Ramachari Serial: ಚಾರು ಮುಂದೆ ಅಕ್ಕ, ತಂಗಿ ನಾಟಕ; ವೈಶಾಖಾಳ ಆಟ ನೋಡಿ ಶಾಕ್ ಆದ ರುಕ್ಕು
ರಾಮಾಚಾರಿ ಧಾರಾವಾಹಿಯಲ್ಲಿ ಚಾರು ತುಂಬಾ ಕಷ್ಟಪಟ್ಟು ವೈಶಾಖಳನ್ನು ಬಿಡಿಸಿಕೊಂಡು ಬಂದಿದ್ದಾಳೆ. ಆದರೆ ವೈಶಾಖಾ ಮತ್ತು ರುಕ್ಕು ಇಬ್ಬರೂ ಸೇರಿಕೊಂಡು ಈ ಮನೆಗೆ ಮತ್ತೆ ಕೆಟ್ಟದ್ದನ್ನೇ ಮಾಡಲು ಹೊರಟಿದ್ದಾರೆ.
ರಾಮಾಚಾರಿ ಧಾರಾವಾಹಿಯಲ್ಲಿ ವೈಶಾಖ ಜೈಲಿನಿಂದ ಮನೆಗೆ ಮರಳಿದ್ದಾಳೆ. ಆದರೆ ಬರುವಾಗಲೇ ಇನ್ನೊಂದಷ್ಟು ಹೊಸ ಐಡಿಯಾ ಮಾಡಿಕೊಂಡು ಬಂದಿದ್ದಾಳೆ. ಅವಳು ವೀಲ್ ಚೇರ್ ಮೂಲಕ ಬರುತ್ತಾಳೆ. ರುಕ್ಕು ಅವಳನ್ನು ವೀಲ್ ಚೇರ್‌ನಲ್ಲಿ ತಳ್ಳಿಕೊಂಡು ರೂಮ್ ಒಳಗಡೆ ಕರೆದುಕೊಂಡು ಬರುತ್ತಾಳೆ. ಯಾಕೆಂದರೆ ಅವರಿಬ್ಬರಿಗೂ ಏನೋ ಸೀಕ್ರೆಟ್ ಮಾತನಾಡುವುದಿರುತ್ತದೆ. ಆಗ ರುಕ್ಕು ಬೇಸರದಿಂದ “ಯಾಕೆ ಅಕ್ಕ ಈ ರೀತಿ ಮಾಡ್ಕೊಂಡೆ? ನಿನ್ನ ಕಾಲು ಸರಿ ಆಗ್ಬೇಕು ಅಂದ್ರೆ ಆರು ತಿಂಗಳಾದ್ರೂ ಬೇಕಲ್ವಾ?” ಎಂದು ಪ್ರಶ್ನೆ ಮಾಡುತ್ತಾಳೆ.
ಚಿಟಿಕೆ ಹೊಡೆಯುವಷ್ಟರಲ್ಲಿ ವೈಶಾಖ ರೆಡಿ
ಆಗ ವೈಶಾಖ ಇಲ್ಲ ನೀನು ಒಂದು ಚಿಟಿಕೆ ಹೊಡಿ ಅಷ್ಟರಲ್ಲಿ ಎಲ್ಲ ಸರಿಯಾಗುತ್ತದೆ ಎಂದು ಹೇಳುತ್ತಾಳೆ. ಇದೆಲ್ಲ ಆಗದ ಮಾತು ಎಂದು ರುಕ್ಕು ಸುಮ್ಮನಾಗುತ್ತಾಳೆ. ಆದರೆ ವೈಶಾಖ ಮತ್ತೆ ಮತ್ತೆ ಒತ್ತಾಯ ಮಾಡುತ್ತಾಳೆ. ಆಗ ಮನಸಿಲ್ಲದ ಮನಸಿನಿಂದ ರುಕ್ಕು ಚಿಟಿಕೆ ಹೊಡೆಯುತ್ತಾಳೆ. ಆಗ ವೈಶಾಖಾ ವೀಲ್‌ಚೇರ್ ಮೇಲಿನಿಂದ ಎದ್ದು ನಿಲ್ಲುತ್ತಾಳೆ. ತಾನು ಜೈಲಿನಿಂದ ಬಂದ ಖುಷಿಗೆ ಡಾನ್ಸ್ ಮಾಡುತ್ತಾಳೆ. ಅದನ್ನು ಕಂಡು ರುಕ್ಕು ಆಶ್ಚರ್ಯಪಡುತ್ತಾಳೆ. ನೋಡ್ತಾ ಇರು ಹೇಗೆ ಚಾರು ಹತ್ರ ಕೂತಲ್ಲೇ ಸೇವೆ ಮಾಡಿಸಿಕೊಳ್ತೀನಿ ಎಂದು ಹೇಳುತ್ತಾಳೆ.
ಚಾರು ಮುಂದೆ ನಾಟಕ
ಚಾರು ಪಾಪ ತನ್ನ ಅಕ್ಕನಿಗೆ ನಿಜವಾಗಿಯೂ ಏನೋ ಆಗಿದೆ ಎಂದುಕೊಂಡು ಅವಳಿಗಾಗಿ ಕುಡಿಯಲು ಏನನ್ನೋ ತಂದಿರುತ್ತಾಳೆ. ಆದರೆ ಅವಳು ಬಾಗಿಲು ತೆಗೆಯುವಷ್ಟರಲ್ಲಿ ವೈಶಾಖಾ ನಿಂತುಕೊಂಡಿರುತ್ತಾಳೆ. ಅದನ್ನು ನೋಡಿ ಚಾರುಗೆ ಅನುಮಾನ ಬರುತ್ತದೆ. ಏನಕ್ಕ ನೀನು ನಿಂತುಕೊಂಡಿದ್ದೀಯ ಎಂದು ಕೇಳಿದಾಗ ವೈಶಾಖಾ ಹೇಳ್ತಾಳೆ “ಇಲ್ಲ ನಾನು ನಿಂತಿಲ್ಲ ಇವಳೇ ನನ್ನ ನಿಲ್ಲಿಸಿದ್ಲು” ಎಂದು ರುಕ್ಕುನಾ ತೋರಿಸುತ್ತಾಳೆ. ರುಕ್ಕು ತನ್ನಷ್ಟಕ್ಕೆ ತಾನೇ ಈ ವಿಷಯ ತಿಳಿಯದೆ ಗಾಬರಿ ಆಗ್ತಾಳೆ.
ರಾಮಾಚಾರಿ ಸೀರಿಯಲ್ ಸ್ಟಾರ್ಟಿಂಗ್ ಚೆನ್ನಾಗಿತ್ತು ಬರ್ತಾ ಬರ್ತಾ ಹಾಳಾಗೋಯ್ತು ತುಂಬಾ ಬೋರ್ ಹೊಡೆಯುತ್ತೆ ದಯವಿಟ್ಟು ಸ್ಟಾಪ್ ಮಾಡ್ಬಿಡಿ ಸ್ಟೋರಿ ನೇ ಚೆನ್ನಾಗಿಲ್ಲ ಎಂದು ಚಂದು ಕಾಮೆಂಟ್ ಮಾಡಿದ್ದಾರೆ. ಶ್ರೀಗೌರಿ ಧಾರಾವಾಹಿಯನ್ನು ಮುಗಿಸಬಾರದಿತ್ತು ಎಂಬುದಾಗಿ ಕಾಮೆಂಟ್ ಮಾಡುತ್ತಿದ್ದಾರೆ.
ರಾಮಾಚಾರಿ ಧಾರಾವಾಹಿ
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.
ರಾಮಾಚಾರಿ ಧಾರಾವಾಹಿ ಪಾತ್ರವರ್ಗ
ಮೌನ ಗುಡ್ಡೆ ಮನೆ - ಚಾರು
ರಿತ್ವಿಕ್ ಕ್ರಪಾಕರ್ - ರಾಮಾಚಾರಿ
ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)
ಚಿ ಗುರುದತ್ - ಜಯಶಂಕರ್
ಶಂಕರ್ ಅಶ್ವಥ್ - ನಾರಾಯಣಾಚಾರಿ
ಐಶ್ವರ್ಯ ವಿನಯ್ - ವೈಶಾಖ
ಅಂಜಲಿ ಸುಧಾಕರ್ - ಜಾನಕಿ