Commonwealth Games 2022: ಭಾರತದ ಹ್ಯಾಟ್ರಿಕ್.. ಬ್ಯಾಡ್ಮಿಂಟನ್ ಡಬಲ್ಸ್ ನಲ್ಲೂ ಚಿನ್ನ
ಕಾಮನ್‌ವೆಲ್ತ್ ಗೇಮ್ಸ್ ಕೊನೆಯ ದಿನವಾದ ಇಂದು ಭಾರತಕ್ಕೆ ಬ್ಯಾಡ್ಮಿಂಟನ್ ನಲ್ಲಿ ಮೂರು ಪದಕಗಳು ಬಂದಿವೆ. ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ಹಾಗೂ ಡಬಲ್ಸ್‌ನಲ್ಲಿ ಸಾತ್ವಿಕ್ ಮತ್ತು ಚಿರಾಗ್ ಜೋಡಿ ದೇಶಕ್ಕೆ ಚಿನ್ನದ ಪದಕವನ್ನು ತಂದುಕೊಟ್ಟಿದೆ.
ಬರ್ಮಿಂಗ್ ಹ್ಯಾಮ್: ಇಂದು ಭಾರತೀಯ ಬ್ಯಾಡ್ಮಿಂಟನ್ ಇತಿಹಾಸದಲ್ಲಿ ಎಂದಿಗೂ ನೆನಪಿನಲ್ಲಿ ಉಳಿಯುವ ದಿನ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ತಮ್ಮ ಎದುರಾಳಿಗಳ ಮೇಲೆ ಸಂಪೂರ್ಣ ಪ್ರಾಬಲ್ಯ ಮೆರೆದ ಭಾರತದ ಶಟ್ಲರ್‌ಗಳು ಕೊನೆಯ ದಿನ ಸತತ ಮೂರು ಚಿನ್ನದ ಪದಕಗಳನ್ನು ಗೆದ್ದಾರೆ.
ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಚಿನ್ನದ ಪದಕ ಗೆದ್ದರು. ಸೋಮವಾರ ನಡೆದ ಫೈನಲ್‌ನಲ್ಲಿ ಇಂಗ್ಲೆಂಡ್‌ನ ಬೆನ್ ಲೇನ್ ಮತ್ತು ಸೀನ್ ವೆಂಡಿ ಅವರ ವಿರುದ್ಧ 21-15, 21-13 ಅಂತರದಲ್ಲಿ ಸತತ ಗೇಮ್‌ಗಳಲ್ಲಿ ಗೆದ್ದರು.
ಮಹಿಳಾ ಸಿಂಗಲ್ಸ್‌ನಲ್ಲಿ ಪಿವಿ ಸಿಂಧು ಹಾಗೂ ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್ ಚಿನ್ನದ ಪದಕ ಜಯಿಸಿದ್ದರು. ಈ ಗೆಲುವಿನೊಂದಿಗೆ ಭಾರತ ಬ್ಯಾಡ್ಮಿಂಟನ್‌ನಲ್ಲಿ ಹ್ಯಾಟ್ರಿಕ್ ಚಿನ್ನದ ಪದಕ ಗೆದ್ದುಕೊಂಡಿತು. ಪುರುಷರ ಡಬಲ್ಸ್ ವಿಭಾಗದ ಫೈನಲ್ ನಲ್ಲಿ ಭಾರತದ ಜೋಡಿ ಎದುರು ಎದುರಾಳಿಗಳಿಗೆ ನಿಲ್ಲಲು ಸಾಧ್ಯವಾಗಲಿಲ್ಲ. ಪಂದ್ಯದ ಆರಂಭದಿಂದಲೂ ಮುನ್ನಡೆ ಸಾಧಿಸಿದ ಭಾರತದ ಜೋಡಿ ಕೊನೆಯವರೆಗೂ ಪ್ರಾಬಲ್ಯ ಮೆರೆಯಿತು.
ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಸ್ವಾತಿಕ್ ಹಾಗೂ ಚಿರಾಗ್ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಂಸಿದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಷ್ಟ್ರಪತಿಗಳು, ನಮ್ಮ ಬ್ಯಾಡ್ಮಿಂಟನ್ ತಾರೆಗಳು ಪುರುಷರ ಡಬಲ್ಸ್ ನಲ್ಲಿ ಚಿನ್ನ ಗೆಲ್ಲುವ ಮೂಲಕ ಇತಿಹಾಸ ಬರೆದಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬ್ಯಾಡ್ಮಿಂಟನ್ ಡಬಲ್ಸ್ ಚಿನ್ನ ಗೆದ್ದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರಿಗೆ ಅಭಿನಂದನೆಗಳು. ನಿಮ್ಮ ಗೆಲುವು ನಮ್ಮ ಯುವಕರಿಗೆ ಸ್ಫೂರ್ತಿ. ನಿಮ್ಮ ಗೆಲುವಿನಿಂದಾಗಿ ಬರ್ಮಿಂಗ್ ಹ್ಯಾಮ್ ನಲ್ಲಿ ನಮ್ಮ ರಾಷ್ಟ್ರಗೀತೆಯನ್ನು ನುಡಿಸಿದ್ದಕ್ಕಾಗಿ ಭಾರತೀಯರು ಹೆಮ್ಮೆಪಡುತ್ತಾರೆ ಎಂದು ಶ್ಲಾಘಿಸಿದ್ದಾರೆ.
ಕಾಮನ್‌ವೆಲ್ತ್ ಗೇಮ್ಸ್ ಬ್ಯಾಡ್ಮಿಂಟನ್ ಮಹಿಳಾ ಮತ್ತು ಪುರುಷರ ಸಿಂಗಲ್ಸ್ ಚಿನ್ನದ ಪದಕಗಳು ಭಾರತದ ಖಾತೆಗೆ ಸೇರಿವೆ. ಇದಕ್ಕೂ ಮುನ್ನ ಮಹಿಳಾ ಸಿಂಗಲ್ಸ್‌ನಲ್ಲಿ ಪಿವಿ ಸಿಂಧು ಚಿನ್ನ ಗೆದ್ದಿದ್ದರು, ನಂತರ ಲಕ್ಷ್ಯಸೇನ್ ಅವರ ಈ ಹಾದಿಗೆ ಹಸಿರು ನಿಶಾನೆ ತೋರಿದರು. ಅವರು ತಮ್ಮ ಮಲೇಷಿಯಾದ ಎದುರಾಳಿ ಯಾಂಗ್ ಅವರನ್ನು 19-21, 21-9, 21-16 ರಿಂದ ಸೋಲಿಸಿ ಚಿನ್ನದ ಪದಕ ಗೆದ್ದಿದ್ದಾರೆ.
ಈ ಪಂದ್ಯದಲ್ಲಿ ಲಕ್ಷ್ಯ ಸೇನ್ ಹೋರಾಡಿದ ರೀತಿ ಅದ್ಭುತವೆಂದೇ ಹೇಳಬೇಕು. ಮೊದಲ ಗೇಮ್ ನಲ್ಲಿ 19-21ರಲ್ಲಿ ಸೋತರೂ, ಎರಡನೇ ಗೇಮ್ ನಲ್ಲಿ ರೋಚಕವಾಗಿ ಚೇತರಿಸಿಕೊಂಡರು. ಎರಡನೇ ಗೇಮ್ ನಲ್ಲಿ ಒಂದು ಹಂತದಲ್ಲಿ 6-8 ರಿಂದ ಹಿನ್ನಡೆ ಅನುಭವಿಸಿದರು. ಆದರೆ ಆ ಬಳಿಕ ಏಕಾಏಕಿ ಸಿಡಿದೆದ್ದ ಸೇನ್ ಎದುರಾಳಿಗೆ ಒಂದೇ ಅಂಕ ನೀಡುವ ಮೂಲಕ 15 ಅಂಕ ಗಳಿಸಿದರು.
ಮತ್ತು ಮೂರನೇ ಗೇಮ್ ಕೂಡ ಬಿರುಸಿನಿಂದ ಸಾಗಿತು. ಆಟದ ಮಧ್ಯಂತರದಲ್ಲಿ 11-7ರಲ್ಲಿ ಮುನ್ನಡೆಯಲ್ಲಿದ್ದ ಲಕ್ಷ್ಯಸೇನ್ ನಂತರ ಮುನ್ನಡೆ ಮುಂದುವರಿಸಿದರು. ಅಂತಿಮವಾಗಿ ಮೂರನೇ ಗೇಮ್ ಅನ್ನು 21-16 ಅಂತರದಿಂದ ಪಂದ್ಯ ಗೆದ್ದು ಚಿನ್ನದ ಪದಕ ಪಡೆದರು. ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಇದು 20ನೇ ಚಿನ್ನದ ಪದಕವಾಗಿದೆ. ಈ ಪದಕದೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ 57ಕ್ಕೆ ತಲುಪಿದೆ.
ವಿಭಾಗ