ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮೊದಲ ಚಿನ್ನ; ಶೂಟಿಂಗ್‌ನಲ್ಲಿ ಕೊರಿಯಾ ಮಣಿಸಿ ಪದಕ ಬೇಟೆ ಆರಂಭಿಸಿದ ಚೀನಾ
Paris Olympics 2024: 10 ಮೀಟರ್ ಏರ್ ರೈಫಲ್ ಮಿಶ್ರ ತಂಡ ವಿಭಾಗದ ಫೈನಲ್‌ನಲ್ಲಿ ಚೀನಾ, ರಿಪಬ್ಲಿಕ್ ಆಫ್ ಕೊರಿಯಾವನ್ನು ಸೋಲಿಸುವ ಮೂಲಕ ಜುಲೈ 27ರ ಶನಿಚಾರ ಪ್ಯಾರಿಸ್ ಒಲಿಂಪಿಕ್ಸ್-2024ರಲ್ಲಿ ಮೊದಲ ಚಿನ್ನದ ಪದಕ ಗೆದ್ದುಕೊಂಡಿತು.
2024ರ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮೊದಲ ಚಿನ್ನ ಪದಕ ಜಯಿಸಿ ಶುಭಾರಂಭ ಮಾಡಿದೆ. ಆ ಮೂಲಕ ಚಿನ್ನದ ಖಾತೆ ತೆರೆದ ಮೊದಲ ದೇಶವಾಗಿ ಹೊರ ಹೊಮ್ಮಿದೆ. ಯುಟಿಂಗ್ ಹುವಾಂಗ್ ಮತ್ತು ಲಿಹಾವೊ ಶೆಂಗ್ ಜೋಡಿಯು 10 ಮೀಟರ್ ಏರ್ ರೈಫಲ್ ಮಿಶ್ರ ತಂಡದ ವಿಭಾಗದಲ್ಲಿ ರಿಪಬ್ಲಿಕ್ ಆಫ್ ಕೊರಿಯಾವನ್ನು ಮಣಿಸಿ 33ನೇ ಆವೃತ್ತಿಯ ಒಲಿಂಪಿಕ್ಸ್‌ನ ಮೊದಲ ಚಿನ್ನದ ಪದಕ ಗೆದ್ದುಕೊಂಡಿತು.
ಜುಲೈ 27ರ ಶನಿವಾರ ನಡೆದ ಚಿನ್ನದ ಪದಕದ ಪಂದ್ಯದಲ್ಲಿ ಚೀನಾದ ಜೋಡಿಯು 16-12 ರಿಂದ ರಿಪಬ್ಲಿಕ್ ಆಫ್ ಕೊರಿಯಾ ಕೆಯುಮ್ ಜಿಹ್-ಯೆಯೋನ್ ಮತ್ತು ಪಾರ್ಕ್ ಹಾಜುನ್ ಅವರನ್ನು ಚಟೌರೊಕ್ಸ್ ಶೂಟಿಂಗ್ ಸೆಂಟರ್‌ನಲ್ಲಿ ಸೋಲಿಸಿತು. ಅರ್ಹತಾ ಸುತ್ತಿನ ಮೊದಲೆರಡು ಸ್ಥಾನಗಳಲ್ಲಿ ಚೀನಾ ಮತ್ತು ಕೊರಿಯಾ ಕೊನೆಗೊಳಿಸಿದ್ದವು. ಟೊಕಿಯೊ ಒಲಿಂಪಿಕ್ಸ್ನಲ್ಲೂ ಈ ವಿಭಾಗದಲ್ಲಿ ಚೀನಾವೇ ಚಿನ್ನ ಗೆದ್ದಿತ್ತು.
ಈವೆಂಟ್ನಲ್ಲಿ ಚೀನಾ ಮೊದಲ ಚಿನ್ನಕ್ಕೆ ಮುತ್ತಿಕ್ಕಿದ್ದರೂ, ಕ್ರೀಡಾಕೂಟದಲ್ಲಿ ಪದಕದ ಖಾತೆ ತೆರೆದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಕಜಕಿಸ್ತಾನ್ ಪಾತ್ರವಾಗಿದೆ. ಮಿಶ್ರ 10 ಮೀ ರೈಫಲ್ ಜೋಡಿ ಅಲೆಕ್ಸಾಂಡ್ರೆ ಲೆ ಮತ್ತು ಇಸ್ಲಾಂ ಸತ್ಪಯೇವ್ ಪ್ಯಾರಿಸ್ 2024ರ ಮೊದಲ ಪದಕಕ್ಕೆ ಮುತ್ತಿಕ್ಕಿತು. 1996ರ ನಂತರ ಶೂಟಿಂಗ್‌ನಲ್ಲಿ ಕಜಕಿಸ್ತಾನದ ಮೊದಲ ಒಲಿಂಪಿಕ್ ಪದಕ ಇದಾಗಿದೆ.
ಮೊದಲ ಬೆಳ್ಳಿ ಗೆದ್ದ ರಿಪಬ್ಲಿಕ್ ಆಫ್ ಕೊರಿಯಾ
ಈವೆಂಟ್ನಲ್ಲಿ ಮೊದಲ ಬೆಳ್ಳಿ ಗೆದ್ದ ಹೆಗ್ಗಳಿಕೆಗೆ ರಿಪಬ್ಲಿಕ್ ಆಫ್ ಕೊರಿಯಾ ಪಾತ್ರವಾಗಿದೆ. ಫೈನಲ್‌ನಲ್ಲಿ ಚೀನಾ ಎದುರು ಆರಂಭದಲ್ಲಿ ಮುನ್ನಡೆ ಪಡೆದರೂ ನಂತರ ಹಿನ್ನಡೆ ಸಾಧಿಸಿದ ಕೊರಿಯಾ, ಅಂತಿಮ ಹಂತದವರೆಗೂ ಹೋರಾಟ ನಡೆಸಿತು. ಆದರೆ, ಚೀನಾ ಸೋಲಿಸಲು ಸಾಧ್ಯವಾಗಲಿಲ್ಲ. ಇದರೊಂದಿಗೆ ಎರಡನೇ ಸ್ಥಾನಕ್ಕೆ ತೃಪ್ತಿಯಾಯಿತು.
10 ಮೀಟರ್ ಏರ್ ರೈಫಲ್ ಮಿಶ್ರ ತಂಡ ಅರ್ಹತಾ ಸುತ್ತಿನಲ್ಲೂ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಯುಟಿಂಗ್ ಹುವಾಂಗ್ ಮತ್ತು ಲಿಹಾವೊ ಶೆಂಗ್ ಈ ಸ್ಪರ್ಧೆಯಲ್ಲಿ ಅಗ್ರಸ್ಥಾನದಲ್ಲಿದ್ದರು.. ಚೀನಾದ ಜೋಡಿ 632.2 ಟಾಪ್ ಸ್ಕೋರ್ ಗಳಿಸಿ ಚಿನ್ನದ ಪದಕಕ್ಕೆ ಮುನ್ನಡೆಯಿತು. ದಕ್ಷಿಣ ಕೊರಿಯಾದ ಯುಮ್ ಜಿಹ್-ಯೆಯೋನ್ ಮತ್ತು ಪಾರ್ಕ್ ಹಾಜುನ್ 631.4 ಸ್ಕೋರ್‌ನೊಂದಿಗೆ 2ನೇ ಸ್ಥಾನ ಪಡೆದರು.
6ನೇ ಸ್ಥಾನ ಪಡೆದ ಭಾರತ
ಭಾರತದ 10 ಮೀಟರ್ ಏರ್ ರೈಫಲ್ ಮಿಶ್ರ ತಂಡದ ಜೋಡಿಗಳಾದ ರಮಿತಾ ಜಿಂದಾಲ್-ಅರ್ಜುನ್ ಬಾಬುಟಾ ಮತ್ತು ಸಂದೀಪ್ ಸಿಂಗ್-ಎಲವೆನಿಲ್ ವಲರಿವನ್ ಶನಿವಾರ ಚಟೌರೊಕ್ಸ್ ಶೂಟಿಂಗ್ ರೇಂಜ್‌ನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಪದಕ ಸುತ್ತಿಗೆ ಪ್ರವೇಶಿಸಲು ವಿಫಲರಾದರು. ಕ್ರಮವಾಗಿ ಆರು ಮತ್ತು 12ನೇ ಸ್ಥಾನ ಪಡೆಯಲಷ್ಟೇ ಶಕ್ತವಾಯಿತು.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ಯಾರಿಸ್ ಒಲಿಂಪಿಕ್ಸ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ