Most Ducks: 2024ರಲ್ಲಿ ಅತಿ ಹೆಚ್ಚು ಡಕೌಟ್ ಆದ ಟಾಪ್​-5 ಆಟಗಾರರು; ಭಾರತದ ಇಬ್ಬರಿಗೆ ಸ್ಥಾನ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Most Ducks: 2024ರಲ್ಲಿ ಅತಿ ಹೆಚ್ಚು ಡಕೌಟ್ ಆದ ಟಾಪ್​-5 ಆಟಗಾರರು; ಭಾರತದ ಇಬ್ಬರಿಗೆ ಸ್ಥಾನ

Most Ducks: 2024ರಲ್ಲಿ ಅತಿ ಹೆಚ್ಚು ಡಕೌಟ್ ಆದ ಟಾಪ್​-5 ಆಟಗಾರರು; ಭಾರತದ ಇಬ್ಬರಿಗೆ ಸ್ಥಾನ

  • Most Ducks in 2024: ಕೆಲವೇ ದಿನಗಳಲ್ಲಿ ನೂತನ ವರ್ಷಕ್ಕೆ ಕಾಲಿಡಲಿದ್ದೇವೆ. ಈ ಹಿನ್ನೆಲೆಯಲ್ಲಿ 2024ರ ಕ್ಯಾಲೆಂಡರ್​ ವರ್ಷದಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಆಟಗಾರರ ಪಟ್ಟಿಯಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎಂಬುದನ್ನು ತಿಳಿಯೋಣ.

ಜಿಂಬಾಬ್ವೆ ತಂಡದ ಬೌಲರ್​​ ಬ್ಲೆಸಿಂಗ್ ಮುಜರಬಾನಿ 2024 ರಲ್ಲಿ ಅತಿ ಹೆಚ್ಚು ಬಾರಿ ಡಕೌಟ್​ ಆಗಿರುವ ದಾಖಲೆಗೆ ಪಾತ್ರರಾಗಿದ್ದಾರೆ. ಈ ವರ್ಷ 32 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 9 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.
icon

(1 / 5)

ಜಿಂಬಾಬ್ವೆ ತಂಡದ ಬೌಲರ್​​ ಬ್ಲೆಸಿಂಗ್ ಮುಜರಬಾನಿ 2024 ರಲ್ಲಿ ಅತಿ ಹೆಚ್ಚು ಬಾರಿ ಡಕೌಟ್​ ಆಗಿರುವ ದಾಖಲೆಗೆ ಪಾತ್ರರಾಗಿದ್ದಾರೆ. ಈ ವರ್ಷ 32 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 9 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.(AFP)

2024ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಆಟಗಾರರ ಪಟ್ಟಿಯಲ್ಲಿ ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ 2ನೇ ಸ್ಥಾನದಲ್ಲಿದ್ದಾರೆ. ಈ ವರ್ಷ ಅವರು ಆಡಿರುವ 20 ಪಂದ್ಯಗಳಲ್ಲಿ 7 ಬಾರಿ ಡಕೌಟ್ ಆಗಿದ್ದಾರೆ. ಪ್ರಸಕ್ತ ವರ್ಷದಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಭಾರತೀಯನೂ ಹೌದು. ಭಾರತ ತಂಡ ಡಿಸೆಂಬರ್​ 26ರಂದು ಕೊನೆಯ ಟೆಸ್ಟ್​ ಪಂದ್ಯವಾಡಲಿದ್ದು, ಒಂದು ವೇಳೆ ಈ ಪಂದ್ಯದಲ್ಲೂ ಸೊನ್ನೆಗೆ ಔಟಾದರೆ, ಅದರ ಸಂಖ್ಯೆ ಏರಿಕೆಯಾಗಲಿದೆ.
icon

(2 / 5)

2024ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಆಟಗಾರರ ಪಟ್ಟಿಯಲ್ಲಿ ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ 2ನೇ ಸ್ಥಾನದಲ್ಲಿದ್ದಾರೆ. ಈ ವರ್ಷ ಅವರು ಆಡಿರುವ 20 ಪಂದ್ಯಗಳಲ್ಲಿ 7 ಬಾರಿ ಡಕೌಟ್ ಆಗಿದ್ದಾರೆ. ಪ್ರಸಕ್ತ ವರ್ಷದಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಭಾರತೀಯನೂ ಹೌದು. ಭಾರತ ತಂಡ ಡಿಸೆಂಬರ್​ 26ರಂದು ಕೊನೆಯ ಟೆಸ್ಟ್​ ಪಂದ್ಯವಾಡಲಿದ್ದು, ಒಂದು ವೇಳೆ ಈ ಪಂದ್ಯದಲ್ಲೂ ಸೊನ್ನೆಗೆ ಔಟಾದರೆ, ಅದರ ಸಂಖ್ಯೆ ಏರಿಕೆಯಾಗಲಿದೆ.(AP)

ಪಾಕಿಸ್ತಾನದ ಆರಂಭಿಕ ಬ್ಯಾಟ್ಸ್‌ಮನ್ ಅಬ್ದುಲ್ಲಾ ಶಫೀಕ್ 2024ರಲ್ಲಿ 15 ಪಂದ್ಯಗಳಲ್ಲಿ 7 ಬಾರಿ ಡಕೌಟ್​ ಆಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಸತತ ಮೂರು ಬಾರಿ ಶೂನ್ಯಕ್ಕೆ ಔಟಾದರು.
icon

(3 / 5)

ಪಾಕಿಸ್ತಾನದ ಆರಂಭಿಕ ಬ್ಯಾಟ್ಸ್‌ಮನ್ ಅಬ್ದುಲ್ಲಾ ಶಫೀಕ್ 2024ರಲ್ಲಿ 15 ಪಂದ್ಯಗಳಲ್ಲಿ 7 ಬಾರಿ ಡಕೌಟ್​ ಆಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಸತತ ಮೂರು ಬಾರಿ ಶೂನ್ಯಕ್ಕೆ ಔಟಾದರು.(AFP)

ಬಾಂಗ್ಲಾದೇಶದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಲಿತ್ತನ್ ದಾಸ್ ಈ ವರ್ಷ 35 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 6 ಬಾರಿ ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳಿದ್ದಾರೆ. ಇವರಲ್ಲದೆ, ಅಜ್ಮತುಲ್ಲಾ ಒಮರ್ಜಾಯ್, ರಿಚರ್ಡ್ ನಗವಾರ, ವಿಲ್ ಒ'ರೂರ್ಕ್, ಕುಶಾಲ್ ಭರ್ಟೆಲ್ ಮತ್ತು ಲುವ್ಸಾನ್‌ಜುಂಡುಯಿ ಎರ್ಡೆನ್‌ಬುಲ್ಗನ್ ತಲಾ 6 ಬಾರಿ ಡಕೌಟ್ ಆಗಿದ್ದಾರೆ.
icon

(4 / 5)

ಬಾಂಗ್ಲಾದೇಶದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಲಿತ್ತನ್ ದಾಸ್ ಈ ವರ್ಷ 35 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 6 ಬಾರಿ ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳಿದ್ದಾರೆ. ಇವರಲ್ಲದೆ, ಅಜ್ಮತುಲ್ಲಾ ಒಮರ್ಜಾಯ್, ರಿಚರ್ಡ್ ನಗವಾರ, ವಿಲ್ ಒ'ರೂರ್ಕ್, ಕುಶಾಲ್ ಭರ್ಟೆಲ್ ಮತ್ತು ಲುವ್ಸಾನ್‌ಜುಂಡುಯಿ ಎರ್ಡೆನ್‌ಬುಲ್ಗನ್ ತಲಾ 6 ಬಾರಿ ಡಕೌಟ್ ಆಗಿದ್ದಾರೆ.(ICC)

ಭಾರತದ ಬ್ಯಾಟರ್ ಸಂಜು ಸ್ಯಾಮ್ಸನ್ 2024ರಲ್ಲಿ 5 ಬಾರಿ ಶೂನ್ಯ ಸುತ್ತಿದ್ದಾರೆ. ಈ ವರ್ಷ ಅವರು 13 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 5 ಸಲ ಡಕೌಟ್ ಆಗಿದ್ದಾರೆ. ಸ್ಯಾಮ್ಸನ್ ಮಾತ್ರವಲ್ಲದೆ ಕೇಶವ್ ಮಹಾರಾಜ್, ಮೊಮಿನುಲ್ ಹಕ್, ಶಾಹೀನ್ ಅಫ್ರಿದಿ ಮತ್ತು ಟಿಮ್ ಸೌಥಿ ಸೇರಿದಂತೆ 17 ಆಟಗಾರರು ಈ ವರ್ಷ 5 ಬಾರಿ ಡಕೌಟ್​ ಆಗಿದ್ದಾರೆ.
icon

(5 / 5)

ಭಾರತದ ಬ್ಯಾಟರ್ ಸಂಜು ಸ್ಯಾಮ್ಸನ್ 2024ರಲ್ಲಿ 5 ಬಾರಿ ಶೂನ್ಯ ಸುತ್ತಿದ್ದಾರೆ. ಈ ವರ್ಷ ಅವರು 13 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 5 ಸಲ ಡಕೌಟ್ ಆಗಿದ್ದಾರೆ. ಸ್ಯಾಮ್ಸನ್ ಮಾತ್ರವಲ್ಲದೆ ಕೇಶವ್ ಮಹಾರಾಜ್, ಮೊಮಿನುಲ್ ಹಕ್, ಶಾಹೀನ್ ಅಫ್ರಿದಿ ಮತ್ತು ಟಿಮ್ ಸೌಥಿ ಸೇರಿದಂತೆ 17 ಆಟಗಾರರು ಈ ವರ್ಷ 5 ಬಾರಿ ಡಕೌಟ್​ ಆಗಿದ್ದಾರೆ.(AP)


ಇತರ ಗ್ಯಾಲರಿಗಳು