ಮನೆಯಲ್ಲಿ ಕ್ರಿಸ್ಮಸ್ ಪಾರ್ಟಿ ಆಯೋಜಿಸಿದ್ದರೆ ಮಾಡಿ ರುಚಿಕರವಾದ ಟುಟ್ಟಿ ಫ್ರೂಟಿ ಕೇಕ್; ಅತಿಥಿಗಳೆಲ್ಲಾ ಇಷ್ಟಪಟ್ಟು ತಿಂತಾರೆ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮನೆಯಲ್ಲಿ ಕ್ರಿಸ್ಮಸ್ ಪಾರ್ಟಿ ಆಯೋಜಿಸಿದ್ದರೆ ಮಾಡಿ ರುಚಿಕರವಾದ ಟುಟ್ಟಿ ಫ್ರೂಟಿ ಕೇಕ್; ಅತಿಥಿಗಳೆಲ್ಲಾ ಇಷ್ಟಪಟ್ಟು ತಿಂತಾರೆ ನೋಡಿ

ಮನೆಯಲ್ಲಿ ಕ್ರಿಸ್ಮಸ್ ಪಾರ್ಟಿ ಆಯೋಜಿಸಿದ್ದರೆ ಮಾಡಿ ರುಚಿಕರವಾದ ಟುಟ್ಟಿ ಫ್ರೂಟಿ ಕೇಕ್; ಅತಿಥಿಗಳೆಲ್ಲಾ ಇಷ್ಟಪಟ್ಟು ತಿಂತಾರೆ ನೋಡಿ

ಏಸು ಕ್ರಿಸ್ತನ ಜನ್ಮದಿನ ಕ್ರಿಶ್ಚಿಯನ್ ಸಮುದಾಯಕ್ಕೆ ಅತಿ ದೊಡ್ಡ ಹಬ್ಬ. ಈ ಹಬ್ಬದಂದು ಪ್ರಾರ್ಥನೆಗಳ ಜತೆಗೆ ಮನೆಗಳಲ್ಲಿ ಪಾರ್ಟಿಗಳನ್ನು ಆಯೋಜಿಸಲಾಗುತ್ತದೆ. ಕ್ರಿಸ್ಮಸ್ ಅಂದರೆ ನೆನಪಾಗುವುದು ಕೇಕ್. ನೀವು ಮನೆಯಲ್ಲಿ ಪಾರ್ಟಿ ಆಯೋಜಿಸಿದ್ದರೆ, ರುಚಿಕರವಾದ ಟುಟ್ಟಿ ಫ್ರೂಟಿ ಕೇಕ್ ತಯಾರಿಸಿ. ಇದನ್ನು ಮಾಡುವುದು ತುಂಬಾ ಸುಲಭ. ಇಲ್ಲಿದೆ ಪಾಕವಿಧಾನ

ಮನೆಯಲ್ಲಿ ಕ್ರಿಸ್ಮಸ್ ಪಾರ್ಟಿ ಆಯೋಜಿಸಿದ್ದರೆ ಮಾಡಿ ರುಚಿಕರವಾದ ಟುಟ್ಟಿ ಫ್ರೂಟಿ ಕೇಕ್
ಮನೆಯಲ್ಲಿ ಕ್ರಿಸ್ಮಸ್ ಪಾರ್ಟಿ ಆಯೋಜಿಸಿದ್ದರೆ ಮಾಡಿ ರುಚಿಕರವಾದ ಟುಟ್ಟಿ ಫ್ರೂಟಿ ಕೇಕ್

ಏಸು ಕ್ರಿಸ್ತನ ಹುಟ್ಟಿದ ದಿನ ಡಿಸೆಂಬರ್ 25 ಅನ್ನು ಪ್ರಪಂಚದಾದ್ಯಂತ ಕ್ರಿಶ್ಚಿಯನ್ ಧರ್ಮೀಯರು ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ. ಈ ದಿನವನ್ನು ವರ್ಷದ ಅತಿದೊಡ್ಡ ದಿನವೆಂದು ಪರಿಗಣಿಸಲಾಗುತ್ತದೆ. ಕ್ರಿಸ್ಮಸ್ ಅನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಈ ದಿನ, ಚರ್ಚ್ ಅನ್ನು ಸುಂದರವಾಗಿ ಅಲಂಕರಿಸಲಾಗುತ್ತದೆ. ಈ ದಿನದಂದು ಏಸು ಕ್ರಿಸ್ತನನ್ನು ಪ್ರಾರ್ಥಿಸುವುದರ ಹೊರತಾಗಿ, ಜನರು ಕ್ರಿಸ್ಮಸ್ ಪಾರ್ಟಿಗಳನ್ನು ಸಹ ಮಾಡುತ್ತಾರೆ. ಹೆಚ್ಚಿನ ಜನರು ಈ ಪಾರ್ಟಿಯನ್ನು ಮನೆಯಲ್ಲಿ ಆಯೋಜಿಸುತ್ತಾರೆ. ನೀವು ಸಹ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದರೆ, ಕೇಕ್ ಇರದಿದ್ದರೆ ಹೇಗೆ ಹೇಳಿ. ಕ್ರಿಸ್ಮಸ್ ಸ್ಪೆಷಲ್ ತಿಂಡಿ ಎಂದರೆ ಅದು ಕೇಕ್. ಹೀಗಾಗಿ ಈ ಕ್ರಿಸ್ಮಸ್‌ಗೆ ಟುಟ್ಟಿ ಫ್ರೂಟಿ ಕೇಕ್ ಅನ್ನು ಮನೆಯಲ್ಲಿಯೇ ತಯಾರಿಸಿ, ಅತಿಥಿಗಳಿಗೆ ಕೊಡಬಹುದು. ಇದನ್ನು ತಯಾರಿಸುವುದು ತುಂಬಾನೇ ಸುಲಭ. ಇಲ್ಲಿದೆ ಮಾಡುವ ವಿಧಾನ.

ಟುಟ್ಟಿ ಫ್ರೂಟಿ ಕೇಕ್ ತಯಾರಿಸುವ ವಿಧಾನ ಇಲ್ಲಿದೆ

ಬೇಕಾಗುವ ಸಾಮಗ್ರಿಗಳು: ಮೊಸರು- ಒಂದು ಕಪ್, ಸಕ್ಕರೆ- ಒಂದೂವರೆ ಕಪ್, ಎಣ್ಣೆ-ಅರ್ಧ ಕಪ್, ಮೈದಾ- ಒಂದು ಕಪ್, ವೆನಿಲ್ಲಾ ಸಾರ- ಒಂದು ಟೀ ಚಮಚ, ಅಡುಗೆ ಸೋಡ- ಒಂದು ಚಿಟಿಕೆ, ಬೇಕಿಂಗ್ ಪೌಡರ್- ಒಂದು ಟೀ ಚಮಚ, ನೀರು- ಅರ್ಧ ಕಪ್, ಟುಟ್ಟಿ ಫ್ರೂಟಿ- ಅರ್ಧ ಕಪ್, ಉಪ್ಪು- ಚಿಟಿಕೆ.

ತಯಾರಿಸುವ ವಿಧಾನ: ಮೊದಲನೆಯದಾಗಿ ಟುಟ್ಟಿ ಫ್ರೂಟಿಯನ್ನು ತೆಗೆದುಕೊಂಡು ಅದಕ್ಕೆ 1 ಟೀ ಚಮಚದಷ್ಟು ಮೈದಾ ಹಾಕಿ ಮಿಶ್ರಣ ಮಾಡಿಟ್ಟುಕೊಳ್ಳಿ.

- ನಂತರ ಒಂದು ಪಾತ್ರೆಯಲ್ಲಿ ಮೊಸರು, ಸಕ್ಕರೆ, ಎಣ್ಣೆ ಮತ್ತು ವೆನಿಲ್ಲಾ ಸಾರಗಳನ್ನು ತೆಗೆದುಕೊಳ್ಳಿ. ನಂತರ ಅದನ್ನು ವಿಸ್ಕ್ ಸಹಾಯದಿಂದ ಚೆನ್ನಾಗಿ ಮಿಶ್ರಣ ಮಾಡಿ.

- ಚೆನ್ನಾಗಿ ಮಿಶ್ರಣ ಮಾಡಿದ ನಂತರ ಇದಕ್ಕೆ ಮೈದಾ ಹಿಟ್ಟನ್ನು ಜರಡಿ ಹಿಡಿದು ಹಾಕಿ. ಜತೆಗೆ ಅಡುಗೆ ಸೋಡಾ, ಬೇಕಿಂಗ್ ಪೌಡರ್, ಚಿಟಿಕೆ ಉಪ್ಪು ಹಾಕಿ.

- ಈ ಮಿಶ್ರಣವನ್ನು ಗಂಟು ಬಾರದಂತೆ ಚೆನ್ನಾಗಿ ಕಲಸಬೇಕು. ಒಂದೇ ಹಂತದಲ್ಲಿ ಕಲಸಬೇಕು.

- ಈ ಮಿಶ್ರಣ ದಪ್ಪಗಿದ್ದರೆ ನೀರು ಸೇರಿಸಬಹುದು.

- ಇದಕ್ಕೆ ವೆನಿಲ್ಲಾ ಸಾರವನ್ನು ಹಾಕಿ ಕಲಸಿ.

- ಬಳಿಕ ಟುಟ್ಟಿ ಫ್ರೂಟಿಯನ್ನು ಹಾಕಿ ಮಿಕ್ಸ್ ಮಾಡಿ.

- ಈ ಮಿಶ್ರಣವನ್ನು ಅತಿಯಾಗಿ ಬೆರೆಸಬೇಡಿ. ಹೆಚ್ಚು ಮಿಶ್ರಣವು ಕೇಕ್‌ನ ವಿನ್ಯಾಸವನ್ನು ಹಾಳುಮಾಡುತ್ತದೆ.

- ಈಗ ಕೇಕ್ ಅಚ್ಚಿಗೆ ಎಣ್ಣೆ ಸವರಿ. ಟ್ರೇಯ ಕೆಳಭಾಗಕ್ಕೆ ಬಟರ್ ಕಾಗದ (ಬಟರ್ ಪೇಪರ್) ಹಾಕಿ. ನಂತರ ಹಿಟ್ಟನ್ನು ಅದಕ್ಕೆ ಸುರಿಯಿರಿ.

- ಟ್ರೇಯನ್ನು ಎರಡು ಬಾರಿ ತಟ್ಟಿ. ಮೇಲೆ ಬೇಕಿದ್ದರೆ ಸ್ವಲ್ಪ ಟುಟ್ಟಿ ಫ್ರೂಟಿ ಹಾಕಬಹುದು.

- ಈಗ ಕೇಕ್ ಟ್ರೇಯನ್ನು ಮೊದಲೇ ಬಿಸಿಯಾಗಿರಿಸಿದ ಓವನ್‍ನಲ್ಲಿ ಇರಿಸಿ. ಇದನ್ನು 180° ಸೆಲ್ಸಿಯಸ್‍ನಲ್ಲಿ 30 ರಿಂದ 40 ನಿಮಿಷಗಳ ಕಾಲ ಬೇಕ್ ಮಾಡಿ.

- ಓವನ್ ಇಲ್ಲದಿದ್ದರೆ, ಪ್ಯಾನ್ ಬಳಸಿಯೂ ಕೇಕ್ ತಯಾರಿಸಬಹುದು.

- ಕೇಕ್ ಬೆಂದಿದೆಯೇ ಅಥವಾ ಇಲ್ಲವೇ ಎಂದು ಪರೀಕ್ಷಿಸಲು ಟೂತ್ ಪಿಕ್ ಬಳಸಬಹುದು.

- ಕೇಕ್‍ನಿಂದ ಟೂತ್ ಪಿಕ್ ಸ್ವಚ್ಛವಾಗಿ ಹೊರಬಂದರೆ, ಅದು ಚೆನ್ನಾಗಿ ಬೆಂದಿದೆ ಎಂದು ಅರ್ಥ. ನಂತರ ಕೇಕ್ ಅನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಟ್ಟು ಒಂದು ತಟ್ಟೆಯಲ್ಲಿ ಅಲಂಕರಿಸಿದರೆ ರುಚಿಕರವಾದ ಟುಟ್ಟಿ ಫ್ರೂಟಿ ಕೇಕ್ ಸವಿಯಲು ಸಿದ್ಧ. ಮನೆಗೆ ಬಂದ ಅತಿಥಿಗಳಿಗೆ ಬಡಿಸಿ, ಖಂಡಿತ ಇಷ್ಟಪಟ್ಟು ತಿನ್ನುವುದರಲ್ಲಿ ಸಂಶಯವೇ ಇಲ್ಲ.

Whats_app_banner