Shreyanka Patil: ವಿರಾಟ್ ಅಗ್ರೆಷನ್ ನನಗಿಷ್ಟ; ಭಾರತಕ್ಕಾಗಿ ವಿಶ್ವಕಪ್ ಗೆಲ್ಲುವುದೇ ನನ್ನ ಗುರಿ ಎನ್ನುವ ಕನ್ನಡತಿ ಶ್ರೇಯಾಂಕಾ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Shreyanka Patil: ವಿರಾಟ್ ಅಗ್ರೆಷನ್ ನನಗಿಷ್ಟ; ಭಾರತಕ್ಕಾಗಿ ವಿಶ್ವಕಪ್ ಗೆಲ್ಲುವುದೇ ನನ್ನ ಗುರಿ ಎನ್ನುವ ಕನ್ನಡತಿ ಶ್ರೇಯಾಂಕಾ

Shreyanka Patil: ವಿರಾಟ್ ಅಗ್ರೆಷನ್ ನನಗಿಷ್ಟ; ಭಾರತಕ್ಕಾಗಿ ವಿಶ್ವಕಪ್ ಗೆಲ್ಲುವುದೇ ನನ್ನ ಗುರಿ ಎನ್ನುವ ಕನ್ನಡತಿ ಶ್ರೇಯಾಂಕಾ

  • Shreyanka Patil: ಇತ್ತೀಚೆಗೆ ಮುಕ್ತಾಯಗೊಂಡ ವನಿತೆಯರ ಉದಯೋನ್ಮುಖ ಏಷ್ಯಾಕಪ್‌ನಲ್ಲಿ (Women's Emerging Asia Cup) ಭಾರತ ಯುವ ವನಿತೆಯರ ತಂಡ ಚಾಪಿಯನ್‌ ಪಟ್ಟ ಅಲಂಕರಿಸಿತು. ಫೈನಲ್‌ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಮಣಿಸಿ ಭಾರತ ಏಷ್ಯಾಕಪ್ ಗೆದ್ದಿತು. ಈ ಟೂರ್ನಿಯಲ್ಲಿ ಕನ್ನಡತಿ ಶ್ರೇಯಾಂಕಾ ಪಾಟೀಲ್ ಸರಣಿ ಶ್ರೇಷ್ಠ ಪ್ರದರ್ಶನ ನೀಡಿದರು.

ಚೊಚ್ಚಲ ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿ ಆಡಿದ ಬೆಂಗಳೂರಿನ ಏಕೈಕ ಆಟಗಾರ್ತಿ ಶ್ರೇಯಾಂಕಾ ಪಾಟೀಲ್. 21 ವರ್ಷ ವಯಸ್ಸಿನ ಈ ಉದಯೋನ್ಮುಖ ಆಟಗಾರ್ತಿ ಆರ್‌ಸಿಬಿ ತಂಡದ ಪ್ರಮುಖ ಆಲ್‌ರೌಂಡರ್‌ ಆಗಿ ಮಿಂಚಿದ್ದರು. ಇವರು ಇತ್ತೀಚೆಗೆ ಮುಗಿದ   ಮಹಿಳೆಯರ ಉದಯೋನ್ಮುಖ ಏಷ್ಯಾಕಪ್‌ನಲ್ಲಿ ಅದ್ಭುತ ಬೌಲಿಂಗ್‌ ಪ್ರದರ್ಶನ ನೀಡಿ ಸರಣಿ ಶ್ರೇಷ್ಠ ಪ್ರಶಸ್ತಿ ಗಿಟ್ಟಿಸಿಕೊಂಡರು.
icon

(1 / 10)

ಶ್ರೇಯಾಂಕಾಗೆ ಆರ್‌ಸಿಬಿ ವನಿತೆಯರ ತಂಡದಲ್ಲಿ ಆಡುವ ಎಲಿಸ್‌ ಪೆರ್ರಿ, ನಾಯಕಿ ಸ್ಮೃತಿ ಮಂಥನಾ ಅಂದ್ರೆ ಅತಿಯಾದ ಅಭಿಮಾನ. 
icon

(2 / 10)

ಡಬ್ಲ್ಯೂಪಿಎಲ್‌ನಲ್ಲಿ ಆಡುವಾಗ ಆರ್‌ಸಿಬಿ ತಂಡದಲ್ಲಿ ಮಿಂಚಿದ್ದ ಶ್ರೇಯಾಂಕ, ಭಾರತದ ಪರ ಆಡುವ ಭರವಸೆ ನೀಡಿದ್ದರು. ಅವರ ಬ್ಯಾಟಿಂಗ್‌ನಲ್ಲಿ ಎಬಿಡಿ ಸ್ಟೈಲ್‌ ಇದೆ ಎಂದು ಹಲವರು ಮೆಚ್ಚಿದರು. ಅಲ್ಲದೆ ದಿಗ್ಗಜ ಆಟಗಾರರು ಕೂಡಾ ಶ್ರೇಯಾಂಕ ಆಟವನ್ನು ಕೊಂಡಾಡಿದ್ದರು. 
icon

(3 / 10)

ಅಕ್ಕ ಮತ್ತು ತಾಯಿಯೊಂದಿಗೆ ಶ್ರೇಯಾಂಕ ಪಾಟೀಲ್
icon

(4 / 10)

ಅಕ್ಕ ಮತ್ತು ತಾಯಿಯೊಂದಿಗೆ ಶ್ರೇಯಾಂಕ ಪಾಟೀಲ್

ವಿರಾಟ್‌ ಕೊಹ್ಲಿಯನ್ನಿ ನೋಡುತ್ತಾ ಕ್ರಿಕೆಟ್‌ ಆಟವನ್ನು ಮೈಗೂಡಿಸಿಕೊಂಡ ಶರೇಯಾಂಕ, ಇದೀಗ ಆಟದಲ್ಲಿ ದೇಶವನ್ನು ಪ್ರತಿನಿಧಿಸುವ ಮಟ್ಟಿಗೆ ಬೆಳೆದಿದ್ದಾರೆ. ಅಪ್ಪಟ ಕನ್ನಡದ, ಬೆಂಗಳೂರಿನ ಈ ಹುಡುಗಿ, ತಮ್ಮ ಶಿಕ್ಷಣಕ್ಕಿಂತಲೂ ಕ್ರಿಕೆಟ್‌ಗೆ ಮೊದಲ ಆದ್ಯತೆ ನೀಡಿದ್ದಾರೆ.
icon

(5 / 10)

ಮಹಿಳೆಯರ ಉದಯೋನ್ಮುಖ ಏಷ್ಯಾಕಪ್‌ನಲ್ಲಿ ಅದ್ಭುತ ಬೌಲಿಂಗ್‌ ಪ್ರದರ್ಶನ ನೀಡಿದ ಶ್ರೇಯಾಂಕ ಹಾಂಕಾಂಗ್‌ ತಂಡದ ವಿರುದ್ಧ ಐದು ವಿಕೆಟ್‌ ಕಬಳಿಸಿದ್ದರು. ಅಲ್ಲದೆ ಬಾಂಗ್ಲಾದೇಶ ವನಿತೆಯರ ವಿರುದ್ಧ ನಾಲ್ಕು ವಿಕೆಟ್‌ ಪಡೆದು ಮಿಂಚಿದ್ದರು.
icon

(6 / 10)

ತಮ್ಮ ಎಂಟು-ಒಂಬತ್ತನೇ ವಯಸ್ಸಿನಲ್ಲೇ ಕ್ರಿಕೆಟ್‌ ಆಡಲು ಆರಂಭಿಸಿದ ಶ್ರೇಯಾಂಕಾ, ಕ್ರಿಕೆಟರ್‌ ಆಗಿದ್ದ ತಮ್ಮ ತಂದೆ ಹಾಗೂ ಕುಟುಂಬದ ಸಂಪೂರ್ಣ ನೆರವಿನಿಂದ ಈ ಮಟ್ಟಕ್ಕೆ ಬೆಳೆದಿದ್ದಾರೆ. 
icon

(7 / 10)

ಈಗಾಗಲೇ ಭಾರತ ತಂಡದ ಭವಿಷ್ಯ ಎಂಬುದಾಗಿ ಗುರುತಿಸಿಕೊಂಡಿರುವ ಶ್ರೇಯಾಂಕಾಗೆ ಭಾರತ ವನಿತೆಯರ ತಂಡದಲ್ಲಿ ಆಡುವುದೇ ಪ್ರಮುಖ ಗುರಿ. ದೇಶಕ್ಕಾಗಿ ವಿಶ್ವಕಪ್‌ ಗೆಲ್ಲುವುದು, ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವುದು ತಮ್ಮ ಮಹದಾಸೆ ಎಂದು ಶ್ರೇಯಾಂಕ ಹೇಳಿಕೊಂಡಿದ್ದಾರೆ
icon

(8 / 10)

ಶ್ರೇಯಾಂಕಾ ಅವರು ವಿರಾಟ್‌ ಕೊಹ್ಲಿಯ ದೊಡ್ಡ ಅಭಿಮಾನಿ. ವಿರಾಟ್‌ ಅವರನ್ನು ಆನ್‌ಫೀಲ್ಡ್‌ ಹಾಗೂ ಆಫ್‌ ಫೀಲ್ಡ್‌ನಲ್ಲೇ ನೋಡುವುದೇ ತುಂಬಾ ಖುಷಿ ಎಂದು ಅವರು ಹೇಳುತ್ತಾರೆ. ವಿರಾಟ್‌ ಅವರ ಅಗ್ರೆಶನ್‌ ತುಂಬಾ ಇಷ್ಟ. ಆರ್‌ಸಿಬಿ ಆಟಗಾರ್ತಿ ಎಲಿಸ್‌ ಪೆರ್ರಿ, ನಾಯಕಿ ಸ್ಮೃತಿ ಮಂಥನಾ ಅವರ ಶಾಂತ ಸ್ವಭಾವ ತುಂಬಾ ಇಷ್ಟ ಎನ್ನುತ್ತಾರೆ ಶ್ರೇಯಾಂಕ.
icon

(9 / 10)

ಸಿಕ್ಕ ಅವಕಾಶವನ್ನೆಲ್ಲಾ ಸದ್ಬಳಕೆ ಮಾಡಿಕೊಂಡಿರುವ ಶ್ರೇಯಾಂಕ, ಈಗಾಗಲೇ ಕನ್ನಡಿಗರು ಹಾಗೂ ಭಾರತೀಯರ ಮನ ಗೆದ್ದಿದ್ದಾರೆ. ಶೀಘ್ರದಲ್ಲೇ ಭಾರತ ತಂಡದ ಕದ ತಟ್ಟುವ ವಿಶ್ವಾಸದಲ್ಲಿದ್ದಾರೆ.
icon

(10 / 10)

ಇತರ ಗ್ಯಾಲರಿಗಳು