ಚೊಚ್ಚಲ ಏಕದಿನ ಶತಕ ಸಿಡಿಸಿದ ಹರ್ಲೀನ್ ಡಿಯೋಲ್; ಮಿಥಾಲಿ ರಾಜ್, ಅಂಜುಮ್ ಚೋಪ್ರಾ ಪಟ್ಟಿಗೆ ಸೇರ್ಪಡೆಯಾದ ಸುಂದರಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಚೊಚ್ಚಲ ಏಕದಿನ ಶತಕ ಸಿಡಿಸಿದ ಹರ್ಲೀನ್ ಡಿಯೋಲ್; ಮಿಥಾಲಿ ರಾಜ್, ಅಂಜುಮ್ ಚೋಪ್ರಾ ಪಟ್ಟಿಗೆ ಸೇರ್ಪಡೆಯಾದ ಸುಂದರಿ

ಚೊಚ್ಚಲ ಏಕದಿನ ಶತಕ ಸಿಡಿಸಿದ ಹರ್ಲೀನ್ ಡಿಯೋಲ್; ಮಿಥಾಲಿ ರಾಜ್, ಅಂಜುಮ್ ಚೋಪ್ರಾ ಪಟ್ಟಿಗೆ ಸೇರ್ಪಡೆಯಾದ ಸುಂದರಿ

Harleen Deol: ವೆಸ್ಟ್​ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದ ಟೀಮ್ ಇಂಡಿಯಾ ಆಟಗಾರ್ತಿ ಹರ್ಲೀನ್ ಡಿಯೋಲ್, ದಾಖಲೆ ಬರೆದಿದ್ದಾರೆ.

ಚೊಚ್ಚಲ ಏಕದಿನ ಶತಕ ಸಿಡಿಸಿದ ಹರ್ಲೀನ್ ಡಿಯೋಲ್; ಮಿಥಾಲಿ ರಾಜ್, ಅಂಜುಮ್ ಚೋಪ್ರಾ ಪಟ್ಟಿಗೆ ಸೇರ್ಪಡೆ
ಚೊಚ್ಚಲ ಏಕದಿನ ಶತಕ ಸಿಡಿಸಿದ ಹರ್ಲೀನ್ ಡಿಯೋಲ್; ಮಿಥಾಲಿ ರಾಜ್, ಅಂಜುಮ್ ಚೋಪ್ರಾ ಪಟ್ಟಿಗೆ ಸೇರ್ಪಡೆ

ವೆಸ್ಟ್​ ಇಂಡೀಸ್ ಮಹಿಳಾ ತಂಡದ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಮನಮೋಹಕ ಶತಕ ಸಿಡಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡ ಆಟಗಾರ್ತಿ ಹರ್ಲೀನ್ ಡಿಯೋಲ್ ವಿಶೇಷ ದಾಖಲೆ ಬರೆದಿದ್ದಾರೆ. ಇದು ಅವರ ಏಕದಿನ ವೃತ್ತಿಜೀವನದಲ್ಲಿ ಚೊಚ್ಚಲ ಸೆಂಚುರಿಯಾಗಿದೆ. 98 ಎಸೆತಗಳಲ್ಲಿ 13 ಬೌಂಡರಿಗಳ ಸಹಿತ ನೂರು ರನ್ ಪೂರೈಸಿದ ಹರ್ಲೀನ್​, ಭಾರತ ತಂಡವನ್ನು 300 ರನ್​ಗಳ ಗಡಿ ದಾಟಿಸುವಲ್ಲಿ ನೆರವಾದರು. ಒಟ್ಟಾರೆ 103 ಎಸೆತಗಳಲ್ಲಿ 16 ಬೌಂಡರಿಗಳ ಸಹಿತ 111.65 ಸ್ಟ್ರೈಕ್ ರೇಟ್‌ನಲ್ಲಿ 115 ರನ್ ಸಿಡಿಸಿ ಕ್ವಿಯಾನಾ ಜೋಸೆಫ್ ಬೌಲಿಂಗ್​ನಲ್ಲಿ ಔಟಾದರು.

115 ರನ್ ಹರ್ಲೀನ್ ಡಿಯೋಲ್ ಅವರ ವೃತ್ತಿಜೀವನದ ವೈಯಕ್ತಿಕ ಗರಿಷ್ಠ ಸ್ಕೋರ್​ ಆಗಿದೆ. ಇದಕ್ಕೂ ಮುನ್ನ 77 ರನ್ ಅವರ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿತ್ತು. ಅವರು ಒಟ್ಟಾರೆ ಏಕದಿನ ಕ್ರಿಕೆಟ್​​ನಲ್ಲಿ 15 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 436 ರನ್ ಸಿಡಿಸಿದ್ದಾರೆ. ಎರಡು ಅರ್ಧಶತಕ, 1 ಶತಕ ಅವರು ಸಿಡಿಸಿದ್ದಾರೆ. ಅವರು 2019ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ಪದಾರ್ಪಣೆ ಮಾಡಿದ್ದರು. ಇದೀಗ 6 ವರ್ಷಗಳ ನಂತರ ಮೊದಲ ಶತಕವನ್ನು ದಾಖಲಿಸಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹರ್ಲೀನ್ ಅವರು ಆರಂಭಿಕ ಆಟಗಾರ್ತಿ ಪ್ರತಿಕಾ ರಾವಲ್ ಜೊತೆ 62 ರನ್ (75 ಎಸೆತ), ಹರ್ಮನ್ ಪ್ರೀತ್​ ಕೌರ್ ಜೊತೆ 43 (41 ಎಸೆತ) ರನ್, ಜೆಮಿಮಾ ರೋಡ್ರಿಗಸ್ ಅವರೊಂದಿಗೆ 116 (71 ಎಸೆತ ರನ್​ಗಳ ಜೊತೆಯಾಟವಾಡಿದರು.

ಹರ್ಲೀನ್ ಡಿಯೋಲ್ ದಾಖಲೆ

ಹರ್ಲೀನ್ ಸಿಡಿಸಿದ ಶತಕ ಭಾರತೀಯ ದಿಗ್ಗಜರ ಪಟ್ಟಿಗೆ ಸೇರ್ಪಡೆ ಮಾಡಿತು. ಅಂಜುಮ್ ಚೋಪ್ರಾ, ಮಿಥಾಲಿ ರಾಜ್‌ ಅವರಂತಹ ಲೆಜೆಂಡರಿ ಆಟಗಾರರ ಪಟ್ಟಿಗೆ ಸೇರ್ಪಡೆಯಾದರು. ಮೂರನೇ ಕ್ರಮಾಂಕದಲ್ಲಿ ಸೆಂಚುರಿ ಸಿಡಿಸಿದ ಭಾರತದ ಐದನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆಕೆಯ ಸಾಧನೆಯು ಭಾರತೀಯ ಕ್ರಿಕೆಟ್‌ನಲ್ಲಿ ಮಹತ್ವದ ಬೆಳವಣಿಗೆಗೆ ಸಾಕ್ಷಿಯಾಯಿತು. ಆ ಮೂಲಕ ಮೂರನೇ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡರು. ಅಗತ್ಯ ಇದ್ದಾಗಲೆಲ್ಲಾ ಬೌಂಡರಿ, ಜವಾಬ್ದಾರಿಯುತ ಬ್ಯಾಟಿಂಗ್ ಮತ್ತು ರಕ್ಷಣಾತ್ಮಕ ಆಟದ ಮೂಲಕ ವಿಂಡೀಸ್​ ಬೌಲರ್​ಗಳನ್ನು ದಿಟ್ಟವಾಗಿ ಎದುರಿಸಿದರು.

ನಾಲ್ವರು 50+ ಸ್ಕೋರ್, ತಂಡದ ಮೊತ್ತ 358​​

ವಡೋದರಾದ ಕೊಟಂಬಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಅತ್ಯದ್ಭುತ ಪ್ರದರ್ಶನ ನೀಡಿತು. ಆರಂಭಿಕ ವಿಕೆಟ್​ಗೆ ಸ್ಮೃತಿ ಮಂಧಾನ ಮತ್ತು ಪ್ರತಿಕಾ ರಾವಲ್ ಶತಕದ (99 ಎಸೆತಗಳಲ್ಲಿ 110 ರನ್) ಜೊತೆಯಾಟವಾಡಿದರು. ಸ್ಮೃತಿ ಮಂಧಾನ ಸತತ 6ನೇ ಅರ್ಧಶತಕ ಸಿಡಿಸಿ ಔಟಾದರು. ಬಳಿಕ ಪ್ರತಿಕಾ ತನ್ನ 2ನೇ ಏಕದಿನ ಪಂದ್ಯದಲ್ಲೇ ಅರ್ಧಶತಕ (76) ಸಿಡಿಸಿ ಮಿಂಚಿದರು. ಹರ್ಲೀನ್ ಡಿಯೋಲ್ ಶತಕ ಬಾರಿಸಿದರೆ, ಕೊನೆಯಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿದ ಜೆಮಿಮಾ ರೋಡ್ರಿಗಸ್ 52 ರನ್ ಚಚ್ಚಿದರು. ಆ ಮೂಲಕ ಒಟ್ಟು ನಾಲ್ವರು 50 ಪ್ಲಸ್ ಸ್ಕೋರ್ ಮಾಡುವ ಮೂಲಕ ತಂಡದ ಮೊತ್ತವನ್ನು 358 ರನ್​ಗಳ ಬೃಹತ್ ಮೊತ್ತಕ್ಕೆ ಸೇರಿಸಲು ನೆರವಾದರು.

Whats_app_banner