ಪಿವಿ ಸಿಂಧು ಸಿಂಗಲ್ಲಾ, ಯಾರೊಂದಿಗಾದ್ರೂ ಡೇಟ್ ಮಾಡ್ತಿದ್ದಾರಾ? ಬ್ಯಾಡ್ಮಿಂಟನ್ ತಾರೆಯ ಉತ್ತರ ಹೀಗಿತ್ತು
PV Sindhu: ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಬಾಯ್ ಫ್ರೆಂಡ್ ಯಾರು? ಅವರು ಡೇಟ್ ಮಾಡುತ್ತಿದ್ದಾರಾ? ಕಮಿಟೆಡ್ ಅಥವಾ ಸಿಂಗಲ್?... ಹೀಗೆ ಫ್ಯಾನ್ಸ್ ತಲೆಯಲ್ಲಿ ಬಗೆಬಗೆಯ ಪ್ರಶ್ನೆಗಳಿವೆ. ಈ ಎಲ್ಲಾ ಪ್ರಶ್ನೆಗಳಿಗೆ ಖುದ್ದು ಸಿಂಧು ಅವರೇ ಉತ್ತರಿಸಿದ್ದಾರೆ.
ಎರಡು ಒಲಿಂಪಿಕ್ ಪದಕಗಳ ಜೊತೆಗೆ ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕಗಳನ್ನು ಗೆದ್ದಿರುವ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು (PV Sindhu) ಜಾಗತಿಕ ಕ್ರೀಡಾಲೋಕದ ಪರಿಚಿತ ಹೆಸರು. ವಿಶ್ವ ಚಾಂಪಿಯನ್‌ಶಿಪ್ ಚಿನ್ನ ಸೇರಿದಂತೆ ಭಾರತದ ಪರ ಹಲವಾರು ಪ್ರಶಸ್ತಿಗಳನ್ನು ಇವರು ಗೆದ್ದಿದ್ದಾರೆ. ಹೈದರಾಬಾದ್ ಮೂಲದ 28 ವರ್ಷ ವಯಸ್ಸಿನ ಆಟಗಾರ್ತಿಯ ಮುಂದಿನ ಗುರಿ 2024ರ ಪ್ಯಾರಿಸ್ ಒಲಿಂಪಿಕ್ಸ್. ಮಹತ್ವದ ಕ್ರೀಡಾಕೂಟಕ್ಕೂ ಮುಂಚಿತವಾಗಿ ಅವರು ಬ್ಯಾಡ್ಮಿಂಟನ್ ದಿಗ್ಗಜ ಪ್ರಕಾಶ್ ಪಡುಕೋಣೆ ಅವರನ್ನು ಮೆಂಟರ್ ಆಗಿ ಆಯ್ಕೆ ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಟಿಆರ್‌ಎಸ್ ಕ್ಲಿಪ್ಸ್ ಅಪ್‌ಲೋಡ್ ಮಾಡಿದ ಪೋಡ್‌ಕ್ಯಾಸ್ಟ್‌ನಲ್ಲಿ, ಪಿವಿ ಸಿಂಧು ಮಾತನಾಡಿದ್ದಾರೆ. ಬ್ಯಾಡ್ಮಿಂಟನ್ ಹೊರತಾಗಿ ತಮ್ಮ ವೈಯಕ್ತಿಕ ಬದುಕಿನ ಕುರಿತಾದ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಇದನ್ನೂ ಓದಿ | ಭಾರತ ತಂಡಕ್ಕೆ ಆಯ್ಕೆಯಾದ ಆರ್ಸಿಬಿ ಆಟಗಾರ್ತಿ ಶ್ರೇಯಾಂಕ ಪಾಟೀಲ್; ಲಂಗ ದಾವಣಿಯಲ್ಲಿ ಮಿಂಚಿದ ಕನ್ನಡತಿ
ಸಾಮಾನ್ಯವಾಗಿ ಪ್ರತಿ ಸೆಲಿಬ್ರಿಟಿಗಳ ವೈಯಕ್ತಿಕ ಬದುಕಿನ ಕುರಿತಾಗಿ ಅಭಿಮಾನಿಗಳಿಗೆ ಕುತೂಹಲ ಹೆಚ್ಚು. ಇದು ಸಿಂಧು ಅವರನ್ನೂ ಬಿಟ್ಟಿಲ್ಲ. ಸಿಂಧು ಬಾಯ್ ಫ್ರೆಂಡ್ ಯಾರು? ಅವರು ಡೇಟ್ ಮಾಡುತ್ತಿದ್ದಾರಾ? ಕಮಿಟೆಡ್ ಅಥವಾ ಸಿಂಗಲ್?... ಹೀಗೆ ಅವರ ಫ್ಯಾನ್ಸ್ ತಲೆಯಲ್ಲಿ ಬಗೆಬಗೆಯ ಪ್ರಶ್ನೆಗಳಿವೆ. ಈ ಎಲ್ಲಾ ಪ್ರಶ್ನೆಗಳಿಗೆ ಈ ಪಾಡ್‌ಕ್ಯಾಸ್ಟ್‌ನಲ್ಲಿ ಉತ್ತರ ಸಿಕ್ಕಿದೆ.
ನಾನು ಸಿಂಗಲ್
ರಿಲೇಶನ್‌ಶಿಪ್ ಸ್ಟೇಟಸ್ ಕುರಿತಾಗಿ ಕೇಳಿದ ಪ್ರಶ್ಮೆಗೆ ಉತ್ತರಿಸಿದ ಪಿವಿ ಸಿಂಧು, ತಾನು “ಸಿಂಗಲ್” ಎಂಬುದಾಗಿ ಉತ್ತರಿಸಿದ್ದಾರೆ. ಇದರರ್ಥ ಅವರಿನ್ನೂ ಪ್ರೀತಿಯ ಬಲೆಯಲ್ಲಿ ಬಿದ್ದಿಲ್ಲ ಎಂದು ಸ್ಪಷ್ಟವಾಯ್ತು. “ಸದ್ಯ ನನ್ನ ಮುಂದಿರುವುದು ಬ್ಯಾಡ್ಮಿಂಟನ್ ಮಾತ್ರ. ನನ್ನ ಅಂತಿಮ ಗುರಿ ಒಲಿಂಪಿಕ್ಸ್” ಎಂದು ಸಿಂಧು ಹೇಳಿದ್ದಾರೆ.
ಇದನ್ನೂ ಓದಿ | PKL 10: ಸೋನು ಸೂಪರ್ 10; ಯು ಮುಂಬಾ ಮಣಿಸಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಗುಜರಾತ್ ಜೈಂಟ್ಸ್
“ನೀವು ಜೊತೆಗಾರನನ್ನು ಬಯಸುತ್ತೀರಾ?” ಎಂಬ ಪ್ರಶ್ನೆಗೆ ಉತ್ತರಿಸಿದ ಸಿಂಧು, “ನಾನು ಅದರ ಬಗ್ಗೆ ಈವರೆಗೂ ಯೋಚಿಸಲಿಲ್ಲ. 'ಓಹ್, ಹೌದು. ನನಗೆ ಸಂಗಾತಿ ಬೇಕು. ಆದರೆ ಇದು ವಿಧಿ ಲಿಖಿತ, ಹಣೆಯಲ್ಲಿ ಏನು ಬರೆದಿದೆಯೋ ಅದೇ ಆಗುತ್ತೆ” (ಹಣೆಯ ಕಡೆಗೆ ತೋರಿಸತ್ತಾ) ಎಂದು ಬ್ಯಾಡ್ಮಿಂಟನ್ ಆಟಗಾರ್ತಿ ಹೇಳಿದ್ದಾರೆ.
ಯಾರೊಂದಿಗೂ ಡೇಟಿಂಗ್ ಮಾಡಿಲ್ಲ
“ನೀವು ಯಾರೊಂದಿಗಾದರೂ ಡೇಟ್ ಮಾಡಿದ್ದೀರಾ?” ಎಂದು ಮತ್ತೆ ಪಿವಿ ಸಿಂಧು ಮುಂದೆ ಪ್ರಶ್ನೆ ಬರುತ್ತದೆ. “ಇಲ್ಲ, ನಿಜಕ್ಕೂ ಮಾಡಿಲ್ಲ,” ಎಂದು ಉತ್ತರಿಸುತ್ತಾರೆ. ಈ ಬಗ್ಗೆ ಮತ್ತಷ್ಟು ಮಾತನಾಡಿದ ಅವರು, “ಇದರಲ್ಲಿ ಒಳ್ಳೆಯದು ಅಥವಾ ಕೆಟ್ಟದು ಏನೂ ಇಲ್ಲ. ಜೀವನ ಸಾಗುತ್ತಿರುತ್ತದೆ. ಏನಾದರೂ ಆಗಲೇಬೇಕು ಎಂದಿದ್ದರೆ, ಅದು ಸಂಭವಿಸುತ್ತದೆ,” ಎಂದು ಅವರು ಹೇಳಿದ್ದಾರೆ.