Hyderabad Rain: ಹೈದರಾಬಾದ್‌ನಲ್ಲಿ ಭಾರಿ ಮಳೆ; ರಸ್ತೆಗಳು ಜಲಾವೃತ್ತ, ಗಲ್ಲಿಗಳಲ್ಲಿ ಹೊಳೆಯಂತೆ ಹರಿದ ನೀರು
ನೆರೆಯ ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ಭಾರಿ ಮಳೆಯಾಗುತ್ತಿದ್ದು, ರಸ್ತೆಗಳು ಜಲಾವೃತಗೊಂಡಿವೆ. ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ಜನ ಮನೆಯಿಂದ ಹೊರಬಾರದಂತೆ ಡಿಆರ್‌ಎಫ್ ಎಚ್ಚರಿಕೆ ನೀಡಿದೆ.
(1 / 9)
ಹೈದರಾಬಾದ್‌ನಲ್ಲಿ ವರುಣ ಅಬ್ಬರಿಸುತ್ತಿದ್ದು, ರಸ್ತೆಗಳು ಜಲಾವೃತಗೊಂಡಿವೆ. ಅವಳಿ ನಗರದ ಹಲವೆಡೆ ಭಾರಿ ಮಳೆಯಾಗುತ್ತಿದೆ.
(2 / 9)
ಹೈದರಾಬಾದ್‌ನ ಬೇಗಂಪೇಟೆ, ತಿರುಮಲಗಿರಿ, ಅಲ್ವಾಲ್, ಬೋಯಿನಪಲ್ಲಿ, ಜವಾಹರನಗರ, ಬೊಳ್ಳಾರಂ, ಮರೇಡುಪಲ್ಲಿ, ಚಿಲಕಲಗೂಡ, ತಾರ್ನಾಕ, ಲಾಲಾಪೇಟ್ ಸೇರಿದಂತೆ ಹಲವಡೆ ಭಾರಿ ಮಳೆಯಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಜನ ಜೀವನ ಅಸ್ತವ್ಯಸ್ತಗೊಂಡಿದೆ.
(3 / 9)
ತುರ್ತು ಪರಿಸ್ಥಿತಿಯ ಹೊರತು ಪಡಿಸಿ ಜನರು ಮನೆಯಿಂದ ಹೊರಗಡೆ ಬಾರದೆ ಹೈದರಾಬಾದ್ ಪಾಲಿಕೆ ಹಾಗೂ ಡಿಆರ್‌ಎಫ್ ಸೂಚಿಸಿದ್ದು, ಅನಗತ್ಯ ಪ್ರಯಾಣವನ್ನು ತಪ್ಪಿಸುವಂತೆಯೂ ಹೇಳಿದ್ದಾರೆ. ಪರಿಹಾರ ಕ್ರಮಗಳಿಗಾಗಿ - 040-21111111, 9000113667 ಸಂಖ್ಯೆಗೆ ಸಂಪರ್ಕಿಸಬಹುದು.
(4 / 9)
ಜುಬಿಲಿ ಹಿಲ್ಸ್, ಬಂಜಾರಾ ಹಿಲ್ಸ್, ಫಿಲಂಸಿಟಿ, ಹೈಟೆಕ್ ಸಿಟಿ, ಗಚ್ಚಿಬೌಲಿ, ಯೂಸಫ್‌ಗುಡ, ಅಮೀರಪೇಟ್, ವೆಂಕಟಗಿರಿ ಸೇರಿದಂತೆ ನಗರದ ಹಲವೆಡೆ ಮಳೆಯಾಗಿದೆ. ಧಾರಾಕಾರ ಮಳೆಯಿಂದಾಗಿ ಪಂಜಾಗುಟ್ಟ ನಿಮ್ಸ್, ಜುಬಿಲಿ ಹಿಲ್ಸ್ ಮತ್ತು ಬಂಜಾರಾ ಹಿಲ್ಸ್ ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ವಾಹನ ಸವಾರರು ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಸಂಚಾರ ಪೊಲೀಸರು ಸೂಚಿಸಿದ್ದಾರೆ.
(6 / 9)
ನಿನ್ನೆ (ಜುಲೈ 24, ಸೋಮವಾರ) ಹೈದರಾಬಾದ್‌ನಲ್ಲಿ ವರುಣ ಅಬ್ಬರಿಸುತ್ತಿದ್ದು, ಮಂಗಳವಾರ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೈದರಾಬಾದ್ ಹವಾಮಾನ ಕೇಂದ್ರದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
(7 / 9)
ಮುಂದಿನ ಮೂರು ದಿನಗಳ ಕಾಲ ತೆಲಂಗಾಣದಲ್ಲಿ ಭಾರಿ ಅಂದರೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. ಹಲವು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
(8 / 9)
ಗ್ರೇಟರ್ ಹೈದರಾಬಾದ್ ನಗರದಲ್ಲಿ ಭಾರಿ ಮಳೆಯ ಹಿನ್ನೆಲೆಯಲ್ಲಿ ಸೂಪರಿಂಟೆಂಡಿಂಗ್ ಎಂಜಿನಿಯರ್‌ಗಳು ಮತ್ತು ಮುಖ್ಯ ಜನರಲ್ ಮ್ಯಾನೇಜರ್‌ಗಳೊಂದಿಗೆ TSSPDCL ಸಿಎಂಡಿ ರಘುಮಾ ರೆಡ್ಡಿ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ವಿದ್ಯುತ್ ಸರಬರಾಜು ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ವಿದ್ಯುತ್ ಸಮಸ್ಯೆಗೆ ಪ್ರತ್ಯೇಕ ಕಂಟ್ರೋಲ್ ರೂಂ ತೆರೆಯಲಾಗಿದೆ. 1912, 100, 7382071574, 7382072106, 7382072104 ಗೆ ದೂರು ನೀಡಲು ಸೂಚಿಸಲಾಗಿದೆ.
(9 / 9)
ವಿದ್ಯುತ್ ತಂತಿ, ಕಂಬಗಳು ಮತ್ತು ಇತರ ವಿದ್ಯುತ್ ಉಪಕರಣಗಳ ಬಗ್ಗೆ ಜಾಗರೂಕರಾಗಿರಿ ಎಂದು ಸಿಎಂಡಿ ರಘುಮಾ ರೆಡ್ಡಿ ಸಲಹೆ ನೀಡಿದ್ದಾರೆ. ವಿದ್ಯುತ್ ಅಡಚಣೆಯ ದೂರುಗಳನ್ನು ನೋಂದಾಯಿಸಲು ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸುವ ಗ್ರಾಹಕರು ತಮ್ಮ ಬಿಲ್‌ನಲ್ಲಿ ಯುಎಸ್‌ಸಿ ಸಂಖ್ಯೆಯನ್ನು ಸಿದ್ಧವಾಗಿರಿಸಿಕೊಳ್ಳಬಹುದು. ರಸ್ತೆಯ ಮೇಲೆ ಅಥವಾ ನೀರಿನಲ್ಲಿ ಎಲ್ಲಿಯಾದರೂ ವಿದ್ಯುತ್ ತಂತಿ ಬಿದ್ದಿದ್ದರೆ, ಆ ತಂತಿಯನ್ನು ತುಳಿಯಬೇಡಿ ಅಥವಾ ಅದರ ಮೇಲೆ ಓಡಾಡಬೇಡಿ. ಎಲ್ಲಿಯಾದರೂ ತಂತಿಗಳು ತುಂಡಾಗಿ ಬಿದ್ದರೆ ತಕ್ಷಣ ಸಮೀಪದ ವಿದ್ಯುತ್ ಸಿಬ್ಬಂದಿ ಅಥವಾ ನಿಯಂತ್ರಣ ಕೊಠಡಿಗೆ ದೂರು ನೀಡಬೇಕು ಎಂದು ಹೇಳಿದ್ದಾರೆ.
ಇತರ ಗ್ಯಾಲರಿಗಳು