Mahatma Gandhi: ಬ್ರೆಜಿಲ್‌ ಫುಟ್‌ಬಾಲ್‌ ತಂಡದಲ್ಲೊಬ್ಬ ಮಹಾತ್ಮಗಾಂಧಿ: ಗಾಂಧಿ ಹೆಸರು ಇಟ್ಟಿದ್ದು ಏಕಿರಬಹುದು
ಕನ್ನಡ ಸುದ್ದಿ  /  ಕ್ರೀಡೆ  /  Mahatma Gandhi: ಬ್ರೆಜಿಲ್‌ ಫುಟ್‌ಬಾಲ್‌ ತಂಡದಲ್ಲೊಬ್ಬ ಮಹಾತ್ಮಗಾಂಧಿ: ಗಾಂಧಿ ಹೆಸರು ಇಟ್ಟಿದ್ದು ಏಕಿರಬಹುದು

Mahatma Gandhi: ಬ್ರೆಜಿಲ್‌ ಫುಟ್‌ಬಾಲ್‌ ತಂಡದಲ್ಲೊಬ್ಬ ಮಹಾತ್ಮಗಾಂಧಿ: ಗಾಂಧಿ ಹೆಸರು ಇಟ್ಟಿದ್ದು ಏಕಿರಬಹುದು

mahatma Gandhi football ಭಾರತದ ಐಕಾನ್‌ ಮಹಾತ್ಮಗಾಂಧಿ ಪ್ರಭಾವ ಜಗತ್ತಿನಾದ್ಯಂತ ಇದೆ. ಬ್ರೆಜಿಲ್‌ನ ಯುವ ಫುಟ್‌ಬಾಲ್‌ ಆಟಗಾರ ಮಹಾತ್ಮಗಾಂಧಿ ಹೆಸರು ಇಟ್ಟುಕೊಂಡು ಗಮನ ಸೆಳದಿದ್ದಾನೆ. ಏನಿದರ ವಿಶೇಷ. ಇಲ್ಲಿದೆ ವಿವರ..

ಮಹಾತ್ಮಗಾಂಧಿ ಹೆಸರಿನ ಪ್ರಭಾವವೇ ಅಂತಹದ್ದು. ಬ್ರೆಜಿಲ್‌ನ ಫುಟ್‌ಬಾಲ್‌ ಆಟಗಾರನ ಹೆಸರೂ ಮಹಾತ್ಮಗಾಂಧಿಯೇ.
ಮಹಾತ್ಮಗಾಂಧಿ ಹೆಸರಿನ ಪ್ರಭಾವವೇ ಅಂತಹದ್ದು. ಬ್ರೆಜಿಲ್‌ನ ಫುಟ್‌ಬಾಲ್‌ ಆಟಗಾರನ ಹೆಸರೂ ಮಹಾತ್ಮಗಾಂಧಿಯೇ.

ಮಹಾತ್ಮಗಾಂಧಿ ಎಂಬ ಹೆಸರು ಕೇಳಿದ ತಕ್ಷಣವೇ ನಮ್ಮ ಹೆಮ್ಮೆಯ ಗಾಂಧಿ. ಭಾರತದ ಸ್ವಾತಂತ್ರಕ್ಕೆ ಹೋರಾಡಿದ ಮಹಾತ್ಮ ಎನ್ನುವುದು ಥಟ್ಟನೇ ಕಣ್ಣು ಮುಂದೆ ಬರುತ್ತದೆ. ಜಗತ್ತಿನಾದ್ಯಂತ ಗಾಂಧಿ ಹೆಸರಿನವರು ಬಹಳ ಮಂದಿ ಇರಬಹುದು. ಆದರೆ ಮಹಾತ್ಮಗಾಂಧಿ ಹೆಸರಿನವರು ಹುಡುಕಿದರೆ ಅಲ್ಲಲ್ಲಿ ಸಿಗಬಹುದೇನೋ. ಹಾಗೆಯೇ ಮಹಾತ್ಮಗಾಂಧಿ ಹೆಸರಿನ ಫುಟ್‌ಬಾಲ್‌ ಆಟಗಾರನೊಬ್ಬ ಬ್ರೆಜಿಲ್‌ನಲ್ಲಿದ್ದಾನೆ.

ಈತನ ಪೂರ್ಣ ಹೆಸರು ಮಹಾತ್ಮ ಗಾಂಧಿ ಹೆಬರ್ಪಿಯೋ ಮಟ್ಟೋಸ್‌ ಪೈರೆಸ್(Mahatma Gandhi Heberpio Mattos Pires).‌ ವಯಸ್ಸು 31. ಬ್ರೆಜಿಲ್‌ನಲ್ಲಿ ಫುಟ್‌ಬಾಲ್‌ ಆಟಗಾರ. 2011ರಿಂದ ಬ್ರೆಜಿಲ್‌ನ ಅಟ್ಲೆಟಿಕೋ ಫುಟ್‌ ಬಾಲ್‌ ಕ್ಲಬ್‌ನ(Atlético Clube Goianiense) ಸಕ್ರಿಯ ಆಟಗಾರ. ತಂಡದ ಮಿಡ್‌ಫೀಲ್ಡರ್‌ ಆದ ಮಹಾತ್ಮಗಾಂಧಿ ಸತತ 12 ವರ್ಷದಿಂದ ಫುಟ್‌ಬಾಲ್‌ ಅನ್ನೇ ತನ್ನ ವೃತ್ತಿ ಮಾಡಿಕೊಂಡಿದ್ದಾನೆ.

ಹೆಸರು ಇಟ್ಟಿದ್ದು ಏಕೆ

1992ರ ಫೆಬ್ರವರಿ 18ರಂದು ಬ್ರೆಜಿಲ್‌ನ ಗೋನಿಯಾದಲ್ಲಿ ಜನಿಸಿದ ಮಹಾತ್ಮ ಗಾಂಧಿ ಹೆಬರ್ಪಿಯೋ ಮಟ್ಟೋಸ್‌ ಪೈರೆಸ್‌ಗೆ ಈ ಹೆಸರು ಬರಲು ಅವರ ಪೋಷಕರೇ ಕಾರಣ.

ಫುಟ್‌ಬಾಲ್‌ ಆಟಗಾರರೂ ಆಗಿದ್ದ ಆತನ ತಂದೆಗೆ ತನ್ನ ಮಗನೂ ಫುಟ್‌ ಬಾಲ್‌ ಆಟಗಾರನಾಗಬೇಕು ಎನ್ನುವ ಹಂಬಲವಿತ್ತು.

ಅಲ್ಲದೇ ಫುಟ್‌ ಬಾಲ್‌ ಆಟಕ್ಕೆ ದಕ್ಷಿಣ ಆಫ್ರಿಕಾದಲ್ಲಿ ಬೆಂಬಲವಾಗಿ ನಿಂತಿದ್ದ ಗಾಂಧೀಜಿ ಅವರು ಅಹಿಂಸಾ ಮಾರ್ಗದ ಹೋರಾಟದ ಬಗ್ಗೆ ಅಭಿಮಾನವಿತ್ತು. ಈ ಕಾರಣದಿಂದ ತಂದೆ ಮಗನ ಹೆಸರಿನೊಂದಿಗೆ ಮಹಾತ್ಮಗಾಂಧಿಯನ್ನು ಸೇರಿಸಿಬಿಟ್ಟರು.

ಅಪ್ಪನ ಆಸೆಯಂತೆ ಮಗ ಫುಟ್‌ ಬಾಲ್‌ ಕಲಿಯತೊಡಗಿದ. ಶಾಲಾ, ಕಾಲೇಜು ದಿನಗಳಲ್ಲಿಯೂ ಫುಟ್‌ಬಾಲ್‌ ಆಡುತ್ತಲೇ ಬೆಳೆಯುತ್ತಾ ಬಂದಿದ್ದಾನೆ. ಈಗ ಈವರೆಗೂ ಬ್ರೆಜಿಲ್‌ನ ಅಟ್ಲೆಟಿಕೋ ಕ್ಲಬ್ ಗೆ ಸೇರಿಕೊಂಡು ಅಲ್ಲಿಯೇ ಪ್ರಮುಖ ಆಟಗಾರನಾಗಿ ಬೆಳೆದಿದ್ದಾನೆ.

2012ರಲ್ಲಿ ನಡೆದಿದ್ದ ಸೆವೆನ್‌ ಸೀರಿಸ್‌ ಎ ಗೇಮ್‌ನಲ್ಲಿ ನಲ್ಲಿ ಮಹಾತ್ಮ ಗಮನ ಸೆಳದಿದ್ದ. ಮರು ವರ್ಷವೇ ಸೆರ್ರಿ ಬಿ ಫುಟ್‌ಬಾಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ. ಆನಂತರ ನಿರಂತರವಾಗಿ ಅಲ್ಲಿ ರಾಜ್ಯ ತಂಡವನ್ನೂ ಪ್ರತಿನಿಧಿಸಿದ್ದ. ಒಟ್ಟು ಐದು ರಾಜ್ಯ ಲೀಗ್‌ ಪಂದ್ಯಾವಳಿಗಳಲ್ಲಿ ಮಹಾತ್ಮ ಆಟ ಗಮನ ಸೆಳದಿತ್ತು.

ಈಗಲೂ ಫುಟ್‌ಬಾಲ್‌ ಆತನ ಪ್ರೀತಿಯ ಆಟವೇ. ಇಡೀ ತಂಡದಲ್ಲಿ ಆತನನ್ನು ಕರೆಯುವುದು ಮಹಾತ್ಮ ಎಂಬ ಹೆಸರಿನಿಂದಲೇ. ಆತನ ನಿಕ್‌ ನೇಮ್‌ ಕೂಡ ಮಹಾತ್ಮ.

ಗಾಂಧೀ ಪುಟ್‌ಬಾಲ್‌ ನಂಟು

ಇನ್ನೊಂದು ಆಸಕ್ತಿದಾಯಕ ವಿಷಯವೆಂದರೆ, ಮಹಾತ್ಮಗಾಂಧಿ ಅವರಿಗೂ ಫುಟ್‌ ಬಾಲ್‌ ಗೂ ಗಾಢ ನಂಟಿದೆ.

ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ ನೀಡುವ ಮಾಹಿತಿ ಪ್ರಕಾರ, ಮಹಾತ್ಮಗಾಂಧಿ ದಕ್ಷಿಣ ಆಫ್ರಿಕಾದಲ್ಲಿ 1893 ರಿಂದ 1915 ರವರೆಗೆ ನೆಲೆಸಿದ್ದರು. ಆಗ ಅಲ್ಲಿ ಮೂರು ಫುಟ್‌ಬಾಲ್‌ ತಂಡಗಳ ಸ್ಥಾಪನೆಗೆ ಗಾಂಧಿ ಉತ್ತೇಜನ ನೀಡಿದ್ದರು. ಪ್ಯಾಸಿವ್‌ ರೆಸಿಸ್ಟರ್ಸ್‌(the Passive Resisters Soccer Club) ಫುಟ್‌ ಬಾಲ್‌ ಕ್ಲಬ್‌ ಗಾಂಧಿ ಅವರೇ ಆರಂಭಿಸಿದ್ದರು. ಜೋಹಾನ್ಸ್‌ ಬರ್ಗ್‌, ಪ್ರಿಟೋರಿಯಾ ಹಾಗೂ ಡರ್ಬನ್‌ನಲ್ಲಿ ತಂಡಗಳನ್ನು ಗಾಂಧೀಜಿ ಆರಂಭಿಸಿ ಬೆಂಬಲವಾಗಿ ನಿಂತಿದ್ದರು.

ಇದರೊಟ್ಟಿಗೆ ಟ್ರಾನ್ಸ್‌ವಾಲ್‌ ಇಂಡಿಯನ್‌ ಫುಟ್‌ಬಾಲ್‌ ಅಸೋಸಿಯೇಷನ್‌ ಅನ್ನು 1896ರಲ್ಲಿ ಹುಟ್ಟು ಹಾಕಲು ಕಾರಣರಾಗಿದ್ದರು ಗಾಂಧೀಜಿ. ಇದರಿಂದ ಗಾಂಧೀಜಿ ಅವರ ಹೆಸರು ಫುಟ್‌ಬಾಲ್‌ ನೊಂದಿಗೂ ಗಾಢ ಸಂಬಂಧವನ್ನು ಹೊಂದಿದೆ. ಈಗಲೂ ದಕ್ಷಿಣ ಆಫ್ರಿಕಾದಲ್ಲಿ ಈ ಕ್ಲಬ್‌ಗಳು ಫುಟ್‌ಬಾಲ್‌ ಮುಂದುವರೆಸಿವೆ.

ಆಸಕ್ತಿದಾಯಕ ಹೆಸರುಗಳು

ಇನ್ನೊಂದು ಕಡೆ ಬ್ರೆಜಿಲ್‌ನ ಹಲವಾರು ಫುಟ್‌ಬಾಲ್‌ ಆಟಗಾರರ ಹೆಸರು ಹೀಗೆ ದೊಡ್ಡವರೊಂದಿಗೆ ನಂಟು ಹೊಂದಿದೆ. ಹಲವಾರು ಕ್ಲಬ್‌ಗಳ ಆಟಗಾರರ ಹೆಸರು ಗಮನಿಸಿದರೆ ಇದು ಕಂಡು ಬರುತ್ತದೆ. ಅದರಲ್ಲಿ ಮುಖ್ಯವಾಗಿ ಜಾನ್‌ ಲೆನನ್‌ ಸಿಲ್ವಾ ಸಂತೋಸ್‌ ಎಂಬುವವರ ಹೆಸರು ಖ್ಯಾತ ಗಾಯ ಜಾನ್‌ ಲೆನೆನ್‌ ಹೆಸರಿನೊಂದಿಗೆ ಸೇರಿಕೊಂಡಿದೆ. ಪಿಚಾಕು ಎಂಬ ಹೆಸರಿನ ಇನ್ನೊಬ್ಬ ಆಟಗಾರರೂ ಅಲ್ಲಿದ್ದಾರೆ. ಬೆನ್‌ ಹುರ್‌ ಮೊರೀರಾ ಪೆರೆಸ್‌, ಮಾರ್ಲನ್‌ ಬ್ರಾಂಡೋ ಎನ್ನುವ ಹೆಸರಿನ ಆಟಗಾರರು ಅಲ್ಲಿದ್ಧಾರೆ ಎಂದು ದ ಟೆಲಿಗ್ರಾಫ್‌ ವರದಿ ಮಾಡಿದೆ.

Whats_app_banner

ವಿಭಾಗ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.