Virat Kohli: 2011ರ ಡೊಮಿನಿಕಾ ಟೆಸ್ಟ್ ನೆನಪಿಸಿಕೊಂಡ ವಿರಾಟ್; ದ್ರಾವಿಡ್ ಜೊತೆಗಿನ ಫೋಟೋ ಹಂಚಿಕೊಂಡು ಭಾವುಕ ಪೋಸ್ಟ್
- India vs West Indies Dominica Test : ಜುಲೈ 12ರ ಬುಧವಾರದಿಂದ ವೆಸ್ಟ್ ಇಂಡೀಸ್ ಹಾಗೂ ಟೀಮ್ ಇಂಡಿಯಾ ಟೆಸ್ಟ್ ಸರಣಿ ಆರಂಭವಾಗಲಿದೆ. ಮೊದಲ ಪಂದ್ಯ ಡೊಮಿನಿಕಾದಲ್ಲಿ ನಡೆಯಲಿದೆ. ಇದಕ್ಕೂ ಮುನ್ನ 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಡೊಮಿನಿಕಾದಲ್ಲಿ ಭಾರತ ಕೊನೆಯ ಟೆಸ್ಟ್ ಪಂದ್ಯ ಆಡಿತ್ತು. ಆ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಮತ್ತು ವಿರಾಟ್ ಜೊತೆಯಾಗಿ ಆಡಿದ್ದರು.
- India vs West Indies Dominica Test : ಜುಲೈ 12ರ ಬುಧವಾರದಿಂದ ವೆಸ್ಟ್ ಇಂಡೀಸ್ ಹಾಗೂ ಟೀಮ್ ಇಂಡಿಯಾ ಟೆಸ್ಟ್ ಸರಣಿ ಆರಂಭವಾಗಲಿದೆ. ಮೊದಲ ಪಂದ್ಯ ಡೊಮಿನಿಕಾದಲ್ಲಿ ನಡೆಯಲಿದೆ. ಇದಕ್ಕೂ ಮುನ್ನ 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಡೊಮಿನಿಕಾದಲ್ಲಿ ಭಾರತ ಕೊನೆಯ ಟೆಸ್ಟ್ ಪಂದ್ಯ ಆಡಿತ್ತು. ಆ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಮತ್ತು ವಿರಾಟ್ ಜೊತೆಯಾಗಿ ಆಡಿದ್ದರು.
(1 / 7)
ಜುಲೈ 12ರಿಂದ ವೆಸ್ಟ್ ಇಂಡೀಸ್ ವಿರುದ್ಧ ಭಾರತವು ಮೊದಲ ಟೆಸ್ಟ್ ಪಂದ್ಯ ಆಡಲಿದೆ. ಮೊದಲ ಪಂದ್ಯ ಡೊಮಿನಿಕಾದಲ್ಲಿ ನಡೆಯಲಿದೆ. ಈ ಟೆಸ್ಟ್ ಆರಂಭಕ್ಕೂ ಮುನ್ನ ಕೋಚ್ ದ್ರಾವಿಡ್ ಜೊತೆಗಿನ ಚಿತ್ರವನ್ನು ವಿರಾಟ್ ಕೊಹ್ಲಿ ಪೋಸ್ಟ್ ಮಾಡಿದ್ದಾರೆ.(photos- virat kohli instagram)
(2 / 7)
ಈ ಫೋಟೋಗೆ ಕೊಹ್ಲಿ ಭಾವನಾತ್ಮಕ ಶೀರ್ಷಿಕೆ ಬರೆದಿದ್ದಾರೆ. 2011ರ ಡೊಮಿನಿಕಾ ಟೆಸ್ಟ್‌ನಲ್ಲಿ ನಾನು ಮತ್ತು ದ್ರಾವಿಡ್ ಜೊತೆಯಾಗಿ ಆಡಿದ್ದೆವು ಎಂದು ಕಿಂಗ್ ನೆನಪಿಸಿಕೊಂಡಿದ್ದಾರೆ.
(3 / 7)
ವಿರಾಟ್ ಕೊಹ್ಲಿ ಮತ್ತು ದ್ರಾವಿಡ್ 2011 ರ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ 3 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಜೊತೆಗೆ ಆಡಿದ್ದರು. ಸರಣಿಯ ಮೂರನೇ ಪಂದ್ಯ ಡೊಮಿನಿಕಾದಲ್ಲಿ ನಡೆದಿತ್ತು. ಆ ಪಂದ್ಯದಲ್ಲಿ ದ್ರಾವಿಡ್ 5 ಮತ್ತು 34 ರನ್ ಗಳಿಸಿದ್ದರು.
(4 / 7)
ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್‌ನಲ್ಲಿ 204 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಭಾರತ ಮೊದಲ ಇನಿಂಗ್ಸ್‌ನಲ್ಲಿ 347 ರನ್ ಗಳಿಸಿತು. ಇದಾದ ಬಳಿಕ ವೆಸ್ಟ್ ಇಂಡೀಸ್ ಎರಡನೇ ಇನ್ನಿಂಗ್ಸ್ ನಲ್ಲಿ 322 ರನ್ ಗಳಿಸಿತ್ತು. ಆ ನಂತರ ಭಾರತ ತಂಡ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಇಳಿದು 3 ವಿಕೆಟ್‌ಗೆ 94 ರನ್ ಗಳಿಸಿ ಪಂದ್ಯವನ್ನು ಡ್ರಾ ಮಾಡಿಕೊಂಡಿತು.
(5 / 7)
3 ಪಂದ್ಯಗಳ ಸರಣಿಯನ್ನು ಭಾರತ 1-0 ಅಂತರದಲ್ಲಿ ವಶಪಡಿಸಿಕೊಂಡಿತು. ಈ ಪ್ರವಾಸದ ವೇಳೆ ವಿರಾಟ್ ಕೊಹ್ಲಿ ಕಿಂಗ್‌ಸ್ಟನ್‌ನ ಸಬಿನಾ ಪಾರ್ಕ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ವಿರಾಟ್ ಮತ್ತು ಟೀಮ್ ಇಂಡಿಯಾ 12 ವರ್ಷಗಳ ನಂತರ ಡೊಮಿನಿಕಾದಲ್ಲಿ ಮತ್ತೆ ಟೆಸ್ಟ್ ಪಂದ್ಯವನ್ನು ಆಡುತ್ತಿದೆ.
(6 / 7)
ವೆಸ್ಟ್ ಇಂಡೀಸ್ ತಂಡವು ಕೊನೆಯ ಬಾರಿಗೆ 2002ರಲ್ಲಿ ಭಾರತದ ವಿರುದ್ಧ ಟೆಸ್ಟ್ ಸರಣಿ ಗೆದ್ದಿತ್ತು. ಅಂದಿನಿಂದ ಉಭಯ ತಂಡಗಳ ನಡುವೆ 8 ಟೆಸ್ಟ್ ಸರಣಿಗಳು ನಡೆದಿದ್ದು, ಪ್ರತಿ ಬಾರಿಯೂ ಟೀಮ್ ಇಂಡಿಯಾ ಗೆಲುವು ಸಾಧಿಸಿದೆ.
ಇತರ ಗ್ಯಾಲರಿಗಳು