Indonesia Open: ಅಗ್ರ ಶ್ರೇಯಾಂಕಿತರ ಸೋಲಿಸಿ ಸೆಮೀಸ್‌ಗೆ ಲಗ್ಗೆ ಇಟ್ಟ ಸಾತ್ವಿಕ್, ಚಿರಾಗ್ ಜೋಡಿ; ಟೂರ್ನಿಯಿಂದ ಹೊರಬಿದ್ದ ಶ್ರೀಕಾಂತ್
Satwiksairaj Rankireddy and Chirag Shetty: ಅಗ್ರ ಶ್ರೇಯಾಂಕದ ಇಂಡೋನೇಷ್ಯಾ ಜೋಡಿಯನ್ನು ಸೋಲಿಸಿದ ಭಾರತದ ಸಾತ್ವಿಕ್ ಹಾಗೂ ಚಿರಾಗ್ ಜೋಡಿಯು ಇಂಡೋನೇಷ್ಯಾ ಓಪನ್‌ನಲ್ಲಿ ಪದಕದ ನಿರೀಕ್ಷೆ ಮೂಡಿಸಿದೆ.
ಇಂದು (ಶುಕ್ರವಾರ) ನಡೆದ ಇಂಡೋನೇಷ್ಯಾ ಓಪನ್ ವರ್ಲ್ಡ್ ಟೂರ್ (Indonesia Open World Tour Super 1000) ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ (India's Satwiksairaj Rankireddy) ಮತ್ತು ಚಿರಾಗ್ ಶೆಟ್ಟಿ (Chirag Shetty) ಜೋಡಿಯು ಸೆಮಿಫೈನಲ್‌ಗೆ ಲಗ್ಗೆ ಹಾಕಿದ್ದಾರೆ. ಅಗ್ರ ಶ್ರೇಯಾಂಕದ ಇಂಡೋನೇಷ್ಯಾ ಜೋಡಿಯಾದ ಫಜರ್ ಅಲ್ಫಿಯಾನ್ ಮತ್ತು ಮುಹಮ್ಮದ್ ರಿಯಾನ್ ಅರ್ಡಿಯಾಂಟೊ ಅವರನ್ನು ನೇರ ಸೆಟ್‌ಗಳಲ್ಲಿ ಸೋಲಿಸಿದ ಭಾರತದ ಜೋಡಿಯು, ಪದಕದ ನಿರೀಕ್ಷೆ ಮೂಡಿಸಿದೆ.
ಅತ್ತ ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ ಕಿಡಂಬಿ ಶ್ರೀಕಾಂತ್, ಕ್ವಾರ್ಟರ್‌ಫೈನಲ್‌ನಲ್ಲಿ ಚೀನಾದ ಲಿ ಶಿ ಫೆಂಗ್ ವಿರುದ್ಧ ಸೋತಿದ್ದಾರೆ. ಆ ಮೂಲಕ ಪುರುಷರ ಸಿಂಗಲ್ಸ್ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ. ಹೀಗಾಗಿ ಪದಕ ಗೆಲ್ಲುವ ನಿರೀಕ್ಷೆ ಮೂಡಿದ್ದ ಆಟಗಾರ ನಿರಾಶೆ ಮೂಡಿಸಿದ್ದಾರೆ.
ವಿಶ್ವದ 10ನೇ ಶ್ರೇಯಾಂಕದ ಫೆಂಗ್ ವಿರುದ್ಧ ಒಂದು ಗಂಟೆ ಒಂಬತ್ತು ನಿಮಿಷಗಳ ಕಾಲ ಹೋರಾಡಿದ ಶ್ರೀಕಾಂತ್, ಅಂತಿಮವಾಗಿ 14-21, 21-14 ಹಾಗೂ 12-21ರಿಂದ ಸೋತರು. ಮೊದಲ ಸೆಟ್‌ನಲ್ಲಿ ಸೋಲು ಕಂಡರೂ, ಎರಡನೇ ಸೆಟ್‌ನಲ್ಲಿ ಭಾರತದ ಆಟಗಾರನು ಪ್ರಬಲ ಪೈಪೋಟಿ ನೀಡಿ ಗೆದ್ದರು. ಆ ಬಳಿಕ ಮೂರನೇ ಸೆಟ್‌ನಲ್ಲಿ ಮತ್ತೆ ಸೋತು ಸೆಮೀಸ್ ಅವಕಾಶ ಕೈಚೆಲ್ಲಿದರು. ಈ ಗೆಲುವಿನ ಬಳಿಕ, ಶ್ರೀಕಾಂತ್ ವಿರುದ್ಧ ಚೀನಾದ ಫೆಂಗ್ ತಮ್ಮ ಹೆಡ್-ಟು-ಹೆಡ್ ದಾಖಲೆಯನ್ನು ಸರಿದೂಗಿಸಿದ್ದಾರೆ. ಉಭಯ ಆಟಗಾರರು 1-1 ಪಂದ್ಯಗಳನ್ನು ಗೆದ್ದಿದ್ದಾರೆ.
ಏಳನೇ ಶ್ರೇಯಾಂಕದ ಸಾತ್ವಿಕ್ ಮತ್ತು ಚಿರಾಗ್ ಜೋಡಿಯು ಯಾವುದೇ ತಪ್ಪುಗಳಾಗದಂತೆ ಆಟದಲ್ಲಿ ಎಚ್ಚರ ವಹಿಸಿದರು. ಆತಿಥೇಯ ಇಂಡೋನೇಷ್ಯಾದ ಅಲ್ಫಿಯಾನ್ ಮತ್ತು ಅಡ್ರಿಯಾಂಟೊ ಅವರನ್ನು ಕೇವಲ 41 ನಿಮಿಷಗಳಲ್ಲಿ 21-13 21-13 ಅಂತರದ ನೇರ ಸೆಟ್‌ಗಳಿಂದ ಸೋಲಿಸಿದರು. ಸಾತ್ವಿಕ್ ಮತ್ತು ಚಿರಾಗ್ ಜೋಡಿಯು ಸೆಮಿಫೈನಲ್‌ಗೆ ಲಗ್ಗೆ ಹಾಕಿದ್ದು, ಕೊರಿಯಾ ಅಥವಾ ಇಂಡೋನೇಷ್ಯಾ ಡಬಲ್ಸ್ ಜೋಡಿಯನ್ನು ಎದುರಿಸಲಿದ್ದಾರೆ.
2022ರಲ್ಲಿ ಕತಾರ್ನಲ್ಲಿ ನಡೆದ ಫಿಫಾ ವಿಶ್ವಕಪ್ (FIFA Football World Cup) ಸಂದರ್ಭದಲ್ಲಿ ಈ ಟೂರ್ನಿ ವೃತ್ತಿ ಜೀವನದ ಕೊನೆಯ ಪಂದ್ಯ ಹೇಳಿದ್ದ ಅರ್ಜೆಂಟೀನಾ ನಾಯಕ ಲಿಯೊನೆಲ್ ಮೆಸ್ಸಿ (Argentina Captain Lionel Messi), ಕಾಲ್ಚೆಂಡಿನ ಸಮರದಲ್ಲಿ ಅರ್ಜೆಂಟೀನಾ ಗೆದ್ದು ಬೀಗುತ್ತಿದ್ದಂತೆ ನಿವೃತ್ತಿಯ ನಿರ್ಧಾರದಿಂದ ಹಿಂದೆ ಸರಿದಿದ್ದರು. ಈಗ ಮತ್ತೊಮ್ಮೆ ಕೋಟ್ಯಂತರ ಫುಟ್ಬಾಲ್ ಪ್ರೇಮಿಗಳಿಗೆ ಆಘಾತಕಾರಿ ಸುದ್ದಿ ನೀಡಿದ್ದಾರೆ. ಆ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಪ್ರಸಕ್ತ ಋತುವಿನಲ್ಲಿ ಕೇವಲ ಎರಡು ಸ್ಪರ್ಧೆಗಳಲ್ಲಿ ಮಾತ್ರ ಸ್ಪರ್ಧಿಸಿರುವ ಹಿಮಾ ದಾಸ್, ಮಂಡಿರಜ್ಜು ಗಾಯದಿಂದ ಗುಣಮುಖರಾಗಿಲ್ಲ. ಹೀಗಾಗಿ ಈ ವರ್ಷ ಚೀನಾದಲ್ಲಿ ನಡೆಯಲಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಅವರು ಪಾಲ್ಗೊಳ್ಳುತ್ತಿಲ್ಲ ಎಂದು ಭಾರತದ ಅಥ್ಲೆಟಿಕ್ಸ್ ಮುಖ್ಯ ಕೋಚ್ ರಾಧಾಕೃಷ್ಣನ್ ನಾಯರ್ ಬುಧವಾರ ಹೇಳಿದ್ದಾರೆ. ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ