ಕೆಲವು ರಾಶಿಯವರು ಉತ್ತಮ ಫಲಗಳನ್ನು ಪಡೆಯಲಿದ್ದಾರೆ. 
icon

(3 / 8)

ಶನಿ ಹಾಗೂ ಶುಕ್ರನ ಸಂಯೋಗದಿಂದ ಮಿಥುನ, ಕುಂಭ ಹಾಗೂ ಕಟಕ ಮೂರೂ  ರಾಶಿಯವರಿಗೆ 2025 ರಲ್ಲಿ ಉತ್ತಮ ಫಲಗಳು ದೊರೆಯಲಿವೆ. ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು, ಆರ್ಥಿಕ ಲಾಭ ದೊರೆಯಲಿದೆ. 
icon

(4 / 8)

ಮಿಥುನ ರಾಶಿಯವರ 9ನೇ ಮನೆಯಲ್ಲಿ ಶುಕ್ರ ಹಾಗೂ ಶನಿ ಸಂಯೋಗವಾಗಲಿದೆ. ಇದರಿಂದ 2025 ರಿಂದ ನಿಮಗೆ ಆರ್ಥಿಕ ಲಾಭ ಇರಲಿದೆ. ನಿಮಗೆ ಆಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಜೀವನದಲ್ಲಿ ಎಲ್ಲಾ ಸಮಸ್ಯೆಗಳು ಕಡಿಮೆ ಆಗಲಿವೆ. ಹಣಕಾಸಿನ ಸಮಸ್ಯೆ ದೂರವಾಗಲಿದೆ.
icon

(5 / 8)

ಶನಿ, ಶುಕ್ರ ಇಬ್ಬರೂ ಕಟಕ ರಾಶಿಯವರ 8ನೇ ಮನೆಯಲ್ಲಿ  ನೆಲೆಸಲಿದ್ದಾರೆ. ಇದರಿಂದ 2025 ರಿಂದ ನಿಮಗೆ ಶುಭ ಯೋಗ ಇರಲಿದೆ. ಆರ್ಥಿಕ ಸಮಸ್ಯೆ ನಿವಾರಣೆ ಆಗಿ ಹೊಸ ಆದಾಯದ ಮೂಲ ಸೃಷ್ಟಿಯಾಗುತ್ತದೆ. ಬಹಳ ದಿನಗಳಿಂದ ಬಾಕಿಯಲ್ಲಿರುವ ಕೆಲಸಗಳೆಲ್ಲಾ ಯಶಸ್ವಿಯಾಗಿ ಪೂರ್ಣವಾಗಲಿದೆ. ವೃತ್ತಿಯಲ್ಲಿ ಕೂಡಾ ಉತ್ತಮ ಫಲಿತಾಂಶಗಳಿವೆ. 
icon

(6 / 8)

ಕುಂಭ ರಾಶಿಯವರ ಮೊದಲನೆ ಮನೆಯಲ್ಲಿ ಶನಿ, ಶುಕ್ರ ಸಂಚರಿಸುತ್ತಾರೆ. ಇದರಿಂದ 2025 ಆರಂಭದಿಂದಲೇ ನಿಮಗೆ ಎಲ್ಲಾ ರೀತಿಯ ಅನುಕೂಲಗಳು ದೊರೆಯಲಿವೆ. ನಿಮ್ಮ ಗೌರವ , ಪ್ರತಿಷ್ಠೆ ಹೆಚ್ಚಾಗಲಿದೆ. ಹೊಸ ಮನೆ ಅಥವಾ ವಾಹನ ಕೊಳ್ಳುವ ಅವಕಾಶವಿದೆ. ಆರ್ಥಿಕ ಲಾಭ ಉತ್ತಮವಾಗಿರಲಿದೆ.
icon

(7 / 8)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
icon

(8 / 8)

ಇತರ ಗ್ಯಾಲರಿಗಳು