Gautam Gambhir: ಹ್ಯಾಪಿ ಬರ್ತ್​ಡೇ ಪ್ರಿಯೆ; ಪತ್ನಿಗೆ ಗಂಭೀರ್ ರೊಮ್ಯಾಂಟಿಕ್ ವಿಶ್ ಕಂಡು ಹರ್ಭಜನ್ ಶಾಕ್, ಗೌತಿ ಕಿಲಾಡಿ ಎಂದ ನೆಟ್ಟಿಗರು
ಕನ್ನಡ ಸುದ್ದಿ  /  ಕ್ರೀಡೆ  /  Gautam Gambhir: ಹ್ಯಾಪಿ ಬರ್ತ್​ಡೇ ಪ್ರಿಯೆ; ಪತ್ನಿಗೆ ಗಂಭೀರ್ ರೊಮ್ಯಾಂಟಿಕ್ ವಿಶ್ ಕಂಡು ಹರ್ಭಜನ್ ಶಾಕ್, ಗೌತಿ ಕಿಲಾಡಿ ಎಂದ ನೆಟ್ಟಿಗರು

Gautam Gambhir: ಹ್ಯಾಪಿ ಬರ್ತ್​ಡೇ ಪ್ರಿಯೆ; ಪತ್ನಿಗೆ ಗಂಭೀರ್ ರೊಮ್ಯಾಂಟಿಕ್ ವಿಶ್ ಕಂಡು ಹರ್ಭಜನ್ ಶಾಕ್, ಗೌತಿ ಕಿಲಾಡಿ ಎಂದ ನೆಟ್ಟಿಗರು

Gautam Gambhir: ಗೌತಮ್ ಗಂಭೀರ್ ತಮ್ಮ ಪತ್ನಿ ನತಾಶಾ ಜೈನ್​ಗೆ ಸಖತ್ ರೊಮ್ಯಾಂಟಿಕ್​ ಆಗಿ ಬರ್ತ್​ ಡೇಗೆ ಶುಭ ಕೋರಿದ್ದಾರೆ. ಗಂಭೀರ್​ ಅವರ ರೊಮ್ಯಾಂಟಿಕ್​ ಬರ್ತ್​ಡೇ ವಿಶ್​ ಕಂಡು ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅಚ್ಚರಿಯಾಗಿದ್ದಾರೆ.

ಪತ್ನಿ ನತಾಶಾ ಜೈನ್​ಗೆ ಗೌತಮ್ ಗಂಭೀರ್ ರೊಮ್ಯಾಂಟಿಕ್ ವಿಶ್
ಪತ್ನಿ ನತಾಶಾ ಜೈನ್​ಗೆ ಗೌತಮ್ ಗಂಭೀರ್ ರೊಮ್ಯಾಂಟಿಕ್ ವಿಶ್

ಟೀಮ್​ ಇಂಡಿಯಾ ಕ್ರಿಕೆಟರ್​ ಗೌತಮ್ ಗಂಭೀರ್ (Gautam Gambhir) ಸದ್ಯ ಪೂರ್ವ ದೆಹಲಿ ಕ್ಷೇತ್ರದ ಸಂಸದ. ಆದರೆ, ಅವರು ಹೆಸರು ಕೇಳಿದಾಗೆಲ್ಲಾ ಒಬ್ಬ ಗಂಭೀರ ಕ್ರಿಕೆಟಿಗ ನೆನಪಾಗುತ್ತಾನೆ. ಭಾವೋದ್ರಿಕ್ತತೆಗೆ ಒಳಗಾಗುವ ಗೌತಮ್​, ಕಾಮೆಂಟರಿ ಮಾಡುವಾಗಲೂ ತುಂಬಾ ಸಿರೀಯಸ್ ಆಗಿ ಇರ್ತಾರೆ. ಗೌತಿ ಮಾತನಾಡುವುದೇ ಅಪರೂಪವೆಂದರೆ ಅಪರೂಪ. 2007ರ ಟಿ20 ವಿಶ್ವಕಪ್ ಫೈನಲ್ ಮತ್ತು 2011ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಅತ್ಯುತ್ತಮ ಇನ್ನಿಂಗ್ಸ್‌ ಆಡುವ ಮೂಲಕ ಭಾರತ ತಂಡ ಆ ಎರಡು ವಿಶ್ವಕಪ್​ ಗೆಲ್ಲುವಲ್ಲಿ ಗಂಭೀರ್ ಪ್ರಮುಖ ಪಾತ್ರ ವಹಿಸಿದ್ದಾರೆ.

ಗಂಭೀರ್​ ರೊಮ್ಯಾಂಟಿಕ್ ಆ್ಯಂಗಲ್

ವಿಶ್ವಕಪ್ ಗೆದ್ದುಕೊಟ್ಟಂತಹ ಅದೆಷ್ಟೋ ಇನ್ನಿಂಗ್ಸ್​ ಅವರ ಖಾತೆಯಲ್ಲಿ ಇವೆ. ಆದರೆ ಅವರು ಗಾಂಭೀರ್ಯ, ಭಾವೋದ್ರಿಕ್ತತೆ, ಸದಾ ಮುಂಗೋಪಿ ಆಗಿರುವ ಅವರಲ್ಲಿ ರೊಮ್ಯಾಂಟಿಕ್​ ಆ್ಯಂಗಲ್​​​​ ಕೂಡ ಇದೆ ಎಂಬುದು ವಿಶೇಷ. ಗಂಭೀರ್‌ ಮೇಲ್ನೋಟದ ಗಾಂಭೀರ್ಯವಿದ್ದಂತೆ ಎಲ್ಲರಿಗೂ ಕಾಣಿಸಿದರೂ, ಅವರಲ್ಲಿ ಯಾರಿಗೂ ಕಾಣಿಸದ ರೊಮ್ಯಾಂಟಿಕ್ ಆ್ಯಂಗಲ್​ ಕೂಡ ಇದೆ. ಗೌತಮ್ ಗಂಭೀರ್ ಇತ್ತೀಚೆಗೆ ತಮ್ಮ ಪತ್ನಿ ನತಾಶಾ ಜೈನ್‌ಗೆ (Natasha Jain Bithday) ಕ್ರೇಜಿಯಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

ರೊಮ್ಯಾಂಟಿಕ್ ವಿಶ್ ಕಂಡು ಶಾಕ್ ಆದ ಭಜ್ಜಿ

ಹ್ಯಾಪಿ ಬರ್ತ್​ಡೇ ಕ್ರೇಜಿ! 'ನಾನು ನಿನಗೆ ದೊರಕಿರುವುದೇ ನಿಜವಾದ ಅದ್ಭುತ ಗಿಫ್ಟ್​ ಎಂದು ಇನ್​ಸ್ಟಾಗ್ರಾಂ ಪೋಸ್ಟ್​​​​ಗೆ ಕ್ಯಾಪ್ಶನ್ ಬರೆದಿದ್ದಾರೆ. ಗಂಭೀರ್​ ಅವರ ರೊಮ್ಯಾಂಟಿಕ್​ ಬರ್ತ್​ಡೇ ವಿಶ್​ ಕಂಡು ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ (Harbhajan Singh) ಶಾಕ್​ ಆಗಿದ್ದಾರೆ. ಕೊನೆಗೆ ಹ್ಯಾಪಿ ಬರ್ತ್​​ಡೇ ಬಾಬಿ ಎಂದು ಶುಭಾಶಯ ಕೋರಿದ್ದಾರೆ ಭಜ್ಜಿ. ಗೌತಮ್ ಗಂಭೀರ್ ಲವ್ ಸ್ಟೋರಿ ಕೂಡ ತುಂಬಾ ಆಸಕ್ತಿದಾಯಕವಾಗಿದೆ. ಗಂಭೀರ್-ನತಾಶಾ ಲವ್​ ಸ್ಟೋರಿಯನ್ನು ಈ ಮುಂದೆ ನೋಡೋಣ.

ಲವ್​ಸ್ಟೋರಿ

ನವದೆಹಲಿಯಲ್ಲಿ ಜನಿಸಿದ ಗಂಭೀರ್, ಲಾಲ್​ ಬಹುದ್ದೂರ್ ಶಾಸ್ತ್ರಿ ಅಕಾಡೆಮಿಯಲ್ಲಿ 10ನೇ ತರಗತಿಯಿಂದ ಕ್ರಿಕೆಟ್​ ಶಿಕ್ಷಣ (ತರಬೇತಿ) ಪಡೆಯುತ್ತಿದ್ದರು. ಗಂಭೀರ್ ಅವರ ತಂದೆ ದೀಪಕ್ ಟೆಕ್ಸ್ಟ್​ಟೈಲ್​ ವ್ಯಾಪಾರಿ. ಇವರ ಸ್ನೇಹಿತ ರವೀಂದ್ರ ಜೈನ್ ದೊಡ್ಡ ಉದ್ಯಮಿ. ಕೋಟ್ಯಧಿಪತಿಯಾಗಿದ್ದ ರವೀಂದ್ರ ಜೈನ್ ಮಗಳು ನತಾಶಾ. ಈ ಕುಟುಂಬಗಳು ಸುಮಾರು 35 ವರ್ಷಗಳ ಉತ್ತಮ ಅನುಬಂಧ ಹೊಂದಿದ್ದವು. ಅದೇ ಸಂಬಂಧದಿಂದಲೇ ನತಾರಾ, ಗಂಭೀರ್ ಮನೆಗೆ, ಗಂಭೀರ್​ ನತಾಶಾಗೆ ಮುಕ್ತವಾಗಿ ಹೋಗಿ ಬರುತ್ತಿದ್ದರು.

ಸ್ನೇಹದಿಂದ ಪ್ರೀತಿಗೆ

ಅಂದಹಾಗೆ ನತಾಶಾ ಮತ್ತು ಗೌತಮ್ ಗಂಭೀರ್ ಉತ್ತಮ ಸ್ನೇಹಿತರೂ ಆಗಿದ್ದರು. ಆ ಸ್ನೇಹ ಪ್ರೀತಿಗೆ ತಿರುಗಿತ್ತು. ಮನೆಯಲ್ಲಿ ಯಾರೋ ಇದ್ದಾಗ ಸ್ನೇಹಿತರಂತೆ ಇರುತ್ತಿದ್ದ ಇವರಿಬ್ಬರು, ಯಾರೂ ಇಲ್ಲದ ವೇಳೆ ಪ್ರೇಮಿಗಳಾಗಿ ಬದಲಾಗುತ್ತಿದ್ದರು. ನತಾಶಾಗೆ ಕ್ರಿಕೆಟ್​ ಅನ್ನು ಅಷ್ಟು ಇಷ್ಟ ಪಡುತ್ತಿರಲಿಲ್ಲ. ಆಕೆಯ ಈ ವಿಷಯವೇ ಗಂಭೀರ್​ಗೆ ಹೆಚ್ಚು ಇಷ್ಟವಾಯಿತು. ಯಾರೇ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದರೂ, ಕೊನೆಗೆ ಚರ್ಚೆ ಅಂತ್ಯವಾಗುತ್ತಿದ್ದೇ ಕ್ರಿಕೆಟ್ ಬಗ್ಗೆ. ಅದೇ ನತಾಶಾ ಜೊತೆ ಅದರ ಸಮಸ್ಯೆ ಇರುವುದಿಲ್ಲ. ಕ್ರಿಕೆಟ್​ ಬಗ್ಗೆ ಮಾತನಾಡುವುದೇ ಇಲ್ಲ ಎಂಬುದು ಗಂಭೀರ್​ ಭಾವನೆಯಾಗಿತ್ತು.

2011ರ ವಿಶ್ವಕಪ್ ಬಳಿಕ ಮದುವೆ

ನೋಡಲು ಸೂಪರ್ ಹಾಟ್ ಮಾಡೆಲ್​ನಂತಿರುವ ನತಾಶಾ ಅಂದಕ್ಕೆ ಗಂಭೀರ್​ ಮಾರು ಹೋಗಿದ್ದರು. ಅದಾಗಲೇ ಕ್ರಿಕೆಟರ್​ ಆಗಿ ಗಂಭೀರ್​ ಸಕ್ಸಸ್​ ಕಂಡ ಪರಿಣಾಮ, ಅವರಿಬ್ಬರ ಮದುವೆಗೆ ಯಾವುದೇ ಸಮಸ್ಯೆ ಎದುರಾಗಲಿಲ್ಲ. 2011ರ ಏಕದಿನ ವಿಶ್ವಕಪ್ ಬಳಿಕ ಇಬ್ಬರು ಮದುವೆ ಆಗಲು ನಿಶ್ಚಯಿಸಿದ್ದರು. ಈ ಪ್ರೀತಿಯ ಪ್ರಯಾಣ ಕೆಲವು ದಿನಗಳ ರಹಸ್ಯವಾಗಿ ಸಾಗಿತು. ಹಿರಿಯರ ಒಪ್ಪಿಗೆ ಮೇರೆಗೆ ಮದುವೆಯಾದರು. ಕೆಲವೇ ಕೆಲವು ಬಂಧುಗಳು ಹಾಗೂ ಅತಿಥಿಗಳ ಸಮ್ಮುಖದಲ್ಲಿ ಗಂಭೀರ್ 2011ರ ಅಕ್ಬೋಬರ್ 28ರಂದು ಮದುವೆಯಾದರು.

ಮಾಧ್ಯಮಗಳಿಂದ ದೂರ ಉಳಿದಿರುವ ನತಾಶಾ ತಮ್ಮ ವೈಯಕ್ತಿಕ ಜೀವನದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಮದುವೆಗೂ ಮುನ್ನ ನತಾಶಾ 100 ಕೋಟಿಗೂ ಹೆಚ್ಚು ಆಸ್ತಿ ಹೊಂದಿದ್ದರು. ನತಾಶಾ ಮತ್ತು ಗೌತಮ್ ಗಂಭೀರ್ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.