ಕನ್ನಡ ಸುದ್ದಿ  /  Sports  /  John Cena Appears Almost Totally Naked On Oscars 2024 Stage In Hilarious Bit Margot Robbie Can Not Stop Laughing Prs

ಬೆಸ್ಟ್ ಕಾಸ್ಟ್ಯೂಮ್ ಡಿಸೈನ್ ಆಸ್ಕರ್‌ ಅವಾರ್ಡ್ ಘೋಷಿಸಲು ನಗ್ನವಾಗಿ ಬಂದ WWE ಸ್ಟಾರ್ ಜಾನ್ ಸೆನಾ; ವಿಡಿಯೋ ವೈರಲ್

john cena: ಜಾನ್ ಸೆನಾ ಅವರು ಬೆಸ್ಟ್​ ಕಾಸ್ಟ್ಯೂಮ್​ ಡಿಸೈನ್ ಆಸ್ಕರ್​ ಅವಾರ್ಡ್​ ಘೋಷಿಸಲು ವೇದಿಕೆಗೆ ಬೆತ್ತಲಾಗಿ ಆಗಮಿಸಿದರು. ಈ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಬೆಸ್ಟ್ ಕಾಸ್ಟ್ಯೂಮ್ ಡಿಸೈನ್ ಅವಾರ್ಡ್ ಘೋಷಿಸಲು ನಗ್ನವಾಗಿ ಬಂದ WWE ಸ್ಟಾರ್ ಜಾನ್ ಸೆನಾ
ಬೆಸ್ಟ್ ಕಾಸ್ಟ್ಯೂಮ್ ಡಿಸೈನ್ ಅವಾರ್ಡ್ ಘೋಷಿಸಲು ನಗ್ನವಾಗಿ ಬಂದ WWE ಸ್ಟಾರ್ ಜಾನ್ ಸೆನಾ (REUTERS)

ಲಾಸ್​ ಏಂಜೆಲಿಸ್​ನ ಡಾಲ್ಬಿ ಥಿಯೇಟರ್​​ನಲ್ಲಿ 96ನೇ ಸಾಲಿನ ಆಸ್ಕರ್ ಅವಾರ್ಡ್ ಸಮಾರಂಭವು ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ಜಗತ್ತಿನ ನೂರಾರು ಸ್ಟಾರ್ ಕಲಾವಿದರು ಸಮಾರಂಭಕ್ಕೆ ಹಾಜರಿ ಹಾಕಿದ್ದಾರೆ. ಪ್ರತಿ ಸಲವೂ ಒಂದಲ್ಲ, ಒಂದು ವಿಚಾರಕ್ಕೆ ಸುದ್ದಿಯಾಗುವ ಆಸ್ಕರ್​ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಈ ಬಾರಿಯೂ ಸಾಕಷ್ಟು ಸುದ್ದಿ ಆಗಿದೆ. ಹೌದು, ಅದಕ್ಕೆ ಪ್ರಮುಖ ಕಾರಣವಾಗಿದ್ದು ಡಬ್ಲ್ಯುಡಬ್ಲ್ಯುಇ ಸೂಪರ್​ಸ್ಟಾರ್ ಮತ್ತು ಹಾಲಿವುಡ್​ ನಟ ಜಾನ್​ ಸೆನಾ ಅವರ ಬೆತ್ತಲೆ ಪ್ರವೇಶ.

ಜಿಮ್ಮಿ ಕಿಮ್ಮೆಲ್ ಹೋಸ್ಟ್ ಮಾಡುತ್ತಿರುವ ಈ ಈ ಕಾರ್ಯಕ್ರಮದ ವೇದಿಕೆಗೆ ಜಾನ್ ಸೆನಾ ಅವರು ನಗ್ನವಾಗಿ ಪ್ರವೇಶ ಮಾಡಿದ್ದಾರೆ. ಇದು ಅಲ್ಲಿದ್ದ ಕಲಾವಿದರಿಗೂ ಅಚ್ಚರಿ ಉಂಟು ಮಾಡಿತು. ನೋಡುಗರ ಹುಬ್ಬೇರುವಂತೆ ಮಾಡಿದ್ದಾರೆ. ಅವರು ನಗ್ನವಾಗಿ ಬಂದ ವಿಡಿಯೋ ಮತ್ತು ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು ಟೀಕೆ ವ್ಯಕ್ತವಾಗಿದೆ. ಆದರೆ ಅವರು ಬೆತ್ತಲೆಯಾಗಿ ವೇದಿಕೆ ಪ್ರವೇಶಿಸಲು ನಿಖರವಾದ ಕಾರಣ ಇದೆ. ವಿವರ ಈ ಮುಂದಿನಂತಿದೆ.

ಜಾನ್ ಸೆನಾ ಅವರು ಬೆಸ್ಟ್​ ಕಾಸ್ಟ್ಯೂಮ್​ ಡಿಸೈನ್ ಆಸ್ಕರ್​ ಅವಾರ್ಡ್​ ಘೋಷಿಸಲು ವೇದಿಕೆಗೆ ಆಗಮಿಸಿದರು. ಪ್ರಶಸ್ತಿಗೆ ತಕ್ಕಂತೆ ತನ್ನ ವಿಭಿನ್ನ ಗೆಟಪ್​ ಮೂಲಕ ಜಾನ್​ ಸೆನಾ, ಪ್ರಶಸ್ತಿ ಘೋಷಿಸಲು ಬೆತ್ತಲಾಗಿ ಮೈಕ್ ಮುಂದೆ ನಿಂತರು. ಸಂಪೂರ್ಣ ಬೆತ್ತಲಾಗಿದ್ದ ಜಾನ್ ಸೀನಾ ಅವರು ತನ್ನ ಗುಪ್ತಾಂಗವನ್ನು ಒಂದು ಪ್ಲೇಟ್​ ರೀತಿಯ ವಸ್ತುವೊಂದರಿಂದ ಮರೆ ಮಾಚಿದ್ದರು. ಸಮಾರಂಭ ಹೋಸ್ಟ್ ಮಾಡಿದ ನಿರೂಪಕ ಜಿಮ್ಮಿ ಕಿಮ್ಮೆಲ್ ಅವರೇ ಈ ಐಡಿಯಾ ಕೊಟ್ಟಿದ್ದು ಎಂದು ಹೇಳಲಾಗಿದೆ.

ವೇದಿಕೆಗೆ ಬೆತ್ತಲಾಗಿ ಬಂದ ಜಾನ್ ಸೆನಾ ಅವರು ಪ್ರಶಸ್ತಿ ಘೋಷಿಸಲು ಬಳಿಕ ವಿಭಿನ್ನ ಕಾಸ್ಟ್ಯೂಮ್ ಹಾಕಿಕೊಂಡರು. ವೇದಿಕೆಯಲ್ಲಿದ್ದ ಲೈಟ್​ಗಳನ್ನು ಆಫ್ ಮಾಡಿ, ವಸ್ತ್ರವೊಂದನ್ನು ಧರಿಸಲು ಸಿಬ್ಬಂದಿ ನೆರವಾದರು. ಆದರೆ ಅವರ ಅವತಾರ ನೋಡಿ ನೆಟ್ಟಿಗರು ತಬ್ಬಿಬ್ಬಾಗಿದ್ದಾರೆ. ಅಲ್ಲಿದ್ದ ಸಭಿಕರೆಲ್ಲರೂ ಬಿದ್ದು ಬಿದ್ದೂ ನಕ್ಕಿದ್ದಾರೆ. ತುಂಬಾ ಧೈರ್ಯದಿಂದ ಈ ಸಾಹಸ ಮಾಡಿದ ಜಾನ್ ಸೆನಾ ಅವರ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗುತ್ತಿವೆ. ಪರ ವಿರೋಧದ ಚರ್ಚೆಗಳು ಸಹ ಕೇಳಿ ಬರುತ್ತಿವೆ.

ಬೆಸ್ಟ್ ಕಾಸ್ಟ್ಯೂಮ್ ಡಿಸೈನ್ ಪ್ರಶಸ್ತಿಯು ‘ಪೂರ್ ಥಿಂಗ್ಸ್’ ಸಿನಿಮಾಗೆ ದೊರೆಯಿತು. ಈ ಸಿನಿಮಾ ಜೊತೆ ಆಪನ್​ ಹೈಮರ್ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. 2023ರಲ್ಲಿ ಭಾರತಕ್ಕೆ ಹಲವು ಆಸ್ಕರ್ ಪ್ರಶಸ್ತಿಗಳು ಸಿಕ್ಕಿದ್ದವು. ಭಾರತದ RRR ಚಿತ್ರದ ‘ನಾಟು ನಾಟು..’ ಹಾಡು ಆಸ್ಕರ್ ಗೆದ್ದಿತ್ತು. ಹಾಗೆಯೇ ‘ದಿ ಎಲಿಫಂಟ್ ವಿಸ್ಪರರ್ಸ್’ ಕೂಡ ಆಸ್ಕರ್​ ಪ್ರಶಸ್ತಿಗೆ ಮುತ್ತಿಕ್ಕಿತ್ತು. ಇದೇ ವೇಳೆ ಅವರು ವಸ್ತ್ರವಿನ್ಯಾಸ ಬಹಳ ಮುಖ್ಯವಾದದ್ದು ಎಂದು ಹೇಳಿದ್ದಾರೆ.

ಆಸ್ಕರ್‌ 2024 ಪ್ರಶಸ್ತಿ ಪಡೆದ ಸಿನಿಮಾಗಳು

ಅತ್ಯುತ್ತಮ ಚಿತ್ರ

"ಅಮೇರಿಕನ್ ಫಿಕ್ಷನ್"

"ಅನ್ಯಾಟಮಿ ಆಫ್ ಎ ಫಾಲ್"

"ಬಾರ್ಬಿ"

"ಹೋಲ್ಡವರ್ಸ್"

"ಕಿಲ್ಲರ್ಸ್‌ ಆಫ್‌ ದಿ ಫ್ಲವರ್‌ ಮೂನ್‌"

"ಮೇಸ್ಟ್ರೋ"

"ಪಾಸ್ಟ್‌ ಲೈವ್ಸ್‌"

"ಪೂವರ್‌ ಥಿಂಗ್ಸ್‌"

"ದಿ ಝೋನ್‌ ಆಫ್‌ ಇಂಟ್ರೆಸ್ಟ್‌"

"ಓಪನ್‌ಹೈಮರ್‌" (ಗೆಲುವು ಪಡೆದ ಸಿನಿಮಾ)

ಅತ್ಯುತ್ತಮ ನಟ

ಬ್ರಾಡ್ಲಿ ಕೂಪರ್, "ಮೆಸ್ಟ್ರೋ"

ಕೋಲ್ಮನ್ ಡೊಮಿಂಗೊ, "ರಸ್ಟಿನ್"

ಪಾಲ್ ಗಿಯಾಮಟ್ಟಿ, "ದಿ ಹೋಲ್ಡವರ್ಸ್"

ಸಿಲಿಯನ್ ಮರ್ಫಿ, ಓಪನ್‌ಹೈಮರ್‌ (ಗೆಲುವು)

ಜೆಫ್ರಿ ರೈಟ್, “ಅಮೇರಿಕನ್ ಫಿಕ್ಷನ್”

ಅತ್ಯುತ್ತಮ ನಟಿ

ಲಿಲಿ ಗ್ಲಾಡ್‌ಸ್ಟೋನ್, "ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್"

ಸಾಂಡ್ರಾ ಹಲ್ಲರ್, "ಅನ್ಯಾಟಮಿ ಆಫ್ ಎ ಫಾಲ್"

ಕ್ಯಾರಿ ಮುಲ್ಲಿಗನ್, "ಮೆಸ್ಟ್ರೋ"

ಎಮ್ಮಾ ಸ್ಟೋನ್, "ಪೂವರ್‌ ಥಿಂಗ್ಸ್‌" - (ಗೆಲುವು)

ಆನೆಟ್ ಬೆನಿಂಗ್, “ನ್ಯಾಡ್”

ಅತ್ಯುತ್ತಮ ನಿರ್ದೇಶಕ

ಜೊನಾಥನ್ ಗ್ಲೇಜರ್, "ದಿ ಝೋನ್‌ ಆಫ್‌ ಇಂಟ್ರೆಸ್ಟ್‌"

ಯೊರ್ಗೊಸ್ ಲ್ಯಾಂತಿಮೊಸ್, "ಪೂವರ್‌ ಥಿಂಗ್ಸ್‌"

ಕ್ರಿಸ್ಟೋಫರ್ ನೋಲನ್, "ಓಪನ್‌ಹೈಮರ್‌"- ವಿಜೇತ

ಮಾರ್ಟಿನ್ ಸ್ಕಾರ್ಸೆಸೆ, "ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್"

ಜಸ್ಟಿನ್ ಟ್ರೈಟ್, “ಅನ್ಯಾಟಮಿ ಆಫ್ ಎ ಫಾಲ್”

ಅತ್ಯುತ್ತಮ ಪೋಷಕ ನಟ

ಸ್ಟರ್ಲಿಂಗ್ ಕೆ. ಬ್ರೌನ್, "ಅಮೇರಿಕನ್ ಫಿಕ್ಷನ್"

ರಾಬರ್ಟ್ ಡಿ ನಿರೋ, "ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್"

ರಾಬರ್ಟ್ ಡೌನಿ ಜೂನಿಯರ್, "ಓಪನ್‌ಹೈಮರ್‌"- ವಿಜೇತ

ರಯಾನ್ ಗೊಸ್ಲಿಂಗ್, "ಬಾರ್ಬಿ"

ಮಾರ್ಕ್ ರುಫಲೋ, ಪೂವರ್‌ ಥಿಂಗ್ಸ್‌"

ಅತ್ಯುತ್ತಮ ಪೋಷಕ ನಟಿ

ಎಮಿಲಿ ಬ್ಲಂಟ್, "ಓಪನ್‌ಹೈಮರ್‌"

ಜೋಡಿ ಫೋಸ್ಟರ್, "ನ್ಯಾದ್"

ಡೇವಿನ್ ಜಾಯ್ ರಾಂಡೋಲ್ಫ್, "ದಿ ಹೋಲ್ಡವರ್ಸ್"- ಗೆಲುವು

ಡೇನಿಯಲ್ ಬ್ರೂಕ್ಸ್, "ದಿ ಕಲರ್ ಪರ್ಪಲ್"

ಅಮೇರಿಕಾ ಫೆರೆರಾ, "ಬಾರ್ಬಿ"

ಅತ್ಯುತ್ತಮ ಚಿತ್ರಕಥೆ (ಅಡಾಪ್ಟೆಡ್‌ ಸ್ಕ್ರೀನ್‌ಪ್ಲೇ)

"ಅಮೇರಿಕನ್ ಫಿಕ್ಷನ್" - ವಿಜೇತ

"ಬಾರ್ಬಿ"

"ಓಪನ್ಹೈಮರ್"

"ಪೂವರ್‌ ಥಿಂಗ್ಸ್‌"

"ದಿ ಝೋನ್‌ ಆಫ್‌ ಇಂಟ್ರೆಸ್ಟ್‌"

ಮೂಲ ಚಿತ್ರಕಥೆ

"ಅನ್ಯಾಟಮಿ ಆಫ್ ಎ ಫಾಲ್" - ವಿಜೇತ

"ಹೋಲ್ಡವರ್ಸ್"

"ಮೇ ಡಿಸೆಂಬರ್"

"ಪಾಸ್ಟ್‌ ಲೈವ್ಸ್‌"

"ಮೇಸ್ಟ್ರೋ"

ಅತ್ಯುತ್ತಮ ಅನಿಮೇಟೆಡ್ ಫೀಚರ್ ಫಿಲ್ಮ್

"ದಿ ಬಾಯ್ ಅಂಡ್ ದಿ ಹೆರಾನ್" - ವಿಜೇತ

"ಎಲಿಮೆಂಟಲ್‌"

"ನಿಮೋನಾ"

"ಸ್ಪೈಡರ್ ಮ್ಯಾನ್: ಸ್ಪೈಡರ್-ವರ್ಸ್ ಅಕ್ರಾಸ್"

"ರೋಬೋಟ್ ಡ್ರೀಮ್ಸ್"

ಅತ್ಯುತ್ತಮ ಅನಿಮೇಟೆಡ್ ಕಿರುಚಿತ್ರ

"ಲೆಟರ್‌ ಟು ಎ ಫಿಗ್‌"

"ನೈಂಟಿ ಫೈವ್‌ ಸೆನ್ಸಸ್‌"

"ಅವರ್‌ ಯೂನಿಫಾರ್ಮ್‌"

"ಪ್ಯಾಚಿಡರ್ಮ್"

"ವಾರ್‌ ಈಸ್‌ ಓವರ್‌"

ಅತ್ಯುತ್ತಮ ಅಂತಾರಾಷ್ಟ್ರೀಯ ಫೀಚರ್‌ ಫಿಲ್ಮ್‌

"ಐಯೋ ಕ್ಯಾಪಿಟಾನೋ," ಇಟಲಿ

"ಫರ್ಫೆಕ್ಟ್‌ ಡೇಸ್‌" ಜಪಾನ್

"ಸೊಸೈಟಿ ಆಫ್ ದಿ ಸ್ನೋ," ಸ್ಪೇನ್

"ಟೀಚರ್ಸ್‌ ಲೌಂಜ್," ಜರ್ಮನಿ

"ದಿ ಝೋನ್‌ ಆಫ್‌ ಇಂಟ್ರೆಸ್ಟ್‌ " ಯುನೈಟೆಡ್ ಕಿಂಗ್‌ಡಮ್-ವಿನ್ನರ್

ಅತ್ಯುತ್ತಮ ಡಾಕ್ಯುಮೆಂಟರಿ ಫೀಚರ್

"ಬೋಬಿ ವೈನ್: ದಿ ಪೀಪಲ್ಸ್ ಪ್ರೆಸಿಡೆಂಟ್"

"ದಿ ಎತರ್ನಲ್‌ ಮೆಮೊರಿ"

"ಫೋರ್‌ ಡಾಟರ್ಸ್‌

"ಟು ಕಿಲ್‌ ಎ ಟೈಗರ್‌"

"20 ಡೇಸ್‌ ಇನ್‌ ಮಾಎಇಯೊಪೊಲ್‌: (ಗೆಲುವು)

ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ

"ಎಬಿಸಿಸ್‌ ಬುಕ್‌ ಬ್ಯಾನಿಂಗ್‌"

"ದಿ ಲಾಸ್ಟ್ ರಿಪೇರಿ ಶಾಪ್" - ವಿಜೇತ

"ನಾಯಿ ನಾಯ್ & ವೈ ಪೋ"

"ದಿ ಬಾರ್ಬರ್ ಆಫ್ ಲಿಟಲ್ ರಾಕ್"

"ಇಸ್‌ಲ್ಯಾಂಡ್‌ ಇನ್‌ ಬಿಟ್‌ವಿನ್‌"

ಅತ್ಯುತ್ತಮ ಮೂಲ ಚಿತ್ರ

"ಅಮೇರಿಕನ್ ಫಿಕ್ಷನ್"

"ಇಂಡಿಯಾನಾ ಜೋನ್ಸ್ ಮತ್ತು ಡಯಲ್ ಆಫ್ ಡೆಸ್ಟಿನಿ"

"ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್"

"ಓಪನ್‌ಹೈಮರ್‌" - ಗೆಲುವು

"ಪೂವರ್‌ ಥಿಂಗ್ಸ್‌"

ಅತ್ಯುತ್ತಮ ಮೂಲ ಹಾಡು

ವಾಟ್‌ ವಾಸ್‌ ಐ ಮೇಡ್‌ ಫಾರ್‌, ಬಾರ್ಬಿ- ವಿನ್ನರ್‌

ಬೆಸ್ಟ್‌ ಸೌಂಡ್‌

ದಿ ಝೋನ್‌ ಆಫ್‌ ಇಂಟ್ರೆಸದ್ಟ್‌ - ವಿನ್ನರ್‌

ಅತ್ಯುತ್ತಮ ಪ್ರೊಡಕ್ಷನ್‌ ಡಿಸೈನ್‌

ಪೂವರ್‌ ಥಿಂಗ್ಸ್‌- ಗೆಲುವು

ಅತ್ಯುತ್ತಮ ಲೈವ್‌ ಆಕ್ಷನ್‌ ಶಾರ್ಟ್‌

ದಿ ವಂಡರ್‌ಫುಲ್‌ ಸ್ಟೋರಿ ಆಫ್‌ ಹೆನ್ರಿ ಶುಗರ್‌- ಗೆಲುವು

ಅತ್ಯುತ್ತಮ ಸಿನಿಮಾಟ್ರೊಗ್ರಫಿ

ಓಪನ್‌ಹೈಮರ್‌- ಗೆಲುವು

ಅತ್ಯುತ್ತಮ ಮೇಕಪ್‌- ಹೇರ್‌ಸ್ಟೈಲ್‌

ಪೂವರ್‌ ಥಿಂಗ್ಸ್‌ (ವಿನ್ನರ್‌)

ಅತ್ಯುತ್ತಮ ವಸ್ತ್ರವಿನ್ಯಾಸ

ಪೂವರ್‌ ಥಿಂಗ್ಸ್‌ (ಗೆಲುವು)

ಅತ್ಯುತ್ತಮ ವಿಶುವಲ್‌ ಎಫೆಕ್ಟ್‌

ಗೊಡ್ಜಿಲ್ಲಾ ಮೈನಸ ಒನ್‌ (ವಿನ್ನರ್‌)

ಅತ್ಯುತ್ತಮ ಸಂಕಲನ

ಓಪನ್‌ಹೈಮರ್‌ (ಗೆಲುವು)