ನಿಮ್ಮ ಪ್ರೀತಿಪಾತ್ರರ ಹೆಸರು R ಅಕ್ಷರದಿಂದ ಶುರುವಾಗುತ್ತಾ? ಹಾಗಾದ್ರೆ ಅವರ ವ್ಯಕ್ತಿತ್ವ ಹೇಗೆ ತಿಳಿದುಕೊಳ್ಳಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನಿಮ್ಮ ಪ್ರೀತಿಪಾತ್ರರ ಹೆಸರು R ಅಕ್ಷರದಿಂದ ಶುರುವಾಗುತ್ತಾ? ಹಾಗಾದ್ರೆ ಅವರ ವ್ಯಕ್ತಿತ್ವ ಹೇಗೆ ತಿಳಿದುಕೊಳ್ಳಿ

ನಿಮ್ಮ ಪ್ರೀತಿಪಾತ್ರರ ಹೆಸರು R ಅಕ್ಷರದಿಂದ ಶುರುವಾಗುತ್ತಾ? ಹಾಗಾದ್ರೆ ಅವರ ವ್ಯಕ್ತಿತ್ವ ಹೇಗೆ ತಿಳಿದುಕೊಳ್ಳಿ

R ಅಕ್ಷರದಿಂದ ಶುರುವಾಗುವ ಹೆಸರಿನವರ ಪ್ರೀತಿ, ವೈವಾಹಿಕ ಜೀವನ ಚೆನ್ನಾಗಿರುತ್ತದೆ. ಸಣ್ಣ ಪುಟ್ಟ ಮನಸ್ತಾಪಗಳಿದ್ದರೂ ಗಂಭೀರ ಸಮಸ್ಯೆಗಳಾಗುವುದಿಲ್ಲ, ಪ್ರತಿದಿನ ಹೊಸ ವಿಚಾರಗಳನ್ನು ಕಲಿಯಲು ಆಸಕ್ತಿಯುಳ್ಳವರು ಇವರು. ಇವರ ಇನ್ನಷ್ಟು ಗುಣಲಕ್ಷಣಗಳನ್ನು ತಿಳಿಯೋಣ.

ಆರ್‌ ಅಕ್ಷರದಿಂದ ಹೆಸರು ಶುರುವಾಗುವವರ  ವ್ಯಕ್ತಿತ್ವ
ಆರ್‌ ಅಕ್ಷರದಿಂದ ಹೆಸರು ಶುರುವಾಗುವವರ ವ್ಯಕ್ತಿತ್ವ (PC: pixabay)

ಜ್ಯೋತಿಷ್ಯಶಾಸ್ತ್ರದಲ್ಲಿ ಯಾರದ್ದೇ ಹೆಸರಿನ ಮೊದಲ ಅಕ್ಷರವನ್ನು ಆಧರಿಸಿ ಅವರ ವ್ಯಕ್ತಿತ್ವವನ್ನು ತಿಳಿಯಬಹುದು. ಇಂದು ನಾವು ಆರ್‌ ಹೆಸರಿನಿಂದ ಶುರುವಾಗುವ ಹೆಸರಿನವರ ಗುಣಲಕ್ಷಣ ಹೇಗಿದೆ ತಿಳಿಯೋಣ. 

R ಹೆಸರಿನವರು ಬಹಳ ಶಾಂತ ಸ್ವಭಾವದವರು. ಇವರು ಪ್ರಕೃತಿಯನ್ನು ಪ್ರೀತಿಸುತ್ತಾರೆ. ಏನೇ ನೋವಿದ್ದರೂ ಎಲ್ಲರೊಂದಿಗೆ ಸಂತೋಷವಾಗಿರಲು ಇಷ್ಟಪಡುತ್ತಾರೆ. ಅವರು ತುಂಬಾ ಪ್ರಾಮಾಣಿಕರು ಮತ್ತು ಸತ್ಯವನ್ನು ಮಾತನಾಡುತ್ತಾರೆ.  ಧಾರ್ಮಿಕ ವಿಚಾರಗಳ ಬಗ್ಗೆ ನಂಬಿಕೆ ಹೆಚ್ಚು. ಇತರರಿಗೆ ಸಹಾಯ ಮಾಡಲು ಸದಾ ಮುಂದಿರುತ್ತಾರೆ, ಕುಟುಂಬಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ತಮ್ಮಿಂದ ತಪ್ಪಾಗಿದೆ ಎಂದು ತಿಳಿದರೆ ಕ್ಷಮೆ ಕೇಳುತ್ತಾರೆ. ಇತರರನ್ನು ಗೌರವಿಸುವ ಗುಣ ಇವರದ್ದು, ಯಾವಾಗಲೂ ಕಷ್ಟಪಟ್ಟು ಕೆಲಸ ಮಾಡುತ್ತಾರೆ ಅದರಿಂದಲೇ ಅವರು ಯಶಸ್ಸು ಗಳಿಸುತ್ತಾರೆ. ಪ್ರತಿದಿನ ಹೊಸ ವಿಷಯಗಳನ್ನು ಕಲಿಯಲು ಆಸಕ್ತಿ ತೋರಿಸುತ್ತಾರೆ.

ಪ್ರೀತಿ ಮತ್ತು ವೈವಾಹಿಕ ಜೀವನ

R ಅಕ್ಷರವನ್ನು ಹೊಂದಿರುವ ಜನರು ಪ್ರೀತಿ ಮತ್ತು ವೈವಾಹಿಕ ಜೀವನಕ್ಕೆ ಬಂದಾಗ ಯಾವಾಗಲೂ ಉತ್ಸಾಹದಿಂದ ಪ್ರೀತಿಸುತ್ತಾರೆ. ಆದರೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವಲ್ಲಿ ನಾಚಿಕೆಪಡುತ್ತಾರೆ. ತಾವು ಪ್ರೀತಿಸಿದ ವ್ಯಕ್ತಿಯ ಬಗ್ಗೆ ಪೊಸೆಸಿವ್‌ ಇರುತ್ತಾರೆ. ವಿವಾಹಿತರ ವಿಷಯಕ್ಕೆ ಬಂದರೆ, ವೈವಾಹಿಕ ಜೀವನವು ಉತ್ತಮವಾಗಿರುತ್ತದೆ. ಆದರೂ ಸಣ್ಣ ಪುಟ್ಟ ಸಮಸ್ಯೆಗಳು ಇರಬಹುದು, ಅದರಿಂದ ಗಂಭೀರ ಸಮಸ್ಯೆಗಳಾಗುವುದಿಲ್ಲ. ಆರ್ ಅಕ್ಷರದವರು ತುಂಬಾ ರೊಮ್ಯಾಂಟಿಕ್ ಆಗಿರುತ್ತಾರೆ.

ಇನ್ನಿತರ ವಿಚಾರಗಳು

ಈ ಗುಂಪಿಗೆ ಸೇರಿದವರು ಸದಾ ಎನರ್ಜಿಟಿಕ್‌ ಆಗಿ ಇರುತ್ತಾರೆ. ಉತ್ತಮ ಸ್ವಭಾವ ಇವರಿಗಿರುತ್ತದೆ. ಸದಾ ಯಶಸ್ಸು ಇವರ ಬೆನ್ನ ಹಿಂದಿರುತ್ತದೆ. ಇತರರನ್ನು ಸುಲಭವಾಗಿ ಆಕರ್ಷಿಸುತ್ತಾರೆ. ಸ್ವಲ್ಪ ಮಟ್ಟಿಗೆ ಶಾರ್ಟ್‌ ಟೆಂಪರ್‌ ಆದರೂ, ಶಾಂತ ರೀತಿಯಲ್ಲಿ ವರ್ತಿಸುತ್ತಾರೆ.  ತಮಗೆ ಕೇಡು ಮಾಡಿದವರ ಬಗ್ಗೆ ಬಹಳ ಕೋಪವಿರುತ್ತದೆ . ಕೆಲವೊಂದು ವಿಚಾರಗಳಲ್ಲಿ ಬಹಳ ಬೇಗನೆ ದುಡುಕುತ್ತಾರೆ. ಇವರು ಡಾಕ್ಟರ್‌, ಟೀಚರ್‌, ಗ್ರಾಫಿಕ್‌ ಡಿಸೈನಿಂಗ್‌ ಕ್ಷೇತ್ರದಲ್ಲಿ ಉತ್ತಮ ಹೆಸರು ಮಾಡಬಲ್ಲರು.

ಇದನ್ನು ಹೊರತುಪಡಿಸಿ

  • ಸೃಜನಶೀಲರಾಗಿ ಮತ್ತು ಆಧ್ಯಾತ್ಮಿಕತೆಯ ಆಳವಾದ ಭಾವನೆಗಳನ್ನು ಹೊಂದಿದ್ದಾರೆ.
  • ಸಕಾರಾತ್ಮಕ ಆಶಾವಾದಿ ವ್ಯಕ್ತಿತ್ವವನ್ನು ಹೊಂದಿರುತ್ತಾರೆ.
  • ಸ್ವತಂತ್ರ, ಬಲವಾದ ಇಚ್ಛಾಶಕ್ತಿಯುಳ್ಳವರು
  • ಯಾವುದೇ ಕೆಲಸ ಕೊಟ್ಟರು ಜವಾಬ್ದಾರಿಯಿಂದ ಕೆಲಸ ಮಾಡುತ್ತಾರೆ.
  • ಏನೇ ಸಮಸ್ಯೆ ಬಂದರೂ ಧೈರ್ಯವಾಗಿ ಎದುರಿಸುತ್ತಾರೆ
  • ಇತರರನ್ನು ಆಕರ್ಷಿಸುವ ನೈಸರ್ಗಿಕ ವರ್ಚಸ್ಸು ಇವರಲ್ಲಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.