ಕನ್ನಡ ಸುದ್ದಿ  /  Sports  /  Cricket News Anushka Sharma Reveals How She Saved Husband Virat Kohli S Number On Her Phone Video Viral Team India Prs

Virat Kohli-Anushka: ವಿರಾಟ್ ಕೊಹ್ಲಿ ಹೆಸರನ್ನು ತನ್ನ ಮೊಬೈಲ್​​ನಲ್ಲಿ ಅನುಷ್ಕಾ ಏನೆಂದು ಸೇವ್​ ಮಾಡಿದ್ದಾರಂತೆ ಗೊತ್ತಾ; ವಿಡಿಯೋ ವೈರಲ್​

Virat Kohli-Anushka Sharma: ಬೆಂಗಳೂರಿನಲ್ಲಿ ಪೂಮಾ ಆಯೋಜಿಸಿದ್ದ 'ಲೆಟ್ ದೇರ್ ಬಿ ಸ್ಪೋರ್ಟ್' ಎಂಬ ಕಾರ್ಯಕ್ರಮದಲ್ಲಿ ಅನುಷ್ಕಾ ಶರ್ಮಾ, ತನ್ನ ಮೊಬೈಲ್​ನಲ್ಲಿ ವಿರಾಟ್​ ಕೊಹ್ಲಿ ಹೆಸರನ್ನು ಏನೆಂದು ಸೇವ್​​ ಮಾಡಿಕೊಂಡಿದ್ದಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಅನುಷ್ಕಾ ಶರ್ಮಾ ಮತ್ತು ವಿರಾಟ್​ ಕೊಹ್ಲಿ
ಅನುಷ್ಕಾ ಶರ್ಮಾ ಮತ್ತು ವಿರಾಟ್​ ಕೊಹ್ಲಿ

ಜುಲೈ 12ರಿಂದ ಶುರುವಾಗುವ ವೆಸ್ಟ್​ ಇಂಡೀಸ್ (West Indies)​ ಪ್ರವಾಸಕ್ಕೆ ಭಾರತ ತಂಡ (Team India) ಪ್ರಕಟವಾಗಿದೆ. ಏಕದಿನ ಮತ್ತು ಟೆಸ್ಟ್​ ಸರಣಿಗೆ (ODI and Test) ತಂಡವು ಘೋಷಣೆಯಾಗಿದೆ. ಕೆಲವು ಹಿರಿಯ ಆಟಗಾರರನ್ನು ತಂಡದಿಂದ ಹೊರಗಿಡಲಾಗಿದೆ. ಹಾಗೆಯೇ ಯುವ ಆಟಗಾರರಿಗೂ ಮಣೆ ಹಾಕಲಾಗಿದೆ. ಈ ಪ್ರವಾಸಕ್ಕೆ ವಿಶ್ರಾಂತಿ ಪಡೆಯಲಿದ್ದಾರೆ ಎನ್ನಲಾಗಿದ್ದ ವಿರಾಟ್ ಕೊಹ್ಲಿ (Virat Kohli), ರೋಹಿತ್​ ಶರ್ಮಾಗೆ (Rohit Sharma) ಅವಕಾಶ ನೀಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಫೆಬ್ರವರಿಯಿಂದ ಜೂನ್​ 11ರವರೆಗೂ ನಿರಂತವಾಗಿ ಕ್ರಿಕೆಟ್​​ ಸೇವೆಯಲ್ಲಿ ತೊಡಗಿದ ಟೀಮ್​ ಇಂಡಿಯಾ ಆಟಗಾರರು, ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಜುಲೈ 12ರಿಂದ ಕೆರಿಬಿಯನ್ನರ ನಾಡಲ್ಲಿ ಮೂರು ಮಾದರಿಯ ಸರಣಿಗಳಲ್ಲೂ ಬ್ಯುಸಿಯಾಗಲಿದೆ. ಪ್ರಸ್ತುತ ಆಟಗಾರರು, ರಜೆಯ ಮಜಾ ಎಂಜಾಯ್​ ಮಾಡುತ್ತಿದ್ದಾರೆ. ಡಬ್ಲ್ಯುಟಿಸಿ ಫೈನಲ್ (WTC Final 2023)​ ಬಳಿಕವೂ​ ವಿರಾಟ್​ ಕೊಹ್ಲಿ ಈಗ ಲಂಡನ್​ನಿಂದ ನೆದರ್​ಲೆಂಡ್​ಗೆ ಮರಳಿದ್ದಾರೆ.

ನೆದರ್​ಲೆಂಡ್​ಗೆ ತೆರಳಿದ ಕೊಹ್ಲಿ ದಂಪತಿ

ಪತ್ನಿ ಅನುಷ್ಕಾ ಶರ್ಮಾ (Anushka Sharma) ಜೊತೆ ಲಂಡನ್​​ನಲ್ಲಿ ಬೀಡು ಬಿಟ್ಟಿದ್ದ ವೇಳೆ ವಿರಾಟ್​ ಕೊಹ್ಲಿ, ಭಜನಾ ಕಾರ್ಯಕ್ರಮಕ್ಕೆ ತೆರಳಿದ್ದರು. ಇದೀಗ ನೆದರ್​ಲೆಂಡ್​ಗೆ ತೆರಳಿದ್ದು, ರಜೆಯ ದಿನಗಳನ್ನು ಸಖತ್ ಎಂಜಾಯ್​ ಮಾಡುತ್ತಿದ್ದಾರೆ. ವಿಶ್ವಾದ್ಯಂತ ಅಪಾರ ಅಭಿಮಾನಿ ಬಳಗ ಹೊಂದಿರುವ ಈ ಜೋಡಿಗೆ ಸಂಬಂಧಿಸಿ ಏನೇ ವಿಷಯ ಹೊರ ಬಂದರೂ ಗಾಳಿಯಂತೆ ವೇಗವಾಗಿ ವೈರಲ್​ ಆಗುತ್ತದೆ.

ಟೀಮ್​ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ಪತ್ನಿ ಹಾಗೂ ಬಾಲಿವುಡ್ ನಟಿಯೂ ಆಗಿರುವ ಅನುಷ್ಕಾ ಶರ್ಮಾ ಅವರಿಗೆ ಸಂಬಂಧಿಸಿದ ಮತ್ತೊಂದು ವಿಷಯ ಈಗ ಭಾರಿ ಸುದ್ದಿಯಲ್ಲಿದೆ. 16ನೇ ಆವೃತ್ತಿಯ ಐಪಿಎಲ್​ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಿ ಭರ್ಜರಿ ಸುತ್ತಾಟ ನಡೆಸಿದ್ದ ಈ ಜೋಡಿ, ಸಂದರ್ಶನವೊಂದರಲ್ಲಿ ನೀಡಿದ್ದ ಹೇಳಿಕೆಯೊಂದು ಸಖತ್​ ಟ್ರೆಂಡ್​ ಆಗುತ್ತಿದೆ.

ಬೆಂಗಳೂರಿನಲ್ಲಿ ಪೂಮಾ ಇಂಡಿಯಾ ಆಯೋಜಿಸಿದ್ದ 'ಲೆಟ್ ದೇರ್ ಬಿ ಸ್ಪೋರ್ಟ್' (Let There be Sport) ಎಂಬ ಕಾರ್ಯಕ್ರಮದಲ್ಲಿ ಅನುಷ್ಕಾ ಶರ್ಮಾ, ತನ್ನ ಮೊಬೈಲ್​ನಲ್ಲಿ ವಿರಾಟ್​ ಕೊಹ್ಲಿ ಹೆಸರನ್ನು ಏನೆಂದು ಸೇವ್​​ ಮಾಡಿಕೊಂಡಿದ್ದಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಕೊಹ್ಲಿ ಹೆಸರನ್ನು ಏನೆಂದು ಸೇವ್​ ಮಾಡಿಕೊಂಡಿದ್ದೀರಾ ಎಂಬ ಪ್ರಶ್ನೆ, ಅನುಷ್ಕಾಗೆ ಎದುರಾಯಿತು. ಇದಕ್ಕೆ ಅನುಷ್ಕಾ ನಕ್ಕಳು.

ಇದಕ್ಕೆ ನಗುತ್ತಾ ತಮಾಷೆಯಾಗಿ ಉತ್ತರಿಸಿದ ಅನುಷ್ಕಾ, 'ಪತಿ ಪರಮೇಶ್ವರ್' (Pati Parmeshwar) ಎಂದು ಸೇವ್​ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. ಮಾತು ಮುಂದುವರೆಸಿದ ಓಜಿ ಎಂದು ನಗುತ್ತಾ ಹೇಳಿದರು. ಬಳಿಕ ವಿರಾಟ್ ಕೊಹ್ಲಿಗೂ ಇದೇ ಪ್ರಶ್ನೆ ಎದುರಾಗಿದ್ದು, ಅದಕ್ಕೆ ಉತ್ತರವಾಗಿ 'ಡಾರ್ಲಿಂಗ್'(Darling) ಎಂದು ಸೇವ್​ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. ನೆಟ್ಟಿಗರು ಈ ಉತ್ತರಗಳನ್ನು ಕೇಳಿ ಆಶ್ಚರ್ಯಚಕಿತಗೊಂಡಿದ್ದಾರೆ. ಎಷ್ಟು ಮುದ್ದು ಜೋಡಿ ಅಲ್ವಾ ಎಂದು ಪ್ರತಿಕ್ರಿಯಿಸುತ್ತಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಅನುಷ್ಕಾ ಶರ್ಮಾ ನಟಿಸಿದ್ದ ತಮ್ಮ 2ನೇ ಚಿತ್ರ 'ಬ್ಯಾಂಡ್ ಬಾಜಾ ಬಾರಾತ್' ಚಿತ್ರದ ಡೈಲಾಗ್​ ಹೇಳುವ ಮೂಲಕ ಗಮನ ಸೆಳೆದರು. ಇನ್ನು ಕಿಂಗ್ ಕೊಹ್ಲಿ, ರಣವೀರ್ ಸಿಂಗ್ (Ranveer Singh) ಶೈಲಿಯಲ್ಲಿ ಉತ್ತರಿಸುವ ಮೂಲಕ ಎಲ್ಲರಿಗೂ ಶಾಕ್​ ನೀಡಿದರು. ವಿಕೆಟ್ ಪಡೆಯುವ ಬೌಲರ್​ಗಿಂತಲೂ ಕೊಹ್ಲಿಯೇ ಹೆಚ್ಚು ಮೈದಾನದಲ್ಲಿ ಅಗ್ರೆಸ್ಸಿವ್​ ಆಗಿ ಸೆಲೆಬ್ರೇಟ್​ ಮಾಡುತ್ತಾರೆ ಎಂದು ಹೇಳುವ ಮೂಲಕ ಅನುಷ್ಕಾ ಕಾಲೆಳೆದಿದ್ದಾರೆ. ಆಗ ನನಗೆ ನಾಚಿಕೆಯಾಗುತ್ತದೆ. ಬನ್ನಿ ಕುಳಿತುಕೊಳ್ಳಿ ಎಂದು ಹೇಳಿದ್ದು, ತುಂಬಾ ಮಜವಾಗಿತ್ತು.

ಸಂಬಂಧಿತ ಲೇಖನ