ಡಿಸೆಂಬರ್‌ 29ಕ್ಕೆ ಪೂರ್ವಾಷಾಢ ನಕ್ಷತ್ರ ಪ್ರವೇಶಿಸಲಿರುವ ಸೂರ್ಯ: 2025ರಿಂದ ತುಲಾ ಸೇರಿ 3 ರಾಶಿಯವರಿಗೆ ಖುಷಿಯ ದಿನಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಡಿಸೆಂಬರ್‌ 29ಕ್ಕೆ ಪೂರ್ವಾಷಾಢ ನಕ್ಷತ್ರ ಪ್ರವೇಶಿಸಲಿರುವ ಸೂರ್ಯ: 2025ರಿಂದ ತುಲಾ ಸೇರಿ 3 ರಾಶಿಯವರಿಗೆ ಖುಷಿಯ ದಿನಗಳು

ಡಿಸೆಂಬರ್‌ 29ಕ್ಕೆ ಪೂರ್ವಾಷಾಢ ನಕ್ಷತ್ರ ಪ್ರವೇಶಿಸಲಿರುವ ಸೂರ್ಯ: 2025ರಿಂದ ತುಲಾ ಸೇರಿ 3 ರಾಶಿಯವರಿಗೆ ಖುಷಿಯ ದಿನಗಳು

Sun Transit: ಹೊಸ ವರ್ಷಕ್ಕೆ 2 ದಿನಗಳ ಮುನ್ನ ಸೂರ್ಯನು ಶುಕ್ರನ ಒಡೆತನದ ಪೂರ್ವಾಷಾಢ ನಕ್ಷತ್ರವನ್ನು ಪ್ರವೇಶಿಸಲಿದ್ದಾನೆ. ಇದು ಪ್ರತಿ ರಾಶಿಚಕ್ರದ ಮೇಲೆ ಬಹಳ ಪರಿಣಾಮ ಬೀರಲಿದೆ, ಆದರೆ 3 ರಾಶಿಯವರಿಗೆ ವಿಶೇಷ ಪ್ರಯೋಜನಗಳನ್ನು ತರಲಿದೆ.

 ಡಿಸೆಂಬರ್ 2024ರ ಕೊನೆಯ ವಾರದಲ್ಲಿ, ಗ್ರಹಗಳ ಅಧಿಪತಿಯಾದ ಸೂರ್ಯದೇವನು ಶುಕ್ರನ ಒಡೆತನದ ಪೂರ್ವಾಷಾಢ ನಕ್ಷತ್ರವನ್ನು ಪ್ರವೇಶಿಸಲಿದ್ದಾನೆ. ಸೂರ್ಯ ಮತ್ತು ಶುಕ್ರ ಎರಡೂ ಅತ್ಯಂತ ಶಕ್ತಿಶಾಲಿ ಗ್ರಹಗಳು. ಸೂರ್ಯನು ಆತ್ಮವಿಶ್ವಾಸ, ನಾಯಕತ್ವ ಮತ್ತು ಶಕ್ತಿಯನ್ನು ನೀಡುವ ಗ್ರಹವಾಗಿದ್ದು, ಶುಕ್ರನು ಪ್ರೀತಿ, ಸಂಪತ್ತು ಮತ್ತು ಸೌಂದರ್ಯದ ಅಧಿಪತಿ ಎನಿಸಿದ್ದಾನೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಈ ಎರಡು ಗ್ರಹಗಳ ಸಂಯೋಗವು ಕೆಲವು ರಾಶಿಗಳಿಗೆ ಅದೃಷ್ಟವನ್ನು ತರುತ್ತದೆ. 
icon

(1 / 6)

  ಡಿಸೆಂಬರ್ 29 ರಂದು ಮಧ್ಯಾಹ್ನ 12:34 ಕ್ಕೆ, ಸೂರ್ಯದೇವನು ಮೂಲಾ ನಕ್ಷತ್ರದಿಂದ ಪೂರ್ವಾಷಾಢ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಇದು 2025ಕ್ಕೆ ಮೂರು ರಾಶಿಯವರಲ್ಲಿ ಧನಾತ್ಮಕ ಬದಲಾವಣೆಗಳನ್ನು ತರುತ್ತದೆ. ಆ ರಾಶಿಗಳು ಯಾವುವು ನೋಡೋಣ. 
icon

(2 / 6)

 ಸಿಂಹ ರಾಶಿ: ಪೂರ್ವಾಷಾಢ ನಕ್ಷತ್ರಕ್ಕೆ ಸೂರ್ಯದೇವನ ಪ್ರವೇಶವು ಸಿಂಹ ರಾಶಿಯವರಿಗೆ ಬಹಳ ಶುಭಫಲಗಳನ್ನು ನೀಡಲಿದೆ. ಸಿಂಹ ರಾಶಿಯನ್ನು ಸೂರ್ಯದೇವರು ಆಳುವುದರಿಂದ, ಈ ಸಂಕ್ರಮಣದ ಪರಿಣಾಮವು ಸಿಂಹ ರಾಶಿಯವರ ಮೇಲೆ ನೇರ ಮತ್ತು ಧನಾತ್ಮಕವಾಗಿರುತ್ತದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ಯಾವುದೇ ಸವಾಲನ್ನು ಎದುರಿಸಲು ನೀವು ಸಿದ್ಧರಾಗಿರುತ್ತೀರಿ. ನಿಮ್ಮ ನಾಯಕತ್ವದ ಕೌಶಲ್ಯಗಳು ಸುಧಾರಿಸುತ್ತವೆ. ಇದು ಇತರರನ್ನು ಪ್ರೇರೇಪಿಸುತ್ತದೆ. ಈ ಅವಧಿಯಲ್ಲಿ, ನೀವು ಹಣವನ್ನು ಗಳಿಸಲು ಹೊಸ ಅವಕಾಶಗಳನ್ನು ಪಡೆಯುತ್ತೀರಿ. ವ್ಯಾಪಾರ ವೃದ್ಧಿಯಾಗಲಿದೆ. ನೀವು ಷೇರು ಮಾರುಕಟ್ಟೆ, ಆಸ್ತಿ ಅಥವಾ ಇತರ ಹೂಡಿಕೆಗಳಿಂದ ಉತ್ತಮ ಆದಾಯ ಪಡೆಯಬಹುದು. ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ. ನಿಮ್ಮ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ವೃತ್ತಿಜೀವನದಲ್ಲಿ ಗಮನಾರ್ಹ ಪ್ರಗತಿ ಇರುತ್ತದೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಆಸ್ತಿ ಅಥವಾ ವಾಹನ ಖರೀದಿಸುವಿರಿ. 
icon

(3 / 6)

 ತುಲಾ: ಈ ರಾಶಿಯ ಅಧಿಪತಿ ಶುಕ್ರನೇ ಆಗಿರುವುದರಿಂದ ತುಲಾ ರಾಶಿಯವರು ಶುಕ್ರನ ಪ್ರಭಾವದಿಂದ ವಿಶೇಷ ಪ್ರಯೋಜನಗಳನ್ನು ಪಡೆಯುತ್ತಾರೆ. ಸೂರ್ಯನ ಸಂಚಾರದ ಪ್ರಭಾವದಿಂದ ನಿಮ್ಮ ಗುಣಗಳು ಸುಧಾರಿಸುತ್ತವೆ. ನಿಮ್ಮ ವ್ಯಕ್ತಿತ್ವದಲ್ಲಿ ಇನ್ನಷ್ಟು ಧನಾತ್ಮಕ ಬದಲಾವಣೆಗಳಾಗುತ್ತವೆ ಮತ್ತು ನೀವು ಹೆಚ್ಚು ಪ್ರಬುದ್ಧರಾಗುತ್ತೀರಿ. ಸಮಾಜದಲ್ಲಿ ನಿಮ್ಮ ಗೌರವವೂ ಹೆಚ್ಚಾಗುತ್ತದೆ ಮತ್ತು ಜನರು ನಿಮ್ಮನ್ನು ಮೆಚ್ಚುತ್ತಾರೆ. ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭವಾಗಲಿದೆ. ಕಲೆ, ಫ್ಯಾಷನ್ ಮತ್ತು ವಿನ್ಯಾಸ ಕ್ಷೇತ್ರಗಳಲ್ಲಿ ತೊಡಗಿರುವ ಉದ್ಯಮಿಗಳು ವಿಶೇಷ ಯಶಸ್ಸು ಮತ್ತು ಲಾಭದ ಸಾಮರ್ಥ್ಯವನ್ನು ಹೊಂದಿರುತ್ತಾರೆ. ನಿಮಗೆ ದೊರೆಯಬೇಕಿದ್ದ ಬಾಕಿ ಹಣ ಸಿಗಲಿದೆ.  ಆಸ್ತಿ ಅಥವಾ ವಾಹನ ಖರೀದಿಸುವ ಸಾಧ್ಯತೆ ಇದೆ.  ಪೂರ್ವಿಕರ ಆಸ್ತಿಯಿಂದ ಲಾಭವಾಗಬಹುದು. ನಿಮ್ಮ ಕುಟುಂಬ ಮತ್ತು ಸಾಮಾಜಿಕ ಸಂಬಂಧಗಳು ಬಲಗೊಳ್ಳುತ್ತವೆ. ಸಂಬಂಧದಲ್ಲಿ ಮಧುರತೆ ಇರುತ್ತದೆ. ವಿವಾಹವಾಗುವ ಸಾಧ್ಯತೆ ಇದೆ. ಆರೋಗ್ಯ ಸಮಸ್ಯೆ ನಿವಾರಣೆಯಾಗುತ್ತದೆ.
icon

(4 / 6)

 ಧನು ರಾಶಿ: ಪೂರ್ವಾಷಾಢ ನಕ್ಷತ್ರದಲ್ಲಿ ಸೂರ್ಯ ದೇವರ ಸಂಚಾರವು ಧನು ರಾಶಿಯವರಿಗೆ ವಿಶೇಷವಾಗಿ ಬಹಳ ಶುಭ ಫಲಿತಾಂಶಗಳನ್ನು ತರುತ್ತದೆ. ನೀವು ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿರಿ. ಸಮಾಜದಲ್ಲಿ ಸಾಮಾಜಿಕ ಪ್ರತಿಷ್ಠೆ, ಗೌರವ ಮತ್ತು ಗುರುತನ್ನು ಹೆಚ್ಚಿಸುತ್ತದೆ. ಧಾರ್ಮಿಕ ಪ್ರವಾಸಗಳ ಸಾಧ್ಯತೆಯೂ ಇರುತ್ತದೆ. ಉದ್ಯೋಗಾಕಾಂಕ್ಷಿಗಳು ಜೀವನದಲ್ಲಿ ಪ್ರಗತಿ ಹೊಂದುತ್ತಾರೆ. ಹೊಸ ಉದ್ಯೋಗಾವಕಾಶಗಳನ್ನು ಪಡೆಯಬಹುದು. ವ್ಯಾಪಾರದಲ್ಲಿ ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳುವುದರಿಂದ ಲಾಭ ದೊರೆಯುತ್ತದೆ. ಹೂಡಿಕೆ ಮತ್ತು ಉಳಿತಾಯವೂ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಇದು ಸುವರ್ಣ ಸಮಯ. ನೀವು ವಿದೇಶದಲ್ಲಿ ಕೆಲಸ ಮಾಡಲು ಅಥವಾ ಅಧ್ಯಯನ ಮಾಡಲು ಅವಕಾಶವನ್ನು ಪಡೆಯುತ್ತೀರಿ. ಶುಕ್ರನ ಅನುಗ್ರಹದಿಂದ ನಿಮ್ಮ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತವೆ. ಕೌಟುಂಬಿಕ ಜೀವನ ಮತ್ತು ಪ್ರೇಮ ಜೀವನವು ಅತ್ಯುತ್ತಮವಾಗಿರುತ್ತದೆ.  ನಿಮ್ಮ ಸಂಗಾತಿಯೊಂದಿಗೆ ನೀವು ದೂರದ ಊರುಗಳಿಗೆ ಪ್ರವಾಸಕ್ಕೆ ಹೋಗಬಹುದು.
icon

(5 / 6)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
icon

(6 / 6)

ಇತರ ಗ್ಯಾಲರಿಗಳು