Sreeleela Birthday: ಇಂದು ಶ್ರೀಲೀಲಾ ಬರ್ತ್‌ಡೇ; ಜೂನಿಯರ್‌, ಗುಂಟೂರು ಕಾರಂ ಸೇರಿ ಕಿಸ್‌ ಚೆಲುವೆ ಬತ್ತಳಿಕೆಯಲ್ಲಿವೆ ಬರೋಬ್ಬರಿ 9 ಚಿತ್ರಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sreeleela Birthday: ಇಂದು ಶ್ರೀಲೀಲಾ ಬರ್ತ್‌ಡೇ; ಜೂನಿಯರ್‌, ಗುಂಟೂರು ಕಾರಂ ಸೇರಿ ಕಿಸ್‌ ಚೆಲುವೆ ಬತ್ತಳಿಕೆಯಲ್ಲಿವೆ ಬರೋಬ್ಬರಿ 9 ಚಿತ್ರಗಳು

Sreeleela Birthday: ಇಂದು ಶ್ರೀಲೀಲಾ ಬರ್ತ್‌ಡೇ; ಜೂನಿಯರ್‌, ಗುಂಟೂರು ಕಾರಂ ಸೇರಿ ಕಿಸ್‌ ಚೆಲುವೆ ಬತ್ತಳಿಕೆಯಲ್ಲಿವೆ ಬರೋಬ್ಬರಿ 9 ಚಿತ್ರಗಳು

ಡಾಕ್ಟರ್‌ ಓದುತ್ತಾ ಆಕ್ಟರ್‌ ಆಗಿರುವ ಕಿಸ್‌ ಬ್ಯೂಟಿ ಶ್ರೀಲೀಲಾ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಕನ್ನಡದಲ್ಲಿ ಸಿನಿ ಕೆರಿಯರ್‌ ಆರಂಭಿಸಿದ ಶ್ರೀಲೀಲಾಗೆ ಈಗ ತೆಲುಗಿನಲ್ಲಿ ಕೂಡಾ ಭಾರೀ ಬೇಡಿಕೆ ಇದೆ. 

ಶ್ರೀಲೀಲಾ ಕರಿಯರ್‌ ಆರಂಭಿಸಿದ್ದು ಕನ್ನಡದ 'ಕಿಸ್‌' ಸಿನಿಮಾ ಮೂಲಕ. ಎರಡನೇ ಸಿನಿಮಾ 'ಭರಾಟೆ' ನಂತರ ಶ್ರೀಲೀಲಾ 'ಪೆಳ್ಳಿ ಸಂದಡಿ' ಚಿತ್ರದ ಮೂಲಕ ತೆಲುಗಿಗೆ ಬಂದರು. 
icon

(1 / 10)

ಶ್ರೀಲೀಲಾ ಕರಿಯರ್‌ ಆರಂಭಿಸಿದ್ದು ಕನ್ನಡದ 'ಕಿಸ್‌' ಸಿನಿಮಾ ಮೂಲಕ. ಎರಡನೇ ಸಿನಿಮಾ 'ಭರಾಟೆ' ನಂತರ ಶ್ರೀಲೀಲಾ 'ಪೆಳ್ಳಿ ಸಂದಡಿ' ಚಿತ್ರದ ಮೂಲಕ ತೆಲುಗಿಗೆ ಬಂದರು. (PC: Sreeleela)

ಈ ಕ್ಯೂಟ್‌ ಹುಡುಗಿ ಈಗ ಕನ್ನಡಕ್ಕಿಂತ ತೆಲುಗಿನಲ್ಲೇ ಹೆಚ್ಚು ಬ್ಯುಸಿ ಆಗಿದ್ದಾರೆ. ಶ್ರೀಲೀಲಾ ಹುಟ್ಟುಹಬ್ಬದ ವಿಶೇಷವಾಗಿ ಇಂದು ಅವರು ಅಭಿನಯಿಸುತ್ತಿರುವ ಕೆಲವೊಂದು ಸಿನಿಮಾಗಳ ಫಸ್ಟ್‌ ಲುಕ್‌ ಬಿಡುಗಡೆ ಆಗಿವೆ. 
icon

(2 / 10)

ಬೋಯಪಾಟಿ ಶ್ರೀನು ನಿರ್ದೇಶನದಲ್ಲಿ ರಾಮ್‌ ಪೋತಿನೇನಿ ನಾಯಕನಾಗಿ ನಟಿಸುತ್ತಿರುವ ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ ಸೇರಿ 5 ಭಾಷೆಗಳಲ್ಲಿ ತಯಾರಾಗುತ್ತಿದೆ. 
icon

(3 / 10)

ಶ್ರೀಲೀಲಾ ಹುಟ್ಟುಹಬ್ಬದ ವಿಶೇಷವಾಗಿ ಬುಧವಾರ 'ಗುಂಟೂರು ಕಾರಂ' ಸಿನಿಮಾದ ಫಸ್ಟ್‌ ಲುಕ್‌ ರಿಲೀಸ್‌ ಮಾಡಲಾಗಿದೆ. ಈ ಚಿತ್ರದಲ್ಲಿ ಶ್ರೀಲೀಲಾ ಸಂಪ್ರದಾಯಸ್ಥ ಮನೆ ಹೆಣ್ಣು ಮಗಳ ಪಾತ್ರದಲ್ಲಿ ನಟಿಸುತ್ತಿದ್ದು ಮಹೇಶ್‌ ಬಾಬು ಜೊತೆ ರೊಮ್ಯಾನ್ಸ್‌ ಮಾಡಲಿದ್ದಾರೆ. 
icon

(4 / 10)

ಮಹೇಶ್‌ ಬಾಬುನಂಥ ಸ್ಟಾರ್‌ ನಟ ಮಾತ್ರವಲ್ಲದೆ ಅಲ್ಲು ಅರ್ಜುನ್‌ ಜೊತೆ ಸೇರಿ ಆಹಾ ಒಟಿಟಿಗಾಗಿ ಶ್ರೀಲೀಲಾ ಒಂದು ತೆಲುಗು ಪ್ರಾಜೆಕ್ಟ್‌ನಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಪೋಸ್ಟರ್‌ ಕೂಡಾ ವೈರಲ್‌ ಆಗುತ್ತಿದೆ. 
icon

(5 / 10)

ಇದರ ಜೊತೆಗೆ ವಕ್ಕಂತಂ ವಂಶಿ ಹಾಗೂ ನಿತಿನ್‌ ಕಾಂಬಿನೇಶನ್‌ನಲ್ಲಿ ತಯಾರಾಗುತ್ತಿರುವ ಸಿನಿಮಾ ತಂಡ ಕೂಡಾ ಬುಧವಾರ ಶ್ರೀಲೀಲಾ ಸ್ಟೈಲಿಷ್‌ ಲುಕ್‌ ಪೋಸ್ಟರ್‌ ರಿಲೀಸ್‌ ಮಾಡಿದೆ. 
icon

(6 / 10)

ಬಾಲಕೃಷ್ಣ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ 'ಭಗವಂತ ಕೇಸರಿ' ಸಿನಿಮಾದಲ್ಲಿ ಶ್ರೀಲೀಲಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಈ ವರ್ಷ ದಸರಾಗೆ ತೆರೆ ಕಾಣಲಿದೆ. 
icon

(7 / 10)

ಹರೀಶ್‌ ಶಂಕರ್‌ ನಿರ್ದೇಶನದಲ್ಲಿ ಪವನ್‌ ಕಲ್ಯಾಣ್‌ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 'ಉಸ್ತಾದ್‌ ಭಗತ್‌ ಸಿಂಗ್‌' ಸಿನಿಮಾದಲ್ಲಿ ಕೂಡಾ ಶ್ರೀಲೀಲಾ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರ ಪಾತ್ರ ಏನು ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. 
icon

(8 / 10)

ಕನ್ನಡದಲ್ಲಿ ಶ್ರೀಲೀಲಾ ಗಾಲಿ ಜನಾರ್ದನ ರೆಡ್ಡಿ ಪುತ್ರಿ ಕಿರೀಟಿ ರೆಡ್ಡಿ ನಟಿಸುತ್ತಿರುವ 'ಜೂನಿಯರ್‌' ಸಿನಿಮಾದಲ್ಲಿ ಕೂಡಾ ನಾಯಕಿಯಾಗಿದ್ದಾರೆ. ಒಟ್ಟಿನಲ್ಲಿ ಎರಡೂ ಭಾಷೆಗಳು ಸೇರಿ ಶ್ರೀಲೀಲಾ ಕೈಯ್ಯಲ್ಲಿ ಒಟ್ಟು 9 ಸಿನಿಮಾಗಳಿವೆ. 
icon

(9 / 10)

ಬರ್ತ್‌ಡೇ ಸಂಭ್ರಮದಲ್ಲಿರುವ ಚೆಲುವೆಗೆ ಟಾಲಿವುಡ್‌, ಸ್ಯಾಂಡಲ್‌ವುಡ್‌ ಮಂದಿ, ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಶ್ರೀಲೀಲಾ ಸದ್ಯಕ್ಕೆ ಎಂಬಿಬಿಎಸ್‌ ಮೂರನೇ ವರ್ಷ ವ್ಯಾಸಂಗ ಮಾಡುತ್ತಿದ್ದಾರೆ. ಒಂದು ಕಡೆ ಓದು ಮತ್ತೊಂದು ಕಡೆ ನಟನೆ ಎರಡನ್ನೂ ಸಮಾನವಾಗಿ ಬ್ಯಾಲೆನ್ಸ್‌ ಮಾಡುತ್ತಿದ್ದಾರೆ. 
icon

(10 / 10)

ಇತರ ಗ್ಯಾಲರಿಗಳು