Bridal Makeup: ಮದುವೆ ದಿನ ನಿಮ್ಮ ಮುಖದ ಕಾಂತಿ ದುಪ್ಪಟ್ಟಾಗಬೇಕಾ, ಈ 3 ವಸ್ತು ಇದ್ರೆ ಸಾಕು ತ್ವಚೆಯ ಅಂದ ಅರಳುತ್ತೆ
ಕನ್ನಡ ಸುದ್ದಿ  /  ಜೀವನಶೈಲಿ  /  Bridal Makeup: ಮದುವೆ ದಿನ ನಿಮ್ಮ ಮುಖದ ಕಾಂತಿ ದುಪ್ಪಟ್ಟಾಗಬೇಕಾ, ಈ 3 ವಸ್ತು ಇದ್ರೆ ಸಾಕು ತ್ವಚೆಯ ಅಂದ ಅರಳುತ್ತೆ

Bridal Makeup: ಮದುವೆ ದಿನ ನಿಮ್ಮ ಮುಖದ ಕಾಂತಿ ದುಪ್ಪಟ್ಟಾಗಬೇಕಾ, ಈ 3 ವಸ್ತು ಇದ್ರೆ ಸಾಕು ತ್ವಚೆಯ ಅಂದ ಅರಳುತ್ತೆ

ಮದುವೆ ಸೀಸನ್ ಶುರುವಾಗಿದೆ. ಈ ಸಮಯದಲ್ಲಿ ಹೆಣ್ಣುಮಕ್ಕಳು ತ್ವಚೆಯ ಕಾಳಜಿಗೆ ಹೆಚ್ಚಿನ ಗಮನ ನೀಡುತ್ತಾರೆ. ಮಧುಮಗಳಂತೂ ತನ್ನ ಮುಖ ನಕ್ಷತ್ರಗಳಂತೆ ಹೊಳೆಯುತ್ತಿರಬೇಕು ಎಂದು ಬಯಸುವುದು ಸಹಜ. ಇದಕ್ಕಾಗಿ ಮನೆಯಲ್ಲಿ ಈ 3 ವಸ್ತು ಇದ್ದರೆ ಸಾಕು, ತ್ವಚೆಯ ಅಂದ ಅರಳುತ್ತೆ.

ಮದುಮಗಳ ತ್ವಚೆಯ ಕಾಂತಿ ಅರಳಿಸುವ ಫೇಸ್‌ಪ್ಯಾಕ್‌ (ಸಾಂಕೇತಿಕ ಚಿತ್ರ)
ಮದುಮಗಳ ತ್ವಚೆಯ ಕಾಂತಿ ಅರಳಿಸುವ ಫೇಸ್‌ಪ್ಯಾಕ್‌ (ಸಾಂಕೇತಿಕ ಚಿತ್ರ) (PC: Canva)

ತ್ವಚೆಯ ಅಂದ ಹೆಚ್ಚಿಸಿಕೊಳ್ಳಬೇಕು ಎನ್ನುವುದು ಹೆಣ್ಣುಮಕ್ಕಳ ಆಸೆ, ಕನಸು. ಅದರಲ್ಲೂ ಮದುವೆಯಂತಹ ಸಮಾರಂಭಗಳಿದ್ದಾಗ ತಾನು ಎಲ್ಲರಿಗಿಂತ ಅಂದವಾಗಿ ಕಾಣಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಬ್ಯೂಟಿಪಾರ್ಲರ್‌ಗೆ ಒಂದಿಷ್ಟು ಹಣ ಖರ್ಚು ಮಾಡುತ್ತಾರೆ. ಅದರಲ್ಲೂ ಮಧುಮಗಳಾದವಳಿಗೆ ಮದುವೆ ಸಮಯದಲ್ಲಿ ಚರ್ಮದ ಕಾಂತಿ ಅರಳಿರಬೇಕು ಎಂಬ ಬಯಕೆ ಇರುವುದು ಸಹಜ. ಮದುವೆಯ ಸಮಯದಲ್ಲಿ ತ್ವಚೆಯ ಕಾಂತಿ ಹೆಚ್ಚಿಸಿಕೊಳ್ಳಲು ನೈಸರ್ಗಿಕ ವಿಧಾನವನ್ನೂ ಅನುಸರಿಸಬಹುದು.

ನೈಸರ್ಗಿಕ ಹಾಗೂ ಮನೆಯಲ್ಲಿ ತಯಾರಿಸಿದ ಫೇಸ್‌ಪ್ಯಾಕ್‌ಗಳು ಚರ್ಮದ ಆರೋಗ್ಯಕ್ಕೂ ಬಹಳ ಉತ್ತಮ. ಈ ವರ್ಷ ನೀವು ಮದುವೆಯಾಗುತ್ತಿದ್ದರೆ ಅಥವಾ ನಿಮ್ಮ ಮನೆಯ ಮದುವೆ ಕಾರ್ಯಕ್ರಮದಲ್ಲಿ ನೀವು ಪಾಲ್ಗೊಳ್ಳುವ ಇಚ್ಛೆ ಹೊಂದಿದವರಾದರೆ ತ್ವಚೆಯ ಕಾಂತಿ ಹೆಚ್ಚಿಸಿಕೊಳ್ಳಲು ಈ ಮನೆಮದ್ದುಗಳನ್ನು ಟ್ರೈ ಮಾಡಿ. ಈ ಹೋಮ್‌ಮೇಡ್ ಫೇಸ್‌ಪ್ಯಾಕ್ ಬಳಸುವುದರಿಂದ ತ್ವಚೆಯ ಅಂದ ದುಪ್ಪಟ್ಟಾಗುತ್ತದೆ. ಅದಕ್ಕಾಗಿ ನಿಮಗೆ ಬೇಕಾಗಿರುವುದು ಕಡಲೆಹಿಟ್ಟು, ಅರಿಸಿನ ಮತ್ತು ರೋಸ್ ವಾಟರ್ ಮಾತ್ರ. ಇದರಿಂದ ತಯಾರಿಸಿದ ಫೇಸ್‌ಪ್ಯಾಕ್ ಬಳಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡಿ.

ಚರ್ಮವನ್ನು ಎಕ್ಸ್‌ಫೋಲಿಯೇಟ್ ಮಾಡುತ್ತೆ 

ಕಡಲೆಹಿಟ್ಟು, ಅರಿಸಿನ ಹಾಗೂ ರೋಸ್‌ವಾಟರ್ ಫೇಸ್‌ಪ್ಯಾಕ್ ಚರ್ಮವನ್ನು ಎಕ್ಸ್‌ಫೋಲಿಯೇಟ್ ಮಾಡುತ್ತೆ. ಇದರಿಂದ ನಿರ್ಜೀವ ಕೋಶಗಳನ್ನು ತೊಡೆದು ಹಾಕಿ ಚರ್ಮ ಶುದ್ಧವಾಗುತ್ತದೆ. ಈ ಫೇಸ್‌ಪ್ಯಾಕ್ ಬಳಕೆಯಿಂದ ಮೈಬಣ್ಣ ತಾಜಾವಾಗುತ್ತದೆ. ಈ ಫೇಸ್‌ಪ್ಯಾಕ್‌ ಎಣ್ಣೆಯಂಶ, ಕೊಳಕು, ಧೂಳಿನ ನಿವಾರಣೆಗೆ ಸಹಕಾರಿ. ಇದು ಚರ್ಮದ ಟೋನ್‌ ಅನ್ನು ಸಮವಾಗಿಸುತ್ತದೆ. ಕಪ್ಪು ಕಲೆಗಳನ್ನು ತೆಗೆದುಹಾಕಲು ಈ ಫೇಸ್‌ಪ್ಯಾಕ್ ಸಹಕಾರಿ.

ಚರ್ಮವನ್ನು ಆರೈಕೆ ಮಾಡುತ್ತದೆ

ಈ ಫೇಸ್‌ಪ್ಯಾಕ್‌ಗೆ ಬಳಸುವ ಅರಿಸಿನವು ಉರಿಯೂತ, ಆಂಟಿಮೈಕ್ರೊಬಿಯಲ್, ಉತ್ಕರ್ಷಣ ನಿರೋಧಕ ಮತ್ತು ಆಂಟಿನಿಯೋಪ್ಲಾಸ್ಟಿಕ್ ಗುಣಲಕ್ಷಣಗಳಿಂದ ತುಂಬಿದ ಘಟಕಾಂಶವಾಗಿದೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಾರ, ಅರಿಶಿನವು ಕರ್ಕ್ಯುಮಿನ್ ಎಂಬ ಸಕ್ರಿಯ ಸಂಯುಕ್ತವನ್ನು ಹೊಂದಿದೆ, ಇದನ್ನು ವೈದ್ಯಕೀಯವಾಗಿ ಹಲವಾರು ಚರ್ಮರೋಗ ರೋಗಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಆದ್ದರಿಂದ ಮದುವೆಯಂತಹ ಕಾರ್ಯಕ್ರಮಗಳಿಗೆ ಕೆಲವು ದಿನಗಳಿರುವಾಗ ಇದನ್ನು ಬಳಸುವುದರಿಂದ ಅಂದ ಹೆಚ್ಚಿಸಿಕೊಳ್ಳಬಹುದು.

ಸ್ಕಿನ್ ಎಲಿಕ್ಸಿರ್ ಆಗಿ ರೋಸ್ ವಾಟರ್ 

ರೋಸ್ ವಾಟರ್ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ, ಇದು ಚರ್ಮದ ಕಿರಿಕಿರಿಯನ್ನು ಶಾಂತಗೊಳಿಸುತ್ತದೆ ಮತ್ತು ತಂಪಾಗಿಸುವ ಪರಿಣಾಮವನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಇದು ವಯಸ್ಸಾದ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ, ಇದು ಮಂದವಾಗಿ ಕಾಣುವ ಚರ್ಮದ ಕಾಂತಿ ಅರಳಿಸಿ, ತಾಜಾವಾಗಿ ಕಾಣುವಂತೆ ಮಾಡುತ್ತದೆ.

ಫೇಸ್‌ಪ್ಯಾಕ್ ತಯಾರಿಸುವುದು ಹೇಗೆ

ಒಂದು ಬೌಲ್‌ನಂತೆ ಒಂದು ಚಮಚ ಕಡಲೆಹಿಟ್ಟು ಸೇರಿಸಿ. ಅದಕ್ಕೆ ಚಿಟಿಕೆ ಅರಿಸಿನ ಹಾಗೂ ಐದಾರು ಹನಿ ರೋಸ್‌ ವಾಟರ್ ಸೇರಿಸಿ. ಇದನ್ನು ಗಂಟುಗಳಿಲ್ಲದಂತೆ ಚೆನ್ನಾಗಿ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿ 15 ರಿಂದ 20 ನಿಮಿಷಗಳ ಕಾಲ ಬಿಟ್ಟು, ನಂತರ ಮುಖ ತೊಳೆಯಿರಿ. ಮುಖ ತೊಳೆಯುವಾಗ ಉಗುರು ಬೆಚ್ಚಗಿನ ನೀರು ಬಳಸಿ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner