Mitchell Strac Catch: ಆ್ಯಷಸ್ ಟೆಸ್ಟ್‌ನಲ್ಲಿ ಮಿಚೆಲ್ ಸ್ಟಾರ್ಕ್ ಕ್ಯಾಚ್; ಔಟ್ ಅಥವಾ ನಾಟೌಟ್, ವಿಡಿಯೋ ನೋಡಿ ನೀವೇ ಡಿಸೈಡ್ ಮಾಡಿ
ಆ್ಯಷಸ್ ಟೆಸ್ಟ್ ಸರಣಿಯ 2ನೇ ಪಂದ್ಯ ಕುತೂಹಲಕಾರಿ ಘಟನೆಗಳಿಗೆ ಸಾಕ್ಷಿಯಾಗಿದ್ದು, ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಹಿಡಿದ ಕ್ಯಾಚ್ ಭಾರಿ ವಿವಾದಕ್ಕೀಡಾಗಿದೆ. ಆಸೀಸ್‌ನ ಮಾಜಿ ಕ್ರಿಕೆಟರ್‌ಗಳ ಸ್ಟಾರ್ಕ್ ಕ್ಯಾಚ್ ಸಮರ್ಥಿಸಿಕೊಂಡಿದ್ದಾರೆ.
ಲಾರ್ಡ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ (England) ವಿರುದ್ಧದ ಆ್ಯಷಸ್ (Ashes Test) ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ (Australia) ವೇಗಿ ಮಿಚೆಲ್ ಸ್ಟಾರ್ಕ್ (Mitchell Starc) ಹಿಡಿದ ಕ್ಯಾಚ್‌ವೊಂದು ಭಾರಿ ವಿವಾದಕ್ಕೆ ಕಾರಣವಾಗಿದೆ.
ಎರಡನೇ ಇನ್ನಿಂಗ್ಸ್‌ನಲ್ಲಿ 371 ರನ್‌ಗಳ ಗುರಿಯೊಂದಿಗೆ ಕಣಕ್ಕಿಳಿದಿರುವ ಇಂಗ್ಲೆಂಡ್ ಪರ ಆಟಗಾರ ಬೆನ್ ಡಕೆಟ್ ಅವರ ಕ್ಯಾಚ್ ಚರ್ಚೆಗೆ ಗ್ರಾಸವಾಗಿದ್ದಾರೆ. ಸ್ಟಾರ್ಕ್ ಹಿಡಿದ ಕ್ಯಾಚ್ ಅದ್ಧುತವಾಗಿತ್ತು ಅಂತ ಹೇಳಲಾಗುತ್ತಿದ್ದರೂ ಇದು ಔಟ್ ಅಥವಾ ನಾಟೌಟ್ ಎಂಬ ಬಗ್ಗೆ ಬಿಸಿ ಬಿಸಿ ಚರ್ಚೆಯಾಗ್ತಿದೆ.
ಆನ್‌ಫೀಲ್ಡ್ ಅಂಪೈರ್ ಸ್ಟಾರ್ಕ್ ಹಿಡಿದ ಕ್ಯಾಚ್‌ಅನ್ನು ಔಟ್ ಅಂತ ಘೋಷಿಸಿದ್ರು. ಆದರೆ ಮೂರನೇ ಅಂಪೈರ್ ಫೀಲ್ಡ್ ಅಂಪೈರ್ ನಿರ್ಧಾರವನ್ನು ಕ್ಯಾನ್ಸಲ್ ಮಾಡಿ ನಾಟೌಟ್ ಅಂತ ಕೊಟ್ಟಿದ್ದಾರೆ. ಈ ನಿರ್ಧಾರ ಮೈದಾನದಲ್ಲಿ ಕೆಲವು ನಿಮಿಷಗಳ ಕಾಲ ಆತಂಕಕ್ಕೆ ಕಾರಣವಾಗಿತ್ತು. ಆಟಗಾರರು ಪ್ರತಿಭಟಿಸಿದ್ರೆ, ಆಸೀಸ್‌ನ ಮಾಜಿ ಆಟಗಾರರು ತೀವ್ರ ಟೀಕಿಸಿದ್ದಾರೆ. ಆ್ಯಷಸ್ ಸರಣಿಯಲ್ಲಿ ಆಸ್ಟ್ರೇಲಿಯಾದ ಆಟಗಾರರ ಕ್ಯಾಚ್ ಮನವಿಗಳು ಹೆಚ್ಚು ವಿವಾದಾತ್ಮಕವಾಗಿರುವುದೇ ಇದೇ ಪ್ರಮುಖ ಕಾರಣವಾಗಿದೆ.
ಆಸ್ಟ್ರೇಲಿಯಾ ನೀಡಿರುವ 371 ರನ್‌ಗಳ ಗುರಿ ಬೆನ್ನಟ್ಟಿರುವ ಇಂಗ್ಲೆಂಡ್ ಮೂರನೇ ಓವರ್‌ನ ಮೊದಲ ಎಸೆತದಲ್ಲೇ ಆರಂಭಿಕ ಆಘಾತ ಅನುವಿಸಿದೆ. ಪ್ರಸ್ತುತ 31 ಓವರ್‌ಗಳಲ್ಲಿ 114 ರನ್ ಗಳಿಸಿ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡಿದೆ. ಬೆನ್ ಡಕೆಟ್ ಮತ್ತು ಬೆನ್ ಸ್ಟೋಕ್ಸ್ ತಂಡಕ್ಕೆ ಆಶ್ರಯವಾಗಿ ನಿಂತಿದ್ದಾರೆ.
ಆದರೆ ಕ್ಯಾಮರೂನ್ ಬೌಲಿಂಗ್ ವೇಳೆ ಎಸೆದ ಬೌನ್ಸರ್ ಅನ್ನು ಡಕೆಟ್ ಹಿಂದಕ್ಕೆ ಅಟ್ಟಿದ್ದರು. ಆದರೆ ಬೌಂಡರಿ ಲೈನ್ ಬಳಿ ಇದ್ದ ಸ್ಟಾರ್ಕ್ ಅದನ್ನು ಅದ್ಭುತವಾಗಿ ಕ್ಯಾಚ್ ಹಿಡಿದರು. ಅಂಪೈರ್ ಔಟ್ ಅಂತ ಕೊಟ್ಟರು. ಡಕೆಟ್ ಪೆವಿಲಿಯನ್‌ನತ್ತ ಸಾಗುತ್ತಿದ್ದಂತೆ ಮೂರನೇ ಅಂಪೈರ್ ಅದನ್ನು ನಾಟೌಟ್ ಎಂದು ತೀರ್ಪು ನೀಡಿದ್ದಾರೆ.
ವಿಕೆಟ್ ಪಡೆದ ಸಂಭ್ರಮದಲ್ಲಿದ್ದ ಆಸೀಸ್ ಆಟಗಾರರಿಗೆ ಇದು ಭಾರಿ ನಿರಾಸೆ ಮೂಡಿಸಿತು. ಇತ್ತ 5ನೇ ವಿಕೆಟ್ ಕಳೆದುಕೊಳ್ಳುವ ಆತಂಕದಲ್ಲಿದ್ದ ಆಂಗ್ಲನ್ನರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.
ಸದ್ಯ ಮಿಚೆಲ್ ಸ್ಟಾರ್ಕ್ ಹಿಡಿದ ಕ್ಯಾಚ್‌ಗೆ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಸ್ಟಾರ್ಕ್ ವೇಗವಾಗಿ ಬಂದ ಚೆಂಡನ್ನು ಕ್ಯಾಚ್ ಹಿಡಿದು ನೆಲಕ್ಕೆ ತಾಗಿಸಿಕೊಂಡು ಹೋಗಿದ್ದಾರೆ. ರಿವ್ಯೂನಲ್ಲಿ ಇದು ಸ್ಪಷ್ಟವಾಗಿ ಕಾಣುತ್ತೆ. ಥರ್ಡ್ ಅಂಪೈರ್ ನಿರ್ಧಾರವನ್ನು ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ಮತ್ತು ಸ್ಟಾರ್ಕ್ ವಿರೋಧಿಸಿದ್ದಾರೆ. ಇವರಷ್ಟೇ ಅಲ್ಲ ಆಸೀಸ್ ಮಾಜಿ ನಾಯಕರೂ ಕೂಡ ಅಂಪೈರ್ ನಿರ್ಧಾರವನ್ನು ಟೀಕಿಸಿದ್ದಾರೆ.
ಆಸೀಸ್‌ನ ಮಾಜಿ ವೇಗಿ ಮೆಕ್‌ಗ್ರಾತ್ ಈ ಬಗ್ಗೆ ಪ್ರತಿಕ್ರಿಯಿಸಿ, ಇದು ನಾನು ನೋಡಿದ ದೊಡ್ಡ ಮೂರ್ಖತನ, ಚೆಂಡು ಸ್ಟಾರ್ಕ್ ಕೈ ಸೇರಿತ್ತು. ಅದು ಔಟಾಗದಿದ್ರೆ, ಉಳಿದ ಕ್ಯಾಚ್‌ಗಳು ಹೇಗೆ ಔಟ್ ಆಗುತ್ತವೆ. ನಾನು ಅಂಪೈರ್ ನಿರ್ಧಾರವನ್ನು ಒಪ್ಪುವುದಿಲ್ಲ ಎಂದು ಮೆಕ್‌ಗ್ರಾತ್ ಹೇಳಿಕೊಂಡಿದ್ದಾರೆ.
ಆ್ಯಷಸ್ ಎರಡನೇ ಟೆಸ್ಟ್ ಪಂದ್ಯದಲ್ಲಿ ಅಂಪೇರ್ ನಿರ್ಧಾರ ಆಗಾತಕಾರಿ ಎಂದು ಆಸೀಸ್‌ನ ಮಾಜಿ ನಾಯಕ ಆ್ಯರೋನ್ ಫಿಂಚ್ ಪ್ರತಿಕ್ರಿಯಿಸಿದ್ದಾರೆ. ಸ್ಟಾರ್ಕ್ ಚೆಂಡಿನ ಮೇಲೆ ಸಂಪೂರ್ಣವಾಗಿ ನಿಯಂತ್ರಣ ಹೊಂದಿದ್ರು ಎಂದು ಫಿಂಚ್ ವಾದಿಸಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ನಾಟೌಟ್ ಆಗಿದ್ದು ಹೇಗೆ ಅಂತ ಪ್ರಶ್ನಿಸಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಇತ್ತೀಚೆಗೆ ಕ್ಯಾಮರೂನ್ ಗ್ರೀನ್ ಹಿಡಿದ ಕ್ಯಾಚ್ ಕೂಡ ಭಾರಿ ವಿವಾದಕ್ಕೆ ಕಾರಣವಾಗಿತ್ತು.