Gill and Sara: ಸಾರಾ ಅಲಿ ಖಾನ್ ಜೊತೆ ಶುಭ್ಮನ್ ಗಿಲ್ ಬ್ರೇಕಪ್; ಇನ್​ಸ್ಟಾಗ್ರಾಂನಲ್ಲಿ ನಟಿಯನ್ನು ಅನ್​ಫಾಲೋ ಮಾಡಿದ ಕ್ರಿಕೆಟಿಗ​
ಕನ್ನಡ ಸುದ್ದಿ  /  ಕ್ರೀಡೆ  /  Gill And Sara: ಸಾರಾ ಅಲಿ ಖಾನ್ ಜೊತೆ ಶುಭ್ಮನ್ ಗಿಲ್ ಬ್ರೇಕಪ್; ಇನ್​ಸ್ಟಾಗ್ರಾಂನಲ್ಲಿ ನಟಿಯನ್ನು ಅನ್​ಫಾಲೋ ಮಾಡಿದ ಕ್ರಿಕೆಟಿಗ​

Gill and Sara: ಸಾರಾ ಅಲಿ ಖಾನ್ ಜೊತೆ ಶುಭ್ಮನ್ ಗಿಲ್ ಬ್ರೇಕಪ್; ಇನ್​ಸ್ಟಾಗ್ರಾಂನಲ್ಲಿ ನಟಿಯನ್ನು ಅನ್​ಫಾಲೋ ಮಾಡಿದ ಕ್ರಿಕೆಟಿಗ​

ಕ್ರಿಕೆಟ್ ಹೊರತಾಗಿಯೂ ಪ್ರೀತಿ ಪ್ರೇಮ ವಿಷಯದಲ್ಲೂ ಈ ಯಂಗ್​ ಸೆನ್​ಸೇಷನ್ ಶುಭ್ಮನ್​​ ಹೆಸರು ಜಾಲತಾಣದಲ್ಲಿ ಆಗಾಗ್ಗೆ ಟ್ರೆಂಡ್​​ ಆಗುತ್ತಲೇ ಇರುತ್ತದೆ. ಇತ್ತೀಚೆಗೆ ಗಿಲ್ ಅವರು ಸಾರಾ ಅಲಿ ಖಾನ್ (Sara Ali Khan) ಜೊತೆ ಡೇಟಿಂಗ್​ ಮಾಡುತ್ತಿದ್ದಾರೆ ಎಂದು ವರದಿಯಾಗಿತ್ತು. ಪ್ರಸ್ತುತ ಗಿಲ್ ಮತ್ತು ಸಾರಾ ನಡುವೆ​ ಬ್ರೇಕ್​ ಆಪ್​ ಆಗಿದೆ ಎಂಬ ವದಂತಿ ಎದ್ದಿದೆ.

ಶುಭ್​ಮನ್ ಗಿಲ್​ ಮತ್ತು ಸಾರಾ ಅಲಿ ಖಾನ್​
ಶುಭ್​ಮನ್ ಗಿಲ್​ ಮತ್ತು ಸಾರಾ ಅಲಿ ಖಾನ್​

ಟೀಮ್​ ಇಂಡಿಯಾದ ಮತ್ತು ಗುಜರಾತ್ ಟೈಟಾನ್ಸ್​ ತಂಡದ ಆರಂಭಿಕ ಆಟಗಾರ ಶುಭ್ಮನ್​ ಗಿಲ್ (Shubman Gill)​​, ಪ್ರಸಕ್ತ ಆವೃತ್ತಿ ಐಪಿಎಲ್​​​​​ನಲ್ಲಿ (IPL 2023) ಬೊಂಬಾಟ್​ ಪ್ರದರ್ಶನ ನೀಡುತ್ತಿದ್ದಾರೆ. ಐಪಿಎಲ್​ನಲ್ಲಿ ಆರೆಂಜ್​ ಕ್ಯಾಪ್​ ಕೂಡ ಪಡೆದಿದ್ದಾರೆ. ಕೆಲವೊಮ್ಮೆ ಗಿಲ್​​ ಹೆಸರು ಮುನ್ನಲೆಗೆ ಬಂದರೆ ಕ್ರಿಕೆಟ್​ ಜೊತೆಗೆ ಅವರ ಪ್ರೇಮ ಪ್ರಕರಣಗಳೂ ಕೇಳಿ ಬರುತ್ತವೆ. ತಮ್ಮ ವೈಯಕ್ತಿಕ ಜೀವನದಿಂದಲೂ ಗಿಲ್​ ಸದಾ ಸುದ್ದಿಯಲ್ಲಿರುತ್ತಾರೆ ಎಂಬುದು ವಿಶೇಷ.

ಕ್ರಿಕೆಟ್ ಹೊರತಾಗಿಯೂ ಪ್ರೀತಿ ಪ್ರೇಮ ವಿಷಯದಲ್ಲೂ ಈ ಯಂಗ್​ ಸೆನ್​ಸೇಷನ್ ಶುಭ್ಮನ್​​ ಹೆಸರು ಜಾಲತಾಣದಲ್ಲಿ ಆಗಾಗ್ಗೆ ಟ್ರೆಂಡ್​​ ಆಗುತ್ತಲೇ ಇರುತ್ತದೆ. ಇತ್ತೀಚೆಗೆ ಗಿಲ್ ಅವರು ಸಾರಾ ಅಲಿ ಖಾನ್ (Sara Ali Khan) ಜೊತೆ ಡೇಟಿಂಗ್​ ಮಾಡುತ್ತಿದ್ದಾರೆ ಎಂದು ವರದಿಯಾಗಿತ್ತು. ಪ್ರಸ್ತುತ ಗಿಲ್ ಮತ್ತು ಸಾರಾ ನಡುವೆ​ ಬ್ರೇಕ್​ ಆಪ್​ ಆಗಿದೆ ಎಂಬ ವದಂತಿ ಎದ್ದಿದೆ.

ಸಾರಾ ಅಲಿ ಖಾನ್​ ಅವರೊಂದಿಗಿನ ಡೇಟಿಂಗ್​ ಬಹಿರಂಗಕ್ಕೂ ಮುನ್ನ ಬ್ಯಾಟಿಂಗ್​ ದಿಗ್ಗಜ ಸಚಿನ್​ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್​ (Sara Tendulkar) ಜೊತೆಗೆ ಶುಭ್ಮನ್​ ಡೇಟ್​ ಮಾಡುತ್ತಿದ್ದಾರೆ ಎಂಬ ಚರ್ಚೆ ಶುರುವಾಗಿತ್ತು. ಕಾರ್ಯಕ್ರಮವೊಂದರಲ್ಲಿ ಸಾರಾ ಅಲಿ ಖಾನ್​ ಹೆಸರು ಹೇಳುವ ಮೂಲಕ ಊಹಾಪೋಹ ಸುದ್ದಿಗಳಿಗೆ ಪುಷ್ಠಿ ನೀಡಿದ್ದರು. ಅಂದಿನಿಂದ ಬಾಲಿವುಡ್​ ನಟಿ ಜೊತೆ ಯಂಗ್ ಕ್ರಿಕೆಟರ್​ ಡೇಟಿಂಗ್​ ಮಾಡುತ್ತಿದ್ದಾರೆಂಬ ಗುಸುಗುಸು ಕೇಳಲಾರಂಭಿಸಿತ್ತು.

ಈ ವರ್ಷದ ಆರಂಭದಲ್ಲಿ ದುಬೈನಲ್ಲಿ ರೊಮ್ಯಾಂಟಿಕ್ ಡಿನ್ನರ್ ಮಾಡುವಾಗ ಈ ಜೋಡಿ, ಮಾಧ್ಯಮಗಳ ಕಣ್ಣಿಗೆ ಬಿದ್ದಿತ್ತು. ಅಲ್ಲದೆ, ವಿಮಾನದಲ್ಲಿ ಒಟ್ಟಿಗೆ ಪ್ರಯಾಣಿಸುತ್ತಿದ್ದಾಗ ಡೇಟಿಂಗ್ ನಡೆಸುತ್ತಿದ್ದರು ಎಂಬುದು ಮಾಧ್ಯಮಗಳ ಅನುಮಾನಗಳಿಗೆ ಪುಷ್ಠಿ ನೀಡಿತ್ತು. ಆದರೆ, ಇತ್ತೀಚೆಗೆ ಇಬ್ಬರೂ ಬೇರ್ಪಟ್ಟಿದ್ದಾರೆ ಎಂದು ಸುದ್ದಿಯಾಗಿದೆ. ಇನ್​ಸ್ಟಾಗ್ರಾಂನಲ್ಲಿ ಒಬ್ಬರನೊಬ್ಬರು ಅನ್‌ಫಾಲೋ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಹಲವು ಬಾರಿ ಮಾಧ್ಯಮದವರು ಈ ವಿಚಾರವಾಗಿ ಇಬ್ಬರನ್ನೂ ಪ್ರಶ್ನಿಸಿದಾಗ, ಡೇಟಿಂಗ್ ಮಾಡುತ್ತಿದ್ದೇವೆ ಎಂದು ನೇರವಾಗಿ ಹೇಳುವ ಮೂಲಕ ಸ್ಪಷಪಡಿಸಿದ್ದರು. ಆದರೆ, ಇತ್ತೀಚೆಗೆ ಇಬ್ಬರೂ ಬೇರ್ಪಟ್ಟಿದ್ದಾರೆ. ಸೋಶಿಯಲ್ ಮೀಡಿಯಾವಾದ ಇನ್​ಸ್ಟಾಗ್ರಾಂನಲ್ಲಿ ಇಬ್ಬರೂ ಒಬ್ಬರನ್ನೊಬ್ಬರನ್ನು ಅನ್ ಫಾಲೋ ಮಾಡಿರುವುದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಈ ಬೆನ್ನಲ್ಲೇ ಬ್ರೇಕ್​ ಅಪ್​ ಆಗಿದೆ ಎಂಬ ಸುದ್ದಿ ಟ್ರೆಂಡಿಂಗ್​ ಆಗುತ್ತಿದೆ.

ಸದ್ಯ ಈ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಇಬ್ಬರು ಬೇರ್ಪಡಲು ಕಾರಣ ಏನೆಂದು ಅಭಿಮಾನಿಗಳು ಕಾರಣ ಹುಡುಕುತ್ತಿದ್ದಾರೆ. ಈ ಕ್ರಮದಲ್ಲಿ ಗಿಲ್​ಗೆ ಸಂಬಂಧಿಸಿದ ಹಳೆಯ ವಿಡಿಯೋವೊಂದು ಸದ್ಯ ವೈರಲ್ ಆಗುತ್ತಿದೆ. ಗಿಲ್ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಬಾಲಿವುಡ್‌ನ ಫಿಟೆಸ್ಟ್ ಮಹಿಳಾ ನಟಿಯನ್ನು ಹೆಸರಿಸಲು ನಿರೂಪಕಿ ಕೇಳಿದರು. ಅದಕ್ಕೆ ಉತ್ತರಿಸಿದ ಗಿಲ್​, ಸಾರಾ ಅಲಿ ಖಾನ್ ಎಂದಿದ್ದರು.

ಆಗ ನಿರೂಪಕಿ, ನೀವು ಸಾರಾ ಜೊತೆ ಡೇಟಿಂಗ್ ಮಾಡುತ್ತಿದ್ದೀರಾ ಎಂದು ಕೇಳಿದರು. ಇದಕ್ಕೆ ಮತ್ತೆ ಪ್ರತಿಕ್ರಿಯಿಸಿದ ಗಿಲ್​, ‘ಇರಬಹುದು’ ಎಂದು ಉತ್ತರಿಸಿದರು. ಇದೀಗ ಆ ವಿಡಿಯೋ ವೈರಲ್ ಆಗುತ್ತಿದೆ.

ಬರ್ತ್​ಡೇ ಪೋಸ್ಟ್​​ನಲ್ಲೂ ಸಾರಾ ಹೆಸರು

ಕಳೆದ ವರ್ಷ ಶುಭ್​ಮನ್ ತಮ್ಮ 23ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಅವರ ಜನ್ಮದಿನದ ಸಂದರ್ಭದಲ್ಲಿ ಆತನ ಆಪ್ತ ಸ್ನೇಹಿತ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ಈ ವದಂತಿಗಳಿಗೆ ಮತ್ತಷ್ಟು ಪುಷ್ಠಿ ನೀಡಿದ್ದರು. ಸ್ನೇಹಿತ ಖುಷ್‌ಪ್ರೀತ್, ​ ಗಿಲ್ ಬ್ಯಾಟ್ಸ್‌ಮನ್‌ನೊಂದಿಗೆ ಬೀಚ್ ಸೈಡ್ ಚಿತ್ರ ಹಂಚಿಕೊಂಡಿದ್ದರು.

ಈ ಚಿತ್ರವನ್ನು ಹಂಚಿಕೊಂಡ ಖುಷ್‌ಪ್ರೀತ್, ‘ಜನ್ಮದಿನದ ಶುಭಾಶಯಗಳು ನನ್ನ ವಿಶೇಷ ವ್ಯಕ್ತಿ. ದಿ OG, ನಿಜ ಹೇಳಬೇಕೆಂದರೆ ನೀನಿಲ್ಲದ ನನ್ನ ಜೀವನವು ಶೂನ್ಯ. ದೇವರು ನಿಮಗೆ ಹೆಚ್ಚಿನ ಸಕ್ಸಸ್​ ಕೊಡಲಿ ನೀಡಲಿ ಎಂದು ಬರೆದುಕೊಂಡಿದ್ದರು. ಇದರ ಜೊತೆ ಖುಷ್‌ಪ್ರೀತ್, ‘ಸಾರಾ‘ ಎಂದು ಬರೆದಿರುವುದು ಸಿಕ್ಕಾಪಟ್ಟೆ ಚರ್ಚೆಗೂ ಕಾರಣವಾಗಿತ್ತು.

Whats_app_banner