ಕನ್ನಡ ಸುದ್ದಿ  /  ಕ್ರೀಡೆ  /  Ipl 2023: ಐಪಿಎಲ್​ನ ಜನಪ್ರಿಯ ತಂಡದಲ್ಲೂ ಸಿಎಸ್​ಕೆ ಮತ್ತೆ ಚಾಂಪಿಯನ್; ವಿರಾಟ್ ಕೊಹ್ಲಿ ಹೆಚ್ಚು ಪ್ರಸಿದ್ಧ ಆಟಗಾರ, ಹೊರಬಿತ್ತು ವರದಿ

IPL 2023: ಐಪಿಎಲ್​ನ ಜನಪ್ರಿಯ ತಂಡದಲ್ಲೂ ಸಿಎಸ್​ಕೆ ಮತ್ತೆ ಚಾಂಪಿಯನ್; ವಿರಾಟ್ ಕೊಹ್ಲಿ ಹೆಚ್ಚು ಪ್ರಸಿದ್ಧ ಆಟಗಾರ, ಹೊರಬಿತ್ತು ವರದಿ

Dhoni-Kohli: ಮೇ 28ರಂದು ಮುಕ್ತಾಯಗೊಂಡ ಐಪಿಎಲ್​​ನಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಿದೆ ಎಂಬುದಕ್ಕೆ ಸೋಷಿಯಲ್​ ಮೀಡಿಯಾದ ವರಿದಿಯೊಂದು ಬಹಿರಂಗಗೊಂಡಿದೆ. ಈ ಯಾವ ತಂಡ, ಯಾವ ಆಟಗಾರ ಈ ಬಾರಿ ಅಧಿಕ ಜನಪ್ರಿಯಗೊಂಡಿದೆ ಎಂಬುದು ತಿಳಿದಿದೆ.

ಎಂಎಸ್​ ಧೋನಿ ಮತ್ತು ವಿರಾಟ್ ಕೊಹ್ಲಿ
ಎಂಎಸ್​ ಧೋನಿ ಮತ್ತು ವಿರಾಟ್ ಕೊಹ್ಲಿ

16ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಚಾಂಪಿಯನ್​​ ಪಟ್ಟ ಅಲಂಕರಿಸಿದೆ. ಎಂಎಸ್​ ಧೋನಿ ನೇತೃತ್ವದ ಸಿಎಸ್​ಕೆ ಐದನೇ ಬಾರಿಗೆ ಟ್ರೋಫಿ ಗೆದ್ದಿದೆ. ಇದರೊಂದಿಗೆ ಅತಿಹೆಚ್ಚು ಟ್ರೋಫಿ ಗೆದ್ದಿದ್ದ ಮುಂಬೈ ಇಂಡಿಯನ್ಸ್​ ದಾಖಲೆ ಸರಿಗಟ್ಟಿತು. ಈ ಐಪಿಎಲ್​ಗೂ ಮುನ್ನ ಧೋನಿ ನಿವೃತ್ತಿ ಘೋಷಿಸುತ್ತಾರೆ ಎಂಬ ಸುದ್ದಿ ಹರಡಿದ್ದರ ಪರಿಣಾಮ ಚೆನ್ನೈ ತಂಡಕ್ಕೆ ಹೆಚ್ಚು ಬೆಂಬಲ ಸಿಕ್ಕಿತ್ತು. ಹಾಗಾಗಿ ಈ ಬಾರಿಯ ಐಪಿಎಲ್​ ಭಾರಿ ಯಶಸ್ವಿಯಾಗಿತ್ತು.

ಟ್ರೆಂಡಿಂಗ್​ ಸುದ್ದಿ

ಚೆನ್ನೈ ಜನಪ್ರಿಯ ತಂಡ

ಮೇ 28ರಂದು ಮುಕ್ತಾಯಗೊಂಡ ಐಪಿಎಲ್​​ನಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಿದೆ ಎಂಬುದಕ್ಕೆ ಸೋಷಿಯಲ್​ ಮೀಡಿಯಾದ ವರಿದಿಯೊಂದು ಬಹಿರಂಗಗೊಂಡಿದೆ. ಈ ಯಾವ ತಂಡ, ಯಾವ ಆಟಗಾರ ಈ ಬಾರಿ ಅಧಿಕ ಜನಪ್ರಿಯಗೊಂಡಿದೆ ಎಂಬುದು ತಿಳಿದಿದೆ. ಈ ವರದಿಯ ಪ್ರಕಾರ ಚಾಂಪಿಯನ್​ ಪಟ್ಟ ಅಲಂಕರಿಸಿದ ಚೆನ್ನೈ ತಂಡವು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಚೆನ್ನೈ 7.6 ಮಿನಿಯನ್​​ನಷ್ಟು ಚೆನ್ನೈ ತಂಡವು ಸೋಷಿಯಲ್​​ ಮೀಡಿಯಾದಲ್ಲಿ ಹುಡುಕಲ್ಪಟ್ಟಿದೆ. ಎರಡನೇ ಸ್ಥಾನದಲ್ಲಿ ಗುಜರಾತ್​ ಟೈಟಾನ್ಸ್​ ತಂಡವಿದೆ. ಹಾರ್ದಿಕ್​ ಪಾಂಡ್ಯ ನಾಯಕತ್ವದ ಗುಜರಾತ್, 6.2 ಮಿಲಿಯನ್​ನಷ್ಟು ಹುಡುಕಾಟಕ್ಕೆ ಒಳಗಾಗಿದೆ. ಇನ್ನು ಮುಂಬೈ ತಂಡವನ್ನು 5.4 ಮಿಲಿಯನ್​ನಷ್ಟು ಹುಡುಕಾಟ ನಡೆಸಲಾಗಿದೆ.​ ಮುಂಬೈ 3ನೇ ಸ್ಥಾನದಲ್ಲಿದೆ. ಚೆನ್ನೈ ಇಷ್ಟರಮಟ್ಟಿಗೆ ಜನಪ್ರಿಯತೆ ಗಳಿಸಲು ಧೋನಿಯೇ ಕಾರಣ. ಅವರದ್ದು ಈ ಐಪಿಎಲ್​ ಕೊನೆ ಎಂದು ವರದಿಯಾಗಿದ್ದರ ಪರಿಣಾಮ ಸಿಎಸ್​ಕೆ ಹೆಚ್ಚು ಹುಡುಕಾಟಕ್ಕೆ ಒಳಗಾಗಿದೆ.

ಜನಪ್ರಿಯ ಆಟಗಾರ ಕೊಹ್ಲಿ

ಸಿಎಸ್​ಕೆ ಹೆಚ್ಚು ಜನಪ್ರಿಯ ತಂಡವಾಗಿ ಹೊರಹೊಮ್ಮಿದರೆ, ವಿರಾಟ್​ ಕೊಹ್ಲಿ ಐಪಿಎಲ್​ನಲ್ಲಿ ಪ್ರಸಿದ್ಧ ಪಡೆದ ಆಟಗಾರನಾಗಿ ಹೊರ ಹೊಮ್ಮಿದ್ದಾರೆ. 2023ರ ಐಪಿಎಲ್​ ವೇಳೆ ವಿರಾಟ್​ ಕೊಹ್ಲಿಯನ್ನು 7 ಮಿಲಿಯನ್​​​ ಹೆಚ್ಚು ಬಾರಿ ಹುಡುಕಾಟಕ್ಕೆ ಒಳಗಾಗಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿ ಎಂಎಸ್​ ಧೋನಿ ಇದ್ದು, 6 ಮಿಲಿಯನ್​​ ಜನ ಸರ್ಚ್​ ಮಾಡಿದ್ದಾರೆ. 3ನೇ ಸ್ಥಾನದಲ್ಲಿ ಇರುವ ರೋಹಿತ್​ ಶರ್ಮಾ ಅವರ ಕುರಿತು 3 ಮಿಲಿಯನ್​ ಜನ ಹುಡುಕಾಟ ನಡೆಸಿದ್ದಾರೆ.

ಗಂಭೀರ್​​-ವಾಕ್ಸಮರವೇ ಇದಕ್ಕೆ ಕಾರಣ

ಕೊಹ್ಲಿ ಹೆಚ್ಚು ಹುಡುಕಾಟಕ್ಕೆ ಒಳಗಾಗಲು ಕಾರಣ ಇದೆ. ಅದುವೆ ವಿರಾಟ್-ಗಂಭೀರ್ ಜಗಳ. ಈ ಐಪಿಎಲ್​ನಲ್ಲಿ ಅತಿ ಹೆಚ್ಚು ಚರ್ಚೆಗೆ ಗ್ರಾಸವಾದ ವಾಕ್ಸಮರ ಇದಾಗಿತ್ತು. ಮೇ 1ರಂದು ನಡೆದ ಲಕ್ನೋ ಸೂಪರ್ ಜೈಂಟ್ಸ್​ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಗಳು ಸೆಣಸಾಟ ನಡೆಸಿದವು. ಈ ಪಂದ್ಯದಲ್ಲಿ ಆರ್​ಸಿಬಿ ಕಡಿಮೆ ಮೊತ್ತವನ್ನು ಡಿಫೆಂಡ್​ ಮಾಡಿಕೊಂಡು ಭರ್ಜರಿ ಗೆಲುವು ಸಾಧಿಸಿತು.

ಪಂದ್ಯದ ಬಳಿಕ ಎಲ್​ಸಿಜಿ ಬೌಲರ್​ ನವೀನ್ ಉಲ್ ಹಕ್ ಮತ್ತು ವಿರಾಟ್​ ಕೊಹ್ಲಿ ನಡುವೆ ವಾಗ್ವಾದ ನಡೆದಿತ್ತು. ಬಳಿಕ ಪೋಸ್ಟ್​ ಮ್ಯಾಚ್​ ಪ್ರೆಸೆಂಟೇಷನ್​ನಲ್ಲೂ ಕೊಹ್ಲಿ-ಗಂಭೀರ್ ಮಧ್ಯೆ ಗಲಾಟೆ ನಡೆಯಿತು. ಜೋರು ಜೋರಾಗಿ ಗಲಾಟೆ ಮಾಡಿಕೊಂಡರು. ಇಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಲು ಕಾರಣ ಮೊದಲಿನಿಂದಲೂ ಇಬ್ಬರ ಮಧ್ಯೆ ಇರುವ ಮುನಿಸು. ಹಾಗಾಗು ಅತಿ ಹೆಚ್ಚು ಎಂಗೇಜಿಂಗ್​ ಪೀಪಲ್​ ಎಂದು ಬಹಿರಂಗಗೊಂಡಿದೆ.

5 ಸಿಕ್ಸರ್​ ಸಿಡಿಸಿ ಲೀಸ್ಟ್​ಗೆ ಬಂದ ರಿಂಕು

ಇನ್ನು ಹೆಚ್ಚು ಹುಡುಕಾಟಕ್ಕೆ ಒಳಗಾದ ಪಟ್ಟಿಗೆ ಕೊಹ್ಲಿ, ಗಂಭೀರ್, ನವೀನ್​ ಜೊತೆಗೆ ಐದು ಎಸೆತಗಳಿಗೆ ಐದು ಸಿಕ್ಸರ್ ಸಿಡಿಸಿ ಕೋಲ್ಕತ್ತಾ ನೈಟ್​ ರೈಡರ್ಸ್ ಗೆಲುವಿಗೆ ಕಾರಣವಾಗಿದ್ದ ರಿಂಕು ಸಿಂಗ್​ ಕೂಡ ಸೇರಿದ್ದಾರೆ. ಗುಜರಾತ್​ ಟೈಟಾನ್ಸ್​ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ಗೆಲುವಿಗೆ ಕೊನೆಯ 5 ಎಸೆತಗಳಿಗೆ 30 ರನ್​ ಬೇಕಿತ್ತು. ಆಗ ಯಶ್ ದಯಾಳ್ ಬೌಲಿಂಗ್​ ಮಾಡುತ್ತಿದ್ದರು. ಐದು ಎಸೆತಗಳಿಗೆ ಐದೂ ಸಿಕ್ಸರ್​ ಸಿಡಿಸಿದ ರಿಂಕು ಸಿಂಗ್​ ರೋಚಕ ಗೆಲುವಿಗೆ ಸಾಕ್ಷಿಯಾಗಿದ್ದರು. ಪರಿಣಾಮ ಅತ್ಯಂತ ಜನಪ್ರಿಯ ಪಡೆದ ಆಟಗಾರ ಎನಿಸಿದ್ದಾರೆ.