Sachin Tendulkar: ಮಡದಿ, ಮಗಳೊಂದಿಗೆ ಕೀನ್ಯಾದಲ್ಲಿ ಕಾಡು ಸುತ್ತುತ್ತಿರುವ ಕ್ರಿಕೆಟ್ ದೇವರು; ಸಚಿನ್ ಪೋಸ್ಟ್‌ಗೆ ಫ್ಯಾನ್ಸ್ ಹೀಗಂದ್ರು
ಸಚಿನ್ ತೆಂಡೂಲ್ಕರ್ ಅವರು ಕೀನ್ಯಾದ ಮಸಾಯಿ ಮಾರಾದಲ್ಲಿ ಕುಟುಂಬದೊಂದಿಗೆ ಜಾಲಿ ಮೂಡ್‌ನಲ್ಲಿದ್ದಾರೆ.
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (Sachin Tendulkar) ಜಾಲಿ ಮೂಡ್‌ನಲ್ಲಿದ್ದಾರೆ. ಕುಟುಂಬದೊಂದಿಗೆ ಪ್ರವಾಸ ಹೋಗಿರುವ ಮಾಸ್ಟರ್ ಬ್ಲಾಸ್ಟರ್, ತಮ್ಮ ಪತ್ನಿ ಹಾಗೂ ಮಗಳೊಂದಿಗೆ ಕೀನ್ಯಾದಲ್ಲಿ ಕಾಡು ಸುತ್ತುತ್ತಿದ್ದಾರೆ.
ಕೀನ್ಯಾದ ಮಸಾಯಿ ಮಾರ (Maasai Mara National Reserve) ರಾಷ್ಟ್ರೀಯ ಮೀಸಲು ಅರಣ್ಯವು ವಿಸ್ಮಯಕಾರಿ ಭೂದೃಶ್ಯಗಳು ಮತ್ತು ವನ್ಯಜೀವಿಗಳ ಜಾಗತಿಕ ಆಕರ್ಷಣೆಯ ತಾಣವಾಗಿದೆ. ಇಲ್ಲಿನ ಪ್ರಾಣಿ ಸಂಕುಲ ಹಾಗೂ ಮೀಸಲು ಅರಣ್ಯಗಳನ್ನು ವೀಕ್ಷಿಸಲು ಅಸಂಖ್ಯಾತ ಪ್ರಯಾಣಿಕರು ಕೀನ್ಯಾಗೆ ಭೇಟಿ ನೀಡುತ್ತಾರೆ. ಈ ನಡುವೆ ಸಚಿನ್ ತೆಂಡೂಲ್ಕರ್ ಕೂಡಾ ತಮ್ಮ ಕುಟುಂಬದೊಂದಿಗೆ ತಮ್ಮ ಟ್ರಿಪ್ ಅನ್ನು ಕೀನ್ಯಾದ ಮಸಾಯಿ ಮಾರಾದಲ್ಲಿ ಆನಂದಿಸುತ್ತಿದ್ದಾರೆ. ದಿಗ್ಗಜ ಕ್ರಿಕೆಟಿಗ ತಮ್ಮ ಪ್ರಚಾಸದ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
“ಮಸಾಯಿ ಮಾರಾ ಬಿಸಿಲಿನಲ್ಲಿ ಕುಟುಂಬ ಸದಸ್ಯರೊಂದಿಗೆ ಸುತ್ತಾಟ” ಎಂದು ಚಿತ್ರಗಳನ್ನು ಸಚಿನ್ ಪೋಸ್ಟ್ ಮಾಡಿದ್ದಾರೆ. ಚಿತ್ರದಲ್ಲಿ ಪತ್ನಿ ಅಂಜಲಿ ತೆಂಡೂಲ್ಕರ್ ಮತ್ತು ಮಗಳು ಸಾರಾ ತೆಂಡೂಲ್ಕರ್ ಕೂಡಾ ಪೋಸ್ ನೀಡಿದ್ದಾರೆ. ಕಾಡಿನಂತಹ ಸ್ಥಳದಲ್ಲಿ ಮರದ ಎದುರುಗಡೆ ಮೂವರು ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಪೋಸ್ಟ್ ಅನ್ನು ಹಂಚಿಕೊಂಡ ಬಳಿಕ ಸುಮಾರು ಒಂದು ಮಿಲಿಯನ್‌ಗಿಂತ ಹೆಚ್ಚು ಜನರು ಪೋಸ್ಟ್ ಲೈಕ್ ಮಾಡಿದ್ದಾರೆ. ಹಲವು ಜನರು ಹಂಚಿಕೊಂಡಿದ್ದಾರೆ. ಅಲ್ಲದೆ ನೆಚ್ಚಿನ ಕ್ರಿಕೆಟ್ ಆಟಗಾರನಿಗೆ ಕಾಮೆಂಟ್ ಮಾಡಿದ್ದಾರೆ. ಒಬ್ಬರು "ಅದ್ಭುತ" ಎಂದು ಕಾಮೆಂಟ್ ಮಾಡಿದರೆ, ಇನ್ನೊಬ್ಬರು "ವಾವ್" ಎಂದು ಬರೆದುಕೊಂಡಿದ್ದಾರೆ.
ಮಸಾಯಿ ಮಾರಾದಲ್ಲಿ ಏನಿದೆ ವಿಶೇಷ?
ಕೀನ್ಯಾದಲ್ಲಿ ಮಸಾಯಿ ಮಾರಾ ಪ್ರಸಿದ್ಧ ಪ್ರವಾಸಿ ಸ್ಥಳ. ಪ್ರವಾಸಿಗರಿಗೆ ರೋಮಾಂಚಕ ಅನುಭವ ಹಾಗೂ ಪ್ರಕೃತಿಯ ವೈವಿಧ್ಯತೆಯ ದರ್ಶನ ಇಲ್ಲಿ ಸಿಗುತ್ತದೆ. ಬಗೆಬಗೆಯ ವನ್ಯಜೀವಿಗಳ ತಾಣ ಇದಾಗಿದ್ದು, ಪ್ರವಾಸಿಗರು ಸಫಾರಿಗಳ ಮೂಲಕ ಈ ಸ್ಥಳದ ಸೌಂದರ್ಯವನ್ನು ಆನಂದಿಸುತ್ತಾರೆ. ಹೀಗಾಗಿ ಜಾಗತಿಕ ಮಟ್ಟದಲ್ಲಿ ಈ ಸ್ಥಳ ಹೆಸರುವಾಸಿಯಾಗಿದೆ.
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಎಂಎಸ್ ಧೋನಿ ನೇತೃತ್ವದ ಸಿಎಸ್ಕೆ ಐದನೇ ಬಾರಿಗೆ ಟ್ರೋಫಿ ಗೆದ್ದಿದೆ. ಇದರೊಂದಿಗೆ ಅತಿಹೆಚ್ಚು ಟ್ರೋಫಿ ಗೆದ್ದಿದ್ದ ಮುಂಬೈ ಇಂಡಿಯನ್ಸ್ ದಾಖಲೆ ಸರಿಗಟ್ಟಿತು. ಈ ಐಪಿಎಲ್ಗೂ ಮುನ್ನ ಧೋನಿ ನಿವೃತ್ತಿ ಘೋಷಿಸುತ್ತಾರೆ ಎಂಬ ಸುದ್ದಿ ಹರಡಿದ್ದರ ಪರಿಣಾಮ ಚೆನ್ನೈ ತಂಡಕ್ಕೆ ಹೆಚ್ಚು ಬೆಂಬಲ ಸಿಕ್ಕಿತ್ತು. ಹಾಗಾಗಿ ಈ ಬಾರಿಯ ಐಪಿಎಲ್ ಭಾರಿ ಯಶಸ್ವಿಯಾಗಿತ್ತು. ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ