ಚಿತ್ರೀಕರಣದ ಸಮಯದಲ್ಲಿ ಕಾಲಿಗೆ ಗಾಯಮಾಡಿಕೊಂಡ ಪ್ರಭಾಸ್‌; ಜಪಾನ್‌ನಲ್ಲಿ ಕಲ್ಕಿ 2898 AD ಪ್ರಚಾರಕ್ಕೆ ಗೈರಾದ ಬಗ್ಗೆ ಕ್ಷಮೆಯಾಚನೆ
ಕನ್ನಡ ಸುದ್ದಿ  /  ಮನರಂಜನೆ  /  ಚಿತ್ರೀಕರಣದ ಸಮಯದಲ್ಲಿ ಕಾಲಿಗೆ ಗಾಯಮಾಡಿಕೊಂಡ ಪ್ರಭಾಸ್‌; ಜಪಾನ್‌ನಲ್ಲಿ ಕಲ್ಕಿ 2898 Ad ಪ್ರಚಾರಕ್ಕೆ ಗೈರಾದ ಬಗ್ಗೆ ಕ್ಷಮೆಯಾಚನೆ

ಚಿತ್ರೀಕರಣದ ಸಮಯದಲ್ಲಿ ಕಾಲಿಗೆ ಗಾಯಮಾಡಿಕೊಂಡ ಪ್ರಭಾಸ್‌; ಜಪಾನ್‌ನಲ್ಲಿ ಕಲ್ಕಿ 2898 AD ಪ್ರಚಾರಕ್ಕೆ ಗೈರಾದ ಬಗ್ಗೆ ಕ್ಷಮೆಯಾಚನೆ

ಜಪಾನ್‌ನಲ್ಲಿ ಕಲ್ಕಿ ಬಿಡುಗಡೆಯಾಗಲಿದೆ. ಅದರ ಸಲುವಾಗಿ ನಟ ಪ್ರಭಾಸ್‌ ಸಿನಿಮಾ ಪ್ರಚಾರಕ್ಕೆ ತೆರಳಬೇಕಿತ್ತು. ಆದರೆ ಅವರು ತಮ್ಮ ಕಾಲಿಗೆ ಗಾಯಮಾಡಿಕೊಂಡಿರುವುದಾಗಿ ಮತ್ತು ಬರಲು ಆಗದೇ ಇರುವ ಕಾರಣ ಕ್ಷಮೆಯಾಚಿಸುವುದಾಗಿ ಹೇಳಿದ್ದಾರೆ.

ಚಿತ್ರೀಕರಣದ ಸಮಯದಲ್ಲಿ ಕಾಲಿಗೆ ಗಾಯಮಾಡಿಕೊಂಡ ಪ್ರಭಾಸ್‌
ಚಿತ್ರೀಕರಣದ ಸಮಯದಲ್ಲಿ ಕಾಲಿಗೆ ಗಾಯಮಾಡಿಕೊಂಡ ಪ್ರಭಾಸ್‌

ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಪ್ರಭಾಸ್ ಇತ್ತೀಚೆಗೆ ಗಾಯಗೊಂಡಿದ್ದಾರೆ. ಅವರು ಕಲ್ಕಿ 2898 AD ಸಿನಿಮಾದ ಪ್ರಚಾರಕ್ಕೂ ಹೋಗಲು ಸಾಧ್ಯವಾಗಿಲ್ಲ. ಅವರ ಪರಿಸ್ಥಿತಿ ಹೀಗಿರುವಾಗ ತಾನು ಪ್ರಚಾರಕ್ಕೆ ಹೋಗಲು ಸಾಧ್ಯವಾಗದೇ ಇರುವ ಕಾರಣ ಕ್ಷಮೆಯಾಚಿಸಿದ್ದಾರೆ. ಜನವರಿ 3, 2025 ರಂದು ಜಪಾನ್‌ನಲ್ಲಿ ಕಲ್ಕಿ ಬಿಡುಗಡೆಯಾಗಲಿದೆ. ಅವರ ಈ ಸಿನಿಮಾದ ಬಗ್ಗೆ ಸಾಕಷ್ಟು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಚಿತ್ರೀಕರಣದ ಸಮಯದಲ್ಲಿ ಪಾದ ಉಳಿಕಿದೆ ಎಂದು ತಿಳಿದುಬಂದಿದೆ.

ಆದರೆ ಅವರಿಗೆ ಗಾಯವಾಗುವಂತ ಯಾವ ಸೀನ್ ಶೂಟ್‌ ಮಾಡುತ್ತಿದ್ದರು? ಇದು ಹೇಗೆ ಆಗಿದೆ ಎಂಬ ಮಾಹಿತಿ ಇನ್ನೂ ತಿಳಿದುಬಂದಿಲ್ಲ. ತಮ್ಮ ಮುಂಬರುವ ಚಿತ್ರದ ಶೂಟಿಂಗ್‌ನಲ್ಲಿ ನಿರತರಾಗಿರುವ ಸೌತ್ ಸೂಪರ್‌ಸ್ಟಾರ್ ಪ್ರಭಾಸ್ ಕಾಲಿಗೆ ನೋವು ಮಾಡಿಕೊಂಡಿದ್ದಾರೆ ಎಂಬುದಷ್ಟೇ ತಿಳಿದುಬಂದಿದೆ.

“ನನ್ನ ಮೇಲೆ ಮತ್ತು ನನ್ನ ಕೆಲಸದ ಮೇಲೆ ಯಾವಾಗಲೂ ತುಂಬಾ ಪ್ರೀತಿಯನ್ನು ತೋರಿಸುತ್ತಿರುವುದಕ್ಕೆ ಧನ್ಯವಾದಗಳು, ನಾನು ಜಪಾನ್‌ಗೆ ಹೋಗಲು ಬಹಳ ಸಮಯದಿಂದ ಎದುರು ನೋಡುತ್ತಿದ್ದೆ. ಆದರೆ, ಚಿತ್ರೀಕರಣದ ಸಮಯದಲ್ಲಿ ನನ್ನ ಪಾದ ಉಳುಕಿದೆ ಎಂದು ಹೇಳಲು ನನಗೆ ತುಂಬಾ ವಿಷಾದವಿದೆ. ಹಾಜರಾಗಲು ಸಾಧ್ಯವಾಗುತ್ತಿಲ್ಲ” ಎಂದು ಅವರು ಸಂದೇಶ ನೀಡಿದ್ದಾರೆ.

ಶೀಘ್ರದಲ್ಲೇ ನಿಮ್ಮನ್ನು ಭೇಟಿ ಮಾಡಲು ಬಯಸುತ್ತೇನೆ ಎಂದೂ ಸಹ ಹೇಳಿಕೊಂಡಿದ್ದಾರೆ. ಐ ಹೋಪ್ ಸಿಯು ಸೂನ್ ಎಂದು ತಿಳಿಸಿದ್ದಾರೆ.

ಪ್ರಭಾಸ್ ಪ್ರಸ್ತುತ ಹನು ರಾಘವಪುಡಿ ಅವರ ಚಲನಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಚಿತ್ರದಲ್ಲಿ ಇಮಾನ್ ಎಸ್ಮಾಯಿಲ್, ಅಕಾ ಇಮಾನ್ವಿ ಕೂಡ ನಟಿಸಿದ್ದಾರೆ. ಈ ಚಿತ್ರವು ಸುಭಾಷ್ ಚಂದ್ರ ಬೋಸ್ ಕಾಲದ ಕೇಂದ್ರೀಕೃತ ಐತಿಹಾಸಿಕ ನಾಟಕವಾಗಿದೆ. ಇದು 1940 ರ ದಶಕದಲ್ಲಿ ನಡೆದ ರಜಾಕರ್ ಚಳವಳಿಯನ್ನು ಆಧರಿಸಿದೆ. ಈ ಹಿಂದೆ, ಚಿತ್ರದಲ್ಲಿ ಮೃಣಾಲ್ ಠಾಕೂರ್ ನಾಯಕಿಯಾಗಿ ನಟಿಸುತ್ತಾರೆ ಎಂಬ ಊಹಾಪೋಹಗಳು ಇದ್ದವು.

Whats_app_banner