ಬೆಂಗಳೂರು ಬುಲ್ಸ್​ಗೆ ಸತತ 4ನೇ ಸೋಲು; ಖಾತೆಯೇ ತೆರೆಯದ ಗೂಳಿಗಳಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ
ಕನ್ನಡ ಸುದ್ದಿ  /  ಕ್ರೀಡೆ  /  ಬೆಂಗಳೂರು ಬುಲ್ಸ್​ಗೆ ಸತತ 4ನೇ ಸೋಲು; ಖಾತೆಯೇ ತೆರೆಯದ ಗೂಳಿಗಳಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ

ಬೆಂಗಳೂರು ಬುಲ್ಸ್​ಗೆ ಸತತ 4ನೇ ಸೋಲು; ಖಾತೆಯೇ ತೆರೆಯದ ಗೂಳಿಗಳಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ

Pro Kabaddi League 11: ಪ್ರೊ ಕಬಡ್ಡಿ ಲೀಗ್​ನಲ್ಲಿ ಅಕ್ಟೋಬರ್ 25ರ ಶುಕ್ರವಾರ ನಡೆದ ಎರಡು ಪಂದ್ಯಗಳಲ್ಲಿ ಬೆಂಗಳೂರು ಬುಲ್ಸ್, ತಮಿಳ್ ತಲೈವಾಸ್ ವಿರುದ್ಧ ಕ್ರಮವಾಗಿ ಪುಣೇರಿ ಪಲ್ಟನ್, ಪಾಟ್ನಾ ಪೈರೆಟ್ಸ್ ಗೆಲುವು ಸಾಧಿಸಿದೆ.

ಬೆಂಗಳೂರು ಬುಲ್ಸ್​ಗೆ ಸತತ 4ನೇ ಸೋಲು; ಖಾತೆಯೇ ತೆರೆಯದ ಗೂಳಿಗಳಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ
ಬೆಂಗಳೂರು ಬುಲ್ಸ್​ಗೆ ಸತತ 4ನೇ ಸೋಲು; ಖಾತೆಯೇ ತೆರೆಯದ ಗೂಳಿಗಳಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ

ಪ್ರೊ ಕಬಡ್ಡಿ ಲೀಗ್ ಸೀಸನ್​ 11ರಲ್ಲಿ ತೆಲುಗು ಟೈಟಾನ್ಸ್, ಗುಜರಾತ್ ಜೈಂಟ್ಸ್, ಯುಪಿ ಯೋಧಾಸ್ ವಿರುದ್ಧ ಮುಗ್ಗರಿಸಿದ್ದ ಬೆಂಗಳೂರು ಬುಲ್ಸ್, ಬೆಂಗಳೂರು ಬುಲ್ಸ್ ಇದೀಗ 4ನೇ ಸೋಲು ಕಂಡಿದೆ. ಇಂದು (ಅಕ್ಟೋಬರ್ 25) ನಡೆದ ಪಂದ್ಯದಲ್ಲಿ ಪುಣೇರಿ ಪಲ್ಟನ್ ವಿರುದ್ಧ 22-36 ಅಂಕಗಳ ಅಂತರದಲ್ಲಿ ಹೀನಾಯ ಪರಾಭವಗೊಂಡಿದೆ. ಸತತ ನಾಲ್ಕು ಸೋಲುಗಳೊಂದಿಗೆ ಬುಲ್ಸ್ ತಂಡವು ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನ ಪಡೆದುಕೊಂಡಿದೆ. ಪ್ರಮುಖ ಆಟಗಾರರ ದಂಡೇ ಇದ್ದರೂ ಬ್ಯಾಕ್ ಟು ಬ್ಯಾಕ್ ಸೋಲು ಕಾಣುತ್ತಿರುವುದು ಅಚ್ಚರಿ ಮೂಡಿಸಿದೆ.

ಮತ್ತೊಂದು ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ ಪಾಟ್ನಾ ಪೈರೆಟ್ಸ್ ತಂಡವು 42-40 ಅಂಕಗಳ ಅಂತರದಲ್ಲಿ ಜಯ ಸಾಧಿಸಿದೆ. ಪಾಟ್ನಾ ಆಡಿರುವ ಎರಡು ಪಂದ್ಯಗಳಲ್ಲಿ 1 ಗೆಲುವು, 1 ಸೋಲು ಕಂಡಿದ್ದು, ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಆದರೆ ತಮಿಳ್ ತಲೈವಾಸ್ ಸೋತರೂ ಮೂರನೇ ಸ್ಥಾನದಲ್ಲಿದೆ. ಅಂದರೆ ಆಡಿದ 3 ಪಂದ್ಯಗಳಲ್ಲಿ 2ರಲ್ಲಿ ಗೆದ್ದು 11 ಅಂಕ ಪಡೆದಿದೆ. ಬೆಂಗಳೂರು ಬುಲ್ಸ್ ಎದುರು ಅಮೋಘ ಜಯ ಸಾಧಿಸಿದ ಪುಣೇರಿ ಪಲ್ಟನ್ಸ್, 16 ಅಂಕ ಪಡೆದು ಅಗ್ರಸ್ಥಾನದಲ್ಲಿದೆ. ಯುಪಿ ಯೋಧಾಸ್ 11 ಅಂಕ ಪಡೆದು ಎರಡನೇ ಸ್ಥಾನದಲ್ಲಿದೆ.

ತಂಡಗಳುಪಂದ್ಯಗೆಲುವುಸೋಲುಅಂಕ
 ಪುಣೇರಿ ಪಲ್ಟನ್
43116
ಯುಪಿ ಯೋಧಾಸ್
32111
 ತಮಿಳು ತಲೈವಾಸ್
32111
 ಜೈಪುರ ಪಿಂಕ್ ಪ್ಯಾಂಥರ್ಸ್
32110
 ದಬಾಂಗ್ ಡೆಲ್ಲಿ
2116
 ಬೆಂಗಾಲ್ ವಾರಿಯರ್ಸ್
2116
 ಗುಜರಾತ್ ಜೈಂಟ್ಸ್
2116
 ಹರಿಯಾಣ ಸ್ಟೀಲರ್ಸ್
2115
 ಯು ಮುಂಬಾ
2115
 ಪಾಟ್ನಾ ಪೈರೇಟ್ಸ್
2115
 ತೆಲುಗು ಟೈಟಾನ್ಸ್
3125
 ಬೆಂಗಳೂರು ಬುಲ್ಸ್
404 


 

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.